PAK bowler to Kohli: 'ನೀನು ಅಂಡರ್ 19 ಆಡುವಾಗ ನಿನ್ನಪ್ಪ ಟೆಸ್ಟ್ ಆಡ್ತಿದ್ರು'; ವಿರಾಟ್‌ಗೆ ಹೀಗೆ ಟಾಂಗ್ ಕೊಟ್ಟಿದ್ರಂತೆ ಪಾಕ್ ಬೌಲರ್
ಪಾಕ್‌ನ ಪ್ರಮುಖ ವೇಗದ ಬೌಲರ್‌ಗಳಾದ ಜುನೈದ್ ಖಾನ್, ಮೊಹಮ್ಮದ್ ಅಮೀರ್ ಮತ್ತು ಈಗ ಶಾಹೀನ್ ಅಫ್ರಿದಿ ಅವರ ಬೌಲಿಂಗ್‌ಗೆ ಕೊಹ್ಲಿ ತಕ್ಕನಾಗಿ ಬ್ಯಾಟ್ ಬೀಸಿದ್ದಾರೆ. ಪ್ರತಿ ಬಾರಿಯೂ ಕೊಹ್ಲಿ ಪಾಕಿಸ್ತಾನದ ವಿರುದ್ಧ ರನ್ ಮಳೆ ಹರಿಸಿರುವ ಇನ್ನಿಂಗ್ಸ್, ರೋಚಕತೆಗೆ ಸಾಕ್ಷಿಯಾಗಿದೆ.
ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಬ್ಯಾಟಿಂಗ್ ಇಷ್ಟಪಡುತ್ತಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಕೊಹ್ಲಿಯ ಗರಿಷ್ಠ ಏಕದಿನ ಸ್ಕೋರ್, ಪ್ರಮುಖ ಟಿ20 ಇನ್ನಿಂಗ್ಸ್ ಅಥವಾ ಪಾಕ್ ವಿರುದ್ಧದ ಸರಾಸರಿಯನ್ನು ನೋಡಿದರೆ, ಈ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸುತ್ತದೆ. ಪಾಕಿಸ್ತಾನದ ಬೌಲಿಂಗ್ ವಿರುದ್ಧ ಬ್ಯಾಟ್ ಬೀಸಲು ಕೊಹ್ಲಿ ಎಷ್ಟು ಇಷ್ಟಪಡುತ್ತಾರೆ ಎಂಬುದು ಈ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ.
ಟ್ರೆಂಡಿಂಗ್ ಸುದ್ದಿ
ಪಾಕ್‌ನ ಪ್ರಮುಖ ವೇಗದ ಬೌಲರ್‌ಗಳಾದ ಜುನೈದ್ ಖಾನ್, ಮೊಹಮ್ಮದ್ ಅಮೀರ್ ಮತ್ತು ಈಗ ಶಾಹೀನ್ ಅಫ್ರಿದಿ ಅವರ ಬೌಲಿಂಗ್‌ಗೆ ಕೊಹ್ಲಿ ತಕ್ಕನಾಗಿ ಬ್ಯಾಟ್ ಬೀಸಿದ್ದಾರೆ. ಪ್ರತಿ ಬಾರಿಯೂ ಕೊಹ್ಲಿ ಪಾಕಿಸ್ತಾನದ ವಿರುದ್ಧ ರನ್ ಮಳೆ ಹರಿಸಿರುವ ಇನ್ನಿಂಗ್ಸ್, ರೋಚಕತೆಗೆ ಸಾಕ್ಷಿಯಾಗಿದೆ.
ಪಾಕಿಸ್ತಾನದ ವೇಗಿಗಳಲ್ಲಿ ಒಬ್ಬರಾದ ಸೊಹೈಲ್ ಖಾನ್ ಮತ್ತು ಕೊಹ್ಲಿ ಒಮ್ಮೆ ಮಾತ್ರ ಮೈದಾನದಲ್ಲಿ ಮುಖಾಮುಖಿಯಾಗಿದ್ದಾರೆ. 2015ರ ವಿಶ್ವಕಪ್‌ನಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವೆ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಬಿರುಸಿನ ಶತಕ ಸಿಡಿಸಿದರು. ಸೊಹೈಲ್ ಆಗ, ವಿರಾಟ್ ವಿಕೆಟ್ ಸೇರಿದಂತೆ ಒಟ್ಟು ಐದು ವಿಕೆಟುಗಳನ್ನು ಪಡೆದು ಮಿಂಚಿದರು. ಆ ಸಮಯದಲ್ಲಿ ಕೊಹ್ಲಿ ಮತ್ತು ಸೊಹೈಲ್ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ, ಅವರಿಬ್ಬರ ನಡುವೆ ನಡೆದ ಮಾತೇನು ಎಂಬ ಬಗ್ಗೆ ಯಾರಿಗೂ ತಿಳಿಯಲಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಸೊಹೈಲ್ ಬಹಿರಂಗಪಡಿಸಿದ್ದಾರೆ. ಪಂದ್ಯದ ವೇಳೆ ಕೊಹ್ಲಿ ತನ್ನ ಮೇಲೆ ಮೊದಲು ಆರೋಪ ಮಾಡಿದರು ಎಂದು ಸೊಹೈಲ್ ಬಹಿರಂಗಪಡಿಸಿದ್ದಾರೆ. ಸೊಹೈಲ್ ಬ್ಯಾಟಿಂಗ್‌ಗೆ ಬಂದಾಗ ಇದು ನಡೆಯಿತಂತೆ.
“ವಿರಾಟ್ ಬಂದರು. ಅವರು ನನಗೆ ಹೇಳಿದರು 'ಆಪ್ ಕ್ರಿಕೆಟ್ ಮೇ ಅಭಿ ಆಯೆ ಹೇ. ಫಿರ್ ಇತ್ನಿ ಬಾತೇಂ ಕರ್ತೇ ಹೋ (ನೀವು ಈಗಷ್ಟೇ ಕ್ರಿಕೆಟ್ ಆಡಲು ಬಂದಿದ್ದೀರಿ. ಈಗಲೇ ಎಷ್ಟು ಮಾತನಾಡುತ್ತೀರಿ) ಎಂದು ಹೇಳಿದರು. ನಾನು ಆಗ ಟೆಸ್ಟ್ ಕ್ರಿಕೆಟಿಗನಾಗಿದ್ದೆ. ನಾನು 2006- 07ರಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಿದ್ದೆ. ನಂತರ ಮಧ್ಯದಲ್ಲಿ ನಾನು ಗಾಯಗಳಿಂದಾಗಿ ಪಂದ್ಯಗಳಿಂದ ಹೊರಗುಳಿಯಬೇಕಾಯ್ತು. ವಿರಾಟ್‌ಗೆ ನಾನು ಕೂಡಾ ಖಡಕ್ ಪ್ರತಿಕ್ರಿಯೆ ನೀಡಿದೆ. 'ಬೇಟಾ ಜಬ್ ತು ಅಂಡರ್-19 ಖೇಲ್ ರಹಾ ಥಾ ನಾ, ತೇರಾ ಬಾಪ್ ಟೆಸ್ಟ್ ಕ್ರಿಕೆಟರ್ ಥಾ' ಎಂದು ಹೇಳಿದೆ (ನೋಡಪ್ಪಾ, ನೀನು ಭಾರತದ ಪರ ಅಂಡರ್ 19 ಕ್ರಿಕೆಟ್ ಆಡುತ್ತಿದ್ದಾಗಲೇ, ನಿನ್ನ ತಂದೆ ಒಬ್ಬ ಟೆಸ್ಟ್ ಆಟಗಾರನಾಗಿದ್ದರು) ಎಂದು ನಾನು ಹೇಳಿದೆ. ನಂತರ ಮಿಸ್ಬಾ ಅವರು ಮಧ್ಯಪ್ರವೇಶಿಸಿ ನನ್ನ ಮೇಲೆ ಕೋಪಗೊಂಡರು. ಅವರು ನನ್ನನ್ನು ಸುಮ್ಮನಿರಲು ಹೇಳಿದರು,” ಎಂದು ಸೊಹೈಲ್ ನಾದಿರ್ ಅಲಿ ಪೋಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ.
ಆದರೆ, ಈಗ ಕಾಲ ಬದಲಾಗಿದೆ. ಸೊಹೈಲ್ ಅಲ್ಲೇ ಇದ್ದಾರೆ. ಆದರೆ, ಕೊಹ್ಲಿ ವಿಶ್ವದ ಅಗ್ರ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಕೊಹ್ಲಿಗೆ ಗೌರವ ನೀಡುವ ಹೊರತಾಗಿ ಸೊಹೈಲ್‌ಗೆ ಬೇರೆ ದಾರಿ ಇಲ್ಲ. “ನಾನು ಇಂದು ಅವರನ್ನು ಗೌರವಿಸುತ್ತೇನೆ. ಏಕೆಂದರೆ ಅವರು ಶ್ರೇಷ್ಠ ಹಾಗೂ ಅದ್ಭುತ ಬ್ಯಾಟರ್,” ಎಂದು ಅವರು ಹೇಳಿದ್ದಾರೆ.
ಸೊಹೈಲ್ ಪಾಕಿಸ್ತಾನದ ಪರ 9 ಟೆಸ್ಟ್, 13 ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 51 ಅಂತರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಅಧಿಕೃತವಾಗಿ ನಿವೃತ್ತಿ ಘೋಷಿಸದಿದ್ದರೂ, 38 ವರ್ಷ ವಯಸ್ಸಿನ ಆಟಗಾರ ಸುಮಾರು ಆರು ವರ್ಷಗಳ ಹಿಂದೆ 2017ರ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದ ಪರ ಕೊನೆಯ ಪಂದ್ಯವನ್ನು ಆಡಿದ್ದಾರೆ.