Kannada News  /  Sports  /  New Pcb In Charge Najam Sethi On India Vs Pakistan Cricket Ties
ನಜಮ್ ಸೇಥಿ
ನಜಮ್ ಸೇಥಿ (AP)

Najam Sethi: ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧಗಳ ಬಗ್ಗೆ ಪಿಸಿಬಿ ನೂತನ ಉಸ್ತುವಾರಿ ಹೇಳಿದ್ದೇನು?

23 December 2022, 13:45 ISTHT Kannada Desk
23 December 2022, 13:45 IST

ನೂತನ ಉಸ್ತುವಾರಿಯಾಗಿ ನೇಮಕಗೊಂಡ ಬೆನ್ನಲ್ಲೇ ಸೇಥಿ ಅವರು ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ನೂತನ ಉಸ್ತುವಾರಿಯಾಗಿ ನಜಮ್ ಸೇಥಿ ಅಧಿಕಾರ ವಹಿಸಿಕೊಂಡಿದ್ದಾರೆ. ರಮೀಜ್ ರಾಜಾ ಅವರನ್ನು ಪಿಸಿಬಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿದ ಬೆನ್ನಲ್ಲೇ ಸೇಥಿ ಅವರು ಗುರುವಾರ ಪಿಸಿಬಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇವರನ್ನು 14 ಸದಸ್ಯರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈ ಸಮಿತಿಯು ಮುಂದಿನ ನಾಲ್ಕು ತಿಂಗಳವರೆಗೆ ಪಾಕಿಸ್ತಾನದಲ್ಲಿ ಕ್ರಿಕೆಟ್ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳಲಿದೆ.

ಟ್ರೆಂಡಿಂಗ್​ ಸುದ್ದಿ

ನೂತನ ಉಸ್ತುವಾರಿಯಾಗಿ ನೇಮಕಗೊಂಡ ಬೆನ್ನಲ್ಲೇ ಸೇಥಿ ಅವರು ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

"ಪಾಕಿಸ್ತಾನ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಮತ್ತು ಇತರ ಕ್ರಿಕೆಟ್ ಸಂಬಂಧಗಳ ವಿಚಾರವಾಗಿ, ಮೊದಲು ಉಭಯ ದೇಶಗಳ ಸರ್ಕಾರಗಳನ್ನು ಸಂಪರ್ಕಿಸಬೇಕು" ಎಂದು ಸೇಥಿ ಲಾಹೋರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದಿನ ವರ್ಷ ನಡೆಸಲು ಯೋಜಿತವಾಗಿರುವ ಏಷ್ಯಾಕಪ್‌ಗೆ, ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಮತ್ತು ಪಂದ್ಯಾವಳಿಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಎಸಿಸಿ ಅಧ್ಯಕ್ಷ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದರು. ಅಂದಿನಿಂದ ಭಾರತ ಮತ್ತು ಪಿಸಿಬಿ ನಡುವೆ ನಿರಂತರವಾಗಿ ವಾಗ್ಯುದ್ಧ ನಡೆಯುತ್ತಲೇ ಇದೆ. ಇದಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದ ಆಗಿನ ಪಿಸಿಬಿ ಮುಖ್ಯಸ್ಥ ರಾಜಾ, 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದ್ದರು.

ಪಾಕಿಸ್ತಾನ ತಂಡದಲ್ಲಿ ಬದಲಾವಣೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ತಂಡದಲ್ಲಿ ಬದಲಾವಣೆ ಮಾಡುವ ಅಗತ್ಯವಿದೆಯೇ ಎಂದು ನನಗೆ ತಿಳಿದಿಲ್ಲ. ಹೊಸ ಆಲೋಚನೆಗಳು ಅಗತ್ಯವಿದೆಯೇ ಎಂದು ನಾವು ನೋಡುತ್ತೇವೆ" ಎಂದರು.

ಗಮನಿಸಬಹುದಾದ ಇತರೆ ಸುದ್ದಿಗಳು

ಇದೊಂದು ವಿಷಯದಲ್ಲಿ ಭಾರತ ಕ್ರಿಕೆಟ್‌ ತಂಡದಲ್ಲಿ 'ಭಿನ್ನಾಭಿಪ್ರಾಯ'ವಿದೆ: 'ಸತ್ಯ' ಬಿಚ್ಚಿಟ್ಟ ಕೆಎಲ್‌ ರಾಹುಲ್!‌

ಭಾರತ ಕ್ರಿಕೆಟ್‌ ತಂಡದಲ್ಲಿ ಎಲ್ಲವೂ ಸರಿ ಇದೆಯಾ ಎಂದು ಕೇಳಿದರೆ, ಹೌದು ಎಲ್ಲವೂ ಸರಿಯಿದೆ ಎಂಬ ಉತ್ತರ ಆಟಗಾರರಿಂದ ಬರುತ್ತದೆ. ಆದರೆ ಭಾರತ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ ಕೆಎಲ್‌ ರಾಹುಲ್‌, ಭಾರತ ಕ್ರಿಕೆಟ್‌ ತಂಡದಲ್ಲಿ ಒಂದು ವಿಷಯದಲ್ಲಿ 'ಭಿನ್ನಾಭಿಪ್ರಾಯ'ವಿದೆ ಎಂಬ ಸಂಗತಿಯನ್ನು ಹೊರಗೆಡವಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಉಳಿಯಲು ಭಾರತಕ್ಕೆ ಎಷ್ಟು ಗೆಲುವು ಬೇಕು?

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 188 ರನ್‌ಗಳಿಂದ ಗೆದ್ದಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೆ ಎಲ್ ರಾಹುಲ್ ಪಡೆಯು 404 ರನ್ ಪೇರಿಸುವುದರೊಂದಿಗೆ ಬೃಹತ್‌ ಮೊತ್ತ ದಾಖಲಿಸಿತು. ಇದಕ್ಕೆ ಪ್ರತಿಯಾಗಿ ಆತಿಥೇಯರು 150 ರನ್‌ಗಳಿಗೆ ಆಲೌಟ್ ಆದರು. 254 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಮುಂದುವರೆಯಿತು. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ