37ನೇ ಆವೃತ್ತಿಯ ನ್ಯಾಷನಲ್ ಗೇಮ್ಸ್ಗೆ ಮೋದಿ ಚಾಲನೆ; ಕ್ರೀಡಾಕೂಟದ ಲೈವ್ ಸ್ಟ್ರೀಮ್, ಸಂಪೂರ್ಣ ವೇಳಾಪಟ್ಟಿಯ ವಿವರ ಇಲ್ಲಿದೆ
National Games 2023: ಅಕ್ಟೋಬರ್ 26 ರಿಂದ ನವೆಂಬರ್ 9 ರವರೆಗೆ ಅಧಿಕೃತವಾಗಿ ನಡೆಯಲಿರುವ ಭಾರತದ ರಾಷ್ಟ್ರೀಯ ಕ್ರೀಡಾಕೂಟ ಗೋವಾದಲ್ಲಿ ಪ್ರಾರಂಭವಾಗಿದೆ. 37ನೇ ಆವೃತ್ತಿಯ ಕ್ರೀಡಾಕೂಟದ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ.

ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಗೋವಾದಲ್ಲಿ ಈ ಕ್ರೀಡಾಕೂಟ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ಇದು 37ನೇ ರಾಷ್ಟ್ರೀಯ ಕ್ರೀಡಾಕೂಟವಾಗಿದೆ. ಗೋವಾ 36ನೇ ಆವೃತ್ತಿಯ ಕ್ರೀಡಾಕೂಟವನ್ನು ಆಯೋಜಿಸಬೇಕಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಗುಜರಾತ್ಗೆ ಸ್ಥಳಾಂತರ ಮಾಡಲಾಗಿತ್ತು.
ಕ್ರೀಡಾಕೂಟವು ಗೋವಾದ 5 ನಗರಗಳಲ್ಲಿ (ಮಾಪುಸಾ, ಮಾರ್ಗೋ, ಪಂಜಿಮ್, ಪೋಂಡಾ ಮತ್ತು ವಾಸ್ಕೋ) ನಡೆಯಲಿದೆ. ಟ್ರ್ಯಾಕ್ ಸೈಕ್ಲಿಂಗ್ ಈವೆಂಟ್ ಮತ್ತು ಗಾಲ್ಫ್ ಮಾತ್ರ ಗೋವಾದ ಹೊರಗೆ ದೆಹಲಿಯಲ್ಲಿ ನಡೆಯಲಿದೆ. 1924ರಲ್ಲಿ ಅವಿಭಜಿತ ಭಾರತದ ಲಾಹೋರ್‌ನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟ ನಡೆಸಲಾಗಿತ್ತು. 1938 ರವರೆಗೆ ಭಾರತೀಯ ಒಲಿಂಪಿಕ್ ಕ್ರೀಡಾಕೂಟ ಎಂದು ಕರೆಯಲಾಗುತ್ತಿತ್ತು.
ಗೋವಾದಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ 10,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಗುಜರಾತ್‌ನಲ್ಲಿ ನಡೆದ ಹಿಂದಿನ ಆವೃತ್ತಿಗಿಂತ ಸುಮಾರು 3,000 ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಒಳಾಂಗಣ ಮತ್ತು ಹೊರಾಂಗಣ ಸ್ಪರ್ಧೆಗಳನ್ನು ಒಳಗೊಂಡಿರುವ 43 ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಟೂರ್ನಿಯ ಕ್ರೀಡೆಗಳು, ಅವುಗಳ ಸಮಯ, ದಿನಾಂಕ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ನ್ಯಾಷನಲ್ ಗೇಮ್ಸ್ 2023 ಅನ್ನು ಎಲ್ಲಿ ವೀಕ್ಷಿಸಬೇಕು?
ನ್ಯಾಷನಲ್ ಗೇಮ್ಸ್ 2023 ಭಾರತದಲ್ಲಿ ಡಿಡಿ ಸ್ಪೋರ್ಟ್ಸ್ ಟಿವಿ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ. ಲೈವ್ ಸ್ಟ್ರೀಮಿಂಗ್ ಮತ್ತು ಹೈಲೈಟ್‌ಗಳನ್ನು ಜಿಯೋ ಸಿನಿಮಾ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು.
ಕ್ರೀಡೆ | ದಿನಾಂಕಗಳು | ಸ್ಥಳ |
---|---|---|
ಸೈಕ್ಲಿಂಗ್ (ಟ್ರ್ಯಾಕ್ ರೇಸ್) | ನವೆಂಬರ್ 2-5 | ಇಂದಿರಾ ಗಾಂಧಿ ಸ್ಟೇಡಿಯಂ ಕಾಂಪ್ಲೆಕ್ಸ್, ನವದೆಹಲಿ |
ಗಾಲ್ಫ್ | ನವೆಂಬರ್ 5-9 | ದೆಹಲಿ ಗಾಲ್ಫ್ ಕ್ಲಬ್, ದೆಹಲಿ |
ಜಿಮ್ನಾಸ್ಟಿಕ್ಸ್ | ಅಕ್ಟೋಬರ್ 23-28 | ಪೆಡ್ಡೆಮ್ ಮಲ್ಟಿ-ಪರ್ಪಸ್ ಒಳಾಂಗಣ ಕ್ರೀಡಾಂಗಣ, ಮಾಪುಸಾ |
ಬಿಲಿಯರ್ಡ್ಸ್ ಮತ್ತು ಸ್ನೂಕರ್ಸ್ | ಅಕ್ಟೋಬರ್ 27-30 | ಬ್ಯಾಡ್ಮಿಂಟನ್ ಹಾಲ್, ಪೆಡ್ಡೆಮ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಮಾಪುಸಾ |
ರೋಯಿಂಗ್ | ಅಕ್ಟೋಬರ್ 28-ನವೆಂಬರ್ 1 | ಚಪೋರಾ ನದಿ, ಮಾಪುಸಾ |
ಹಾಕಿ | ಅಕ್ಟೋಬರ್ 30-ನವೆಂಬರ್ 8 | ಹಾಕಿ ಮೈದಾನ, ಪೆಡ್ಡೆಮ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಮಾಪುಸಾ |
ಬಾಕ್ಸಿಂಗ್ | ನವೆಂಬರ್ 1-8 | ಪೆಡ್ಡೆಮ್ ಮಲ್ಟಿ-ಪರ್ಪಸ್ ಒಳಾಂಗಣ ಕ್ರೀಡಾಂಗಣ, ಮಾಪುಸಾ |
ಶೂಟಿಂಗ್ | ನವೆಂಬರ್ 2-9 | ಮೆಂಡ್ರೆಮ್ ಶೂಟಿಂಗ್ ರೇಂಜ್, ಮಾಪುಸಾ |
ಕ್ಯಾನೋಯಿಂಗ್ ಮತ್ತು ಕಯಾಕಿಂಗ್ | ನವೆಂಬರ್ 4-7 | ಚಪೋರಾ ನದಿ, ಮಾಪುಸಾ |
ಬ್ಯಾಸ್ಕೆಟ್ಬಾಲ್ | ಅಕ್ಟೋಬರ್ 23-28 | ಮನೋಹರ್ ಪರಿಕ್ಕರ್ ಒಳಾಂಗಣ ಕ್ರೀಡಾಂಗಣ, ನವೇಲಿಮ್, ಮಾರ್ಗೋ |
ಬೀಚ್ ಫುಟ್ಬಾಲ್ | ಅಕ್ಟೋಬರ್ 28-ನವೆಂಬರ್ 1 | ಕೊಲ್ವಾ ಬೀಚ್, ಮಾರ್ಗಾವೋ |
ಫುಟ್ಬಾಲ್ (ಪುರುಷರು) | ಅಕ್ಟೋಬರ್ 30-ನವೆಂಬರ್ 8 | PJN ಸ್ಟೇಡಿಯಂ, ಫಟೋರ್ಡಾ, ಮಾರ್ಗಾವೊ |
ರೋಲ್ಬಾಲ್ | ಅಕ್ಟೋಬರ್ 30-ನವೆಂಬರ್ 2 | ಮನೋಹರ್ ಪರಿಕ್ಕರ್ ಒಳಾಂಗಣ ಕ್ರೀಡಾಂಗಣ, ನವೇಲಿಮ್, ಮಾರ್ಗೋ |
ಸೆಪಕ್ ಟಕ್ರಾ | ಅಕ್ಟೋಬರ್ 30-ನವೆಂಬರ್ 3 | ಫಟೋರ್ಡಾ ಮಲ್ಟಿ-ಪರ್ಪಸ್ ಹಾಲ್, ಮಾರ್ಗೋ |
ಲಾನ್ ಟೆನಿಸ್ | ಅಕ್ಟೋಬರ್ 30-ನವೆಂಬರ್ 5 | ಮಲ್ಟಿ-ಪರ್ಪಸ್ ಗ್ರೌಂಡ್, ಫಟೋರ್ಡಾ, ಮಾರ್ಗೋ |
ಹ್ಯಾಂಡ್ಬಾಲ್ | ನವೆಂಬರ್ 4-8 | ಮನೋಹರ್ ಪರಿಕ್ಕರ್ ಒಳಾಂಗಣ ಕ್ರೀಡಾಂಗಣ, ನವೇಲಿಮ್, ಮಾರ್ಗೋ |
Sqay ಮಾರ್ಷಲ್ ಆರ್ಟ್ಸ್ | ನವೆಂಬರ್ 6-8 | ಫಟೋರ್ಡಾ ಮಲ್ಟಿ-ಪರ್ಪಸ್ ಹಾಲ್, ಮಾರ್ಗೋ |
ಬ್ಯಾಡ್ಮಿಂಟನ್ | ಅಕ್ಟೋಬರ್ 19-24 | SPM ಸ್ಟೇಡಿಯಂ, ಗೋವಾ ವಿಶ್ವವಿದ್ಯಾಲಯ, ಪಂಜಿಮ್ |
ನೆಟ್ಬಾಲ್ | ಅಕ್ಟೋಬರ್ 22-27 | ಕ್ಯಾಂಪಲ್ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ, ಪಂಜಿಮ್ |
ಭಾರ ಎತ್ತುವಿಕೆ | ಅಕ್ಟೋಬರ್ 25-29 | ಕ್ಯಾಂಪಲ್ ಓಪನ್ ಗ್ರೌಂಡ್, ಪಂಜಿಮ್ |
ರಗ್ಬಿ | ಅಕ್ಟೋಬರ್ 25-27 | ಅಥ್ಲೆಟಿಕ್ಸ್ ಸ್ಟೇಡಿಯಂ, ಬಾಂಬೋಲಿಮ್, ಪಂಜಿಮ್ |
ಡ್ರ್ಯಾಗನ್ ಬೋಟ್ | ಅಕ್ಟೋಬರ್ 26-29 | ಕ್ಯಾಂಪಲ್ ಓಪನ್ ಗ್ರೌಂಡ್, ಪಂಜಿಮ್ |
ಮಲ್ಲಖಾಂಬ್ | ಅಕ್ಟೋಬರ್ 26-28 | ಕ್ಯಾಂಪಲ್ ಓಪನ್ ಗ್ರೌಂಡ್, ಪಂಜಿಮ್ |
ಫೆನ್ಸಿಂಗ್ | ಅಕ್ಟೋಬರ್ 26-30 | SPM ಸ್ಟೇಡಿಯಂ, ಗೋವಾ ವಿಶ್ವವಿದ್ಯಾಲಯ, ಪಂಜಿಮ್ |
ಬೀಚ್ ಹ್ಯಾಂಡ್ಬಾಲ್ | ಅಕ್ಟೋಬರ್ 28-ನವೆಂಬರ್ 1 | ಮಿರಾಮರ್ ಬೀಚ್, ವರ್ಕಾ ಬೀಚ್, ಪಂಜಿಮ್ |
ಜಲಚರಗಳು | ಅಕ್ಟೋಬರ್ 29-ನವೆಂಬರ್ 4 | ಈಜುಕೊಳ ಕ್ಯಾಂಪಲ್, ಪಂಜಿಮ್ |
ಅಥ್ಲೆಟಿಕ್ಸ್ | ಅಕ್ಟೋಬರ್ 29-ನವೆಂಬರ್ 3 | ಅಥ್ಲೆಟಿಕ್ಸ್ ಸ್ಟೇಡಿಯಂ, ಬಾಂಬೋಲಿಮ್, ಪಂಜಿಮ್ |
ಟೇಬಲ್ ಟೆನ್ನಿಸ್ | ಅಕ್ಟೋಬರ್ 29-ನವೆಂಬರ್ 2 | ಕ್ಯಾಂಪಲ್ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ, ಪಂಜಿಮ್ |
ಗಟ್ಕಾ | ಅಕ್ಟೋಬರ್ 31-ನವೆಂಬರ್ 2 | ಕ್ಯಾಂಪಲ್ ಓಪನ್ ಗ್ರೌಂಡ್, ಪಂಜಿಮ್ |
ಮಿನಿ ಗಾಲ್ಫ್ | ನವೆಂಬರ್ 1-3 | ಮಿರಾಮರ್ ಬೀಚ್, ಪಂಜಿಮ್ |
ಕುಸ್ತಿ | ನವೆಂಬರ್ 1-3 | ಕ್ಯಾಂಪಲ್ ಓಪನ್ ಗ್ರೌಂಡ್, ಪಂಜಿಮ್ |
ವುಶು | ನವೆಂಬರ್ 1-4 | ಕ್ಯಾಂಪಲ್ ಓಪನ್ ಗ್ರೌಂಡ್, ಪಂಜಿಮ್ |
ವಾಲಿಬಾಲ್ | ನವೆಂಬರ್ 1-5 | SPM ಸ್ಟೇಡಿಯಂ, ಗೋವಾ ವಿಶ್ವವಿದ್ಯಾಲಯ, ಪಂಜಿಮ್ |
ರೋಯಿಂಗ್ (ಕರಾವಳಿ/ಉಬ್ಬರವಿಳಿತದ ಕ್ರೀಡೆ) | ನವೆಂಬರ್ 3-6 | ಹವಾಯಿ ಬೀಚ್, ಡೊನಾ ಪೌಲಾ, ಪಂಜಿಮ್ |
ಯಾಟಿಂಗ್ | ನವೆಂಬರ್ 3-8 | ಹವಾಯಿ ಬೀಚ್, ಡೊನಾ ಪೌಲಾ, ಪಂಜಿಮ್ |
ಸಮುದ್ರ ತೀರದ ಚೆಂಡಾಟ | ನವೆಂಬರ್ 4-7 | ಮಿರಾಮರ್ ಬೀಚ್, ವರ್ಕಾ ಬೀಚ್, ಪಂಜಿಮ್ |
ಕಬಡ್ಡಿ | ನವೆಂಬರ್ 4-8 | ಕ್ಯಾಂಪಲ್ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ, ಪಂಜಿಮ್ |
ಟ್ರಯಥ್ಲಾನ್ | ನವೆಂಬರ್ 4-7 | ಕಾರಂಜಲೆಮ್ - ಮಿರಮಾರ್ ರಸ್ತೆ, ಪಂಜಿಮ್ |
ಲಗೋರಿ | ನವೆಂಬರ್ 5-6 | ಕ್ಯಾಂಪಲ್ ಓಪನ್ ಗ್ರೌಂಡ್, ಪಂಜಿಮ್ |
ಯೋಗಾಸನ | ನವೆಂಬರ್ 5-9 | ಕ್ಯಾಂಪಲ್ ಓಪನ್ ಗ್ರೌಂಡ್, ಪಂಜಿಮ್ |
ಜೂಡೋ | ನವೆಂಬರ್ 6-8 | ಕ್ಯಾಂಪಲ್ ಓಪನ್ ಗ್ರೌಂಡ್, ಪಂಜಿಮ್ |
ಕಲರಿಪಯಟ್ಟು | ನವೆಂಬರ್ 7-8 | ಕ್ಯಾಂಪಲ್ ಓಪನ್ ಗ್ರೌಂಡ್, ಪಂಜಿಮ್ |
ಆಧುನಿಕ ಪೆಂಟಾಥ್ಲಾನ್ | ಅಕ್ಟೋಬರ್ 26-29 | ಪೋಂಡಾ ಈಜುಕೊಳ, ಪೋಂಡಾ |
ಬಿಲ್ಲುಗಾರಿಕೆ | ಅಕ್ಟೋಬರ್ 29-ನವೆಂಬರ್ 6 | ಗೋವಾ ಇಂಜಿನಿಯರಿಂಗ್ ಕೊಲಾಜ್, ಫಾರ್ಮಗುಡಿ, ಪೊಂಡಾ |
ಟೇಕ್ವಾಂಡೋ | ಅಕ್ಟೋಬರ್ 31- ನವೆಂಬರ್ 3 | ಪೋಂಡಾ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ, ಪೋಂಡಾ |
ಖೋ-ಖೋ | ನವೆಂಬರ್ 4-8 | ಪೋಂಡಾ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ, ಪೋಂಡಾ |
ಫುಟ್ಬಾಲ್ (ಮಹಿಳೆಯರು) | ಅಕ್ಟೋಬರ್ 27-ನವೆಂಬರ್ 5 | ತಿಲಕ್ ಮೈದಾನ್ ಫುಟ್ಬಾಲ್ ಮೈದಾನ, ವಾಸ್ಕೋ |
ಲಾನ್ ಬೌಲ್ಸ್ | ನವೆಂಬರ್ 1-8 | ಚಿಕಾಲಿಮ್ ಮಲ್ಟಿ-ಪರ್ಪಸ್ ಗ್ರೌಂಡ್, ವಾಸ್ಕೋ |
ಸ್ಕ್ವ್ಯಾಷ್ | ನವೆಂಬರ್ 1-5 | ಚಿಕಾಲಿಮ್ ಸ್ಕ್ವಾಷ್ ಫೆಸಿಲಿಟಿ, ವಾಸ್ಕೋ |
ಸೈಕ್ಲಿಂಗ್ (ರಸ್ತೆ ರೇಸ್) | ನವೆಂಬರ್ 8-9 | ವೆರ್ನಾ - ಬಿರ್ಲಾ ಬೈಪಾಸ್ ವಿಮಾನ ನಿಲ್ದಾಣ ರಸ್ತೆ, ವಾಸ್ಕೋ |
ಪೆನ್ಕಾಕ್ ಸಿಲಾಟ್ | ಅಕ್ಟೋಬರ್ 26-29 | ಕ್ಯಾಂಪಲ್ ಓಪನ್ ಗ್ರೌಂಡ್, ಪಂಜಿಮ್ |
