ಕನ್ನಡ ಸುದ್ದಿ  /  Sports  /  Odi World Cup Pakistan Expected To Play Icc World Cup 2023 Matches In Bangladesh Report

ODI World Cup: ಭಾರತದಲ್ಲಿ ಪಾಕಿಸ್ತಾನ​ ಪಂದ್ಯಗಳು ನಡೆಯಲ್ಲ.. ಹಾಗಾದ್ರೆ ಮತ್ತೆಲ್ಲಿ?

ಏಷ್ಯಾ ಕಪ್​​​ ಟೂರ್ನಿಗಾಗಿ ಪಾಕಿಸ್ತಾನಕ್ಕೆ ಭಾರತ ಹೋಗದಿರುವ ನಿರ್ಧಾರ ಕೈಗೊಂಡಿದೆ. ಅದೇ ರೀತಿ ಏಕದಿನ ವಿಶ್ವಕಪ್​ ಟೂರ್ನಿ​​​ಗಾಗಿ, ಭಾರತದ ನೆಲ ಸ್ಪರ್ಶಿಸಲು ಪಾಕಿಸ್ತಾನ ಕೂಡ ತಿರಸ್ಕರಿಸಿದೆ. ವಿಶ್ವಕಪ್​​​ನಲ್ಲಿ ಪಾಕಿಸ್ತಾನ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ಐಸಿಸಿ ಚಿಂತನೆ ನಡೆಸಿದೆ.

ಬಾಬರ್​ ಅಜಮ್​ ಮತ್ತು ವಿರಾಟ್​ ಕೊಹ್ಲಿ
ಬಾಬರ್​ ಅಜಮ್​ ಮತ್ತು ವಿರಾಟ್​ ಕೊಹ್ಲಿ (ICC)

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾರ್ಚ್​​​ 31ರಿಂದ ಶುರುವಾಗುವ ಐಪಿಎಲ್ (IPL)​​​​​​ ಹಬ್ಬಕ್ಕೆ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ. ಇದರ ನಡುವೆ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​ ಆಯೋಜನೆ ಕುರಿತು ಮಹತ್ವದ ಸುದ್ದಿಯೊಂದು ಕೇಳಿ ಬಂದಿದೆ. ಏಷ್ಯಾ ಕಪ್​​​ ಟೂರ್ನಿಗಾಗಿ (Asia Cup) ಪಾಕಿಸ್ತಾನಕ್ಕೆ ಭಾರತ ಹೋಗದಿರುವ ನಿರ್ಧಾರ ಕೈಗೊಂಡಿದೆ. ಅದೇ ರೀತಿ ಏಕದಿನ ವಿಶ್ವಕಪ್​ ಟೂರ್ನಿ​​​ಗಾಗಿ (ODI World Cup in India 2023), ಭಾರತದ ನೆಲ ಸ್ಪರ್ಶಿಸಲು ಪಾಕಿಸ್ತಾನ ಕೂಡ ತಿರಸ್ಕರಿಸಿದೆ.

ವಾಸ್ತವವಾಗಿ ಈ ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಸಂಬಂಧಿಸಿದ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವ ಕುರಿತು ಐಸಿಸಿ ಸಭೆಯಲ್ಲಿ ಚರ್ಚೆ ನಡೆದಿದೆ. ಈ ವಿಷಯವನ್ನು ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಐಸಿಸಿ (ICC), ಪಾಕಿಸ್ತಾನ ತಂಡದ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಡಿಸಲು ಚರ್ಚೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಎಲ್ಲರ ಅಭಿಪ್ರಾಯ ತೆಗೆದುಕೊಂಡ ಬಳಿಕವೇ ಮುಂದಿನ ಹೆೆಜ್ಜೆ ಇಡಲು ಐಸಿಸಿ ನಿರ್ಧರಿಸಿದೆ.

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ​​ ಕ್ರಿಕೆಟಿಗರಿಗೆ ವೀಸಾ ನೀಡುವುದಾಗಿ ಭಾರತ ಸರ್ಕಾರ ಐಸಿಸಿಗೆ ತಿಳಿಸಿದೆ. ಆದರೂ ಈ ನಿರ್ಧಾರವನ್ನು ತಿರಸ್ಕರಿಸಿರುವ ಪಾಕಿಸ್ತಾನ, ಭಾರತಕ್ಕೆ ಹೆಜ್ಜೆ ಇಡುವುದಿಲ್ಲ ಎಂದು ಖಡಕ್​ ಎಚ್ಚರಿಕೆ ನೀಡಿದೆ. ಈ ವಿವಾದವನ್ನು ಶಮನಗೊಳಿಸಲು ಮಧ್ಯ ಪ್ರವೇಶಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ICC) ಪಾಕಿಸ್ತಾನದ ಎಲ್ಲಾ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಯೋಜಿಸುವ ಕುರಿತು ಚರ್ಚೆ ನಡೆಸಿದೆ. ಈ ಬಗ್ಗೆ ಬಿಸಿಸಿಐ ಜೊತೆ ಮಾತುಕತೆಗೂ ಮುಂದಾಗಿದೆ.

ಈ ವರ್ಷ ಏಷ್ಯಾಕಪ್ ಏಕದಿನ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಲಿದೆ. ಈ ಟೂರ್ನಿಗಾಗಿ ಪಾಕ್​​ಗೆ ಟೀಮ್​ ಇಂಡಿಯಾ ಪ್ರಯಾಣ ಬೆಳೆಸುವುದಿಲ್ಲ ಎಂದು ಭಾರತ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಇದೇ ಹಿನ್ನೆಲೆಯಲ್ಲಿ ಪಾಕಿಸ್ತಾನ ಕೂಡ ಭಾರತದಲ್ಲಿ 2023ರ ಏಕದಿನ ವಿಶ್ವಕಪ್ ಆಡದಂತೆ ಬೆದರಿಕೆ ಹಾಕುತ್ತಿದೆ. ಈ ಕ್ರಮದಲ್ಲಿ ಐಸಿಸಿ ಅಖಾಡಕ್ಕಿಳಿದಿದೆ ಎನ್ನಲಾಗಿದೆ.

ಕಳೆದ 5 ತಿಂಗಳಿಂದ ನಡೆಯುತ್ತಿರುವ ಏಷ್ಯಾ ಕಪ್ 2023 ವಿವಾದವು ಬಹುತೇಕ ಬಗೆಹರಿಯುವ ಹಂತದಲ್ಲಿದೆ ಎಂದು ಇಎಸ್‌ಪಿಎನ್ ವರದಿ ಬಹಿರಂಗಪಡಿಸಿದೆ. ಇತ್ತೀಚೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆಯಲ್ಲಿ ಏಷ್ಯಾಕಪ್‌ಗೆ ಪಾಕಿಸ್ತಾನವೇ ಆತಿಥ್ಯ ವಹಿಸಲಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಭಾರತ ತಂಡ, ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ ಮೊದಲು ಪಾಕಿಸ್ತಾನದಲ್ಲಿ ಟೂರ್ನಿ ಆಯೋಜನೆ ನಡೆಸದಿರಲು ಚರ್ಚೆ ನಡೆದಿತ್ತು.

ಕ್ರೀಡೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳು!


Sourav Ganguly: ಭಾರತ ICC ಟ್ರೋಫಿ ಯಾಕೆ ಗೆಲ್ಲುತ್ತಿಲ್ಲ ಎಂಬುದಕ್ಕೆ ಉತ್ತರ ಕೊಟ್ಟ ಗಂಗೂಲಿ!

ಟೀಮ್​ ಇಂಡಿಯಾ (Team India) ಕೊನೆಯದಾಗಿ 2013ರಲ್ಲಿ ಎಂ.ಎಸ್​ ಧೋನಿ (MS Dhoni) ನಾಯಕತ್ವದ ಅಡಿಯಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆದ್ದಿತ್ತು. ಆ ಬಳಿಕ ಅಂದರೆ 10 ವರ್ಷಗಳಿಂದ ಭಾರತ ಐಸಿಸಿ ಟ್ರೋಫಿ ಜಯಿಸಿಲ್ಲ. ದ್ವಿಪಕ್ಷೀಯ ಸರಣಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ರೋಹಿತ್​ ಪಡೆ, ಐಸಿಸಿ ಟೂರ್ನಿಗಳಲ್ಲಿ ಪದೇ ಪದೇ ಎಡವುತ್ತಲೇ ಬಂದಿದೆ. ಫೈನಲ್​​​, ಸೆಮಿಫೈನಲ್ ಪಂದ್ಯ​​​ಗಳಲ್ಲೇ ಹೆಚ್ಚು ಮುಗ್ಗರಿಸಿದೆ. ಇದೀಗ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ (Sourav Ganguly), ಟೀಮ್​ ಇಂಡಿಯಾ ಐಸಿಸಿ ಟ್ರೋಫಿ ಯಾಕೆ ಗೆಲ್ಲುತ್ತಿಲ್ಲ ಎಂಬುದಕ್ಕೆ ಉತ್ತರ ನೀಡಿದ್ದಾರೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ICC ODI Rankings: ರೋಹಿತ್​​​ಗೆ​​​​ ಬಿಗ್​​​ ಶಾಕ್​ ಕೊಟ್ಟ ಕೊಹ್ಲಿ.. ಐಸಿಸಿ ಶ್ರೇಯಾಂಕದಲ್ಲಿ ವಿರಾಟ್​ ಜಿಗಿತ!

ಟೀಮ್​ ಇಂಡಿಯಾ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ (Virat Kohli) ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನದತ್ತ ದಾಪುಗಾಲಿಟ್ಟಿದ್ದಾರೆ. ಕಿಂಗ್​​​ ಕೊಹ್ಲಿ ಬ್ಯಾಟಿಂಗ್​​​​ನಲ್ಲಿ ಮತ್ತೊಮ್ಮೆ ತಮ್ಮ ಹಳೆಯ ಶೈಲಿಗೆ ಮರಳುತ್ತಿದ್ದು, ಕಳಪೆ ಫಾರ್ಮ್‌ನಿಂದ ಕಂಬ್ಯಾಕ್​ ಮಾಡುತ್ತಿದ್ದಾರೆ. ಈಗ ಐಸಿಸಿ ನೂತನ ಏಕದಿನ ರ್ಯಾಂಕಿಂಗ್ (ICC ODI Ranking)​ ಪ್ರಕಟಗೊಂಡಿದ್ದು, ಮಾಜಿ ನಾಯಕ ಭಾರಿ ಜಿಗಿತ ಕಂಡಿದ್ದಾರೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.