ಕನ್ನಡ ಸುದ್ದಿ  /  Sports  /  On This Day In 1999: Anil Kumble Became Second Bowler To Take All Ten Wickets In Test Innings Watch Video Here

On this day in 1999: 24 ವರ್ಷದ ಹಿಂದೆ ಇದೇ ದಿನ ಕ್ರಿಕೆಟ್‌ ಇತಿಹಾಸದಲ್ಲೊಂದು ಮೈಲಿಗಲ್ಲು ಸ್ಥಾಪನೆ ಆಗಿತ್ತು; ಈ ವಿಡಿಯೋ ನೋಡಿ

On this day in 1999: ಅಂದು ದೆಹಲಿಯ ಫಿರೋಜ್‌ ಶಾ ಕೋಟ್ಲಾ ಮೈದಾನ (ಈಗ ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂ) ಈ ದಾಖಲೆಗೆ ವೇದಿಕೆಯಾಗಿತ್ತು. ಎರಡು ಮ್ಯಾಚ್‌ಗಳ ಟೆಸ್ಟ್‌ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅನಿಲ್‌ ಕುಂಬ್ಳೆ ಈ ದಾಖಲೆ ನಿರ್ಮಿಸಿದ್ದರು.

ಕನ್ನಡಿಗ ಅನಿಲ್‌ ಕುಂಬ್ಳೆ 10 ವಿಕೆಟ್‌ ಗಳಿಸಿ ದಾಖಲೆ ಬರೆದ ಆ ಕ್ಷಣ..
ಕನ್ನಡಿಗ ಅನಿಲ್‌ ಕುಂಬ್ಳೆ 10 ವಿಕೆಟ್‌ ಗಳಿಸಿ ದಾಖಲೆ ಬರೆದ ಆ ಕ್ಷಣ..

ನವದೆಹಲಿ: ಕ್ರಿಕೆಟ್‌ ಇತಿಹಾಸದ ಪುಟಗಳನ್ನು ತೆರೆದರೆ ಸರಿಯಾಗಿ 24 ವರ್ಷಗಳ ಹಿಂದೆ ಇದೇ ದಿನ ಟೀಂ ಇಂಡಿಯಾದ ಅಂದಿನ ಸ್ಪಿನ್ನರ್‌ ಅನಿಲ್‌ ಕುಂಬ್ಳೆ ಪಾಕಿಸ್ತಾನ ತಂಡದ 10ಕ್ಕೆ 10 ವಿಕೆಟ್‌ ಉರುಳಿಸಿದ್ದು. ಅದೊಂದು ಐತಿಹಾಸಿಕ ದಾಖಲೆ. ಸಿಂಗಲ್‌ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಆಗಿರುವ ಪವಾಡ ಸದೃಶವಾದ ದಾಖಲೆ ಅದಾಗಿತ್ತು.

ಅಂದು ದೆಹಲಿಯ ಫಿರೋಜ್‌ ಶಾ ಕೋಟ್ಲಾ ಮೈದಾನ (ಈಗ ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂ) ಈ ದಾಖಲೆಗೆ ವೇದಿಕೆಯಾಗಿತ್ತು. ಎರಡು ಮ್ಯಾಚ್‌ಗಳ ಟೆಸ್ಟ್‌ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅನಿಲ್‌ ಕುಂಬ್ಳೆ ಈ ದಾಖಲೆ ನಿರ್ಮಿಸಿದ್ದರು.

ಈ ಪಂದ್ಯದಲ್ಲಿ ಭಾರತವು ಪಾಕಿಸ್ತಾನಕ್ಕೆ 420 ರನ್‌ಗಳ ಗುರಿಯನ್ನು ನೀಡಿತ್ತು. ಪಾಕ್‌ ತಂಡದ ಆರಂಭಿಕರಾದ ಶಾಹಿದ್ ಆಫ್ರಿದಿ ಮತ್ತು ಸಯೀದ್ ಅನ್ವರ್ ಮೊದಲ ವಿಕೆಟ್‌ಗೆ 101 ರನ್‌ಗಳ ಜೊತೆಯಾಟದಿಂದ ಪ್ರವಾಸಿಗರು ಸ್ಥಿರ ಆರಂಭವನ್ನು ಪಡೆದಿದ್ದರು. ಆಗ ದಾಳಿಗೆ ಇಳಿದ ಅನಿಲ್‌ ಕುಂಬ್ಳೆ ಪಾಕಿಸ್ತಾನದ ಬ್ಯಾಟಿಂಗ್ ಲೈನ್ ಅಪ್ ಮೇಲೆರಗಿದ ರೀತಿಗೆ ತಂಡದ ಎಲ್ಲ ವಿಕೆಟ್‌ಗಳು ಪತನವಾದವು.

ಜಂಬೋ ಎಂದೇ ಗುರುತಿಸಲ್ಪಡುತ್ತಿದ್ದ ಅನಿಲ್‌ ಕುಂಬ್ಳೆ, ಮೊದಲು 25ನೇ ಓವರ್‌ನಲ್ಲಿ ಆಫ್ರಿದಿ (41) ಅವರನ್ನು ಔಟ್ ಮಾಡಿದರು. ನಂತರ, ಕುಂಬ್ಳೆ ವಿಕೆಟ್‌ ಪಡೆಯುತ್ತಲೇ ಇದ್ದರು. ಪಾಕಿಸ್ತಾನ ತಂಡವು ಸ್ವಲ್ಪ ಸಮಯದಲ್ಲೇ 128/6 ಕ್ಕೆ ಕುಸಿಯಿತು. ಕುಂಬ್ಳೆ ನಂತರ ನಿಯಮಿತ ಮಧ್ಯಂತರದಲ್ಲಿ ವಿಕೆಟ್‌ಗಳನ್ನು ಪಡೆಯುತ್ತಲೇ ಇದ್ದರು. ವಾಸಿಂ ಅಕ್ರಮ್ ಅವರನ್ನು ಔಟ್ ಮಾಡಿದ ನಂತರ 61 ನೇ ಓವರ್‌ನಲ್ಲಿ ಅವರು ತಮ್ಮ ಹತ್ತನೇ ವಿಕೆಟ್‌ ಬಾಚಿಕೊಂಡರು.
ಇದನ್ನೂ ಓದಿ| Women's T20 World Cup 2023: ವನಿತೆಯರ ಟಿ20 ವಿಶ್ವಕಪ್‌ಗೆ ದಿನಗಣನೆ; ಚೊಚ್ಚಲ ಕಪ್‌ ಗೆಲ್ಲಲು ಕೌರ್‌ ಪಡೆ ಸಜ್ಜು

ಈ ಪ್ರಯತ್ನವು ಭಾರತಕ್ಕೆ 212 ರನ್‌ಗಳ ಜಯವನ್ನು ದಾಖಲಿಸಲು ಅನುವು ಮಾಡಿಕೊಟ್ಟಿತು. ಇಂಗ್ಲೆಂಡ್‌ನ ಜಿಮ್ ಲೇಕರ್ ನಂತರ ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಎಲ್ಲ ಹತ್ತು ವಿಕೆಟ್‌ಗಳನ್ನು ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಕುಂಬ್ಳೆ ಪಾತ್ರರಾದರು.

ಕುಂಬ್ಳೆ 26.3 ಓವರ್‌ಗಳಲ್ಲಿ 74 ರನ್ ನೀಡಿ 10 ವಿಕೆಟ್‌ ಪಡೆದು ದಾಖಲೆ ನಿರ್ಮಿಸಿದರು. ಅನಿಲ್‌ ಕುಂಬ್ಳೆ ಅವರು 2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅವರು ಆಟದ ಸುದೀರ್ಘ ಸ್ವರೂಪದಲ್ಲಿ 619 ವಿಕೆಟ್‌ಗಳನ್ನು ಗಳಿಸಿದರು.

ಅವರು ಟೆಸ್ಟ್‌ಗಳಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್‌ಗಳನ್ನು (619) ಗಳಿಸಿದ ದಾಖಲೆ ಹೊಂದಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800) ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ (708) ಮೊದಲ ಎರಡು ಸ್ಥಾನಗಳಲ್ಲಿ ಇದ್ದಾರೆ.

ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಎಲ್ಲ ಹತ್ತು ವಿಕೆಟ್‌ಗಳನ್ನು ಪಡೆದ ಮೂರನೇ ಬೌಲರ್ ಎನಿಸಿಕೊಂಡರು. ಅವರು ವಾಂಖೆಡೆ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಈ ಸಾಧನೆ ಮಾಡಿದರು.