ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್; 8 ವರ್ಷಗಳ ನಂತರ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಭಾರತೀಯ ಮಹಿಳಾ ಅಥ್ಲೀಟ್ಸ್

ಪ್ಯಾರಿಸ್ ಒಲಿಂಪಿಕ್ಸ್; 8 ವರ್ಷಗಳ ನಂತರ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಭಾರತೀಯ ಮಹಿಳಾ ಅಥ್ಲೀಟ್ಸ್

Paris Olympics 2024: ಜುಲೈ 26ರಿಂದ ಶುರುವಾಗುವ ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಮಹಿಳಾ ಕ್ರೀಡಾಪಟುಗಳು ಸಾಂಪ್ರದಾಯಿಕ ಉಡುಗೆ ಸೀರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್; 8 ವರ್ಷಗಳ ನಂತರ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಭಾರತೀಯ ಮಹಿಳಾ ಅಥ್ಲೀಟ್ಸ್
ಪ್ಯಾರಿಸ್ ಒಲಿಂಪಿಕ್ಸ್; 8 ವರ್ಷಗಳ ನಂತರ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಭಾರತೀಯ ಮಹಿಳಾ ಅಥ್ಲೀಟ್ಸ್

2024ರ ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​​​ (Paris Olympic 2024) ಜುಲೈ 26 ರಿಂದ ಶುರುವಾಗಲಿದೆ. ಈ ಕ್ರೀಡಾಕೂಟ ಆಗಸ್ಟ್ 11ರ ತನಕ ಆಯೋಜನೆ ಮಾಡಲಾಗಿದೆ. ಫ್ರಾನ್ಸ್​ನ ರಾಜಧಾನಿ ಪ್ಯಾರಿಸ್​ನಲ್ಲಿ ನಡೆಯುವ ಈ ಟೂರ್ನಿಯಲ್ಲಿ ಭಾರತ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಪದಕ ಗೆಲ್ಲುವತ್ತ ಕಣ್ಣಿಟ್ಟಿದೆ. ಈ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಪ್ಯಾರಿಸ್​ನ ಸೀನ್ ನದಿಯಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನದಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.

ಟ್ರೆಂಡಿಂಗ್​ ಸುದ್ದಿ

ಉದ್ಘಾಟನಾ ಸಮಾರಂಭದಲ್ಲಿ ಸುಮಾರು 10,500 ಕ್ರೀಡಾಪಟುಗಳನ್ನು ದೋಣಿಗಳಲ್ಲಿ 6 ಕಿಲೋಮೀಟರ್ (3.7 ಮೈಲುಗಳು) ಸೀನ್ ನದಿಗೆ ಸ್ವಾಗತಿಸಲಾಗುತ್ತದೆ. ಪ್ರೇಕ್ಷಕರು ದಡದಿಂದ ವೀಕ್ಷಿಸಲು ಅವಕಾಶ ಇದೆ. ಆದರೆ, ಈ ಸಮಾರಂಭದಲ್ಲಿ ಭಾರತೀಯ ಪಡೆ ಹೊಸ ಶೈಲಿಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದೆ. 8 ವರ್ಷಗಳ ನಂತರ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ದೇಶದ ಮಹಿಳಾ ಕ್ರೀಡಾಪಟುಗಳು ಸಾಂಪ್ರದಾಯಿಕ ಭಾರತೀಯ ಸೀರೆಯುಟ್ಟು ಕಾಣಿಸಿಕೊಳ್ಳಲಿದ್ದಾರೆ.

ಟೈಮ್ಸ್​ ಆಫ್ ವರದಿ ಪ್ರಕಾರ ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಮಹಿಳಾ ಅಥ್ಲೀಟ್‌ಗಳು ಸೀರೆ ಧರಿಸಲಿದ್ದಾರೆ. ಆದರೆ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) ಲೋಗೋ ಹೊಂದಿರುವ ಸಾಂಪ್ರದಾಯಿಕ ನೀಲಿ ಬ್ಲೇಜರ್ ಡ್ರೆಸ್ ಕೋಡ್‌ನ ಭಾಗವಾಗಿರುವುದಿಲ್ಲ. ಸೀರೆಯು ಮ್ಯಾಚಿಂಗ್ ಬ್ಲೌಸ್‌ನೊಂದಿಗೆ ಸಂಯೋಜಿಸಲ್ಪಡುತ್ತದೆ. ರವಿಕೆ ಕೇಸರಿ ಬಣ್ಣದ್ದಾಗಿರುತ್ತದೆ. ವರದಿಗಳ ಪ್ರಕಾರ, ಐಒಎ ಸಹ ವಿನ್ಯಾಸವನ್ನು ಅನುಮೋದಿಸಿದೆ.

2016ರ ಒಲಿಂಪಿಕ್ಸ್‌ನಲ್ಲೂ ಸೀರೆ ಉಟ್ಟಿದ್ದರು

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ಭಾರತೀಯ ಮಹಿಳಾ ಅಥ್ಲೀಟ್‌ಗಳು ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಆದಾಗ್ಯೂ, ಆ ಸಮಯದಲ್ಲಿ ಸೀರೆಯೊಂದಿಗೆ ನೀಲಿ ಬ್ಲೇಜರ್ ಕೂಡ ಡ್ರೆಸ್ ಕೋಡ್‌ನ ಒಂದು ಭಾಗವಾಗಿತ್ತು. 2021ರ ಟೋಕಿಯೊ ಕ್ರೀಡಾಕೂಟದಲ್ಲಿ, ಮಹಿಳಾ ಕ್ರೀಡಾಪಟುಗಳು ಜಾಕೆಟ್‌ಗಳೊಂದಿಗೆ ಸಾಂಪ್ರದಾಯಿಕ ಗೋಲ್ಡನ್ ಸಲ್ವಾರ್ ಸೂಟ್‌ಗಳನ್ನು ಧರಿಸಿದ್ದರು.

ಆದರೆ ಈ ಬಾರಿ ಪುರುಷ ಅಥ್ಲೀಟ್‌ಗಳು ಪ್ಯಾರಿಸ್‌ನಲ್ಲಿ ಸಾಂಪ್ರದಾಯಿಕ ಕುರ್ತಾ-ಪೈಜಾಮವನ್ನು ಧರಿಸಲಿದ್ದಾರೆ. ಇದು ಕ್ರೀಡಾಂಗಣದ ಹೊರಗೆ ನಡೆಯಲಿರುವ ಮೊದಲ ಒಲಿಂಪಿಕ್ ಉದ್ಘಾಟನಾ ಸಮಾರಂಭವಾಗಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಈ ಹಿಂದೆಂದೂ ಸಂಭವಿಸಿರಲಿಲ್ಲ.

1 ಚಿನ್ನ, 2 ಬೆಳ್ಳಿ, 4 ಕಂಚು ಗೆದ್ದಿದ್ದ ಭಾರತ

2020ರ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಭಾರತ ಒಟ್ಟು 7 ಪದಕಕ್ಕೆ ಮುತ್ತಿಕ್ಕಿತ್ತು. ಮೆಡಲ್ ಪಟ್ಟಿಯಲ್ಲಿ ಒಟ್ಟು 48ನೇ ಸ್ಥಾನದಲ್ಲಿತ್ತು. ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದು ಭಾರತ. ಈ ಬಾರಿ ಈ ಸಂಖ್ಯೆಯನ್ನು ವಿಸ್ತರಿಸಲು ಸನ್ನದ್ಧಗೊಂಡಿದೆ. ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಅಮೆರಿಕ 113 ಪದಕ ಗೆದ್ದಿತ್ತು. 39 ಚಿನ್ನ, 41 ಬೆಳ್ಳಿ, 33 ಕಂಚು ಪದಕ ಗೆದ್ದಿತ್ತು. ಚೀನಾ ಎರಡನೇ ಸ್ಥಾನದಲ್ಲಿತ್ತು. 38 ಚಿನ್ನ, 32 ಬೆಳ್ಳಿ, 18 ಕಂಚಿನ ಪದಕಗಳಿಗೆ ಮುತ್ತಿಕ್ಕಿತ್ತು. ಜಪಾನ್ 27 ಚಿನ್ನ, 14 ಬೆಳ್ಳಿ, 17 ಬೆಳ್ಳಿ ಪದಕಗಳೊಂದಿಗೆ 3ನೇ ಸ್ಥಾನ ಪಡೆದಿತ್ತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)