ಅಧಿಕೃತ ಆರಂಭಕ್ಕೂ ಮುನ್ನವೇ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸ್ಪರ್ಧೆಗಳು ಶುರು; ಫುಟ್ಬಾಲ್​ನಲ್ಲಿ ಇಂದು 8 ಪಂದ್ಯಗಳು
ಕನ್ನಡ ಸುದ್ದಿ  /  ಕ್ರೀಡೆ  /  ಅಧಿಕೃತ ಆರಂಭಕ್ಕೂ ಮುನ್ನವೇ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸ್ಪರ್ಧೆಗಳು ಶುರು; ಫುಟ್ಬಾಲ್​ನಲ್ಲಿ ಇಂದು 8 ಪಂದ್ಯಗಳು

ಅಧಿಕೃತ ಆರಂಭಕ್ಕೂ ಮುನ್ನವೇ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸ್ಪರ್ಧೆಗಳು ಶುರು; ಫುಟ್ಬಾಲ್​ನಲ್ಲಿ ಇಂದು 8 ಪಂದ್ಯಗಳು

Paris 2024 Olympic: ವಿಶ್ವದ ಅತಿದೊಡ್ಡ ಕ್ರೀಡಾಕೂಟವಾದ ಬೇಸಿಗೆ ಒಲಿಂಪಿಕ್ಸ್ ಉದ್ಘಾಟನೆ ಜುಲೈ 26ರಂದು ನಡೆಯಲಿದ್ದರೂ ಇಂದಿನಿಂದಲೇ (ಜುಲೈ 24) ಫುಟ್ಬಾಲ್ ಪಂದ್ಯಗಳು ನಡೆಯಲಿವೆ.

ಅಧಿಕೃತ ಆರಂಭಕ್ಕೂ ಮುನ್ನವೇ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸ್ಪರ್ಧೆಗಳು ಶುರು; ಫುಟ್ಬಾಲ್​ನಲ್ಲಿ ಇಂದು 8 ಪಂದ್ಯಗಳು
ಅಧಿಕೃತ ಆರಂಭಕ್ಕೂ ಮುನ್ನವೇ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸ್ಪರ್ಧೆಗಳು ಶುರು; ಫುಟ್ಬಾಲ್​ನಲ್ಲಿ ಇಂದು 8 ಪಂದ್ಯಗಳು

ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​​-2024 ಆರಂಭಗೊಂಡಿದೆ. ಅಧಿಕೃತ ಆರಂಭಕ್ಕೂ ಮುನ್ನವೇ ಸ್ಪರ್ಧೆಗಳು ಶುರುವಾಗಿವೆ. ವಿಶ್ವದ ಅತಿದೊಡ್ಡ ಕ್ರೀಡಾಕೂಟವಾದ ಬೇಸಿಗೆ ಒಲಿಂಪಿಕ್ಸ್ ಉದ್ಘಾಟನೆ ಜುಲೈ 26ರಂದು ನಡೆಯಲಿದ್ದರೂ ಇಂದಿನಿಂದಲೇ (ಜುಲೈ 24) ಫುಟ್ಬಾಲ್ ಪಂದ್ಯಗಳು ನಡೆಯಲಿವೆ. ಪ್ರತಿಸಲದಂತೆ ಈ ಬಾರಿಯೂ ಒಲಿಂಪಿಕ್ಸ್​ ಉದ್ಘಾಟನೆಗೆ 2 ದಿನಗಳ ಮುಂಚೆಯೇ ಗುಂಪು ಹಂತದ ಫುಟ್ಬಾಲ್ ಪಂದ್ಯಗಳು ಪ್ರಾರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಮೊರಾಕ್ಕೊ ತಂಡಗಳು ಸೆಣಸಾಟ ನಡೆಸಲಿವೆ.

ಫುಟ್ಬಾಲ್ ಮಾತ್ರವಲ್ಲ, ರಗ್ಬಿ ಕ್ರೀಡೆಯೂ ಇವತ್ತಿನಿಂದಲೇ ಆರಂಭ. ಜುಲೈ 25ರಂದು ಹ್ಯಾಂಡ್​ಬಾಲ್ ಮತ್ತು ಆರ್ಚರಿ ಒಲಿಂಪಿಕ್ಸ್ ಅಧಿಕೃತ ಆರಂಭಕ್ಕೂ ಮುನ್ನ ಶುರುವಾಗುವ ಮತ್ತೆರಡು ಕ್ರೀಡೆಗಳಾಗಿವೆ. ಇಂದು ನಡೆಯುವ ಫುಟ್ಬಾಲ್​ನಲ್ಲಿ 8 ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ಮೊರಾಕ್ಕೊ ತಂಡಗಳು ಕಾದಾಟ ನಡೆಸಲಿವೆ. ಸ್ಟೇಡ್ ಜೆಫ್ರಾಯ್ ಗುಯಿಚರ್ಡ್ ಮೈದಾನದಲ್ಲಿ ಸಂಜೆ 6.30ಕ್ಕೆ ಆರಂಭಗೊಳ್ಳಲಿದೆ. ಒಟ್ಟು 16 ತಂಡಗಳಲ್ಲಿ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಪಂದ್ಯಗಳನ್ನು ಉಚಿತವಾಗಿ ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.

23 ವಯೋಮಿತಿ ಆಟಗಾರರಿಗೆ ಅವಕಾಶ

ಇತ್ತೀಚೆಗೆ ಜರುಗಿದ ಯುರೋ ಮತ್ತು ಕೋಪಾ ಅಮೆರಿಕದಂತೆ ತಾರಾ ಫುಟ್ಬಾಲ್ ಆಟಗಾರರು ಒಲಿಂಪಿಕ್ಸ್​ನಲ್ಲಿ ಇರುವುದಿಲ್ಲ. ಭವಿಷ್ಯದ ಯುವ ಫುಟ್ಬಾಲ್ ತಾರೆಗಳನ್ನು ಸೃಷ್ಟಿಸುವ ಸ್ಪರ್ಧಾಣ ಇದಾಗಿದೆ. ಪುರುಷರ ವಿಭಾಗದಲ್ಲಿ 16 ತಂಡಗಳು, ಮಹಿಳೆಯರ ವಿಭಾಗದಲ್ಲಿ 12 ತಂಡಗಳು ಕಣಕ್ಕಿಳಿಯಲಿವೆ. ಪ್ಯಾರಿಸ್​ ಜೊತೆಗೆ ಒಟ್ಟು 6 ನಗರಗಳಲ್ಲಿ ಈ ಪಂದ್ಯಗಳು ಜರುಗಲಿವೆ. ಆದರೆ ಇಲ್ಲಿ ಸ್ಟಾರ್​ವಾರ್​ ಇರುವುದಿಲ್ಲ. ಅಂತಾರಾಷ್ಟ್ರೀಯ ಫುಟ್ಬಾಲ್​ನಂತೆ ಯಾವುದೇ ವಯಸ್ಸಿನ ಫುಟ್ಬಾಲ್ ಆಟಗಾರರಿಗೆ ಇಲ್ಲಿ ಆಡಲು ಅವಕಾಶ ಇಲ್ಲ.

ಗರಿಷ್ಠ ಅಂದರೆ ಪ್ರತಿ ತಂಡದಲ್ಲೂ ಮೂವರು ಆಟಗಾರರು ಮಾತ್ರ 23ಕ್ಕಿಂತ ಹೆಚ್ಚಿನ ವಯಸ್ಸಿನವರು ಕಣಕ್ಕಿಳಿಯಬಹುದು. ಉಳಿದ ಆಟಗಾರರು 23 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನರಾಗಿರಬೇಕು. ಆದರೆ ಮಹಿಳಾ ಫುಟ್ಬಾಲ್​ನಲ್ಲಿ ವಯೋಮಿತಿಗೆ ಮಿತಿ ಇಲ್ಲ. ಪುರುಷರ ಫುಟ್ಬಾಲ್​ನಲ್ಲಿ ಕಳೆದ ಬಾರಿ ಚಿನ್ನ ಗೆದ್ದಿದ್ದ ಬ್ರೆಜಿಲ್ ತಂಡವು ಈ ಬಾರಿ ಅರ್ಹತೆಯನ್ನೇ ಪಡೆದಿಲ್ಲ. ಮಹಿಳಾ ವಿಭಾಗದಲ್ಲಿ ಕೆನಡಾ ಹಾಲಿ ಚಾಂಪಿಯನ್​ ಆಗಿತ್ತು.

ಪುರುಷರ ತಂಡಗಳು

ಎ ಗುಂಪು: ಫ್ರಾನ್ಸ್, ಅಮೆರಿಕ, ಗಿನಿಯಾ, ನ್ಯೂಜಿಲೆಂಡ್.

ಬಿ ಗುಂಪು: ಅರ್ಜೆಂಟೀನಾ, ಮೊರಾಕ್ಕೊ, ಇರಾನ್, ಉಕ್ರೇನ್.

ಸಿ ಗುಂಪು: ಉಜ್ಬೇಕಿಸ್ತಾನ, ಸ್ಪೇನ್, ಈಜಿಪ್ಟ್, ಡೊಮೆನಿಕ್ ರಿಪಬ್ಲಿಕ್.

ಡಿ ಗುಂಪು: ಜಪಾನ್, ಪರಾಗ್ವೆ, ಮಾಲಿ, ಇಸ್ರೇಲ್.

ಜುಲೈ 24ರ ಫುಟ್ಬಾಲ್ ಪಂದ್ಯಗಳು (ಭಾರತೀಯ ಕಾಲಮಾನದಂತೆ)

  • ಅರ್ಜೆಂಟೀನಾ vs ಮೊರಾಕೊ (ಗುಂಪು ಬಿ), ಸಂಜೆ 6:30 (ಸ್ಟೇಡ್ ಜೆಫ್ರಾಯ್ ಗುಯಿಚರ್ಡ್ ಸ್ಟೇಡಿಯಂ)
  • ಉಜ್ಬೇಕಿಸ್ತಾನ್ vs ಸ್ಪೇನ್ (ಗುಂಪು ಸಿ), ಸಂಜೆ 6:30 (ಪಾರ್ಕ್ ಡೆಸ್ ಪ್ರಿನ್ಸಸ್ ಸ್ಟೇಡಿಯಂ)
  • ಗಿನಿಯಾ ವಿರುದ್ಧ ನ್ಯೂಜಿಲೆಂಡ್ (ಗುಂಪು ಎ), ರಾತ್ರಿ 8:30 (ಅಲಿಯಾನ್ಸ್ ರಿವೇರಿಯಾ ಮೈದಾನ)
  • ಈಜಿಪ್ಟ್ vs ಡೊಮಿನಿಕನ್ ರಿಪಬ್ಲಿಕ್ (ಗುಂಪು ಸಿ), ರಾತ್ರಿ 8:30 (ಸ್ಟೇಡ್ ಡೆ ಲಾ ಬ್ಯೂಜೋಯಿರ್) 
  • ಇರಾಕ್ vs ಉಕ್ರೇನ್ (ಗುಂಪು ಬಿ), ರಾತ್ರಿ 10:30 (ಗ್ರೂಪಮಾ ಕ್ರೀಡಾಂಗಣ)
  • ಜಪಾನ್ vs ಪರಾಗ್ವೆ (ಗುಂಪು ಡಿ), ರಾತ್ರಿ 10:30 (ಮ್ಯಾಟ್‌ಮಟ್ ಅಟ್ಲಾಂಟಿಕ್‌ ಮೈದಾನ)
  • ಫ್ರಾನ್ಸ್ vs ಯುನೈಟೆಡ್ ಸ್ಟೇಟ್ಸ್ (ಗುಂಪು ಎ), ರಾತ್ರಿ 12:30 (ಸ್ಟೇಡ್ ಆರೆಂಜ್ ವೆಲೊಡ್ರೋಮ್​)
  • ಮಾಲಿ vs ಇಸ್ರೇಲ್ (ಗುಂಪು ಡಿ), ರಾತ್ರಿ 12:30 (ಪಾರ್ಕ್ ಡೆಸ್ ಪ್ರಿನ್ಸಸ್ ಸ್ಟೇಡಿಯಂ)

ಇದನ್ನೂ ಓದಿ: ನೀರಿಗಿಳಿಯೋಕೆ ಭಯಪಡ್ತಿದ್ದೋಳು ಒಲಿಂಪಿಕ್ಸ್​ನಲ್ಲಿ ಅತ್ಯಂತ ಕಿರಿಯ ಈಜುಪಟು; 14 ವರ್ಷದ ಕನ್ನಡತಿ ಗೆದ್ದಿರೋದು 7 ಚಿನ್ನ!

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.