ಪರ್ದೀಪ್ ನರ್ವಾಲ್ ಇಂಜುರಿ: ಸಂಕಷ್ಟದಲ್ಲಿರುವ ಬೆಂಗಳೂರಿಗೆ ಸಹಾಯ ಮಾಡುತ್ತಾರ ಈ 3 ಆಟಗಾರರು?
ಸದ್ಯ ಪರ್ದೀಪ್ ನರ್ವಾಲ್ ಪಿಕೆಎಲ್ 2024 ರಿಂದದ ಹೊರಬಿದ್ದರೆ, ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುಂದಕ್ಕೆ ಕೊಂಡೊಯ್ಯಲು ಮೂವರು ಆಟಗಾರರಿದ್ದಾರೆ. ಬೆಂಗಳೂರು ಬುಲ್ಸ್ ಪರ ಸಾಗಬಲ್ಲ ಈ ಮೂವರು ಆಟಗಾರರ ಯಾರೂ ನೋಡೋಣ.
ಪ್ರೊ ಕಬಡ್ಡಿ ಲೀಗ್‌ನ 11 ನೇ ಋತುವಿನಲ್ಲಿ ಬೆಂಗಳೂರು ಬುಲ್ಸ್ ತಂಡವು ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ಅನುಭವಿ ರೈಡರ್ ಹಾಗೂ ನಾಯಕ ಪರ್ದೀಪ್ ನರ್ವಾಲ್ ಗಾಯಕ್ಕೆ ಬಲಿಯಾಗಿದ್ದಾರೆ. ಈ ಕಾರಣದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಆಡಲು ಸಾಧ್ಯವಾಗಲಿಲ್ಲ. ಪರ್ದೀಪ್ ನರ್ವಾಲ್ ಅವರ ಗಾಯವೂ ಗಂಭೀರವಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ತಂಡದ ಕೋಚ್ ಇದನ್ನು ನಿರಾಕರಿಸಿದ್ದಾರೆ. ಆದರೆ, ಪರ್ದೀಪ್ ನರ್ವಾಲ್ ಅವರೊಂದಿಗೆ ಹೆಚ್ಚು ರಿಸ್ಕ್ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ಸದ್ಯ ಪರ್ದೀಪ್ ನರ್ವಾಲ್ ಪಿಕೆಎಲ್ 2024 ರಿಂದ ಹೊರಬಿದ್ದರೆ, ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುಂದಕ್ಕೆ ಕೊಂಡೊಯ್ಯಲು ಮೂವರು ಆಟಗಾರರಿದ್ದಾರೆ. ಬೆಂಗಳೂರು ಬುಲ್ಸ್ ಪರ ಸಾಗಬಲ್ಲ ಈ ಮೂವರು ಆಟಗಾರರ ಯಾರೂ ನೋಡೋಣ.
ಅಕ್ಷಿತ್
ಯುವ ರೈಡರ್ ಅಕ್ಷಿತ್‌ಗೆ ಪಿಕೆಎಲ್ 2024 ರಲ್ಲಿ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿಲ್ಲ. ಆದರೆ, ಯಾವುದೇ ಆಡಿದ ಪಂದ್ಯಗಳಲ್ಲಿ ಅವರು ಪ್ರಭಾವಿಯಾಗಿದ್ದಾರೆ. ಅಕ್ಷಿತ್ ಈ ಋತುವಿನಲ್ಲಿ ಇದುವರೆಗೆ 5 ಪಂದ್ಯಗಳನ್ನು ಆಡಿದ್ದು, ಒಟ್ಟು 20 ಅಂಕಗಳನ್ನು ಗಳಿಸಿದ್ದಾರೆ. ಪರ್ದೀಪ್ ನರ್ವಾಲ್ ಔಟ್ ಆಗಿರುವಾಗ ಇವರಿಗೆ ನಿರಂತರವಾಗಿ ಅವಕಾಶ ನೀಡಿದರೆ, ಅಕ್ಷಿತ್ ಇನ್ನೂ ಉತ್ತಮವಾಗಿ ಕಾಣಿಸಿಕೊಳ್ಳಬಹುದು. ತಂಡವನ್ನು ಮುಂದೆ ಕೊಂಡೊಯ್ಯುವ ಸಾಮರ್ಥ್ಯ ಇವರಲ್ಲಿದೆ.
ಜೈ ಭಗವಾನ್
ಜೈ ಭಗವಾನ್ ಅವರಿಗೂ ಸಾಕಷ್ಟು ಸಾಮರ್ಥ್ಯವಿದೆ. ಈ ಪಿಕೆಎಲ್ ಋತುವಿನಲ್ಲಿ ಅವರು 7 ಪಂದ್ಯಗಳಲ್ಲಿ 26 ಅಂಕಗಳನ್ನು ಗಳಿಸಿದ್ದಾರೆ. ಜೈ ಭಗವಾನ್ ಅವರ ಒಟ್ಟಾರೆ ಅನುಭವ ಕೂಡ ಅದ್ಭುತ ಎನ್ನಬಹುದು. ಅವರು ತಮ್ಮ ವೃತ್ತಿಜೀವನದಲ್ಲಿ 39 ಪಂದ್ಯಗಳನ್ನು ಆಡಿದ್ದಾರೆ ಮತ್ತು ಈ ಅವಧಿಯಲ್ಲಿ ಅವರು ಸುಮಾರು 150 ಅಂಕಗಳನ್ನು ಗಳಿಸಿದ್ದಾರೆ. ಜೈ ಭಗವಾನ್ ಅವರಿಗೆ ನಿರಂತರ ಅವಕಾಶಗಳು ಸಿಕ್ಕರೆ ಇವರು ಖಂಡಿತವಾಗಿಯೂ ತಂಡಕ್ಕಾಗಿ ಕೊಡುಗೆಯನ್ನು ನೀಡಬಲ್ಲರು. ತಂಡ ಅವರ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗಿದೆ.
ಅಜಿಂಕ್ಯ ಪವಾರ್
ಪರ್ದೀಪ್ ನರ್ವಾಲ್ ಅನುಪಸ್ಥಿತಿಯಲ್ಲಿ ಬೆಂಗಳೂರು ಬುಲ್ಸ್ ಅಜಿಂಕ್ಯ ಪವಾರ್ ಮೇಲೆ ಹೆಚ್ಚು ಕಣ್ಣಿಟ್ಟಿದೆ. ಅವರು ಈ ತಂಡದ ಎರಡನೇ ಅತ್ಯಂತ ಅನುಭವಿ ರೈಡರ್ ಆಗಿದ್ದಾರೆ. ಅಜಿಂಕ್ಯ ಪವಾರ್ ಪಿಕೆಎಲ್‌ನಲ್ಲಿ 500 ರೇಡ್ ಪಾಯಿಂಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಜೈಪುರ ವಿರುದ್ಧದ ಪಂದ್ಯದಲ್ಲಿಯೇ ಅವರು ಈ ಸಾಧನೆ ಮಾಡಿದರು. ಇದು ಅವರಿಗೆ ಅನುಭವದ ಕೊರತೆಯಿಲ್ಲ ಎಂಬುದನ್ನು ತೋರಿಸುತ್ತದೆ. ಇತರ ಆಟಗಾರರ ಬೆಂಬಲ ಸಿಕ್ಕರೆ ತಂಡವನ್ನು ಮುಂದೆ ಕೊಂಡೊಯ್ಯಬಹುದು.
ವರದಿ: ವಿನಯ್ ಭಟ್
ಇದನ್ನೂ ಓದಿ: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅಧಿಕ ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್ಸ್; ಟಾಪ್-20ರಲ್ಲೂ ಇಲ್ಲ ವಿರಾಟ್ ಕೊಹ್ಲಿ