ನೀರಜ್ ಚೋಪ್ರಾ ಜತೆಗೆ ಮತ್ತೊಬ್ಬ ಭಾರತದ ಬೆಳ್ಳಿ ಪದಕ ವಿಜೇತ ಕಣಕ್ಕೆ; ಇಂದು ಜಾವೆಲಿನ್​​ ಸ್ಪರ್ಧೆ, ಎಷ್ಟೊತ್ತಿಗೆ?-neeraj chopra kishore jena in action on these dates at paris olympics 2024 check full schedule of defending champion prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ನೀರಜ್ ಚೋಪ್ರಾ ಜತೆಗೆ ಮತ್ತೊಬ್ಬ ಭಾರತದ ಬೆಳ್ಳಿ ಪದಕ ವಿಜೇತ ಕಣಕ್ಕೆ; ಇಂದು ಜಾವೆಲಿನ್​​ ಸ್ಪರ್ಧೆ, ಎಷ್ಟೊತ್ತಿಗೆ?

ನೀರಜ್ ಚೋಪ್ರಾ ಜತೆಗೆ ಮತ್ತೊಬ್ಬ ಭಾರತದ ಬೆಳ್ಳಿ ಪದಕ ವಿಜೇತ ಕಣಕ್ಕೆ; ಇಂದು ಜಾವೆಲಿನ್​​ ಸ್ಪರ್ಧೆ, ಎಷ್ಟೊತ್ತಿಗೆ?

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಇಂದು ಜಾವೆಲಿನ್ ಥ್ರೋ ಸ್ಪರ್ಧೆ ನಡೆಯಲಿದ್ದು, ಭಾರತದ ಪರ ಇಬ್ಬರು ಕಣಕ್ಕಿಳಿಯಲಿದ್ದಾರೆ.

ನೀರಜ್ ಚೋಪ್ರಾ ಜೊತೆಗೆ ಕಣಕ್ಕಿಳಿಯಲಿದ್ದಾರೆ ಮತ್ತೊಬ್ಬ ಭಾರತದ ಬೆಳ್ಳಿ ಪದಕ ವಿಜೇತ; ಇಂದು ಜಾವೆಲಿನ್​​ ಸ್ಪರ್ಧೆ
ನೀರಜ್ ಚೋಪ್ರಾ ಜೊತೆಗೆ ಕಣಕ್ಕಿಳಿಯಲಿದ್ದಾರೆ ಮತ್ತೊಬ್ಬ ಭಾರತದ ಬೆಳ್ಳಿ ಪದಕ ವಿಜೇತ; ಇಂದು ಜಾವೆಲಿನ್​​ ಸ್ಪರ್ಧೆ

2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ನೀರಜ್ ಚೋಪ್ರಾ ಕಣಕ್ಕಿಳಿಯುವುದನ್ನು ನೋಡಲು ಇಡೀ ದೇಶವೇ ಕಾಯುತ್ತಿದೆ. ಒಲಿಂಪಿಕ್ಸ್​​​ಗೂ ಮುನ್ನ ಕಳೆದ ತಿಂಗಳು ಪ್ಯಾರಿಸ್​ಗೆ ಬಂದಿದ್ದ ಹಾಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಈ ಕ್ರೀಡಾಕೂಟದಲ್ಲೂ ಚಿನ್ನದ ಭರವಸೆ ಮೂಡಿಸಿದ್ದಾರೆ. ಒಲಿಂಪಿಕ್ಸ್​​​​ ಪ್ರಾರಂಭವಾಗಿ 10 ದಿನಗಳ ನಂತರ 11ನೇ ದಿನವಾದ ಇಂದು ಚೋಪ್ರಾ ಕಣಕ್ಕಿಳಿಯುತ್ತಿದ್ದಾರೆ.

ಬೇಸಿಗೆ ಒಲಿಂಪಿಕ್ಸ್​​ನಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳು ಆಗಸ್ಟ್ 1 ರಿಂದಲೇ ಪ್ರಾರಂಭವಾದವು. ಎಲ್ಲಾ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್​​ಗಳು ಪ್ಯಾರಿಸ್​ನ ಅಪ್ರತಿಮ ಸ್ಟೇಡ್ ಡಿ ಫ್ರಾನ್ಸ್​​​ನಲ್ಲಿ ನಡೆಯುತ್ತಿವೆ.

ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ನೀರಜ್ ಜೊತೆಗೆ ಭಾರತದ ಮತ್ತೊಬ್ಬ ಆಟಗಾರ ಜೆನಾ ಕಿಶೋರ್​​ ಅವರು ಸ್ಪರ್ಧಿಸುತ್ತಿದ್ದಾರೆ. ಕಳೆದ ವರ್ಷ ಹ್ಯಾಂಗ್​ಝೌನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್​​ನಲ್ಲಿ ನೀರಜ್​ ಚಿನ್ನ ಗೆದ್ದಿದ್ದರೆ, ಜೆನಾ ಬೆಳ್ಳಿ ಪದಕ ಗೆದ್ದಿದ್ದರು.

ಟೋಕಿಯೊ ಒಲಿಂಪಿಕ್ಸ್​​​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದ ನೀರಜ್ ಚೋಪ್ರಾ, 2022ರಲ್ಲಿ ಡೈಮಂಡ್ ಲೀಗ್ ಪ್ರಶಸ್ತಿ ಮತ್ತು 2023ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.

ಮಧ್ಯಾಹ್ನ 1:50 - ಅಥ್ಲೆಟಿಕ್ಸ್ - ಪುರುಷರ ಜಾವೆಲಿನ್ ಥ್ರೋ - ಅರ್ಹತಾ ಗುಂಪು ಎ - ಕಿಶೋರ್ ಜೆನಾ

ಮಧ್ಯಾಹ್ನ 3:20 - ಅಥ್ಲೆಟಿಕ್ಸ್ - ಪುರುಷರ ಜಾವೆಲಿನ್ ಥ್ರೋ - ಅರ್ಹತಾ ಗುಂಪು ಎ - ನೀರಜ್ ಚೋಪ್ರಾ

ನೀರಜ್ ಚೋಪ್ರಾ ಅವರ ಆಟ ಎಷ್ಟೊತ್ತಿಗೆ ಆರಂಭ?

ನೀರಜ್ ಮಂಗಳವಾರ (ಆಗಸ್ಟ್ 6) ಜಾವೆಲಿನ್ ಥ್ರೋ ಸ್ಪರ್ಧೆಯ ನೇತೃತ್ವ ವಹಿಸಲಿದ್ದಾರೆ. ಅರ್ಹತಾ ಸುತ್ತು ಮಧ್ಯಾಹ್ನ 1:50ಕ್ಕೆ ಎ ಗುಂಪಿನೊಂದಿಗೆ ಪ್ರಾರಂಭವಾಗಲಿದೆ. ಅದೇ ದಿನ ಮಧ್ಯಾಹ್ನ 3.20ಕ್ಕೆ 'ಎ' ಗುಂಪಿನ ಪಂದ್ಯಗಳು ನಡೆಯಲಿವೆ.

ಜಾವೆಲಿನ್ ಪುರುಷರ ಫೈನಲ್ ಯಾವಾಗ?

ಅರ್ಹತಾ ಸುತ್ತಿನಲ್ಲಿ ಅರ್ಹತೆ ಪಡೆದರೆ ಸ್ಪರ್ಧಿಗಳು ಫೈನಲ್​ಗೆ ಅವಕಾಶ ಪಡೆಯಲಿದ್ದಾರೆ. ಈ ಬಾರಿಯೂ ನೀರಜ್ ಮತ್ತು ಕಿಶೋರ್​ ಫೈನಲ್​ಗೇರುವ ವಿಶ್ವಾಸ ಹೊಂದಿದ್ದಾರೆ. ಜಾವೆಲಿನ್ ಥ್ರೋನ ಪುರುಷರ ಫೈನಲ್ ಆಗಸ್ಟ್ 8 ರಂದು (ಭಾನುವಾರ) ರಾತ್ರಿ 11:55 ಕ್ಕೆ ಪ್ರಾರಂಭವಾಗಲಿದೆ.

ಯಾವ ಚಾನೆಲ್​ನಲ್ಲಿ ಲಭ್ಯ?

ಪ್ಯಾರಿಸ್ ಒಲಿಂಪಿಕ್ಸ್ 2024 ರ ನೇರ ಪ್ರಸಾರವನ್ನು ಅಭಿಮಾನಿಗಳು ಭಾರತದ ಸ್ಪೋರ್ಟ್ಸ್ 18 ನೆಟ್ವರ್ಕ್​ನ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಸ್ಪೋರ್ಟ್ಸ್ 18-1 ಮತ್ತು ಸ್ಪೋರ್ಟ್ಸ್ 18-1 ಹೆಚ್​​ಡಿ, ಸ್ಪೋರ್ಟ್ಸ್ 18 ಖೇಲ್ ಮತ್ತು ಸ್ಪೋರ್ಟ್ಸ್ 18-2 ಚಾನೆಲ್​​​ನಲ್ಲೂ ಪ್ಯಾರಿಸ್ ಒಲಿಂಪಿಕ್ಸ್​​​ ಅನ್ನು ವೀಕ್ಷಿಸಬಹುದು.

ಜಾವೆಲಿನ್ ಸ್ಪರ್ಧೆ ನೇರ ಪ್ರಸಾರ ವೀಕ್ಷಿಸುವುದು ಹೇಗೆ?

ಭಾರತದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟವನ್ನು ಜಿಯೋ ಸಿನಿಮಾ ಅಪ್ಲಿಕೇಶನ್​ನಲ್ಲಿ​ ಲೈವ್ ಅನ್ನು ಉಚಿತವಾಗಿ ವೀಕ್ಷಿಸಬಹುದು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.