ಬೆಂಗಳೂರಿನಲ್ಲಿ ನಡೆಯುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಗೆ ಟಿಕೆಟ್ ದರ ಘೋಷಣೆ; ಟಿಕೆಟ್ ಖರೀದಿ ಹೇಗೆ?
ಕನ್ನಡ ಸುದ್ದಿ  /  ಕ್ರೀಡೆ  /  ಬೆಂಗಳೂರಿನಲ್ಲಿ ನಡೆಯುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಗೆ ಟಿಕೆಟ್ ದರ ಘೋಷಣೆ; ಟಿಕೆಟ್ ಖರೀದಿ ಹೇಗೆ?

ಬೆಂಗಳೂರಿನಲ್ಲಿ ನಡೆಯುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಗೆ ಟಿಕೆಟ್ ದರ ಘೋಷಣೆ; ಟಿಕೆಟ್ ಖರೀದಿ ಹೇಗೆ?

ಮೇ 24ರಂದು ಬೆಂಗಳೂರಿನಲ್ಲಿ ನಡೆಯುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಗೆ ಟಿಕೆಟ್ ದರ ಘೋಷಣೆಯಾಗಿದೆ. ಟಿಕೆಟ್ ಖರೀದಿ ಹೇಗೆ? ಇಲ್ಲಿದೆ ಸಂಪೂರ್ಣ ವಿವರ.

ಬೆಂಗಳೂರಿನಲ್ಲಿ ನಡೆಯುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಗೆ ಟಿಕೆಟ್ ದರ ಘೋಷಣೆ; ಟಿಕೆಟ್ ಖರೀದಿ ಹೇಗೆ?
ಬೆಂಗಳೂರಿನಲ್ಲಿ ನಡೆಯುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಗೆ ಟಿಕೆಟ್ ದರ ಘೋಷಣೆ; ಟಿಕೆಟ್ ಖರೀದಿ ಹೇಗೆ? (HT_PRINT)

ಮೇ 24ರಂದು ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಜರುಗಲಿರುವ 2 ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಯ ಟಿಕೆಟ್​ ದರಗಳನ್ನು ಪ್ರಕಟಿಸಲಾಗಿದೆ. ಇದು ಮೊದಲ ಬಾರಿಗೆ ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಜಾವೆಲಿನ್ ಕ್ರೀಡಾಕೂಟ. ವಿಶೇಷ ಏನೆಂದರೆ ಈ ಜಾಗತಿಕ ಸ್ಪರ್ಧೆಗೆ ನೀರಜ್ ಚೋಪ್ರಾ ಅವರ ಹೆಸರನ್ನೇ ಇಡಲಾಗಿದೆ. ಈ ಕೂಟಕ್ಕೆ ಟಿಕೆಟ್ ದರವು ಕನಿಷ್ಠ 199 ರಿಂದ ಹಿಡಿದು 10,000 ತನಕ ನಿಗದಿಯಾಗಿದೆ.

ಭಾರತೀಯ ಅಭಿಮಾನಿಗಳಿಗೆ ತಮ್ಮ ಒಲಿಂಪಿಕ್ ಗೋಲ್ಡ್ ಮೆಡಲಿಸ್ಟ್​ ಆಟವನ್ನು ನೇರವಾಗಿ ವೀಕ್ಷಿಸಲು ಒಂದು ವಿಶಿಷ್ಟ ಅವಕಾಶ ಸಿಗಲಿದೆ. ಈ ಕಾರ್ಯಕ್ರಮವನ್ನು ಮೂಲತಃ ಚೋಪ್ರಾ ಅವರ ತವರು ರಾಜ್ಯ ಹರಿಯಾಣದ ಪಂಚಕುಲದ ತೌ ದೇವಿ ಲಾಲ್ ಕ್ರೀಡಾಂಗಣದಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಫ್ಲಡ್‌ಲೈಟ್ ಸಮಸ್ಯೆಯಿಂದಾಗಿ ಅದನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಅಭಿಮಾನಿಗಳನ್ನ ಸೆಳೆಯುವ ಸಲುವಾಗಿ ಆಯೋಜಕರು ಎಸೆತಗಾರನ ರನ್‌ವೇ ಪಕ್ಕದಲ್ಲೇ ವಿಶೇಷ ಸ್ಟ್ಯಾಂಡ್ ನಿರ್ಮಿಸಿದ್ದಾರೆ.

ತವರಿನಲ್ಲಿ ಮೊದಲ ಜಾಗತಿಕ ಕ್ರೀಡಾಕೂಟ

ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದ ನಂತರ ತರಬೇತಿ ಮತ್ತು ವಿದೇಶಗಳಲ್ಲಿ ಸ್ಪರ್ಧಿಸುವುದರಲ್ಲಿ ಹೆಚ್ಚು ಸಮಯ ಕಳೆದ ನೀರಜ್, ಈಗ ತವರಿನಲ್ಲಿ ನಡೆಯುವ ಜಾಗತಿಕ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಚೋಪ್ರಾ ಜೊತೆಗೆ ಜರ್ಮನಿಯ ಥಾಮಸ್ ರೋಹ್ಲರ್​, ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ ಮೊದಲಾದ ಪ್ರಸಿದ್ಧ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಸ್ಪರ್ಧೆಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಐದು ಕಾರ್ಪೋರೇಟ್ ಬಾಕ್ಸ್​​ಗಳ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಉತ್ತರ ಭಾಗದಲ್ಲಿ ಕೊನೆಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಇದರ ದರ ತಲಾ 45 ಸಾವಿರ ಎಂದು ನಿಗದಿಯಾಗಿದೆ. ಒಂದೊಂದು ಬಾಕ್ಸ್​​ನಲ್ಲೂ ತಲಾ 15 ಮಂದಿ ಕುಳಿತು ಕ್ರೀಡಾಕೂಟ ವೀಕ್ಷಿಸಬಹುದು. ಈ ಬಾಕ್ಸ್​​ನ ಒಂದು ಟಿಕೆಟ್​​ನಲ್ಲಿ 15 ಮಂದಿ ಪ್ರವೇಶಿಸಲು 15 ಮಂದಿಗೆ ಅವಕಾಶ ಇದೆ.

ಟಿಕೆಟ್ ಎಲ್ಲಿ ಖರೀದಿಸಬೇಕು, ದರ ಎಷ್ಟು?

ಥ್ರೋವರ್ ರನ್​ಅಪ್​ ಬಳಿ ವಿಶೇಷ ಸ್ಟ್ಯಾಂಡ್ ನಿರ್ಮಿಸಲಾಗಿದೆ. ಇದಕ್ಕೆ 10,000 ನಿಗದಿಪಡಿಸಲಾಗಿದೆ. ಥ್ರೋ ಮಾಡುವ ಸ್ಪರ್ಧಿಗಳ ಹಿಂಭಾಗದಲ್ಲಿ ಇರುವ ಸ್ಟ್ಯಾಂಡ್​ಗೆ 3000 ಟಿಕೆಟ್ ನಿಗದಿ ಮಾಡಲಾಗಿದೆ. ಜೊಮೊಟೊನ ಜಿಲ್ಲಾ ಅಪ್ಲಿಕೇಶನ್‌ಗೆ ಹೋಗಿ, ಟಿಕೆಟ್ ವಿಭಾಗಗಳನ್ನು ಬ್ರೌಸ್ ಮಾಡಿ ಮತ್ತು ಕೆಲವೇ ಟ್ಯಾಪ್‌ಗಳಲ್ಲಿ ನಿಮ್ಮ ಸ್ಥಾನವನ್ನು ಕಾಯ್ದಿರಿಸಿ. ಜತೆಗೆ ನೀವು ವೀಸಾ ಕ್ರೆಡಿಟ್ ಕಾರ್ಡ್‌ನೊಂದಿಗೆ ಬುಕಿಂಗ್ ಮಾಡುತ್ತಿದ್ದರೆ, ಶೇ 10% ರಿಯಾಯಿತಿ ಸಿಗಲಿದೆ. ಎನ್​ಸಿ ಕ್ಲಾಸಿಕ್ 2025 ಕ್ರೀಡಾಕೂಟ ಮೇ 24ರಂದು ಸಂಜೆ 6:30 ಕ್ಕೆ ಪ್ರಾರಂಭವಾಗಲಿದೆ,

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.