Kannada News  /  Sports  /  Panel Formed To Oversee Preparations For 2024 Paris Olympics
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ

Paris Olympics: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಸಿದ್ಧತೆ ಮೇಲ್ವಿಚಾರಣೆ ಮಾಡಲು ಸಮಿತಿ ರಚನೆ

04 February 2023, 18:17 ISTHT Kannada Desk
04 February 2023, 18:17 IST

ಮುಂಬರುವ ಒಲಿಂಪಿಕ್ಸ್‌ಗೆ ಭಾರತೀಯ ಅಥ್ಲೀಟ್‌ಗಳ ಸಿದ್ಧತೆಯನ್ನು ಪರಿಶೀಲಿಸಲು ಕ್ರೀಡಾ ಸಚಿವಾಲಯವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ನವದೆಹಲಿ: 2024ರ ಪ್ಯಾರಿಸ್ ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಭಾರತ ತಯಾರಿ ನಡೆಸುತ್ತಿದೆ. ಉತ್ತಮ ಪ್ರದರ್ಶನ ನೀಡಿ ಹೆಚ್ಚು ಪದಕ ಗೆಲ್ಲುವತ್ತ ಭಾರತ ಚಿತ್ತ ಹರಿಸುತ್ತಿದೆ. ಹೀಗಾಗಿ ಒಲಿಂಪಿಕ್ಸ್‌ಗೆ ಭಾರತೀಯ ಅಥ್ಲೀಟ್‌ಗಳ ಸಿದ್ಧತೆಯನ್ನು ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕ್ರೀಡಾ ಸಚಿವಾಲಯ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್(Indian Olympic Association) ಮತ್ತು ಇತರ ಮಧ್ಯಸ್ಥಗಾರರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮತ್ತೊಂದೆಡೆ, ಭಾರತವು 2036ರ ಒಲಿಂಪಿಕ್ಸ್‌ ಅನ್ನು ದೇಶದಲ್ಲಿ ಆಯೋಜಿಸಲು ಬಿಡ್ಡಿಂಗ್‌ನಲ್ಲಿ ಭಾಗಿಯಾಗಲು ಆಸಕ್ತಿ ತೋರಿಸಿದೆ. ಮುಂಬರುವ ಸೆಪ್ಟೆಂಬರ್‌ ತಿಂಗಳಲ್ಲಿ ಮುಂಬೈನಲ್ಲಿ ನಡೆಯುವ IOC ಅಧಿವೇಶನಕ್ಕೂ ಮುಂಚಿತವಾಗಿ, ಅದರ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಬಹುದು.

ಕ್ರೀಡಾ ಸಚಿವಾಲಯ ರಚಿಸಿರುವ 17 ಸದಸ್ಯರ ಸಮಿತಿಗೆ ಕ್ರೀಡಾ ಸಚಿವರು ಮುಖ್ಯಸ್ಥರಾಗಿರುತ್ತಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ, ಉಪಾಧ್ಯಕ್ಷ ಗಗನ್ ನಾರಂಗ್, ಕಾರ್ಯಕಾರಿ ಮಂಡಳಿ ಸದಸ್ಯ ಯೋಗೇಶ್ವರ್ ದತ್, ಅಥ್ಲೀಟ್ ಆಯೋಗದ ಅಧ್ಯಕ್ಷೆ ಎಂಸಿ ಮೇರಿ ಕೋಮ್ ಮತ್ತು ಎಸಿ ಸದಸ್ಯರಾದ ಶರತ್ ಕಮಲ್, ರಾಣಿ ರಾಂಪಾಲ್ ಈ ಸಮಿತಿಯಲ್ಲಿದ್ದಾರೆ. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ನ ಅಧ್ಯಕ್ಷರ ಜೊತೆಗೆ ಮಾಜಿ ಹಾಕಿ ಆಟಗಾರ ವಿರೇನ್ ರಸ್ಕ್ವಿನ್ಹಾ ಸಮಿತಿಯ ಭಾಗವಾಗಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕರು ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (TOPS) ಸಿಇಒ ಕೂಡ ಸಮಿತಿಯಲ್ಲಿದ್ದಾರೆ.

“ಭಾರತೀಯ ಅಥ್ಲೀಟ್‌ಗಳ ಉತ್ತಮ ಪ್ರದರ್ಶನವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ರೀತಿಯ ಬೆಂಬಲವನ್ನು ಉನ್ನತ ಮಟ್ಟದ ಮಾರ್ಗದರ್ಶನದೊಂದಿಗೆ ಸರ್ಕಾರವು ವಿಸ್ತರಿಸಬೇಕಾಗಿದೆ,” ಎಂದು ಕ್ರೀಡಾ ಸಚಿವಾಲಯದ ಸೂಚನೆಯಲ್ಲಿ ತಿಳಿಸಲಾಗಿದೆ.

"ಒಲಂಪಿಕ್ಸ್ ಮತ್ತು ಇತರ ಅಂತಾರಾಷ್ಟ್ರೀಯ ಈವೆಂಟ್‌ಗಳಲ್ಲಿ ಭಾರತೀಯ ಅಥ್ಲೀಟ್‌ಗಳ ಪ್ರದರ್ಶನವು ಅತ್ಯುತ್ತಮವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶಗಳನ್ನು ಸಮಿತಿ ಇಟ್ಟುಕೊಂಡಿದೆ.

2024ರಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಪೂರ್ವಭಾವಿಯಾಗಿ, ಸಮಿತಿಯು ಸಂಭಾವ್ಯ ಮತ್ತು ಅರ್ಹ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಬೆಂಬಲವನ್ನು ಒದಗಿಸುವುದರ ಜೊತೆಗೆ ಭಾರತದ ಭಾಗವಹಿಸುವಿಕೆಗೆ ಸುಗಮವಾದ ವ್ಯವಸ್ಥೆಗಳನ್ನು ಖಚಿತಪಡಿಸುತ್ತದೆ.

ಆ ಬಳಿಕ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೂ ಮುಂಚೆ, ಸಮಿತಿಯು ಸೂಕ್ತ ಮಾರ್ಗಸೂಚಿಯನ್ನು ರೂಪಿಸುತ್ತದೆ. ಅದಕ್ಕಾಗಿ ಬೇಕಾದ ತಯಾರಿ ಪ್ರಕ್ರಿಯೆಯನ್ನು ಪರಿಶೀಲಿಸುತ್ತದೆ. ಅಲ್ಲದೆ ಎಲ್ಲಾ ಮಧ್ಯಸ್ಥಗಾರರ ನಡುವೆ ಸಮನ್ವಯವನ್ನು ಖಚಿತಪಡಿಸುತ್ತದೆ.

ಗಮನಿಸಬಹುದಾದ ಇತರೆ ಸುದ್ದಿಗಳು

Dipa Karmakar: ಡೋಪಿಂಗ್‌ ಪರೀಕ್ಷೆಯಲ್ಲಿ ಫೇಲ್‌; ಜಿಮ್ನಾಸ್ಟ್ ದೀಪಾ ಕರ್ಮಾಕರ್‌ಗೆ 21 ತಿಂಗಳ ನಿಷೇಧ

ಜಿಮ್ನಾಸ್ಟಿಕ್‌ನಲ್ಲಿ ಪ್ರಪ್ರಥಮ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಜಿಮ್ನಾಸ್ಟ್‌ ದೀಪಾ ಕರ್ಮಾಕರ್ ನಿಷೇಧಕ್ಕೊಳಗಾಗಿದ್ದಾರೆ. ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ ( International Testing Agency) ನಡೆಸಿದ ಡೋಪಿಂಗ್‌ ಪರೀಕ್ಷೆಯಲ್ಲಿ ಕರ್ಮಾಕರ್‌ ವಿಫಲರಾಗಿದ್ದು, ನಿಷೇಧೀತ ಪದಾರ್ಥಗಳನ್ನು ಸೇವಿಸಿರುವುದು ಸಾಬೀತಾಗಿದೆ. ಹೀಗಾಗಿ 21 ತಿಂಗಳಿಗೆ ಅನ್ವಯವಾಗುವಂತೆ ಇವರನ್ನು ಕ್ರೀಡೆಯಿಂದ ನಿಷೇಧಿಸಲಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

world boxing rankings: ವಿಶ್ವ ಬಾಕ್ಸಿಂಗ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೆ ನೆಗೆದ ಭಾರತ; ನಮ್ಮ ಬಾಕ್ಸರ್‌ಗಳ ಸಾಧನೆ ಅನಂತ

ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್‌(IBA), ವಿಶ್ವ ಬಾಕ್ಸಿಂಗ್‌ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಭಾರತವು ಮೂರನೇ ಸ್ಥಾನಕ್ಕೆ ಜಿಗಿದಿದ್ದು, ಜಾಗತಿಕ ಬಾಕ್ಸಿಂಗ್‌ನಲ್ಲಿ ತ್ವರಿತ ಪ್ರಗತಿ ಸಾಧಿಸಿದೆ. ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ(BFI)ವು ಅಥ್ಲೀಟ್‌ಗಳಿಗೆ ನೀಡಿದ ಬೆಂಬಲ ಮತ್ತು ದೇಶದ ಬಾಕ್ಸರ್‌ಗಳ ಅಸಾಧಾರಣ ಪ್ರದರ್ಶನದಿಂದಾಗಿ, ಭಾರತವು 36,300 ಶ್ರೇಯಾಂಕಗಳನ್ನು ಗಳಿಸಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ