ಪ್ಯಾರಿಸ್ ಒಲಿಂಪಿಕ್ಸ್: ಭಾರತದ 117 ಕ್ರೀಡಾಪಟುಗಳು ಸಜ್ಜು, ಸ್ಪರ್ಧಿಗಳು ಮತ್ತು ಆಟದ ವಿವರ ಇಲ್ಲಿದೆ
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್-2024 ರಲ್ಲಿ ಭಾಗವಹಿಸಲು ಕ್ರೀಡಾ ಸಚಿವಾಲಯವು ಅನುಮೋದಿಸಿದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ವಿಶ್ವದ ಅತಿ ದೊಡ್ಡ ಕ್ರೀಡಾಕೂಟ ಪ್ಯಾರಿಸ್ ಒಲಿಂಪಿಕ್ಸ್ಗೆ ಭಾರತ ಸಜ್ಜಾಗಿದೆ. ಜುಲೈ 26 ರಿಂದ ಪ್ರಾರಂಭವಾಗುವ ಕ್ರೀಡಾ ಹಬ್ಬಕ್ಕೆ ದೇಶದ 117 ಕ್ರೀಡಾಪಟುಗಳ ಸೇನೆ ಸಿದ್ಧಗೊಂಡಿದೆ. ಕ್ರೀಡಾ ಗ್ರಾಮದಲ್ಲಿ ವಿವಿಧ ದೇಶಗಳ ಎದುರಾಳಿಗಳೊಂದಿಗೆ ಕಾದಾಟ ನಡೆಸಲು ಈ ಸೇನೆ ಸಜ್ಜಾಗಿದೆ. ಟೊಕಿಯೊ ಒಲಿಂಪಿಕ್ಸ್ನಲ್ಲಿ ದಾಖಲೆಯ ಪದಕ ಗೆದ್ದು ಅಭಿಯಾನ ಮುಗಿಸಿದ್ದ ಭಾರತ ಈ ಬಾರಿ ಎರಡಂಕಿ ದಾಟಬೇಕೆಂದು ಪಣತೊಟ್ಟಿದೆ. ಏಷ್ಯನ್ ಗೇಮ್ಸ್ನಲ್ಲಿ 100+ ಪದಕ ಗೆದ್ದಿದ್ದ ಭಾರತ, ಒಲಿಂಪಿಕ್ಸ್ನಲ್ಲೂ 10+ ಪದಕ ಗೆಲ್ಲಬೇಕೆಂಬ ಧ್ಯೇಯದೊಂದಿಗೆ ಕಣಕ್ಕಳಿಯುತ್ತಿದೆ.
ಟೊಕಿಯೊ ಒಲಿಂಪಿಕ್ಸ್ಗೆ ಹೋಲಿಸಿದರೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಸಂಖ್ಯೆ ಕಡಿಮೆ. ಕ್ರೀಡಾ ಸಚಿವಾಲಯ ಪೂರ್ಣ ಪಟ್ಟಿ ಬಿಡುಗಡೆ ಮಾಡಿದ್ದು, ಜುಲೈ 26ರಿಂದ ಶುರುವಾಗುವ ಕ್ರೀಡಾಕೂಟದಲ್ಲಿ 117 ಅಥ್ಲೀಟ್ಸ್ ಭಾರತ ಪ್ರತಿನಿಧಿಸಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಖ್ಯಸ್ಥೆ ಪಿಟಿ ಉಷಾ ತಿಳಿಸಿದ್ದಾರೆ. ಕ್ರೀಡಾಪಟುಗಳ ಜೊತೆಗೆ 140 ಸಹಾಯಕ ಸಿಬ್ಬಂದಿ (ಒಟ್ಟು 257) ಕ್ರೀಡಾಗ್ರಾಮ ತಲುಪಲಿದ್ದಾರೆ. ಟೊಕಿಯೊ ಒಲಿಂಪಿಕ್ಸ್ಗೆ 121 ಕ್ರೀಡಾಪಟುಗಳು ಸೇರಿ 228 ಮಂದಿ ಪ್ರಯಾಣಿಸಿದ್ದರು.
117 ಕ್ರೀಡಾಪಟುಗಳ ಪೈಕಿ 47 ಮಹಿಳೆಯರು ಮತ್ತು 70 ಪುರುಷರ ಕ್ರೀಡಾಪಟುಗಳು ಕ್ರೀಡಾಕೂಡದ ಭಾಗವಾಗಿದ್ದಾರೆ. ಅಥ್ಲೆಟಿಕ್ಸ್ನಲ್ಲಿ 29 ಕ್ರೀಡಾಪಟುಗಳೊಂದಿಗೆ ಅತಿ ದೊಡ್ಡ ಪ್ರಾತಿನಿಧ್ಯ ಹೊಂದಿದೆ. ಇದೇ ಮೊದಲ ಬಾರಿಗೆ ಸಹಾಯಕ ಸಿಬ್ಬಂದಿಯೂ ಒಲಿಂಪಿಕ್ಸ್ಗೆ ತೆರಳುತ್ತಿದ್ದು, 67 ಕೋಚ್ಗಳು ಮತ್ತು 72 ಸಹಾಯಕ ಸಿಬ್ಬಂದಿ ಪ್ರಯಾಣ ಬೆಳೆಸಲಿದ್ದಾರೆ. 2016 ಮತ್ತು 2020ರ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿದ್ದ ಪಿವಿ ಸಿಂಧು ಮತ್ತು ಶರತ್ ಕಮಲ್ ಈ ಬಾರಿ ಭಾರತದ ಧ್ವಜಧಾರಿಗಳಾಗಿದ್ದಾರೆ.s
ಕ್ರೀಡಾ ಸಚಿವಾಲಯವು ಅನುಮೋದಿಸಿದ ಪ್ಯಾರಿಸ್ ಒಲಿಂಪಿಕ್ಸ್ ಭಾಗವಹಿಸುವವರ ಸಂಪೂರ್ಣ ಪಟ್ಟಿ ಇಲ್ಲಿದೆ
ಅಥ್ಲೆಟಿಕ್ಸ್
- ಸರ್ವೇಶ ಕುಶಾರೆ - ಪುರುಷರ ಹೈ ಜಂಪ್
- ಸೂರಜ್ ಪನ್ವಾರ್ - ಮ್ಯಾರಥಾನ್ ಓಟದ ನಡಿಗೆ ಮಿಶ್ರ ರಿಲೇ
- ಅಕ್ಷದೀಪ್ ಸಿಂಗ್ - ಪುರುಷರ 20 ಕಿಮೀ ರೇಸ್‌ವಾಕ್
- ವಿಕಾಸ್ ಸಿಂಗ್ - ಪುರುಷರ 20 ಕಿಮೀ ರೇಸ್‌ವಾಕ್
- ಪರಮ್ಜೀತ್ ಬಿಷ್ತ್ - ಪುರುಷರ 20 ಕಿಮೀ ರೇಸ್‌ವಾಕ್
- ಕಿಶೋರ್ ಜೆನಾ - ಪುರುಷರ ಜಾವೆಲಿನ್ ಥ್ರೋ
- ನೀರಜ್ ಚೋಪ್ರಾ - ಪುರುಷರ ಜಾವೆಲಿನ್ ಥ್ರೋ
- ಮಹಮ್ಮದ್ ಅನಸ್ - ಪುರುಷರ 4x400 ಮೀ ರಿಲೇ
- ಮಹಮ್ಮದ್ ಅಜ್ಮಲ್ - ಪುರುಷರ 4x400 ಮೀ ರಿಲೇ
- ಅಮೋಜ್ ಜಾಕೋಬ್ - ಪುರುಷರ 4x400 ಮೀ ರಿಲೇ
- ಸಂತೋಷ್ ತಮಿಳರಸನ್ - ಪುರುಷರ 4x400 ಮೀ ರಿಲೇ
- ರಾಜೇಶ್ ರಮೇಶ್ - ಪುರುಷರ 4x400 ಮೀ ರಿಲೇ
- ಅವಿನಾಶ್ ಸಾಬಳೆ - ಪುರುಷರ 3000ಮೀ ಸ್ಟೀಪಲ್‌ಚೇಸ್
- ತಜಿಂದರ್ಪಾಲ್ ಸಿಂಗ್ ತೂರ್ - ಪುರುಷರ ಶಾಟ್ ಪಟ್
- ಅಬ್ದುಲ್ಲಾ ಅಬೂಬಕರ್ - ಪುರುಷರ ಟ್ರಿಪಲ್ ಜಂಪ್
- ಪ್ರವೀಲ್ ಚಿತ್ರವೇಲ್ - ಪುರುಷರ ಟ್ರಿಪಲ್ ಜಂಪ್
- ಜೆಸ್ವಿನ್ ಆಲ್ಡ್ರಿನ್ - ಪುರುಷರ ಲಾಂಗ್ ಜಂಪ್
- ಮಿಜೋ ಚಾಕೋ ಕುರಿಯನ್ - ಎಪಿ ಅಥ್ಲೀಟ್ (ಮೀಸಲು ಕ್ರೀಡಾಪಟು)
- ಅಣ್ಣು ರಾಣಿ - ಮಹಿಳೆಯರ ಜಾವೆಲಿನ್ ಥ್ರೋ
- ಪಾರುಲ್ ಚೌಧರಿ - ಮಹಿಳೆಯರ 3000ಮೀ ಸ್ಟೀಪಲ್ ಚೇಸ್, ಮಹಿಳೆಯರ 5000ಮೀ
- ಕಿರಣ್ ಪಹಲ್ - ಮಹಿಳೆಯರ 400ಮೀ, ಮಹಿಳೆಯರ 4x400ಮೀ ರಿಲೇ
- ಜ್ಯೋತಿ ಯರ್ರಾಜಿ - ಮಹಿಳೆಯರ 100 ಮೀ ಹರ್ಡಲ್ಸ್
- ಅಂಕಿತಾ ಧ್ಯಾನಿ - ಮಹಿಳೆಯರ 5000 ಮೀ
- ಪ್ರಿಯಾಂಕಾ ಗೋಸ್ವಾಮಿ- ಮಹಿಳೆಯರ 20 ಕಿ.ಮೀ ರೇಸ್ ವಾಕ್, ಮ್ಯಾರಥಾನ್ ಓಟದ ನಡಿಗೆ ಮಿಶ್ರ ರಿಲೇ
- ಜ್ಯೋತಿಕಾ ಶ್ರೀ ದಂಡಿ - ಮಹಿಳೆಯರ 4x400 ಮೀ ರಿಲೇ
- ಸುಭಾ ವೆಂಕಟೇಶನ್ - ಮಹಿಳೆಯರ 4x400 ಮೀ ರಿಲೇ
- ವಿತ್ಯಾ ರಾಮರಾಜ್ - ಮಹಿಳೆಯರ 4x400 ಮೀ ರಿಲೇ
- ಪೂವಮ್ಮ ಎಂ.ಆರ್ - ಮಹಿಳೆಯರ 4x400 ಮೀ ರಿಲೇ
- ಪ್ರಾಚಿ - ಎಪಿ ಕ್ರೀಡಾಪಟು (ಮೀಸಲು ಕ್ರೀಡಾಪಟು)
ಆರ್ಚರಿ
- ಧೀರಜ್ ಬೊಮ್ಮದೇವರ - ಪುರುಷರ ರಿಕರ್ವ್
- ತರುಣದೀಪ್ ರೈ - ಪುರುಷರ ರಿಕರ್ವ್
- ಪ್ರವೀಣ್ ಜಾಧವ್ - ಪುರುಷರ ರಿಕರ್ವ್
- ಭಜನ್ ಕೌರ್ - ಮಹಿಳೆಯರ ರಿಕರ್ವ್
- ದೀಪಿಕಾ ಕುಮಾರಿ - ಮಹಿಳೆಯರ ರಿಕರ್ವ್
- ಅಂಕಿತಾ ಭಕತ್ - ಮಹಿಳೆಯರ ರಿಕರ್ವ್
ಬ್ಯಾಡ್ಮಿಂಟನ್
- ಹೆಚ್ಎಸ್ ಪ್ರಣಯ್ - ಪುರುಷರ ಸಿಂಗಲ್ಸ್
- ಲಕ್ಷ್ಯ ಸೇನ್ - ಪುರುಷರ ಸಿಂಗಲ್ಸ್
- ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ, ಚಿರಾಗ್ ಶೆಟ್ಟಿ - ಪುರುಷರ ಡಬಲ್ಸ್
- ಪಿವಿ ಸಿಂಧು - ಮಹಿಳಾ ಸಿಂಗಲ್ಸ್
- ಅಶ್ವಿನಿ ಪೊನ್ನಪ್ಪ, ತನಿಶಾ ಕ್ರಾಸ್ಟೊ - ಮಹಿಳೆಯರ ಡಬಲ್ಸ್
ಬಾಕ್ಸಿಂಗ್
- ನಿಶಾಂತ್ ದೇವ್ - 71 ಕೆ.ಜಿ
- ಅಮಿತ್ ಪಂಗಲ್ - 51 ಕೆ.ಜಿ
- ನಿಖತ್ ಜರೀನ್ - 50 ಕೆ.ಜಿ
- ಪ್ರೀತಿ ಪವಾರ್ - 54 ಕೆ.ಜಿ
- ಜೈಸ್ಮಿನ್ ಲಂಬೋರಿಯಾ - 57 ಕೆ.ಜಿ
- ಲೊವ್ಲಿನಾ ಬೊರ್ಗೊಹೈನ್ - 75 ಕೆ.ಜಿ
ಕುದುರೆ ಸವಾರಿ (ಈಕ್ವೆಸ್ಟ್ರಿಯನ್)
- ಅನುಷ್ ಅಗರ್ವಾಲಾ - ಡ್ರೆಸ್ಸೇಜ್
ಹಾಕಿ
ಪಿಆರ್ ಶ್ರೀಜೇಶ್, ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್, ಸಂಜಯ್, ರಾಜ್‌ಕುಮಾರ್ ಪಾಲ್, ಶಂಶೇರ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನದೀಪ್ ಸಿಂಗ್, ಗುರ್ಜಂತ್ ಸಿಂಗ್.
ಪುರುಷರ ಹಾಕಿ ತಂಡ ಮೀಸಲು ಆಟಗಾರರು: ನೀಲಕಂಠ ಶರ್ಮಾ, ಜುಗರಾಜ್ ಸಿಂಗ್, ಕ್ರಿಶನ್ ಬಹದ್ದೂರ್ ಪಾಠಕ್.
ಜೂಡೋ
- ತುಲಿಕಾ ಮಾನ್ - ಮಹಿಳೆಯರ +78 ಕೆ.ಜಿ
ರೋಯಿಂಗ್
- ಬಲರಾಜ್ ಪನ್ವಾರ್ – ಪುರುಷರ ಸಿಂಗಲ್ ಸ್ಕಲ್
ಸೈಲಿಂಗ್
- ವಿಷ್ಣು ಸರವಣನ್ - ಪುರುಷರ ಡಿಂಗಿ
- ನೇತ್ರಾ ಕುಮನನ್ - ಮಹಿಳೆಯರ ಡಿಂಗಿ
ಶೂಟಿಂಗ್
- ಸಂದೀಪ್ ಸಿಂಗ್ - 10 ಮೀ ಏರ್ ರೈಫಲ್
- ಅರ್ಜುನ್ ಬಾಬುತಾ - 10 ಮೀ ಏರ್ ರೈಫಲ್
- ಐಶ್ವರಿ ತೋಮರ್ - 50 ಮೀ ರೈಫಲ್ 3ಪಿ
- ಸ್ವಪ್ನಿಲ್ ಕುಸಲೆ - 50 ಮೀ ರೈಫಲ್ 3ಪಿ
- ಸರಬ್ಜೋತ್ ಸಿಂಗ್ - 10 ಮೀ ಏರ್ ಪಿಸ್ತೂಲ್
- ಅರ್ಜುನ್ ಚೀಮಾ - 10 ಮೀ ಏರ್ ಪಿಸ್ತೂಲ್
- ಅನೀಶ್ ಭನ್ವಾಲ್ - 25ಮೀ ರ್ಯಾಪಿಡ್ ಫೈಯರ್ ಪಿಸ್ತೂಲ್
- ವಿಜಯವೀರ್ ಸಿಧು - 25ಮೀ ರ್ಯಾಪಿಡ್ ಫೈಯರ್ ಪಿಸ್ತೂಲ್
- ಪೃಥ್ವಿರಾಜ್ ತೊಂಡೈಮಾನ್ - ಪುರುಷರ ಬಲೆ
- ಅನಂತಜೀತ್ ಸಿಂಗ್ ನರುಕಾ - ಪುರುಷರ ಸ್ಕೀಟ್, ಸ್ಕೀಟ್ ಮಿಶ್ರ ತಂಡ
- ಎಲವೆನಿಲ್ ವಲರಿವನ್, ರಮಿತಾ - 10 ಮೀ ಏರ್ ರೈಫಲ್
- ಜರಡಿ ಹಿಡಿಯಿರಿ ಕೌರ್ ಸಾಮ್ರಾ - 50ಮೀ ರೈಫಲ್ 3ಪಿ
- ಅಂಜುಮ್ ಮೌದ್ಗಿಲ್ - 50ಮೀ ರೈಫಲ್ 3ಪಿ
- ರಿದಮ್ ಸಾಂಗ್ವಾನ್ - 10 ಮೀ ಏರ್ ಪಿಸ್ತೂಲ್
- ಮನು ಭಾಕರ್ - 10ಮೀ ಏರ್ ಪಿಸ್ತೂಲ್, 25ಮೀ ಪಿಸ್ತೂಲ್
- ಇಶಾ ಸಿಂಗ್ - 25 ಮೀ ಪಿಸ್ತೂಲ್
- ರಾಜೇಶ್ವರಿ ಕುಮಾರಿ - ಮಹಿಳೆಯರ ಬಲೆ
- ಶ್ರೇಯಸಿ ಸಿಂಗ್ - ಮಹಿಳೆಯರ ಬಲೆ
- ಮಹೇಶ್ವರಿ ಚೌಹಾಣ್ - ಮಹಿಳೆಯರ ಸ್ಕೀಟ್, ಸ್ಕೀಟ್ ಮಿಶ್ರ ತಂಡ
- ರೈಜಾ ಧಿಲ್ಲೋನ್ - ಮಹಿಳಾ ಸ್ಕೀಟ್
ಈಜು
- ಶ್ರೀಹರಿ ನಟರಾಜ್ – ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್
- ಧಿನಿಧಿ ದೇಸಿಂಗು – ಮಹಿಳೆಯರ 200 ಮೀ ಫ್ರೀಸ್ಟೈಲ್
ಟೇಬಲ್ ಟೆನಿಸ್
- ಪುರುಷರು: ಶರತ್ ಕಮಲ್, ಹರ್ಮೀತ್ ದೇಸಾಯಿ, ಮಾನವ್ ಠಕ್ಕರ್.
- ಮಹಿಳೆಯರು: ಮಾಣಿಕಾ ಬಾತ್ರಾ, ಶ್ರೀಜಾ ಅಕುಲಾ, ಅರ್ಚನಾ ಕಾಮತ್.
- ಟೇಬಲ್ ಟೆನಿಸ್ ಮೀಸಲು: ಸತ್ಯನ್ ಜಿ, ಅಹಿಕಾ ಮುಖರ್ಜಿ
ಟೆನಿಸ್
- ರೋಹನ್ ಬೋಪಣ್ಣ, ಎನ್ ಶ್ರೀರಾಮ್ ಬಾಲಾಜಿ – ಪುರುಷರ ಡಬಲ್ಸ್
- ಸುಮಿತ್ ನಗಲ್ – ಪುರುಷರ ಸಿಂಗಲ್ಸ್
ವೇಟ್ ಲಿಫ್ಟಿಂಗ್
- ಮೀರಾಬಾಯಿ ಚಾನು – ಮಹಿಳೆಯರ 49ಕೆ.ಜಿ
ಕುಸ್ತಿ
- ಅಮನ್ ಸೆಹ್ರಾವತ್ - ಪುರುಷರ 57 ಕೆ.ಜಿ
- ವಿನೇಶ್ ಫೋಗಟ್ - ಮಹಿಳೆಯರ 50 ಕೆ.ಜಿ
- ಆಂಟಿಮ್ ಪಂಗಲ್ - ಮಹಿಳೆಯರ 53 ಕೆ.ಜಿ
- ಅಂಶು ಮಲಿಕ್ – ಮಹಿಳೆಯರ 57 ಕೆ.ಜಿ
- ನಿಶಾ ದಹಿಯಾ – ಮಹಿಳೆಯರ 68 ಕೆ.ಜಿ
- ರಿತಿಕಾ ಹೂಡಾ - ಮಹಿಳೆಯರ 76 ಕೆ.ಜಿ
