ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಕಾಡೆ ಮಲಗಿದ ಗುಜರಾತ್ ಜೈಂಟ್ಸ್; ತಂಡದ ಕಳಪೆ ಪ್ರದರ್ಶನಕ್ಕೆ ಕಾರಣವೇನು?
ಕನ್ನಡ ಸುದ್ದಿ  /  ಕ್ರೀಡೆ  /  ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಕಾಡೆ ಮಲಗಿದ ಗುಜರಾತ್ ಜೈಂಟ್ಸ್; ತಂಡದ ಕಳಪೆ ಪ್ರದರ್ಶನಕ್ಕೆ ಕಾರಣವೇನು?

ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಕಾಡೆ ಮಲಗಿದ ಗುಜರಾತ್ ಜೈಂಟ್ಸ್; ತಂಡದ ಕಳಪೆ ಪ್ರದರ್ಶನಕ್ಕೆ ಕಾರಣವೇನು?

ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ಒಟ್ಟು 6 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ತಂಡವು ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಉಳಿದ 5 ಪಂದ್ಯಗಳಲ್ಲಿ ಸೋಲು ಕಂಡಿದೆ. ಗುಜರಾತ್ ಜೈಂಟ್ಸ್ ತಂಡ ಪಿಕೆಎಲ್ ಅಂಕಪಟ್ಟಿಯಲ್ಲಿ ಅತ್ಯಂತ ಕೆಳ ಸ್ಥಾನದಲ್ಲಿದೆ.

ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಕಾಡೆ ಮಲಗಿದ ಗುಜರಾತ್ ಜೈಂಟ್ಸ್; ಕಳಪೆ ಪ್ರದರ್ಶನಕ್ಕೆ ಕಾರಣವೇನು?
ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಕಾಡೆ ಮಲಗಿದ ಗುಜರಾತ್ ಜೈಂಟ್ಸ್; ಕಳಪೆ ಪ್ರದರ್ಶನಕ್ಕೆ ಕಾರಣವೇನು?

ಪ್ರೊ ಕಬಡ್ಡಿ ಲೀಗ್‌ನ 11ನೇ ಋತುವಿನಲ್ಲಿ ಇಲ್ಲಿಯವರೆಗೆ ಸಾಕಷ್ಟು ಅದ್ಭುತ ಪ್ರದರ್ಶನ ನೀಡಿದ ಹಲವು ತಂಡಗಳಿವೆ. ಕೆಲವು ತಂಡಗಳು ನಿರಂತರವಾಗಿ ಪಂದ್ಯಗಳನ್ನು ಗೆಲ್ಲುತ್ತಿವೆ. ಆದರೆ ಕೆಲವು ತಂಡಗಳು ಪದೇ ಪದೇ ಪಂದ್ಯಗಳನ್ನು ಸೋಲುತ್ತಿವೆ. ಈ ಋತುವಿನಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ತೋರದ ತಂಡಗಳಲ್ಲಿ ಬೆಂಗಳೂರು ಬುಲ್ಸ್ ಜೊತೆ ಗುಜರಾತ್ ಜೈಂಟ್ಸ್ ತಂಡ ಕೂಡ ಒಂದಾಗಿದೆ.

ಪಿಕೆಎಲ್ 11ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ಒಟ್ಟು 6 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು ಕೇವಲ ಒಂದು ಪಂದ್ಯವನ್ನು ಗೆದ್ದಿದ್ದಾರಷ್ಟೆ. ಉಳಿದ 5 ಪಂದ್ಯಗಳಲ್ಲಿ ತಂಡ ಸೋಲು ಕಂಡಿದೆ. ಗುಜರಾತ್ ಜೈಂಟ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಅತ್ಯಂತ ಕೆಳ ಸ್ಥಾನದಲ್ಲಿದೆ. ಈ ಋತುವಿನಲ್ಲಿ ಗುಜರಾತ್ ಜೈಂಟ್ಸ್ ಸೋಲಿಗೆ ಪ್ರಮುಖ ಕಾರಣಗಳೇನು ಎಂಬುದನ್ನು ನೋಡುವುದಾದರೆ…

1. ಪ್ರೊ ಕಬಡ್ಡಿ ಲೀಗ್ 2024 ರಲ್ಲಿ ನಾಯಕನಿಂದಲೇ ಕಳಪೆ ಪ್ರದರ್ಶನ

ಗುಜರಾತ್ ಜೈಂಟ್ಸ್ ತಂಡವು ಸೀಸನ್ ಆರಂಭಕ್ಕೂ ಮುನ್ನ ನೀರಜ್ ಕುಮಾರ್ ಅವರನ್ನು ನಾಯಕರನ್ನಾಗಿ ನೇಮಿಸಿತ್ತು. ನೀರಜ್ ಮೊದಲು ಪಾಟ್ನಾ ಪೈರೇಟ್ಸ್ ತಂಡದ ಭಾಗವಾಗಿದ್ದರು. ಆದರೆ ಈ ಬಾರಿ ಅವರನ್ನು ಗುಜರಾತ್ ಖರೀದಿಸಿತು. ಆದರೆ, ಈ ಋತುವಿನಲ್ಲಿ ನೀರಜ್ ಪ್ರದರ್ಶನ ಅಷ್ಟೊಂದು ಚೆನ್ನಾಗಿಲ್ಲ. 6 ಪಂದ್ಯಗಳಲ್ಲಿ ಕೇವಲ 5 ಅಂಕ ಗಳಿಸಿದ್ದಾರೆ. ಇದರಿಂದ ಅವರ ಕಳಪೆ ಪ್ರದರ್ಶನವನ್ನು ಅಳೆಯಬಹುದು. ತಂಡದ ನಾಯಕನೇ ಕೆಟ್ಟದಾಗಿ ಆಡುತ್ತಿದ್ದರೆ, ಅದು ಇತರ ಆಟಗಾರರ ಮೇಲೂ ಪರಿಣಾಮ ಬೀರುತ್ತದೆ. ತಂಡವನ್ನು ಸರಿಯಾಗಿ ಮುನ್ನಡೆಸಲು ಇವರಿಂದ ಸಾಧ್ಯವಾಗುತ್ತಿಲ್ಲ.

2. ರೈಡರ್ಸ್ ಫ್ಲಾಪ್ ಪ್ರದರ್ಶನ

ಪ್ರೊ ಕಬಡ್ಡಿ ಲೀಗ್ ಕಳೆದ ಋತುವಿನಲ್ಲಿ ಗುಜರಾತ್ ಜೈಂಟ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ರೈಡರ್ಸ್ ಈ ಬಾರಿ ವಿಶೇಷವಾಗಿ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತೀಕ್ ದಹಿಯಾ ಇದುವರೆಗೆ 6 ಪಂದ್ಯಗಳಲ್ಲಿ 16 ಅಂಕಗಳನ್ನು ಗಳಿಸಿದ್ದಾರೆ. ಅದೇ ರಾಕೇಶ್ ಸಂಗ್ರೋಯಾ 5 ಪಂದ್ಯಗಳಲ್ಲಿ ಕೇವಲ 15 ಅಂಕಗಳನ್ನು ಗಳಿಸಲು ಸಾಧ್ಯವಾಯಿತಷ್ಟೆ. ಇದರಿಂದ ನೀವು ರೈಡರ್‌ಗಳ ಫ್ಲಾಪ್ ಕಾರ್ಯಕ್ಷಮತೆಯ ಕಲ್ಪನೆಯನ್ನು ಪಡೆಯಬಹುದು. ರೈಡರ್‌ಗಳು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಆದರೆ, ರೈಡರ್ಸ್ ವೈಫಲ್ಯದಿಂದ ತಂಡವು ಪಂದ್ಯವನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ.

3. ಗುಮನ್ ಸಿಂಗ್ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ

ಗುಮಾನ್ ಸಿಂಗ್ ಅವರನ್ನು ಗುಜರಾತ್ ಜೈಂಟ್ಸ್ ಹರಾಜಿನಲ್ಲಿ 1 ಕೋಟಿ 97 ಲಕ್ಷ ರೂ. ಗೆ ಖರೀದಿಸಿತು. ಆದರೆ ಇಲ್ಲಿಯವರೆಗೆ ಆ ನಿರೀಕ್ಷೆಯನ್ನು ತಲುಪಲು ಅವರಿಗೆ ಸಾಧ್ಯವಾಗಿಲ್ಲ. ಗುಮನ್ ಸಿಂಗ್ 6 ಪಂದ್ಯಗಳಲ್ಲಿ 40 ಅಂಕಗಳನ್ನು ಮಾತ್ರ ಪಡೆದಿದ್ದಾರೆ. ಅವರ ಸರಾಸರಿ ಏಳೂ ಇಲ್ಲ. ತಂಡದ ಅತ್ಯಂತ ದುಬಾರಿ ಆಟಗಾರನು ಸಹ ಪ್ರದರ್ಶನ ನೀಡಲು ಸಾಧ್ಯವಾಗದಿದ್ದಾಗ, ತಂಡವು ಪ್ರಗತಿ ಕೂಡ ಕಡಿಮೆ ಆಗುತ್ತದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.