ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ
ಕನ್ನಡ ಸುದ್ದಿ  /  ಕ್ರೀಡೆ  /  ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

Bengaluru Bulls : ಮೇ 11 ರಂದು ಬೆಂಗಳೂರು ಬುಲ್ಸ್ ಕಬಡ್ಡಿ ಟ್ರಯಲ್ಸ್‌ ನಡೆಸಲಿದ್ದು, ತಂಡದ ಭಾಗವಾಗಲು ಸುವರ್ಣಾವಕಾಶ ನೀಡಿದೆ. ಟ್ರಯಲ್ಸ್ ನಡೆಯುವ ದಿನಾಂಕ, ಸಮಯ, ಷರತ್ತುಗಳ ವಿವರ ಇಲ್ಲಿದೆ.

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ
ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಪ್ರೊ ಕಬಡ್ಡಿ ಲೀಗ್​ ಸೀಸನ್​-10 (Pro Kabaddi League 2024) ಮಾರ್ಚ್​ 1ಕ್ಕೆ ಮುಕ್ತಾಯಗೊಂಡಿತು. ಹೈದರಾಬಾದ್​ನ ಗಚ್ಚಿಬೋಲಿಯ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್​ನಲ್ಲಿ ನಡೆದ ಹರ್ಯಾಣ ಸ್ಟೀಲರ್ಸ್ ವಿರುದ್ದದ ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟನ್​ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತು. 10ನೇ ಆವೃತ್ತಿಯ ಪಿಕೆಎಲ್​ನಲ್ಲಿ ಬೆಂಗಳೂರು ಬುಲ್ಸ್ (Bengaluru Bulls) ಅತ್ಯಂತ ಕೆಟ್ಟ ಪ್ರದರ್ಶನ ನೀಡಿ, ಲೀಗ್​ನಿಂದಲೇ ಹೊರಬಿತ್ತು. 22 ಪಂದ್ಯಗಳಲ್ಲಿ 8 ಗೆಲುವು 12 ಸೋಲನುಭವಿಸಿತು. 2 ಪಂದ್ಯಗಳಲ್ಲಿ ಟೈ ಸಾಧಿಸಿದ ಬುಲ್ಸ್, 53 ಅಂಕ ಪಡೆದು 8ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ಇದೀಗ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ಗೆ ಬೆಂಗಳೂರು ಬುಲ್ಸ್​ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಅದಕ್ಕಾಗಿ 18 ರಿಂದ 27ರ ವಯಸ್ಸಿನ ಯುವ ಆಟಗಾರರ ಹುಡುಕಾಟ ನಡೆಸುತ್ತಿದೆ. ನಿಮಗೂ ಬುಲ್ಸ್​ ತಂಡ ಸೇರುವ ಕನಸಿದ್ದರೆ, ಇಲ್ಲಿದೆ ನೋಡಿ ಸುವರ್ಣಾವಕಾಶ. ಬೆಂಗಳೂರು ಬುಲ್ಸ್ ತಂಡ ಸೇರಬೇಕೆಂಬ ಕನಸೊತ್ತಿರುವ ಆಟಗಾರರಿಗೆ ಫ್ರಾಂಚೈಸಿ ಸುವರ್ಣಾವಕಾಶ ನೀಡಿದೆ. ಫ್ರಾಂಚೈಸಿ ತನ್ನ ಅಧಿಕೃತ ಖಾತೆಯಲ್ಲಿ ಘೋಷಣೆ ಹೊರಡಿಸಿದೆ. ಟ್ರಯಲ್ಸ್​​ನಲ್ಲಿ ಭಾಗವಹಿಸಲು ದಿನಾಂಕ, ಸಮಯ, ನಿಯಮ ಮತ್ತು ಷರತ್ತುಗಳನ್ನು ಹೊರಡಿಸಿದೆ.

ಟ್ರಯಲ್​ ನಡೆಯುವ ದಿನಾಂಕ ಮತ್ತು ಸಮಯ

ಮೇ 11ರಂದು ಬೆಳಿಗ್ಗೆ 8 ಗಂಟೆಗೆ ಟ್ರಯಲ್ಸ್ ನಡೆಯಲಿದೆ.

ಟ್ರಯಲ್​ ನಡೆಯುವ ಸ್ಥಳ

ಸೇಂಟ್ ಜೋಸೆಫ್ಸ್ ಒಳಾಂಗಣ ಬಾಸ್ಕೆಟ್​ಬಾಲ್ ಕೋರ್ಟ್-36, ಲ್ಯಾಂಗ್​ಫೋರ್ಡ್​ ರಸ್ತೆ, ಲ್ಯಾಂಗ್​ಫೋರ್ಡ್​ ಗಾರ್ಡನ್ಸ್​ ಬೆಂಗಳೂರು, ಕರ್ನಾಟಕ 560027.

ನಿಯಮ ಮತ್ತು ಷರತ್ತುಗಳು

  1. 18 ರಿಂದ 27ರ ವಯಸ್ಸಿನ ಆಟಗಾರರು ಟ್ರಯಲ್ಲಿನಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ.
  2. ಆಟಗಾರರು ಎಕೆಎಫ್​ಐ (ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ) ನೊಂದಣಿಯಾಗಿಬೇಕು ಅಥವಾ ಎಕೆಎಫ್​ಐ ನೋಂದಣಿಗೆ ಅರ್ಜಿ ಸಲ್ಲಿಸಿರಬೇಕು. ದಯವಿಟ್ಟು ಎಕೆಎಫ್​ಐ ಕಾರ್ಡ್ ಮತ್ತು ಆಧಾರ್​ ಕಾರ್ಡ್ ಅನ್ನು ತರತಕ್ಕದ್ದು.
  3. ಬೆಂಗಳೂರು ಬುಲ್ಸ್ ತಂಡದ ಫ್ರಾಂಚೈಸ್, ಪ್ರೋ ಕಬಡ್ಡಿ ಲೀಗ್​ ನಿಗದಿಪಡಿಸಿದ ನಿಯಮಗಳಿಗೆ ಬದ್ಧವಾಗಿದೆ. ಇದು ಡೋಪಿಂಗ್ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮಗಳನ್ನು ಒಳಗೊಂಡಿದೆ. ಶಂಕಿತ ಯಾವುದೇ ಆಟಗಾರನನ್ನು ಪ್ರಕ್ರಿಯೆಗಳಿಂದ ಅನರ್ಹಗೊಳಿಸಲಾಗುತ್ತದೆ. ಯಾದೃಚ್ಛಿಕ ಪರೀಕ್ಷೆ ನಡೆಸಲಾಗುವುದು.
  4. ಫ್ರಾಂಚೈಸ್ ತನಗೆ ತಕ್ಕಂತೆ ಆಟಗಾರರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದೆ. ಫ್ರಾಂಚೈಸಿನ ನಿರ್ಧಾರವು ಅಂತಿಮವಾಗಿರುತ್ತದೆ. ಮತ್ತು ಎಲ್ಲಾ ಭಾಗವಹಿಸುವ ಆಟಗಾರರಿಗೆ ಬದ್ಧವಾಗಿರುತ್ತದೆ. ಫ್ರಾಂಚೈಸ್ ಮ್ಯಾನೇಜ್​ಮೆಂಟ್/ಫ್ರಾಂಚೈಸ್​ ನೇಮಿಸಿದ ಪ್ರತಿನಿಧಿಗಳನ್ನು ಹೊರತುಪಡಿಸಿ ಯಾರೂ ಅಂತಿಮ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವಂತಿಲ್ಲ.
  5. ಟ್ರಯಲ್ಸ್​ನಲ್ಲಿ ಭಾಗವಹಿಸುವಾಗ ಯಾವುದೇ ಆಟಗಾರನಿಗೆ ಸಂಭವಿಸುವ/ಉಂಟಾಗುವ ಯಾವುದೇ ಗಾಯಕ್ಕೆ ಫ್ರಾಂಚೈಸಿ ಜವಾಬ್ದಾರಿಯಲ್ಲ. ಅನ್ವಯವಾಗುವಾಗ ಮಾರ್ಗಸೂಚಿಗಳ ಪ್ರಕಾರ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಆಟಗಾರನ ಸಂಪೂರ್ಣ ಹೊಣೆ ಮತ್ತು ಜಬಾಬ್ದಾರಿ ಆಗಿರುತ್ತದೆ.
  6. ಮೇಲಿನ ಆಯ್ಕೆಯ ಮಾನದಂಡಗಳು ಪ್ರೊ ಕಬಡ್ಡಿ ಸೀಸನ್​​ 11ಗಾಗಿ. ಪ್ರೊ ಕಬಡ್ಡಿ ಲೀಗ್​ ಹೊರಡಿಸಿದ ನೀತಿಗಳು/ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ. ಇದು ಭವಿಷ್ಯದಲ್ಲಿ ಬದಲಾಗಬಹುದು.

    ಇದನ್ನೂ ಓದಿ: ಮೊದಲ ಭೇಟಿಯಲ್ಲೇ ಕಿಸ್, ಹಿಟ್​ಮ್ಯಾನ್​ಗಾಗಿ ಬೆತ್ತಲೆ ಪೋಸ್ಟ್; ಮದುವೆಗೂ ಮುನ್ನ ಬ್ರಿಟಿಷ್ ಮಾಡೆಲ್​ ಜತೆ ರೋಹಿತ್​ ಶರ್ಮಾ ರೊಮ್ಯಾನ್ಸ್‌

    ಇದನ್ನೂ ಓದಿ: ತಮಿಳುನಾಡು ಕ್ರಿಕೆಟಿಗರ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಪಕ್ಷಪಾತ; ನಟರಾಜನ್ ಕೈಬಿಟ್ಟಿದ್ದಕ್ಕೆ ಮಾಜಿ ಆಟಗಾರ ಗಂಭೀರ ಆರೋಪ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.