ನೀರಜ್ ಚೋಪ್ರಾ ಲೂಸಾನ್‌ ಡೈಮಂಡ್ ಲೀಗ್‌ ಫೈನಲ್‌ ಯಾವಾಗ; ಸಮಯ, ನೇರಪ್ರಸಾರ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ-neeraj chopra lausanne diamond league final timings when and where to watch live on tv live streaming jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ನೀರಜ್ ಚೋಪ್ರಾ ಲೂಸಾನ್‌ ಡೈಮಂಡ್ ಲೀಗ್‌ ಫೈನಲ್‌ ಯಾವಾಗ; ಸಮಯ, ನೇರಪ್ರಸಾರ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ

ನೀರಜ್ ಚೋಪ್ರಾ ಲೂಸಾನ್‌ ಡೈಮಂಡ್ ಲೀಗ್‌ ಫೈನಲ್‌ ಯಾವಾಗ; ಸಮಯ, ನೇರಪ್ರಸಾರ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ

ಲೂಸಾನ್‌ ಡೈಮಂಡ್ ಲೀಗ್‌, ಈ ಋತುವಿನಲ್ಲಿ ನೀರಜ್ ಚೋಪ್ರಾ ಅವರ ಐದನೇ ಸ್ಪರ್ಧೆಯಾಗಿದೆ. ಇಂದು ತಡರಾತ್ರಿ ನಡೆಯುವ ಫೈನಲ್‌ ಸುತ್ತಿನಲ್ಲಿ ಚಿನ್ನದ ಹುಡುಗ ಕಣಕ್ಕಿಳಿಯುತ್ತಿದ್ದಾರೆ.

ನೀರಜ್ ಚೋಪ್ರಾ ಲೂಸಾನ್‌ ಡೈಮಂಡ್ ಲೀಗ್‌; ಸಮಯ, ನೇರಪ್ರಸಾರ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ
ನೀರಜ್ ಚೋಪ್ರಾ ಲೂಸಾನ್‌ ಡೈಮಂಡ್ ಲೀಗ್‌; ಸಮಯ, ನೇರಪ್ರಸಾರ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ (AP)

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ, ಇದೀಗ ಡೈಮಂಡ್‌ ಲೀಗ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಹೊಸ ಒಲಿಂಪಿಕ್ ದಾಖಲೆಯೊಂದಿಗೆ ಬಂಗಾರಕ್ಕೆ ಕೊರಳೊಡ್ಡಿದರು. ಹೀಗಾಗಿ ನೀರಜ್‌ಗೆ ಬಂಗಾರ ಕೈತಪ್ಪಿತು. ಎರಡನೇ ಪ್ರಯತ್ನದಲ್ಲಿ 89.45 ಮೀಟರ್ ದೂರ ಜಾವೆಲಿನ್‌ ಎಸೆದ ನೀರಜ್, ಸತತ ನಾಲ್ಕು ಫೌಲ್ ಎಸೆತಗಳೊಂದಿಗೆ ಹೆಣಗಾಡಿದರು. ಇದೀಗ ಅವರ ಗುರಿ ಡೈಮಂಡ್‌ ಲೀಗ್‌ ಮೇಲಿದೆ.

ದೀರ್ಘಕಾಲದ ಸೊಂಟದ ನೋವಿನಿಂದ ಬಳಲುತ್ತಿರುವ ನೀರಾಜ್‌, ಈ ಋತುವಿನ ಅಂತ್ಯದ ನಂತರ ಶಸ್ತ್ರಚಿಕಿತ್ಸೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಲೂಸಾನ್ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಮೇಲೆ ಭಾರಿ ನಿರೀಕ್ಷೆ ಇದೆ. ಲೂಸಾನ್ ಡೈಮಂಡ್ ಲೀಗ್ ಮೀಟ್, ಈ ಋತುವಿನಲ್ಲಿ ನೀರಜ್ ಅವರು ಭಾಗಿಯಾಗುತ್ತಿರುವ ಐದನೇ ಸ್ಪರ್ಧೆಯಾಗಿದೆ. ದೋಹಾ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆಯುವುದರೊಂದಿಗೆ 2024ರ ಋತುವನ್ನು ಪ್ರಾರಂಭಿಸಿದರು.

ಸದ್ಯ ನೀರಜ್ ಡೈಮಂಡ್ ಲೀಗ್ 2024ರ ಅಂಕಗಳಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಫೈನಲ್‌ಗೆ ಪ್ರವೇಶಿಸಲು ಲೂಸಾನ್‌ನಲ್ಲಿ ಅವರು ಅಗ್ರ ಆರು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯಬೇಕಾಗಿದೆ. ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಅವರ ಪುರುಷರ ಜಾವೆಲಿನ್ ಥ್ರೋ ಫೈನಲ್ ಸ್ವಿಟ್ಜರ್ಲೆಂಡ್‌ನ ಲೂಸಾನ್‌ನಲ್ಲಿರುವ ಪೊಂಟೈಸ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಅವರ ಪುರುಷರ ಜಾವೆಲಿನ್ ಥ್ರೋ ಫೈನಲ್ ಯಾವಾಗ ನಡೆಯಲಿದೆ?

ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಅವರ ಪುರುಷರ ಜಾವೆಲಿನ್ ಥ್ರೋ ಫೈನಲ್ ಆಗಸ್ಟ್ 23ರಂದು ಬೆಳಗ್ಗೆ 12:12ಕ್ಕೆ (ಇಂದು ತಡರಾತ್ರಿ) ನಡೆಯಲಿದೆ.

ನೀರಜ್ ಚೋಪ್ರಾ ಅವರ ಜಾವೆಲಿನ್ ಥ್ರೋ ಫೈನಲ್ ಅನ್ನು ಭಾರತದಲ್ಲಿ ಟಿವಿ ಮೂಲಕ ವೀಕ್ಷಿಸುವುದು ಹೇಗೆ?

ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಅವರ ಫೈನಲ್‌ ಸುತ್ತಿನ ನೇರಪ್ರಸಾರವು ಸ್ಪೋರ್ಟ್ಸ್ 18 ನೆಟ್ವರ್ಕ್‌ನಲ್ಲಿ ಲಭ್ಯವಿದೆ. ಇಲ್ಲಿ ನೀವು ಲೈವ್‌ ವೀಕ್ಷಿಸಬಹುದು.

ಮೊಬೈಲ್‌ ಮೂಲಕ ನೀರಜ್ ಚೋಪ್ರಾ ಅವರ ಪುರುಷರ ಜಾವೆಲಿನ್ ಥ್ರೋ ಫೈನಲ್ ಲೈವ್‌ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

ಪುರುಷರ ಜಾವೆಲಿನ್ ಥ್ರೋ ಫೈನಲ್‌ನ ಲೈವ್‌ ಸ್ಟ್ರೀಮಿಂಗ್‌ ಜಿಯೋ ಸಿನೆಮಾದಲ್ಲಿ ಲಭ್ಯವಿರಲಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.