ಪ್ಯಾರಿಸ್ ಒಲಿಂಪಿಕ್ಸ್; ಸರ್ಫಿಂಗ್ ಸ್ಪರ್ಧೆಗೆ ಗೂಗಲ್ ಡೂಡಲ್ ಗೌರವ, ಸತತ 6ನೇ ದಿನವೂ ಬದಲಾಯ್ತು ಸರ್ಚ್ ಎಂಜಿನ್ ಲೋಗೋ
Google Doodle Today: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಇಂದು ನಡೆಯುವ ಸರ್ಫಿಂಗ್ ಈವೆಂಟ್ಗೆ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ.
2024ರ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ಆದಾಗಿನಿಂದಲೂ ಗೂಗಲ್ ತನ್ನ ಚಿತ್ರವನ್ನು ಬದಲಾಯಿಸುತ್ತಿದೆ. ಗೂಗಲ್ ಆಗಸ್ಟ್ 1ರ ಸರ್ಚ್ ಎಂಜಿನ್ ಲೋಗೋವನ್ನು ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಅದ್ಭುತ ಸರ್ಫರ್ಗಳಿಗೆ ಅರ್ಪಿಸಿದೆ. ಹಿಂದಿನ ಡೂಡಲ್ಗಳಂತೆ ಇಂದು ಸಹ ಡೂಡಲ್ ಪಕ್ಷಿ ನೀರಿನ ಮೇಲೆ ಸರ್ಫಿಂಗ್ ಮಾಡುವ ಮೂಲಕ ಸರ್ಫರ್ಸ್ಗೆಗೌರವ ಸಲ್ಲಿಸಿದೆ. ನೀರಿನಲ್ಲಿ ಮರದ ಎಲೆಯನ್ನೇ ಸ್ಕೇಟ್ ಬೋರ್ಡ್ ಮಾಡಿಕೊಂಡಿದೆ.
ಪ್ಯಾರಿಸ್ನಲ್ಲಿಂದು ನಡೆಯುವ ಸರ್ಫಿಂಗ್ ಈವೆಂಟ್ನಲ್ಲಿ 100ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ಒಲಿಂಪಿಕ್ ಸರ್ಫಿಂಗ್ ಸ್ಥಳ ಟೆಹುಪೊದಲ್ಲಿ ಪ್ರತಿಕೂಲ ಹವಾಮಾನ ಮತ್ತು ಬಿರುಗಾಳಿಯ ಹವಾಮಾನ ಪರಿಸ್ಥಿತಿಗಳ ಕಾರಣದಿಂದ ಜುಲೈ 30ರ ಮಂಗಳವಾರ ನಡೆಯಬೇಕಿದ್ದ ಸರ್ಫಿಂಗ್ ಆಗಸ್ಟ್ 31ರ ಬುಧವಾರ ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು. ಆದರೆ ನಂತರ ಬುಧವಾರವೂ ರದ್ದುಪಡಿಸಿ ಬುಧವಾರಕ್ಕೆ ಮುಂದೂಡಲಾಯಿತು.
ಸರ್ಫಿಂಗ್ ನಡೆಯುವ ಪ್ರದೇಶದಲ್ಲಿ ಚಂಡಮಾರುತ ಕಾಣಿಸಿಕೊಂಡ ಕಾರಣ ಸ್ಪರ್ಧೆ ಆಯೋಜಿಸುವುದು ಸವಾಲಿನದ್ದಾಗಿದ್ದು, ಸಂಘಟಕರು ಆಯೋಜನೆಗೆ ಹಿಂದೇಟು ಹಾಕಿದರು. ಪುರುಷರ 3ನೇ ಸುತ್ತಿನ ಸರ್ಫಿಂಗ್ ಸ್ಪರ್ಧೆಗೆ ವಾತಾವರಣ ಅಡ್ಡಿಯಾಗಿತ್ತು. ಸ್ಫರ್ಧೆ ನಡೆಯುವ ತಾಣ ಟಹೀಟಿ ಕರಾವಳಿಯ ಭಾಗವಾಗಿರುವ ಕಾರಣ ಪರಿಸ್ಥಿತಿ ಕೈ ಮೀರಿದೆ. ಇಂದು ಆರಂಭವಾದರೆ ವಾರಾಂತ್ಯದಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.
ನಿಗದಿಯಂತೆ ಸ್ಪರ್ಧೆ ಆರಂಭವಾಗಿದ್ದರೆ, ಇವತ್ತಿಗೆ ಪದಕದ ಪಂದ್ಯ ನಡೆಯಬೇಕಿತ್ತು. ಮಹಿಳೆಯರ 6ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ವಿಶ್ವ ಚಾಂಪಿಯನ್ ಟೈಲರ್ ರೈಟ್ ಇಸ್ರೇಲ್ ಅನಾಟ್ ಲೆಲಿಯರ್ ವಿರುದ್ಧ ಸೆಣಸಲಿದ್ದಾರೆ. ಸ್ಥಳೀಯ ಫೇವರಿಟ್ ವಹಿನೆ ಫಿಯೆರೊ 2ನೇ ಸುತ್ತಿನಲ್ಲಿ ದೇಶೀಯ ಆಟಗಾರ್ತಿ ಜೊಹಾನೆ ಡೆಫೇ ವಿರುದ್ಧ ಸೆಣಸಲಿದ್ದು, ಮಿಂಚಿನ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ಕ್ರ.ಸಂ | ದೇಶ (ಜುಲೈ 31ರ ಅಂತ್ಯಕ್ಕೆ) | ಚಿನ್ನ | ಬೆಳ್ಳಿ | ಕಂಚು | ಒಟ್ಟು |
---|---|---|---|---|---|
1 | ಚೀನಾ | 8 | 7 | 3 | 18 |
2 | ಜಪಾನ್ | 8 | 3 | 4 | 15 |
3 | ಫ್ರಾನ್ಸ್ | 7 | 10 | 8 | 25 |
4 | ಆಸ್ಟ್ರೇಲಿಯಾ | 7 | 4 | 3 | 14 |
5 | ಗ್ರೇಟ್ ಬ್ರಿಟನ್ | 6 | 6 | 5 | 17 |
6 | ದಕ್ಷಿಣ ಕೊರಿಯಾ | 6 | 3 | 3 | 12 |
7 | ಯುಎಸ್ಎ | 5 | 13 | 12 | 30 |
8 | ಇಟಲಿ | 3 | 6 | 4 | 13 |
9 | ಕೆನಡಾ | 2 | 2 | 3 | 7 |
10 | ಜರ್ಮನಿ | 2 | 2 | 2 | 6 |
39 | ಭಾರತ | 0 | 0 | 2 | 2 |