ಒಲಿಂಪಿಕ್ಸ್​ನಲ್ಲಿ ಕಜಕಿಸ್ತಾನ್​ಗೆ ಮೊದಲ ಪದಕ; ಶೂಟಿಂಗ್​ನಲ್ಲಿ ಭಾರತದ ಮಿಶ್ರ ತಂಡ ನಿರಾಸೆ, ರೋಯಿಂಗ್​ನಲ್ಲಿ ಮಿಂಚು
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ಸ್​ನಲ್ಲಿ ಕಜಕಿಸ್ತಾನ್​ಗೆ ಮೊದಲ ಪದಕ; ಶೂಟಿಂಗ್​ನಲ್ಲಿ ಭಾರತದ ಮಿಶ್ರ ತಂಡ ನಿರಾಸೆ, ರೋಯಿಂಗ್​ನಲ್ಲಿ ಮಿಂಚು

ಒಲಿಂಪಿಕ್ಸ್​ನಲ್ಲಿ ಕಜಕಿಸ್ತಾನ್​ಗೆ ಮೊದಲ ಪದಕ; ಶೂಟಿಂಗ್​ನಲ್ಲಿ ಭಾರತದ ಮಿಶ್ರ ತಂಡ ನಿರಾಸೆ, ರೋಯಿಂಗ್​ನಲ್ಲಿ ಮಿಂಚು

Paris Olymoics 2024: 2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮೊದಲ ಪದಕ ಗೆದ್ದ ಹೆಗ್ಗಳಿಕೆಗೆ ಕಜಕಿಸ್ತಾನ್ ಪಾತ್ರವಾಗಿದೆ. ಶೂಟಿಂಗ್​ನಲ್ಲಿ ಭಾರತದ ಮಿಶ್ರ ತಂಡ ನಿರಾಸೆ ಮೂಡಿಸಿದರೆ, ರೋಯಿಂಗ್​ನಲ್ಲಿ ಮಿಂಚಿನ ಪ್ರದರ್ಶನ ನೀಡಿದೆ.

ಶೂಟಿಂಗ್​ನಲ್ಲಿ ಭಾರತದ ಮಿಶ್ರ ತಂಡ ನಿರಾಸೆ, ರೋಯಿಂಗ್​ನಲ್ಲಿ ಮಿಂಚಿಂಗ್
ಶೂಟಿಂಗ್​ನಲ್ಲಿ ಭಾರತದ ಮಿಶ್ರ ತಂಡ ನಿರಾಸೆ, ರೋಯಿಂಗ್​ನಲ್ಲಿ ಮಿಂಚಿಂಗ್

ಪ್ಯಾರಿಸ್ ಒಲಿಂಪಿಕ್ಸ್​ನ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಅರ್ಹತಾ ಹಂತದಲ್ಲಿ ಭಾರತೀಯ ಶೂಟರ್​​ಗಳು ನಿರ್ಗಮಿಸುವ ಮೂಲಕ ಪದಕ ಬೇಟೆ ಆರಂಭಿಸಿದ ಮೊದಲ ದಿನವೇ ಭಾರತಕ್ಕೆ ನಿರಾಸೆ ಮೂಡಿಸಿದ್ದಾರೆ. 10 ಮೀ. ಏರ್​ ರೈಫಲ್​ ಮಿಶ್ರ ತಂಡ ವಿಭಾಗದಲ್ಲಿ ಪದಕ ಸುತ್ತಿಗೇರಲು ವಿಫಲರಾದ ರಮಿತಾ ಜಿಂದಾಲ್ ಮತ್ತು ಅರ್ಜುನ್ ಬಬುಟಾ ಒಟ್ಟು 628.7 ಅಂಕಗಳೊಂದಿಗೆ 6ನೇ ಸ್ಥಾನ ಪಡೆದರೆ, ಎಲವೇನಿಲ್ ವಲರಿವನ್ ಮತ್ತು ಸಂದೀಪ್ ಸಿಂಗ್ 626.3 ಅಂಕಗಳೊಂದಿಗೆ 12 ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ರಮಿತಾ ಮತ್ತು ಅರ್ಹುನ್ ಬಬುಟಾ ಜೋಡಿ ಮೂರು ಶಾಟ್​ಗಳು ಬಾಕಿ ಇರುವಾಗ ಐದನೇ ಸ್ಥಾನ ಪಡೆದರೂ ಪದಕ ಸುತ್ತಿನ ಕಟ್ ಆಫ್​​ಗಿಂತ 1.0 ಪಾಯಿಂಟ್ ಹಿಂದೆ ಉಳಿಯಿತು. ಎರಡನೇ ರಿಲೇಯಲ್ಲಿ ಬಬುಟಾ ಉತ್ತಮ ಆರಂಭ ಪಡೆದರೂ 10.5, 10.6, 10.5, 10.9 ಅಂಕ ಪಡೆದರೆ, ರಮಿತಾ 10.2, 10.7, 10.3, 10.1 ಅಂಕಗಳನ್ನು ಗಳಿಸಿದರು. ಚೀನಾ (ಪ್ರಥಮ), ಕೊರಿಯಾ (ಎರಡನೇ), ಜರ್ಮನಿ (ತೃತೀಯ) ಮತ್ತು ಕಜಕಿಸ್ತಾನ್ (4ನೇ) ತಂಡಗಳು ಶೂಟಿಂಗ್ ಸ್ಪರ್ಧೆಯಲ್ಲಿ ಪದಕ ಸುತ್ತಿಗೆ ಅರ್ಹತೆ ಪಡೆದವು.

ಕಜಕಿಸ್ತಾನ್​ಗೆ ಕಂಚಿನ ಪದಕ

ಭಾರತ ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಲು, 1 ಅಂಕದೊಂದಿಗೆ ವಿಫಲವಾಯಿತು. ಪದಕದ ಸುತ್ತಿಗೆ ಪ್ರವೇಶಿಸಲು ಒಂದು ತಂಡವು ಅಗ್ರ-4ರಲ್ಲಿ ಸ್ಥಾನ ಪಡೆಯಬೇಕು. ಕಜಕಿಸ್ತಾನ್ ಪ್ಯಾರಿಸ್ 2024ರ ಒಲಿಂಪಿಕ್ಸ್‌ನ ಮೊದಲ ಪದಕವನ್ನು ಗೆದ್ದುಕೊಂಡಿತು. ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿಯನ್ನು ಸೋಲಿಸಿತು. ಆದರೆ ಚಿನ್ನದ ಪದಕಕ್ಕೆ ಚೀನಾ ಮತ್ತು ಕೊರಿಯಾ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆದರೆ,

ರೋಯಿಂಗ್​ನಲ್ಲಿ ಭಾರತಕ್ಕೆ ಸಿಹಿ ಸುದ್ದಿ

10 ಮೀ. ಏರ್​ ರೈಫಲ್​ ಮಿಶ್ರ ತಂಡದ ಸ್ಫರ್ಧೆಗೂ ಮುನ್ನ ಪುರುಷರ ಸಿಂಗಲ್ ಸ್ಕಲ್ಸ್ ರೋಯಿಂಗ್ ಸ್ಪರ್ಧೆಯಲ್ಲಿ​​ 4ನೇ ಸ್ಥಾನ ಪಡೆಯುವ ಮೂಲಕ ಭಾರತದ ಬಲರಾಜ್ ಪನ್ವಾರ್ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡರು. ಅವರು 7 ನಿಮಿಷ 07 ಸೆಕೆಂಡ್ 11 ಮಿಲಿ ಸೆಕೆಂಡುಗಳಲ್ಲಿ ಗುರಿ ತಲುಪಿದರು. ಆದರೆ ನ್ಯೂಜಿಲೆಂಡ್​​ ಥಾಮಸ್ ಮ್ಯಾಕಿಂತೋಷ್ (6: 55.92), ಸ್ಟೆಫಾನೊಸ್ ಎನ್ಟೌಸ್ಕೋಸ್ (7: 01.79), ಅಬ್ದೆಲ್ಖಾಲೆಕ್ ಎಲ್ಬನ್ನಾ (7: 05.06) ಮೊದಲ ಮೂರು ಸ್ಥಾನ ಪಡೆದರು. ಭಾನುವಾರ (ಜುಲೈ 28) ನಡೆಯುವ ರಿಪೆಚೇಜ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ಇನ್ನಷ್ಟು ಕ್ರಿಕೆಟ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ಯಾರಿಸ್ ಒಲಿಂಪಿಕ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.