ಕಂಚಿನ ಪದಕ ನಿರೀಕ್ಷೆಯಲ್ಲಿ ಕುಸ್ತಿಪಟು ಅಮನ್ ಸೆಹ್ರಾವತ್; ಆಗಸ್ಟ್‌ 9ರಂದು ಭಾರತದ ಒಲಿಂಪಿಕ್ಸ್‌ ವೇಳಾಪಟ್ಟಿ ನೋಡಿ
ಕನ್ನಡ ಸುದ್ದಿ  /  ಕ್ರೀಡೆ  /  ಕಂಚಿನ ಪದಕ ನಿರೀಕ್ಷೆಯಲ್ಲಿ ಕುಸ್ತಿಪಟು ಅಮನ್ ಸೆಹ್ರಾವತ್; ಆಗಸ್ಟ್‌ 9ರಂದು ಭಾರತದ ಒಲಿಂಪಿಕ್ಸ್‌ ವೇಳಾಪಟ್ಟಿ ನೋಡಿ

ಕಂಚಿನ ಪದಕ ನಿರೀಕ್ಷೆಯಲ್ಲಿ ಕುಸ್ತಿಪಟು ಅಮನ್ ಸೆಹ್ರಾವತ್; ಆಗಸ್ಟ್‌ 9ರಂದು ಭಾರತದ ಒಲಿಂಪಿಕ್ಸ್‌ ವೇಳಾಪಟ್ಟಿ ನೋಡಿ

Aman Sehrawat: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಈವರೆಗೆ ಒಟ್ಟು 5 ಪದಕಗಳನ್ನು ಗೆದ್ದಿದೆ. ಇಂದು ಅದಕ್ಕೆ ಇನ್ನೂ ಒಂದು ಪದಕದ ಸೇರ್ಪಡೆ ಮಾಡುವ ಅವಕಾಶವಿದೆ. ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.

ಕಂಚಿನ ಪದಕ ನಿರೀಕ್ಷೆಯಲ್ಲಿ ಕುಸ್ತಿಪಟು ಅಮನ್ ಸೆಹ್ರಾವತ್; ಆಗಸ್ಟ್‌ 9ರ ವೇಳಾಪಟ್ಟಿ
ಕಂಚಿನ ಪದಕ ನಿರೀಕ್ಷೆಯಲ್ಲಿ ಕುಸ್ತಿಪಟು ಅಮನ್ ಸೆಹ್ರಾವತ್; ಆಗಸ್ಟ್‌ 9ರ ವೇಳಾಪಟ್ಟಿ (HT_PRINT)

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಗುರುವಾರ ಭಾರತ ಎರಡು ಪದಕಗಳನ್ನು ಗೆದ್ದಿತು. ಪುರುಷರ ಹಾಕಿ ತಂಡವು ಕಂಚಿನ ಪದಕ ಗೆದ್ದರೆ, ನೀರಜ್‌ ಚೋಪ್ರಾ ಬೆಳ್ಳಿ ಸಾಧನೆ ಮಾಡಿದರು. ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆಲುವಿನ ಸಾಧನೆಯನ್ನು ಹಾಕಿ ತಂಡ ಮತ್ತು ನೀರಜ್‌ ಮಾಡಿದರು. ಕ್ರೀಡಾಕೂಟದಲ್ಲಿ ಆಗಸ್ಟ್‌ 9ರ ಶುಕ್ರವಾರವಾದ ಇಂದು ಭಾರತಕ್ಕೆ ಮತ್ತೊಂದು ಪದಕಕ್ಕೆ ಕೊರಳೊಡ್ಡುವ ಅವಕಾಶವಿದೆ. ಪುರುಷರ 57 ಕೆಜಿ ವಿಭಾಗದ ಕುಸ್ತಿ ಕಂಚಿನ ಪದಕ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಅಖಾಡಕ್ಕಿಳಿಯಲಿದ್ದಾರೆ. ಇದರೊಂದಿಗೆ ಪ್ಯಾರಿಸ್‌ನಲ್ಲಿ ಭಾರತಕ್ಕೆ ಮೊದಲ ಕುಸ್ತಿ ಪದಕವನ್ನು ಗೆಲ್ಲುವ ಭರವಸೆ ಹೊಂದಿದ್ದಾರೆ.

ಗುರುವಾರ ದಿನ ಅಮನ್ ಅಮೋಘ ಪ್ರದರ್ಶನ ನೀಡಿದರು. ತಮ್ಮ ಆರಂಭಿಕ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಈ ವೇಳೆ ತಾಂತ್ರಿಕ ಶ್ರೇಷ್ಠತೆಯನ್ನು ಪ್ರದರ್ಶಿಸಿದರು. ಆದರೆ, ರಾತ್ರಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅವರು ಜಪಾನ್‌ನ ಚಾಂಪಿಯನ್‌ ಆಟಗಾರ ರೇ ಹಿಗುಚಿ ವಿರುದ್ಧ ಸೋಲು ಕಂಡರು. ಹೀಗಾಗಿ ಫೈನಲ್‌ಗೇರುವ ಅವಕಾಶ ಕಳೆದುಕೊಂಡು, ಇಂದು ಕಂಚಿನ ಪದಕ ಪಂದ್ಯದಲ್ಲಿ ಆಡುತ್ತಿದ್ದಾರೆ. ಇದೇ ವೇಳೆ ಅಥ್ಲೆಟಿಕ್ಸ್‌ನಲ್ಲಿ ಪುರುಷರ ಮತ್ತು ವನಿತೆಯರ 4x400 ರಿಲೇ ಅರ್ಹತಾ ಸುತ್ತು ನಡೆಯಲಿದೆ.

ಒಲಿಂಪಿಕ್ಸ್‌ನಲ್ಲಿ ಆಗಸ್ಟ್ 9ರ ಶುಕ್ರವಾರ ಭಾರತದ ವೇಳಾಪಟ್ಟಿ

ಮಧ್ಯಾಹ್ನ 12:30 : ಗಾಲ್ಫ್ - ಮಹಿಳೆಯರ ವೈಯಕ್ತಿಕ ಸ್ಟ್ರೋಕ್‌ನಲ್ಲಿ 2ನೇ ಸುತ್ತಿನಲ್ಲಿ ದೀಕ್ಷಾ ದಾಗರ್ ಮತ್ತು ಅದಿತಿ ಅಶೋಕ್ ಪಾಲ್ಗೊಳ್ಳಲಿದ್ದಾರೆ

ಮಧ್ಯಾಹ್ನ 2:10 : ಅಥ್ಲೆಟಿಕ್ಸ್ - ಮಹಿಳೆಯರ 4x400 ಮೀಟರ್‌ ರಿಲೇ ಹೀಟ್ಸ್. (ಜ್ಯೋತಿಕಾ ಶ್ರೀ ದಂಡಿ, ಕಿರಣ್ ಪಹಲ್, ಎಂ ಪೂವಮ್ಮ ರಾಜು ಮತ್ತು ವಿತ್ಯಾ ರಾಮರಾಜ್ ಆಡಲಿದ್ದಾರೆ).

ಮಧ್ಯಾಹ್ನ 2:35 : ಅಥ್ಲೆಟಿಕ್ಸ್ - ಪುರುಷರ 4x400 ಮೀಟರ್‌ ರಿಲೇ ಹೀಟ್ಸ್. ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವಿದೆ. (ಅಮೋಜ್ ಜೇಕಬ್, ರಾಜೇಶ್ ರಮೇಶ್, ಸಂತೋಷ್ ಕುಮಾರ್ ತಮಿಳರಸನ್ ಮತ್ತು ಮುಹಮ್ಮದ್ ಅಜ್ಮಲ್ ವರಿಯಾತೋಡಿ)

ರಾತ್ರಿ 11:10 : ಪುರುಷರ 57 ಕೆಜಿ ವಿಭಾಗದ ಕುಸ್ತಿ ಫ್ರೀಸ್ಟೈಲ್ ಕಂಚಿನ ಪದಕದ ಪಂದ್ಯದಲ್ಲಿ ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ವಿರುದ್ಧ ಅಮನ್ ಸೆಹ್ರಾವತ್.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.