ಭಾರತೀಯ ಸೇನೆಯಲ್ಲಿ ನೀರಜ್ ಚೋಪ್ರಾಗೆ ದೊಡ್ಡ ಹುದ್ದೆ; ಮಾಜಿ ಮೇಜರ್​ಗೆ ಈಗ ಸಿಕ್ಕ ಜವಾಬ್ದಾರಿ ಯಾವುದು?
ಕನ್ನಡ ಸುದ್ದಿ  /  ಕ್ರೀಡೆ  /  ಭಾರತೀಯ ಸೇನೆಯಲ್ಲಿ ನೀರಜ್ ಚೋಪ್ರಾಗೆ ದೊಡ್ಡ ಹುದ್ದೆ; ಮಾಜಿ ಮೇಜರ್​ಗೆ ಈಗ ಸಿಕ್ಕ ಜವಾಬ್ದಾರಿ ಯಾವುದು?

ಭಾರತೀಯ ಸೇನೆಯಲ್ಲಿ ನೀರಜ್ ಚೋಪ್ರಾಗೆ ದೊಡ್ಡ ಹುದ್ದೆ; ಮಾಜಿ ಮೇಜರ್​ಗೆ ಈಗ ಸಿಕ್ಕ ಜವಾಬ್ದಾರಿ ಯಾವುದು?

ಭಾರತದ ಜಾವೆಲಿನ್ ಸ್ಟಾರ್​ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ದೊಡ್ಡ ಹುದ್ದೆಯೊಂದು ಸಿಕ್ಕಿದೆ. ಮಾಜಿ ಮೇಜರ್​ಗೆ ಈಗ ಸಿಕ್ಕ ಹುದ್ದೆ ಯಾವುದು? ಇಲ್ಲಿದೆ ವಿವರ.

ಭಾರತೀಯ ಸೇನೆಯಲ್ಲಿ ನೀರಜ್ ಚೋಪ್ರಾಗೆ ದೊಡ್ಡ ಹುದ್ದೆ; ಮಾಜಿ ಮೇಜರ್​ಗೆ ಈಗ ಸಿಕ್ಕ ಜವಾಬ್ದಾರಿ ಯಾವುದು?
ಭಾರತೀಯ ಸೇನೆಯಲ್ಲಿ ನೀರಜ್ ಚೋಪ್ರಾಗೆ ದೊಡ್ಡ ಹುದ್ದೆ; ಮಾಜಿ ಮೇಜರ್​ಗೆ ಈಗ ಸಿಕ್ಕ ಜವಾಬ್ದಾರಿ ಯಾವುದು?

ಎರಡು ಒಲಿಂಪಿಕ್ಸ್ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆ ವಿಶ್ವಮಟ್ಟದಲ್ಲಿ ಹಾರಿಸಿರುವ ಭಾರತದ ಜಾವೆಲಿನ್ ಸ್ಟಾರ್​ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ಪ್ರಮುಖ ಹುದ್ದೆ ನೀಡಿ ಗೌರವಿಸಲಾಗಿದೆ. ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ನೀಡಿ ಗೌರವಿಸಿರುವ ಕುರಿತು ರಕ್ಷಣಾ ಸಚಿವಾಲಯ ಅಧಿಕೃತ ಘೋಷಣೆ ಮಾಡಿದೆ. ಭಾರತ ಸರ್ಕಾರದ ವಾರಪತ್ರಿಕೆ ಗೆಜೆಟ್ ಆಫ್ ಇಂಡಿಯಾದಲ್ಲಿ ಈ ಬಗ್ಗೆ ಬಿಡುಗಡೆ ಮಾಡಿದೆ. ಇದು 2025ರ ಏಪ್ರಿಲ್ 16ರಿಂದ ಜಾರಿಗೆ ಬಂದಿದೆ.

2020ರ ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಟ್ರ್ಯಾಕ್ ಆ್ಯಂಡ್ ಫೀಲ್ಡ್ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಚರಿತ್ರೆ ಸೃಷ್ಟಿಸಿದ್ದರು. ಇನ್ನು ಕಳೆದ ವರ್ಷ ನಡೆದ 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ ಮತ್ತೆ ಅದ್ಭುತ ಪ್ರದರ್ಶನ ನೀಡಿದ್ದ ಚೋಪ್ರಾ ಬೆಳ್ಳಿ ಪದಕ ಜಯಿಸಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಪದಕ ಗೆದ್ದ ಕೆಲವೇ ಕ್ರೀಡಾಪಟುಗಳ ಪಟ್ಟಿಗೆ ಇವರು ಸೇರ್ಪಡೆಯಾಗಿದ್ದಾರೆ.

1948ರ ಪ್ರಾದೇಶಿಕ ಸೇನಾ ನಿಯಮಗಳ ಪ್ಯಾರಾ 31 ರಿಂದ ನೀಡಲಾದ ಅಧಿಕಾರ ಚಲಾಯಿಸಿ ಏಪ್ರಿಲ್ 16 ರಿಂದ ಜಾರಿಗೆ ಬರುವಂತೆ ಹರಿಯಾಣದ ಪಾಣಿಪತ್‌ನ ಪಾಣಿಪತ್‌ನ ಗ್ರಾಮ ಮತ್ತು ಅಂಚೆ ಕಚೇರಿ ಖಾಂಡ್ರಾದ ಮಾಜಿ ಸಬ್ ಮೇಜರ್ ನೀರಜ್ ಚೋಪ್ರಾಗೆ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಶ್ರೇಣಿಯನ್ನು ನೀಡಲು ಹೆಮ್ಮೆಯಾಗುತ್ತಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

2016ರಿಂದಲೇ ಚೋಪ್ರ ಸೇನೆಯಲ್ಲಿ ಸೇವೆ

ನೀರಜ್ 2016 ರಲ್ಲಿ ನೈಬ್ ಸುಬೇದಾರ್ ಹುದ್ದೆಯೊಂದಿಗೆ ಜೂನಿಯರ್ ಕಮಿಷನ್ಡ್ ಆಫೀಸರ್ ಆಗಿ ಭಾರತೀಯ ಸೇನೆಗೆ ಸೇರಿದ್ದರು. ಬಳಿಕ 2021ರಲ್ಲಿ ಸುಬೇದಾರ್ ಆಗಿ ಬಡ್ತಿ ಪಡೆದ ಅವರಿಗೆ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ನಂತರ 2022ರಲ್ಲಿ ಭಾರತೀಯ ಸೇನೆಯ ಅತ್ಯುನ್ನತ ಪರಮ ವಿಶಿಷ್ಟ ಸೇವಾ ಪದಕವಾದ ಪೀಸ್ ಟೈಮ್ ಮೆಡಲ್ ನೀಡಲಾಗಿತ್ತು. ಅಲ್ಲದೆ, ಸುಬೇದಾರ್ ಮೇಜರ್ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಇದೀಗ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಸಿಕ್ಕಿದೆ.

90 ಮೀಟರ್ ಗುರಿ; ನೀರಜ್

ನೀರಜ್ ಚೋಪ್ರಾ ಅವರ ವೈಯಕ್ತಿಕ ದಾಖಲೆ 89.94 ಮೀಟರ್ ದೂರ. ಹಲವು ಟೂರ್ನಿಗಳಲ್ಲಿ ಚೋಪ್ರಾ ಸ್ಪರ್ಧಿಸಿದ್ದರೂ ಅವರು 90 ಮೀಟರ್ ದೂರ ಎಸೆಯಲು ಇನ್ನೂ ಸಾಧ್ಯವಾಗಿಲ್ಲ. ಈಗ ಭಾರತದಲ್ಲಿ ತನ್ನದೇ ಹೆಸರಿನಲ್ಲಿ ನಡೆಯಲಿರುವ ಎನ್​ಸಿ ಕ್ಲಾಸಿಕ್ ಈವೆಂಟ್​ನಲ್ಲಿ 90 ಮೀ ಜಾವೆಲಿನ್ ದೂರ ಎಸೆಯಲು ಸಜ್ಜಾಗಿದ್ದಾರೆ. ಹಿಂದಿನಿಂದಲೂ ಅವರೇ ಸ್ವತಃ 90 ಮೀಟರ್​ ಮಾರ್ಕ್ ದಾಟುವುದೇ ನನ್ನ ಗುರಿ ಎಂದು ಹೇಳುತ್ತಾ ಬಂದಿದ್ದಾರೆ. ದಾಖಲೆ ಮಾಡ್ತಾರಾ ಎಂಬುದನ್ನು ಕಾದುನೋಡೋಣ.

ನೀರಜ್ ಚೋಪ್ರಾ ಕ್ಲಾಸಿಕ್ ಈವೆಂಟ್ ಮುಂದೂಡಿಕೆ

ಮೇ 24ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಈವೆಂಟ್​ ಮುಂದೂಡಿಕೆಯಾಗಿದೆ. ಆದರೆ ಸ್ಪರ್ಧೆ ನಡೆಯುವ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಭಾರತದಲ್ಲಿ ಜರುಗುವ ಮೊದಲ ಜಾಗತಿಕ ಜಾವೆಲಿನ್ ಟೂರ್ನಿ ಇದಾಗಿದೆ. ನೀರಜ್ ಚೋಪ್ರಾ ಮತ್ತು ಜೆಎಸ್​ಡಬ್ಲ್ಯು ಸ್ಪೋರ್ಟ್ಸ್​ ಜಂಟಿಯಾಗಿ ಆಯೋಜನೆ ಮಾಡಲಾಗುತ್ತಿದೆ. ವಿಶ್ವ ಅಥ್ಲೆಟಿಕ್ಸ್ ಮತ್ತು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ಸಹಯೋಗ ಹೊಂದಿದೆ.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.