ಚಿನ್ನದ ಹುಡುಗ ನೀರಜ್ ಚೋಪ್ರಾ ಕಣಕ್ಕೆ, ಭಾರತ vs ಜರ್ಮನಿ ಹಾಕಿ ಸೆಮೀಸ್; ಭಾರತದ ಸ್ಫರ್ಧೆಗಳ ಇಂದಿನ ವೇಳಾಪಟ್ಟಿ-paris 2024 olympics indias complete schedule on 6 august neeraj chopra in action india vs germany in semis prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಚಿನ್ನದ ಹುಡುಗ ನೀರಜ್ ಚೋಪ್ರಾ ಕಣಕ್ಕೆ, ಭಾರತ Vs ಜರ್ಮನಿ ಹಾಕಿ ಸೆಮೀಸ್; ಭಾರತದ ಸ್ಫರ್ಧೆಗಳ ಇಂದಿನ ವೇಳಾಪಟ್ಟಿ

ಚಿನ್ನದ ಹುಡುಗ ನೀರಜ್ ಚೋಪ್ರಾ ಕಣಕ್ಕೆ, ಭಾರತ vs ಜರ್ಮನಿ ಹಾಕಿ ಸೆಮೀಸ್; ಭಾರತದ ಸ್ಫರ್ಧೆಗಳ ಇಂದಿನ ವೇಳಾಪಟ್ಟಿ

Indias Complete Schedule on 6 August: ಪ್ಯಾರಿಸ್ ಒಲಿಂಪಿಕ್ಸ್​​ನ 11ನೇ ದಿನವಾದ ಇಂದು (ಆಗಸ್ಟ್ 6) ಭಾರತ ಮಹತ್ವದ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದೆ. ಆಗಸ್ಟ್ 6ರ ಭಾರತದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಚಿನ್ನದ ಹುಡುಗ ನೀರಜ್ ಚೋಪ್ರಾ ಕಣಕ್ಕೆ, ಭಾರತ vs ಜರ್ಮನಿ ಹಾಕಿ ಸೆಮೀಸ್; ಭಾರತದ ಸ್ಫರ್ಧೆಗಳ ಇಂದಿನ ವೇಳಾಪಟ್ಟಿ
ಚಿನ್ನದ ಹುಡುಗ ನೀರಜ್ ಚೋಪ್ರಾ ಕಣಕ್ಕೆ, ಭಾರತ vs ಜರ್ಮನಿ ಹಾಕಿ ಸೆಮೀಸ್; ಭಾರತದ ಸ್ಫರ್ಧೆಗಳ ಇಂದಿನ ವೇಳಾಪಟ್ಟಿ

ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್​​ ಕ್ರೀಡಾಕೂಟದ 11ನೇ ದಿನದಂದು ಭಾರತ ತುಂಬಿದ ವೇಳಾಪಟ್ಟಿಯನ್ನು ಹೊಂದಿದೆ. ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಇಂದು (ಆಗಸ್ಟ್ 6) ಸ್ಪರ್ಧಿಸಲಿದ್ದಾರೆ. ಹಾಲಿ ಜಾವೆಲಿನ್ ಚಿನ್ನದ ಪದಕ ವಿಜೇತ ಚೋಪ್ರಾ ಜೊತೆಗೆ ಭಾರತದ ಕಿಶೋರ್ ಜೆನಾ ಸಹ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಪುರುಷರ ಹಾಕಿ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೆಣಸಲಿದ್ದು, ಫೈನಲ್​ಗೇರಲು ಸಜ್ಜಾಗಿದೆ.

ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಭಾರತೀಯ ಮಹಿಳಾ ಟೇಬಲ್ ಟೆನಿಸ್ ತಂಡವು 16ರ ಸುತ್ತಿನಲ್ಲಿ ರೊಮೇನಿಯಾ ವಿರುದ್ಧ ಜಯವನ್ನು ದಾಖಲಿಸಿದ್ದು, ಆಗಸ್ಟ್​ 6ರ ಮಂಗಳವಾರ ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಯುಎಸ್‌ಎ ಅಥವಾ ಜರ್ಮನಿ ತಂಡವನ್ನು ಎದುರಿಸಲಿದ್ದಾರೆ. ಟೇಬಲ್ ಟೆನಿಸ್‌ನಲ್ಲಿ ಶರತ್ ಕಮಲ್ ನೇತೃತ್ವದ ಪುರುಷರ ತಂಡವು 16 ರ ಸುತ್ತಿನಲ್ಲಿ ತಮ್ಮ ಅಭಿಯಾನ ಪ್ರಾರಂಭಿಸುತ್ತದೆ.

ಪ್ಯಾರಿಸ್ ಒಲಿಂಪಿಕ್ಸ್: ಆಗಸ್ಟ್ 6ರ ಭಾರತದ ಸಂಪೂರ್ಣ ವೇಳಾಪಟ್ಟಿ

ಮಧ್ಯಾಹ್ನ 1:30 - ಟೇಬಲ್ ಟೆನಿಸ್ - ಪುರುಷರ ತಂಡ - ರೌಂಡ್ ಆಫ್ 16 - ಭಾರತ vs ಚೀನಾ

ಮಧ್ಯಾಹ್ನ 1:50 - ಅಥ್ಲೆಟಿಕ್ಸ್ - ಪುರುಷರ ಜಾವೆಲಿನ್ ಥ್ರೋ - ಅರ್ಹತೆ - ಗುಂಪು ಎ - ಕಿಶೋರ್ ಜೆನಾ

ಮಧ್ಯಾಹ್ನ 2:30 - ಕುಸ್ತಿ - ಮಹಿಳೆಯರ 68 ಕೆಜಿ ಫ್ರೀಸ್ಟೈಲ್ - ರೆಪೆಚೇಜ್ (ಅರ್ಹತೆ ಪಡೆದರೆ) - ನಿಶಾ ದಹಿಯಾ

ಮಧ್ಯಾಹ್ನ 2:50 - ಅಥ್ಲೆಟಿಕ್ಸ್ - ಮಹಿಳೆಯರ 400 ಮೀಟರ್ ರಿಪೆಚೇಜ್ - ಹೀಟ್ 1 ಕಿರಣ್ ಪಹಲ್

ಮಧ್ಯಾಹ್ನ 3 ರಿಂದ - ಕುಸ್ತಿ - ಮಹಿಳೆಯರ 50 ಕೆಜಿ ಫ್ರೀಸ್ಟೈಲ್ - 1/8 ಫೈನಲ್ಸ್ - ವಿನೇಶ್ ಫೋಗಟ್

ಮಧ್ಯಾಹ್ನ 3:20 - ಅಥ್ಲೆಟಿಕ್ಸ್ - ಪುರುಷರ ಜಾವೆಲಿನ್ ಥ್ರೋ - ಅರ್ಹತಾ ಗುಂಪು ಎ - ನೀರಜ್ ಚೋಪ್ರಾ

ಸಂಜೆ 4:20 ರಿಂದ - ಕುಸ್ತಿ - ಮಹಿಳೆಯರ 50 ಕೆಜಿ ಫ್ರೀಸ್ಟೈಲ್ - 1/4 ಫೈನಲ್ಸ್ (ಅರ್ಹತೆ ಪಡೆದರೆ) - ವಿನೇಶ್ ಫೋಗಟ್

ಸಂಜೆ 6:30 ಅಥವಾ ರಾತ್ರಿ 11:30 ಸೆಷನ್ - ಟೇಬಲ್ ಟೆನಿಸ್ - ಮಹಿಳಾ ತಂಡ ಕ್ವಾಟರ್​​​ಫೈನಲ್ - ಭಾರತ vs ಯುಎಸ್​ಎ ಅಥವಾ ಜರ್ಮನಿ

ರಾತ್ರಿ 10:25 ಅಥವಾ 10:35 - ಕುಸ್ತಿ - ಮಹಿಳೆಯರ 50 ಕೆಜಿ ಫ್ರೀಸ್ಟೈಲ್ - ಸೆಮಿಫೈನಲ್ (ಅರ್ಹತೆ ಪಡೆದರೆ) ವಿನೇಶ್ ಫೋಗಟ್

ರಾತ್ರಿ 10:30 - ಹಾಕಿ - ಪುರುಷರ ತಂಡ ಸೆಮಿಫೈನಲ್ - ಭಾರತ vs ಜರ್ಮನಿ

ರಾತ್ರಿ 12:20 ಅಥವಾ 12:30 (ಆಗಸ್ಟ್ 7) - ಕುಸ್ತಿ - ಮಹಿಳೆಯರ 68ಕೆಜಿ ಫ್ರೀಸ್ಟೈಲ್ - ಕಂಚಿನ ಪದಕದ ಪಂದ್ಯ (ಅರ್ಹತೆ ಪಡೆದರೆ) - ನಿಶಾ ದಹಿಯಾ

ರಾತ್ರಿ 12:45 (ಆಗಸ್ಟ್ 7) - ಕುಸ್ತಿ - ಮಹಿಳೆಯರ 68 ಕೆಜಿ ಫ್ರೀಸ್ಟೈಲ್ - ಚಿನ್ನದ ಪದಕ ಪಂದ್ಯ (ಅರ್ಹತೆ ಪಡೆದರೆ) - ನಿಶಾ ದಹಿಯಾ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.