ನ್ಯಾಷನಲ್ ಗೇಮ್ಸ್ನಲ್ಲಿ ಕರ್ನಾಟಕ 77 ಪದಕ ಬೇಟೆ; ಯಾವ ರಾಜ್ಯ, ಎಷ್ಟು ಮೆಡಲ್ಸ್ ಗೆದ್ದಿದೆ? ಇಲ್ಲಿದೆ ಪಟ್ಟಿ
National Games 2023 medal tally: ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಎಷ್ಟು ಪದಕಗಳನ್ನು ಗೆದ್ದುಕೊಂಡಿದೆ? ಯಾವ ಯಾವ ರಾಜ್ಯಗಳು ಎಷ್ಟು ಮೆಡಲ್ಗಳನ್ನು ತನ್ನದಾಗಿಸಿಕೊಂಡಿವೆ. ಈ ಕುರಿತ ಪಟ್ಟಿ ಇಲ್ಲಿದೆ.
ಭಾರತದ ಗೋವಾದಲ್ಲಿ ನಡೆಯುತ್ತಿರುವ 2023ರ ನ್ಯಾಷನಲ್ ಗೇಮ್ಸ್ನಲ್ಲಿ (National Games 2023) ಕರ್ನಾಟಕ ತಂಡವನ್ನು (Karnataka) ಪ್ರತಿನಿಧಿಸಿರುವ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಪದಕಗಳ ಬೇಟೆಯಾಡುತ್ತಿದ್ದಾರೆ. 37ನೇ ಆವೃತ್ತಿಯ ಈ ಕ್ರೀಡಾಕೂಟದಲ್ಲಿ ಕರ್ನಾಟಕ ಈಗಾಗಲೇ 28 ಚಿನ್ನ ಸೇರಿ ಒಟ್ಟು 77 ಪದಕಗಳನ್ನು ತನ್ನ ಖಾತೆಗೆ ಹಾಕಿಕೊಂಡಿದೆ.
ಆ ಮೂಲಕ ಅಧಿಕ ಪದಕಗಳನ್ನು ಬೇಟೆಯಾಡಿದ ಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿದೆ. ಅಕ್ಟೋಬರ್ 26ರಿಂದ ಆರಂಭವಾದ ಈ ಕ್ರೀಡಾಕೂಟ ನವೆಂಬರ್ 9ಕ್ಕೆ ತೆರೆ ಬೀಳಲಿದೆ. ಇಂದು ಸೇರಿ ಮೂರು ದಿನಗಳಲ್ಲಿ ಮತ್ತಷ್ಟು ಪದಕಗಳು ಕರುನಾಡಿನ ಖಾತೆಗೆ ಸೇರುವ ನಿರೀಕ್ಷೆ ಇದೆ. ಪ್ರಸ್ತುತ ಮಹಾರಾಷ್ಟ್ರ, 68 ಚಿನ್ನ, 63 ಬೆಳ್ಳಿ ಮತ್ತು 68 ಕಂಚಿನ ಪದಕಗಳು ಸೇರಿ 199 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
2ನೇ ಸ್ಥಾನದಲ್ಲಿ ಸರ್ವೀಸಸ್ ಮತ್ತು 3ನೇ ಸ್ಥಾನದಲ್ಲಿ ಹರಿಯಾಣ ಇದ್ದು, ಒಟ್ಟು 100 ಅಧಿಕ ಪದಕಗಳನ್ನು ಮುಡಿಗೇರಿಸಿಕೊಂಡಿವೆ. ಈ ಕ್ರೀಡಾಕೂಟದಲ್ಲಿ 10,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಾಗವಹಿಸಿದ್ದಾರೆ. ಗುಜರಾತ್‌ನಲ್ಲಿ ನಡೆದ ಕಳೆದ ಆವೃತ್ತಿಗಿಂತ 3,000 ಹೆಚ್ಚು ಕ್ರೀಡಾಪಟುಗಳು 43 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.
ಪದಕಗಳ ಪಟ್ಟಿ ಇಲ್ಲಿದೆ
ಶ್ರೇಣಿ | ರಾಜ್ಯ/ಕೇಂದ್ರಾಡಳಿತ ಪ್ರದೇಶ/ತಂಡ | ಚಿನ್ನ | ಬೆಳ್ಳಿ | ಕಂಚು | ಒಟ್ಟು |
---|---|---|---|---|---|
1 | ಮಹಾರಾಷ್ಟ್ರ | 67 | 61 | 65 | 193 |
2 | ಸರ್ವೀಸಸ್ | 52 | 22 | 28 | 102 |
3 | ಹರಿಯಾಣ | 48 | 33 | 47 | 128 |
4 | ಕರ್ನಾಟಕ | 28 | 23 | 25 | 76 |
5 | ಮಣಿಪುರ | 25 | 19 | 22 | 66 |
6 | ಮಧ್ಯಪ್ರದೇಶ | 24 | 31 | 29 | 84 |
7 | ದೆಹಲಿ | 19 | 17 | 46 | 82 |
8 | ತಮಿಳುನಾಡು | 17 | 20 | 24 | 61 |
9 | ಕೇರಳ | 15 | 19 | 21 | 55 |
10 | ಉತ್ತರ ಪ್ರದೇಶ | 11 | 19 | 22 | 52 |
11 | ರಾಜಸ್ಥಾನ | 11 | 13 | 15 | 39 |
12 | ಗೋವಾ | 11 | 12 | 26 | 49 |
13 | ಪಂಜಾಬ್ | 9 | 23 | 22 | 54 |
14 | ಅಸ್ಸಾಂ | 9 | 12 | 18 | 39 |
15 | ಒಡಿಶಾ | 8 | 11 | 23 | 42 |
16 | ಆಂಧ್ರಪ್ರದೇಶ | 7 | 3 | 12 | 22 |
17 | ಗುಜರಾತ್ | 7 | 1 | 14 | 22 |
18 | ಅರುಣಾಚಲ ಪ್ರದೇಶ | 6 | 2 | 5 | 13 |
19 | ಪಶ್ಚಿಮ ಬಂಗಾಳ | 5 | 22 | 21 | 48 |
20 | ಜಮ್ಮು ಮತ್ತು ಕಾಶ್ಮೀರ | 5 | 8 | 9 | 22 |
21 | ಚಂಡೀಗಢ | 4 | 6 | 1 | 11 |
22 | ತೆಲಂಗಾಣ | 3 | 8 | 8 | 19 |
23 | ಉತ್ತರಾಖಂಡ | 3 | 3 | 11 | 17 |
24 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪ | 2 | 4 | 1 | 6 |
25 | ಜಾರ್ಖಂಡ್ | 2 | 3 | 11 | 16 |
26 | ಮಿಜೋರಾಂ | 2 | 2 | 0 | 4 |
27 | ಹಿಮಾಚಲ ಪ್ರದೇಶ | 2 | 1 | 3 | 6 |
28 | ನಾಗಾಲ್ಯಾಂಡ್ | 1 | 2 | 3 | 6 |
29 | ಛತ್ತೀಸ್‌ಗಢ | 1 | 1 | 6 | 8 |
30 | ಬಿಹಾರ | 0 | 3 | 4 | 7 |
31 | ತ್ರಿಪುರಾ | 0 | 1 | 0 | 1 |
32 | ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು | 0 | 0 | 1 | 1 |
32 | ಲಕ್ಷದ್ವೀಪ | 0 | 0 | 1 | 1 |
32 | ಸಿಕ್ಕಿಂ | 0 | 0 | 1 | 1 |