ಒಲಿಂಪಿಕ್ಸ್:‌ 3ನೇ ಪದಕಕ್ಕೆ ಶೂಟ್‌ ಮಾಡಲು ಮನು ಭಾಕರ್‌ ಕಣಕ್ಕೆ; ಲಕ್ಷ್ಯ ಸೇನ್‌ ಕ್ವಾರ್ಟರ್‌ ಫೈನಲ್‌ ಫೈಟ್; ಆಗಸ್ಟ್‌ 2ರ ವೇಳಾಪಟ್ಟಿ
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ಸ್:‌ 3ನೇ ಪದಕಕ್ಕೆ ಶೂಟ್‌ ಮಾಡಲು ಮನು ಭಾಕರ್‌ ಕಣಕ್ಕೆ; ಲಕ್ಷ್ಯ ಸೇನ್‌ ಕ್ವಾರ್ಟರ್‌ ಫೈನಲ್‌ ಫೈಟ್; ಆಗಸ್ಟ್‌ 2ರ ವೇಳಾಪಟ್ಟಿ

ಒಲಿಂಪಿಕ್ಸ್:‌ 3ನೇ ಪದಕಕ್ಕೆ ಶೂಟ್‌ ಮಾಡಲು ಮನು ಭಾಕರ್‌ ಕಣಕ್ಕೆ; ಲಕ್ಷ್ಯ ಸೇನ್‌ ಕ್ವಾರ್ಟರ್‌ ಫೈನಲ್‌ ಫೈಟ್; ಆಗಸ್ಟ್‌ 2ರ ವೇಳಾಪಟ್ಟಿ

Paris Olympics 2024:‌ ಬ್ಯಾಡ್ಮಿಂಟನ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆದಿರುವ ಲಕ್ಷ್ಯ ಸೇನ್, ಸೆಮಿಫೈನಲ್ ಪ್ರವೇಶಿಸುವ ಗುರಿ ಹಾಕಿಕೊಂಡಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕ ಗೆದ್ದ ಮನು‌ ಭಾಕರ್‌ ಮೂರನೇ ಪದಕ ಗೆಲ್ಲಲು ಇಂದು ಅಭಿಯಾನ ಆರಂಭಿಸುತ್ತಿದ್ದಾರೆ.

ಒಲಿಂಪಿಕ್ಸ್:‌ 3ನೇ ಪದಕಕ್ಕೆ ಶೂಟ್‌ ಮಾಡಲು ಮನು ಭಾಕರ್‌ ಕಣಕ್ಕೆ; ಆಗಸ್ಟ್‌ 2ರ ವೇಳಾಪಟ್ಟಿ
ಒಲಿಂಪಿಕ್ಸ್:‌ 3ನೇ ಪದಕಕ್ಕೆ ಶೂಟ್‌ ಮಾಡಲು ಮನು ಭಾಕರ್‌ ಕಣಕ್ಕೆ; ಆಗಸ್ಟ್‌ 2ರ ವೇಳಾಪಟ್ಟಿ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಆಟಗಾರರು ಈವರೆಗೆ 3 ಪದಕಗಳನ್ನು ಗೆದ್ದಿದ್ದಾರೆ. ಶೂಟಿಂಗ್‌ನಲ್ಲಿ ಭಾರತೀಯರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ದೇಶಕ್ಕೆ ಎರಡೆರಡು ಪದಕಗಳನ್ನು ಗೆದ್ದಿರುವ ಕಂಚಿನ ಹುಡುಗಿ ಮನು ಭಾಕರ್, ಆಗಸ್ಟ್‌ 2ರ ಶುಕ್ರವಾರ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರೆ. ಮಹಿಳೆಯರ 25 ಮೀಟರ್‌ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಇಶಾ ಸಿಂಗ್ ಜೊತೆಗೂಡಿ ಪಾಲ್ಗೊಳ್ಳಲಿದ್ದಾರೆ. ಅತ್ತ ಪುರುಷರ ಹಾಕಿ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇದೇ ವೇಳೆ ಅಥ್ಲೆಟಿಕ್ಸ್ ಕೂಡ ಶುಕ್ರವಾರ ಆರಂಭವಾಗಲಿದ್ದು, ಪುರುಷರ ಶಾಟ್‌ಪುಟ್ ಅರ್ಹತಾ ಸುತ್ತಿನಲ್ಲಿ ತಜಿಂದರ್‌ಪಾಲ್ ಸಿಂಗ್ ತೂರ್ ಮೈದಾನಕ್ಕಿಳಿಯಲಿದ್ದಾರೆ.

ಭಾರತೀಯ ಎದುರಾಳಿ ಪ್ರಣೋಯ್‌ ವಿರುದ್ಧ ಗೆದ್ದು ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆದಿರುವ ಲಕ್ಷ್ಯ ಸೇನ್, ಬ್ಯಾಡ್ಮಿಂಟನ್‌ನಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ಅವರನ್ನು ಎದುರಿಸುತ್ತಿದ್ದಾರೆ. ಇಲ್ಲಿ ಗೆದ್ದರೆ ಸೆಮಿಫೈನಲ್ ಪ್ರವೇಶಿಸಲಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಆಗಸ್ಟ್ 2ರ ಶುಕ್ರವಾರ ಭಾರತದ ವೇಳಾಪಟ್ಟಿ

ಮಧ್ಯಾಹ್ನ 12:30: ಗಾಲ್ಫ್ - ಪುರುಷರ ವೈಯಕ್ತಿಕ ವಿಭಾಗದ 2ನೇ ಸುತ್ತಿನಲ್ಲಿ ಶುಭಂಕರ್ ಶರ್ಮಾ ಮತ್ತು ಗಗನ್ಜೀತ್ ಭುಲ್ಲರ್ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 12:30: ಶೂಟಿಂಗ್ - ಮಹಿಳೆಯರ 25 ಮೀಟರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಮತ್ತು ಇಶಾ ಸಿಂಗ್.

ಮಧ್ಯಾಹ್ನ 1: ಶೂಟಿಂಗ್ - ಪುರುಷರ ಸ್ಕೀಟ್ ಅರ್ಹತೆ ದಿನ 1ರಲ್ಲಿ ಅನಂತ್ ಜೀತ್ ಸಿಂಗ್ ನರುಕಾ.

ಮಧ್ಯಾಹ್ನ 1: ಆರ್ಚರಿ - ಮಿಶ್ರ ತಂಡ 16ರ ಸುತ್ತಿನ ಪಂದ್ಯದಲ್ಲಿ ಭಾರತದ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರು ಇಂಡೋನೇಷ್ಯಾದ ದಯಾನಂದ ಚೊಯಿರುನ್ಸಿಮಾ ಮತ್ತು ಆರಿಫ್ ಪಂಗೆಸ್ಟು ಜೋಡಿಯನ್ನು ಎದುರಿಸಲಿದ್ದಾರೆ.

ಮಧ್ಯಾಹ್ನ 1: ರೋಯಿಂಗ್ - ಪುರುಷರ ಸಿಂಗಲ್ಸ್ ಸ್ಕಲ್ಸ್ ಕ್ಲಾಸಿಫಿಕೇಶನ್‌ನಲ್ಲಿ ಬಾಲರಾಜ್ ಪನ್ವಾರ್. (ಪನ್ವಾರ್ ಪದಕದ ಸ್ಪರ್ಧೆಯಿಂದ ಹೊರಗಿದ್ದಾರೆ. ಇದು ಪ್ಯಾರಿಸ್ ಒಲಿಂಪಿಕ್ಸ್‌ನ ಅಂತಿಮ ರೇಸ್ ಆಗಿದ್ದು ಅವರ ಶ್ರೇಯಾಂಕವನ್ನು ನಿರ್ಧರಿಸಲಾಗುತ್ತದೆ.

ಮಧ್ಯಾಹ್ನ 1:30: ಜೂಡೋ - ಮಹಿಳೆಯರ +75 ಕೆಜಿ ಸುತ್ತಿನ 32ರ ಸುತ್ತಿನ ಪಂದ್ಯದಲ್ಲಿ ಭಾರತದ ತುಲಿಕಾ ಮಾನ್ vs ಇಡಾಲಿಸ್ ಒರ್ಟಿಜ್. (ತುಲಿಕಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಡುತ್ತಿರುವ ಭಾರತದ ಏಕೈಕ ಜೂಡೋ ಆಟಗಾರ್ತಿ ಆಗಿದ್ದಾರೆ.

ಮಧ್ಯಾಹ್ನ 3:45: ಸೈಲಿಂಗ್ - ಮಹಿಳೆಯರ ಡಿಂಗಿ ಓಟ 3 ಮತ್ತು 4 ರಲ್ಲಿ ಭಾರತದ ನೇತ್ರ ಕುಮಾರನ್.

ಸಂಜೆ 4:45: ಹಾಕಿ - ಪುರುಷರ ಪೂಲ್ ಪಂದ್ಯದಲ್ಲಿ ಭಾರತ vs ಆಸ್ಟ್ರೇಲಿಯಾ.

ಸಂಜೆ 6:30: ಬ್ಯಾಡ್ಮಿಂಟನ್ - ಕ್ವಾರ್ಟರ್‌ ಫೈನಲ್‌ನಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ ಲಕ್ಷ್ಯ ಸೇನ್.

ಸಂಜೆ 7:05: ಸೈಲಿಂಗ್ - ಪುರುಷರ ಡಿಂಗಿ ಓಟ 3 ಮತ್ತು 4 ರಲ್ಲಿ ವಿಷ್ಣು ಸರವಣನ್.

ರಾತ್ರಿ 9:40: ಅಥ್ಲೆಟಿಕ್ಸ್ - ಮಹಿಳೆಯರ 5000 ಮೀ ಸುತ್ತು 1 ರಲ್ಲಿ ಅಂಕಿತಾ ಮತ್ತು ಪಾರುಲ್ ಚೌಧರಿ.

ರಾತ್ರಿ 11:40 : ಅಥ್ಲೆಟಿಕ್ಸ್ - ಪುರುಷರ ಶಾಟ್ ಪುಟ್ ಅರ್ಹತಾ ಸುತ್ತಿನಲ್ಲಿ ತಜಿಂದರ್ಪಾಲ್ ಸಿಂಗ್ ತೂರ್. (ಇಲ್ಲಿ 21.35 ಮೀ ಅರ್ಹತಾ ಮಾನದಂಡವನ್ನು ಪೂರೈಸುವ ಕ್ರೀಡಾಪಟುಗಳು ಅಥವಾ ಕನಿಷ್ಠ 12 ಅತ್ಯುತ್ತಮ ಪ್ರದರ್ಶನಕಾರರು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.)‌

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.