Fact Check: ಸಾನಿಯಾ ಮಿರ್ಜಾ-ಮೊಹಮ್ಮದ್ ಶಮಿ ಮದುವೆ, ದುಬೈನಲ್ಲಿ ಮೋಜು-ಮಸ್ತಿ? AI ಅವಾಂತರಕ್ಕೆ ಫ್ಯಾನ್ಸ್ ಬೆಸ್ತು!
ದುಬೈನಲ್ಲಿ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆದರೆ ಇದು ನಿಜವೇ? ಸತ್ಯಾಂಶ ಏನಿರಬಹುದು? ಇಲ್ಲಿದೆ ವಿವರ.
![Fack Check: ಸಾನಿಯಾ ಮಿರ್ಜಾ-ಮೊಹಮ್ಮದ್ ಶಮಿ ಮದುವೆ, ದುಬೈನಲ್ಲಿ ಮೋಜು-ಮಸ್ತಿ? AI ಅವಾಂತರಕ್ಕೆ ಫ್ಯಾನ್ಸ್ ಬೆಸ್ತು! Fack Check: ಸಾನಿಯಾ ಮಿರ್ಜಾ-ಮೊಹಮ್ಮದ್ ಶಮಿ ಮದುವೆ, ದುಬೈನಲ್ಲಿ ಮೋಜು-ಮಸ್ತಿ? AI ಅವಾಂತರಕ್ಕೆ ಫ್ಯಾನ್ಸ್ ಬೆಸ್ತು!](https://images.hindustantimes.com/kannada/img/2024/12/28/550x309/Shami_saniya_1735397426771_1735397436188.png)
ಡಿವೋರ್ಸ್ ಪಡೆದಿರುವ ಭಾರತದ ಕ್ರೀಡಾ ತಾರೆಗಳಾದ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಮದುವೆ ಆಗಿದ್ದಾರೆ, ಇಬ್ಬರು ದುಬೈನಲ್ಲಿ ಕ್ರಿಸ್ಮಸ್ ಆಚರಿಸಿದ್ದಾರೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಫೋಟೋಗಳು ತುಂಬಾ ನೈಜತೆಯಿಂದ ಕೂಡಿರುವ ಕಾರಣ ಬಹುತೇಕ ಅಭಿಮಾನಿಗಳು, ಇದನ್ನು ನಿಜವೆಂದೇ ನಂಬಿದ್ದಾರೆ. ಆದರೆ ಇದೆಲ್ಲವೂ ಸುಳ್ಳು, ಸುಳ್ಳು, ಸುಳ್ಳು. ಸಾನಿಯಾ ಮತ್ತು ಶಮಿ ಪರಸ್ಪರ ಮದುವೆಯಾಗಿಲ್ಲ. ಕೃತಕ ಬುದ್ದಿಮತ್ತೆ (AI) ಸೃಷ್ಟಿಸಿರುವ ಅವಾಂತರ ಇದಾಗಿದ್ದು, ಕ್ರೀಡಾ ಲೋಕವನ್ನೇ ತಲ್ಲಣಗೊಳಿಸಿದೆ.
ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇದೇ ವರ್ಷ ಜನವರಿಯಲ್ಲಿ ಶೋಯೆಬ್ ಮಲಿಕ್ ಅವರೊಂದಿಗೆ ವಿಚ್ಛೇದನ ಪಡೆದಿದ್ದರು. ಪಾಕಿಸ್ತಾನದ ಹಿರಿಯ ಕ್ರಿಕೆಟಿಗನ ಜೊತೆಗಿನ ಡಿವೋರ್ಸ್ ಬೆನ್ನಲ್ಲೇ ಸಾನಿಯಾ, ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದೆಲ್ಲಾ ಸುಳ್ಳು ಎಂದು ಸಾನಿಯಾ ತಂದೆ ಮತ್ತು ಸ್ವತಃ ಶಮಿಯೇ ಸ್ಪಷ್ಟನೆ ಕೊಟ್ಟಿದ್ದರು. ಇದೆಲ್ಲದರ ನಡುವೆ ವದಂತಿಗಳು ಮಾತ್ರ ನಿಂತಿರಲಿಲ್ಲ. ಇದರ ನಡುವೆಯೂ ಕ್ರೀಡಾ ಪ್ರೇಮಿಗಳು ಇಬ್ಬರು ಒಂದಾಗಬೇಕು ಎಂದು ಬಯಸಿದ್ದರು.
ಪ್ರಸ್ತುತ ಜಾಲತಾಣಗಳಲ್ಲಿ ವೈರಲ್ ಆದ ಫೋಟೋಗಳಲ್ಲಿ ದುಬೈನಲ್ಲಿ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಒಬ್ಬರಿಗೊಬ್ಬರು ಪರಸ್ಪರ ಅಪ್ಪಿಕೊಂಡು ಕ್ರಿಸ್ಮಸ್ ಸೆಲೆಬ್ರೇಟ್ ಮಾಡಿದ್ದಾರೆ. ತುಂಬಾ ರೊಮ್ಯಾಂಟಿಕ್ ಆಗಿರುವ ಫೋಟೋಗಳನ್ನು ಕಂಡಿರುವ ಫ್ಯಾನ್ಸ್ ಅಚ್ಚರಿಯಾಗಿದ್ದಾರೆ. ಅರೇ ಇದೇನಿದು ಗುಟ್ಟಾಗಿ ಮದುವೆಯಾಗಿ ಬಿಟ್ರಾ ಹೇಗೆ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ಗುಟ್ಟಾಗಿ ಮದುವೆಯಾದ ಬಳಿಕ ಹನಿಮೂನ್ಗೆ ಹೋಗಿದ್ದಾರೆ ಎಂದೆಲ್ಲಾ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಸತ್ಯಾಸತ್ಯತೆ ಇಲ್ಲಿದೆ
ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್ಸೈಟ್ ಈ ಚಿತ್ರಗಳಿಂದ ಹಿಂದಿರುವ ಸತ್ಯಾಸತ್ಯತೆ ಪರಿಶೀಲಿಸಿದ್ದು, ಇದು ನಿಜವಲ್ಲ ಎಂದು ದೃಢಪಡಿಸಿದೆ. ಇದೆಲ್ಲವೂ ಸುಳ್ಳು. ಸಾನಿಯಾ ಮತ್ತು ಶಮಿ ಅವರು ಪರಸ್ಪರ ಮದುವೆಯಾಗಿಲ್ಲ. ಕೃತಕ ಬುದ್ದಿಮತ್ತೆ ಮೂಲಕ ಚಿತ್ರಗಳನ್ನು ಮಾಡಲಾಗಿದೆ. ಎಐನಲ್ಲಿ ಸಾನಿಯಾ ಮತ್ತು ಶಮಿ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಫೋಟೋಗಳನ್ನು ನೋಡಿದರೆ, ಎಡಿಟ್ ಮಾಡಲಾಗಿದೆ ಎನ್ನುವ ಅನುಮಾನವೇ ಬರುವುದಿಲ್ಲ. ಇಬ್ಬರು ಒಟ್ಟಿಗೆ ಕಾಣಿಸಿಕೊಂಡರೆ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ಪರಸ್ಪರ ಎಂದೂ ಭೇಟಿಯಾಗಿಲ್ಲ ಎಂದು ತಿಳಿದು ಬಂದಿದೆ.
ಇದಕ್ಕೂ ಮುನ್ನ ಶಮಿ ಮತ್ತು ಸಾನಿಯಾ ಮದುವೆ ಆಗುತ್ತಿರುವ ಫೋಟೋಗಳನ್ನು ಹರಿಯಬಿಡಲಾಗಿತ್ತು. ಇತ್ತೀಚೆಗೆ ಪ್ರಭಾಸ್-ಅನುಷ್ಕಾ ಶೆಟ್ಟಿ ಮದುವೆಯಾಗುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಸೆಲೆಬ್ರೆಟಿಗಳ ಫೋಟೋಗಳನ್ನು ಹೀಗೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿರುವು ಟ್ರೆಂಡ್ ಆಗುತ್ತಿದೆ. ಅದೇ ರೀತಿ ದುಬೈನಲ್ಲಿ ಶಮಿ-ಸಾನಿಯಾ ಒಟ್ಟಿಗೆ ಇದ್ದಾರೆ ಎನ್ನಲಾದ ಫೋಟೋ ಎಐನಿಂದ ರಚಿಸಲಾಗಿದೆ. ಹಾಗಾಗಿ ಯಾರೂ ತಪ್ಪಾಗಿ ಗ್ರಹಿಸುವುದು ಬೇಡ.
ವಿಜಯ್ ಹಜಾರೆ ಆಡುತ್ತಿದ್ದಾರೆ ಶಮಿ
2023ರ ಏಕದಿನ ವಿಶ್ವಕಪ್ನಲ್ಲಿ ಇಂಜುರಿಯಾಗಿ ಭಾರತ ತಂಡದಿಂದ ಹೊರಗಿರುವ ವೇಗಿ ಮೊಹಮ್ಮದ್ ಶಮಿ ಚೇತರಿಕೆಯಾಗಿ ರಣಜಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಆಡಿದ್ದರು. ಆದರೆ ಇತ್ತೀಚೆಗೆ ನಿರಂತರ ಬೌಲಿಂಗ್ ಮಾಡಿದ್ದಕ್ಕಾಗಿ ಶಮಿ ಮತ್ತೆ ಗಾಯಗೊಂಡಿದ್ದರು. ಅವರ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಹಿಮ್ಮಡಿ ಗಾಯದಿಂದ ಚೇತರಿಸಿಕೊಂಡಿದ್ದರೂ ಊರಿಯೂತದಿಂದ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿರುವ ವೈದ್ಯಕೀಯ ತಂಡದೊಂದಿಗೆ ಮತ್ತೆ ಫಿಟ್‌ನೆಸ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಇಲ್ಲೂ ಸಾಕಷ್ಟು ಬೌಲಿಂಗ್ ಮಾಡಿದ್ದು, ಭಾರತ ತಂಡಕ್ಕೆ ಮರಳಲು ಹರಸಾಹಸಪಡುತ್ತಿದ್ದಾರೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)