ಪ್ಯಾರಿಸ್ ಒಲಿಂಪಿಕ್ಸ್: ಭಾರತ vs ಸ್ಪೇನ್ ಹಾಕಿ ಕಂಚಿನ ಪದಕ ಪಂದ್ಯ ಆರಂಭ; ನೇರ ಪ್ರಸಾರ ಹೀಗೆ ವೀಕ್ಷಿಸಿ
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತ ಮತ್ತು ಸ್ಪೇನ್ ಹಾಕಿ ತಂಡಗಳು ಕಂಚಿನ ಪದಕ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ.
ಒಲಿಂಪಿಕ್ಸ್‌ನಲ್ಲಿ 4 ದಶಕಗಳ ನಂತರ ಮೊದಲ ಬಾರಿಗೆ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡ ಭಾರತ ಹಾಕಿ ತಂಡವು, ಇಂದು ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಎದುರಿಸುತ್ತಿದೆ. ಮೂರು ವರ್ಷಗಳ ಹಿಂದೆ ಟೋಕಿಯೋದಲ್ಲಿ ಭಾರತ ತಂಡವು ಕಂಚು ಗೆದ್ದಿತ್ತು. ಇದೀಗ ಮತ್ತೊಮ್ಮೆ ಆ ಪದಕವನ್ನು ಉಳಿಸಿಕೊಳ್ಳುವ ಸವಾಲು ತಂಡದ ಮುಂದಿದೆ. ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಸ್ಪೇನ್ ವಿರುದ್ಧ ಕಂಚಿನ ಪದಕ ಪಂದ್ಯ ಆರಂಭವಾಗಿದೆ. ಹರ್ಮನ್ ಪ್ರೀತ್ ಸಿಂಗ್ ಬಳಗದ ರೋಚಕ ಪಂದ್ಯದ ನೇರಪ್ರಸಾರ ವಿವರ ಇಲ್ಲಿದೆ.
ಭಾರತ ಮತ್ತು ಸ್ಪೇನ್ ಚಿನ ಪದಕ ಪಂದ್ಯದ ಲೈವ್ ಸ್ಟ್ರೀಮಿಂಗ್ ವಿವರ
- ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತ ಮತ್ತು ಸ್ಪೇನ್ ಕಂಚಿನ ಪದಕ ಪಂದ್ಯ ಯಾವಾಗ ನಡೆಯಲಿದೆ?
ಪ್ಯಾರಿಸ್ ಒಲಿಂಪಿಕ್ಸ್ 2024ರ ಕಂಚಿನ ಪದಕಕ್ಕಾಗಿ ಭಾರತ ಮತ್ತು ಸ್ಪೇನ್ ತಂಡಗಳು ಆಗಸ್ಟ್ 8ರ ಗುರುವಾರ ಮುಖಾಮುಖಿಯಾಗಲಿವೆ. ಪಂದ್ಯವು ಸಂಜೆ 5:30ಕ್ಕೆ ಆರಂಭವಾಗಿದೆ.
- ಭಾರತ ಮತ್ತು ಸ್ಪೇನ್ ಪ್ಯಾರಿಸ್ ಒಲಿಂಪಿಕ್ಸ್ ಪಂದ್ಯವನ್ನು ಎಲ್ಲಿ ಆಡಲಾಗುತ್ತದೆ?
ಭಾರತ ಮತ್ತು ಸ್ಪೇನ್ ಪ್ಯಾರಿಸ್ ಕಂಚಿನ ಪದಕದ ಪಂದ್ಯವು ಪ್ಯಾರಿಸ್‌ನ ಯೆವೆಸ್-ಡು-ಮನೋರ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
- ಭಾರತ ಮತ್ತು ಸ್ಪೇನ್ ಪ್ಯಾರಿಸ್ ಕಂಚಿನ ಪದಕದ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
ಭಾರತ ಮತ್ತು ಸ್ಪೇನ್ ತಂಡಗಳ ನಡುವಿನ ಕಂಚಿನ ಪದಕ ಪಂದ್ಯದ ನೇರ ಪ್ರಸಾರವನ್ನು ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ವೀಕ್ಷಿಸಬಹುದು. ಇದೇ ವೇಳೆ ಜಿಯೋ ಸಿನೆಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.
ಪೂಲ್ ಹಂತದಲ್ಲಿ ಬಲಿಷ್ಠ ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಸೋಲಿಸಿದ್ದ ಭಾರತ, ಬೆಲ್ಜಿಯಂ ವಿರುದ್ಧ 1-2 ಅಂತರದಲ್ಲಿ ಸೋತು ಕ್ವಾರ್ಟರ್ ಫೈನಲ್ ತಲುಪಿತ್ತು. ಗ್ರೇಟ್ ಬ್ರಿಟನ್ ವಿರುದ್ಧದ ನಾಕೌಟ್ ಪಂದ್ಯದಲ್ಲಿ ರೋಮಾಂಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದು ಸೆಮಿಫೈನಲ್ ಸ್ಥಾನ ಭದ್ರಪಡಿಸಿಕೊಂಡಿತು. ವಿವಾದಾತ್ಮಕ ಕೆಂಪು ಕಾರ್ಡ್ ಕಾರಣದಿಂದಾಗಿ ಪ್ರಮುಖ ಡಿಫೆಂಡರ್ ಅಮಿತ್ ರೋಹಿದಾಸ್ ಅವರ ಅನುಪಸ್ಥಿತಿಯ ಹೊರತಾಗಿಯೂ, ಜರ್ಮನಿ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಅಮೋಘ ಪ್ರದರ್ಶನ ನೀಡಿತು. ಕೊನೆಯ ಹಂತದಲ್ಲಿ ರೋಚಕ ಸೋಲು ಎದುರಿಸಬೇಕಾಯ್ತು.
ಅನುಭವಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರಿಗೆ ಇದು ಕೊನೆಯ ಅಂತಾರಾಷ್ಟ್ರೀಯಪಂದ್ಯವಾಗಿದೆ. ಅವರಿಗೆ ಪರಿಪೂರ್ಣ ವಿದಾಯ ನೀಡಲು ಭಾರತವು ಪಂದ್ಯವನ್ನು ಗೆಲ್ಲುವ ಗುರಿ ಹಾಕೊಂಡಿದೆ.
ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟ 2024ರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪ್ಯಾರಿಸ್ ಒಲಿಂಪಿಕ್ಸ್: ನೀರಜ್ ಚೋಪ್ರಾ ಚಿನ್ನದ ಪದಕ ಪಂದ್ಯ, ಕಂಚಿಗಾಗಿ ಹಾಕಿ ತಂಡ ಕಣಕ್ಕೆ; ಆಗಸ್ಟ್ 8ರಂದು ಭಾರತದ ವೇಳಾಪಟ್ಟಿ