ಪ್ಯಾರಿಸ್ ಒಲಿಂಪಿಕ್ಸ್: 10ಮೀ ಏರ್ ರೈಫಲ್‌ ಫೈನಲ್‌ನಲ್ಲಿ ರಮಿತಾ ಜಿಂದಾಲ್‌ಗೆ ಸೋಲು; 7ನೇ ಸ್ಥಾನ ಪಡೆದ ಭಾರತದ ಶೂಟರ್
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್: 10ಮೀ ಏರ್ ರೈಫಲ್‌ ಫೈನಲ್‌ನಲ್ಲಿ ರಮಿತಾ ಜಿಂದಾಲ್‌ಗೆ ಸೋಲು; 7ನೇ ಸ್ಥಾನ ಪಡೆದ ಭಾರತದ ಶೂಟರ್

ಪ್ಯಾರಿಸ್ ಒಲಿಂಪಿಕ್ಸ್: 10ಮೀ ಏರ್ ರೈಫಲ್‌ ಫೈನಲ್‌ನಲ್ಲಿ ರಮಿತಾ ಜಿಂದಾಲ್‌ಗೆ ಸೋಲು; 7ನೇ ಸ್ಥಾನ ಪಡೆದ ಭಾರತದ ಶೂಟರ್

ಪ್ಯಾರಿಸ್ ಒಲಿಂಪಿಕ್ಸ್ 2024ರ 3 ನೇ ದಿನದಾಟದಲ್ಲಿ ಭಾರತಕ್ಕೆ ಪದಕ ಗೆಲ್ಲುವ ಅವಕಾಶ ಪಡೆದಿದ್ದ ಶೂಟರ್ ರಮಿತಾ ಜಿಂದಾಲ್‌, 10ಮೀ ಏರ್ ರೈಫಲ್‌ ಫೈನಲ್‌ನಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

10ಮೀ ಏರ್ ರೈಫಲ್‌ ಫೈನಲ್‌ನಲ್ಲಿ ರಮಿತಾ ಜಿಂದಾಲ್‌ಗೆ ಸೋಲು
10ಮೀ ಏರ್ ರೈಫಲ್‌ ಫೈನಲ್‌ನಲ್ಲಿ ರಮಿತಾ ಜಿಂದಾಲ್‌ಗೆ ಸೋಲು (AP)

ಮಹಿಳೆಯರ 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಭಾರತದ ರಮಿತಾ ಜಿಂದಾಲ್ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಫೈನಲ್‌ ಪ್ರವೇಶಿಸಿದ್ದ ಅವರು, 7ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ನಿನ್ನೆಯಷ್ಟೇ ಭಾರತದ ಮನು ಭಾಕರ್ ಅವರು 10 ಮೀಟರ್ ಏರ್ ಪಿಸ್ತೂಲ್‌ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ, ಶೂಟಿಂಗ್‌ನಲ್ಲಿ ಒಲಿಂಪಿಕ್‌ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಇಂದು ರಮಿತಾ ಅವರಿಗೂ ಇಂಥಾ ಅವಕಾಶವಿತ್ತು. ಆದರೆ ಚೀನಾ. ಕೊರಿಯಾದ ಬಲಿಷ್ಠ ಸ್ಪರ್ಧಿಗಳ ವಿರುದ್ಧ ಹೋರಾಡಿದ ಅವರು, ಏಳನೇ ಸ್ಥಾನಕ್ಕೆ ತೃಪ್ತಿಪಟ್ಟರು.

10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ರಮಿತಾ ಜಿಂದಾಲ್ ಏಳನೇ ಸ್ಥಾನ ಪಡೆದರು. ಫೈನಲ್‌ ಪ್ರವೇಶಿಸಿದ್ದ ಎಂಟು ಮಹಿಳೆಯರ ಪೈಕಿ ಒಟ್ಟು 145.3 ಪಾಯಿಂಟ್‌ ಕಲೆಹಾಕಿದರು. ಫೈನಲ್‌ನಲ್ಲಿ ಎಲಿಮಿನೇಷನ್ ಆರಂಭವಾದಾಗ ಎರಡನೆಯವರಾಗಿ ಹೊರಬಿದ್ದರು. ಎಲಿಮಿನೇಷನ್ ಪ್ರಾರಂಭವಾದಾಗ ಭಾರತದ ಯುವ ಶೂಟರ್ 10 ಹೊಡೆತಗಳ (104.0) ನಂತರ ಏಳನೇ ಸ್ಥಾನ ಪಡೆದರು.

ಅತ್ತ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕಕ್ಕಾಗಿ ಕಣಕ್ಕಿಳಿಯಲಿದ್ದಾರೆ, ಇದರೊಂದಿಗೆ ಮನು ಭಾಕರ್‌ ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕ ಗೆಲ್ಲುವ ಅವಕಾಶ ಪಡೆಯಲಿದ್ದಾರೆ.

ದಕ್ಷಿಣ ಕೊರಿಯಾಗೆ ಚಿನ್ನ

ದಕ್ಷಿಣ ಕೊರಿಯಾದ ಬ್ಯಾನ್‌ ಹ್ಯೋಜಿನ್‌ 10 ಮೀಟರ್ ಏರ್ ರೈಫಲ್‌ನಲ್ಲಿ ಚಿನ್ನದ ಪದಕ ಗೆದ್ದರೆ, ಚೀನಾದ ಹ್ಯೋಂಗ್‌ ಬೆಳ್ಳಿ ಗೆದ್ದರು. ಸ್ವಿಟ್ಜರ್ಲ್ಯಾಂಡ್‌ನ ಆಡ್ರೆ ಗೊಗ್ನಿಯಾಟ್ ಕಂಚು ಗೆದ್ದರು.

ಇಂದು ಮಧ್ಯಾಹ್ನ 3:3ಕ್ಕೆ ಪುರುಷರ 10 ಮೀಟರ್​ ಏರ್ ರೈಫಲ್ ಶೂಟಿಂಗ್ ಫೈನಲ್ ನಡೆಯಲಿದೆ. ಅರ್ಜುನ್ ಬಬುಟಾ ಪದಕ ಗೆಲ್ಲು ಅವಕಾಶ ಪಡೆದಿದ್ದಾರೆ. ಉಳಿದಂತೆ ಅರ್ಜೆಂಟೀನಾ ವಿರುದ್ಧ ಪುರುಷರ ಹಾಕಿ ಪಂದ್ಯ ನಡೆಯಲಿದ್ದು, ಬ್ಯಾಡ್ಮಿಂಟನ್, ಆರ್ಚರಿ ಹಾಗೂ ಟೇಬಲ್‌ ಟೆನಿಸ್‌ ಪಂದ್ಯಗಳು ಕೂಡಾ ನಡೆಯಲಿವೆ.

ಇಂದು ನಡೆದ ಮಹಿಳೆಯರ ಡಬಲ್ಸ್ ಗುಂಪು ಹಂತದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ತನಿಶಾ ಕ್ರಾಸ್ಟೊ ಜೋಡಿ ಜಪಾನ್‌ನ ನಮಿ ಮತ್ಸುಯಾಮಾ ಹಾಗೈ ಚಿಹಾರು ಶಿದಾ ಜೋಡಿ ವಿರುದ್ಧ ಮುಗ್ಗರಿಸಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.