PKL 11 Playoffs: ಪ್ರೊ ಕಬಡ್ಡಿ ಲೀಗ್ ಪ್ಲೇಆಫ್, ಫೈನಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಸ್ಥಳ, ಸಮಯ, ದಿನಾಂಕದ ವಿವರ ಹೀಗಿದೆ
Pro Kabaddi League Season 11: ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಪ್ಲೇಆಫ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ದಿನಾಂಕ ಪ್ರಕಟವಾಗಿದೆ. ಡಿಸೆಂಬರ್ 26ರಿಂದ 29ರ ತನಕ ಈ ಪಂದ್ಯಗಳು ನಡೆಯಲಿವೆ.
11ನೇ ಆವೃತ್ತಿಯ ಪ್ರೊ ಕಬಡ್ಡಿ (Pro Kabaddi League Season 11) ಲೀಗ್‌ನ ಪ್ಲೇಆಫ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ದಿನಾಂಕ ಘೋಷಣೆಯಾಗಿದೆ. ಮಾರ್ಕ್ಯೂ ಲೀಗ್‌ನ ಸಂಘಟಕರಾದ ಮಶಾಲ್ ಸ್ಪೋರ್ಟ್ಸ್ ಖಚಿತಪಡಿಸಿದ್ದು, 2024ರ ಡಿಸೆಂಬರ್ 26 ರಿಂದ 29ರ ತನಕ ಪುಣೆಯ ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು (PKL 11 Playoffs) ಜರುಗಲಿವೆ. ಲೀಗ್ ಹಂತದಲ್ಲಿ ಅಗ್ರ 2 ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಆದರೆ 3ನೇ, 4ನೇ, 5ನೇ ಮತ್ತು 6ನೇ ಸ್ಥಾನ ಪಡೆದ ತಂಡಗಳು ಡಿಸೆಂಬರ್ 26ರಂದು ಎಲಿಮಿನೇಟರ್ ಹಂತದಲ್ಲಿ ಸೆಣಸಾಟ ನಡೆಸಲಿವೆ.
3ನೇ ಸ್ಥಾನ ಪಡೆಯುವ ತಂಡವು ಎಲಿಮಿನೇಟರ್ 1ರಲ್ಲಿ 6ನೇ ಸ್ಥಾನ ಪಡೆಯುವ ತಂಡವನ್ನು ಎದುರಿಸಲಿದೆ. ಲೀಗ್ ಹಂತವನ್ನು ನಾಲ್ಕನೇ ಸ್ಥಾನದಲ್ಲಿ ಕೊನೆಗೊಳಿಸುವ ತಂಡವು ಎಲಿಮಿನೇಟರ್ 2ರಲ್ಲಿ 5ನೇ ಸ್ಥಾನ ಪಡೆಯುವ ತಂಡದೊಂದಿಗೆ ಮುಖಾಮುಖಿಯಾಗಲಿದೆ. ಎಲಿಮಿನೇಟರ್ 1ರ ವಿಜೇತರು ನಂತರ ಸೆಮಿ-ಫೈನಲ್ 1ರಲ್ಲಿ ಟೇಬಲ್ ಟಾಪರ್ ತಂಡವನ್ನು ಎದುರಿಸಲಿದ್ದಾರೆ. ಎಲಿಮಿನೇಟರ್ 2 ಗೆದ್ದ ತಂಡ ಡಿಸೆಂಬರ್ 27ರಂದು ಸೆಮಿಫೈನಲ್ 2ರಲ್ಲಿ 2ನೇ ಸ್ಥಾನ ಪಡೆದ ತಂಡದ ವಿರುದ್ಧ ಆಡಲಿದೆ. ಸೆಮಿ-ಫೈನಲ್‌ಗಳಲ್ಲಿ ಗೆದ್ದವರು ಡಿಸೆಂಬರ್ 29ರಂದು ಫೈನಲ್ ಪಂದ್ಯವನ್ನಾಡಲಿದ್ದಾರೆ.
ಪ್ರಸ್ತುತ ನೋಯ್ಡಾದಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯುತ್ತಿವೆ. ಹೈ-ಆಕ್ಟೇನ್ ಪಂದ್ಯಗಳು ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಡಿಸೆಂಬರ್ 1 ರವರೆಗೆ ನಡೆಯುತ್ತವೆ. ನೋಯ್ಡಾ ಹಂತದ ಪಂದ್ಯಗಳ ಬಳಿಕ ಟೂರ್ನಿಯು ಮೂರನೇ ಹಂತದ ಪಂದ್ಯಗಳು ಡಿಸೆಂಬರ್ 3 ರಿಂದ 24 ರವರೆಗೆ ಲೀಗ್ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ. ಇದೇ ಕ್ರೀಡಾಂಗಣದಲ್ಲಿ ಪ್ಲೇಆಫ್‌ಗಳು ಮತ್ತು ಫೈನಲ್ ಪಂದ್ಯಗಳು ಸಹ ನಡೆಯಲಿವೆ. ಪ್ರೊ ಕಬಡ್ಡಿ ಲೀಗ್ನಲ್ಲಿ ಹರಿಯಾಣ ಸ್ಟೀಲರ್ಸ್ (ಇವತ್ತಿನ ತನಕ, ಮುಂದಿನ ಪಂದ್ಯಗಳಲ್ಲಿ ಅಂಕಪಟ್ಟಿಯಲ್ಲಿ ಬದಲಾವಣೆ ಕಾಣಬಹುದು) ಭರ್ಜರಿ ಪ್ರದರ್ಶನದ ಮೂಲಕ ಅಗ್ರಸ್ಥಾನದಲ್ಲಿದೆ. 14 ಪಂದ್ಯಗಳಿಂದ 11 ಗೆಲುವು ಸಾಧಿಸಿ 56 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಡಿಸೆಂಬರ್ 26 (ವೇಳಾಪಟ್ಟಿ)
ಎಲಿಮಿನೇಟರ್ 1: ರಾತ್ರಿ 8 ಗಂಟೆ ಪಂದ್ಯ ಆರಂಭ
ಎಲಿಮಿನೇಟರ್ 2: ರಾತ್ರಿ 9 ಗಂಟೆ ಪಂದ್ಯ ಆರಂಭ
ಡಿಸೆಂಬರ್ 27
ಸೆಮಿಫೈನಲ್ 1: ರಾತ್ರಿ 8 ಗಂಟೆ ಪಂದ್ಯ ಆರಂಭ
ಸೆಮಿಫೈನಲ್ 2: ರಾತ್ರಿ 9 ಗಂಟೆ ಪಂದ್ಯ ಆರಂಭ
ಡಿಸೆಂಬರ್ 29
ಫೈನಲ್: ರಾತ್ರಿ 9 ಗಂಟೆ ಪಂದ್ಯ ಆರಂಭ
ತಂಡಗಳು (ನ.27ರ ಅಂತ್ಯಕ್ಕೆ) | ಪಂದ್ಯ | ಗೆಲುವು | ಸೋಲು | ಟೈ | ಅಂಕ |
---|---|---|---|---|---|
ಹರಿಯಾಣ ಸ್ಟೀಲರ್ಸ್ | 14 | 11 | 3 | 0 | 56 |
ಯು ಮುಂಬಾ | 13 | 8 | 4 | 1 | 45 |
ದಬಾಂಗ್ ಡೆಲ್ಲಿ KC | 14 | 6 | 5 | 3 | 43 |
ತೆಲುಗು ಟೈಟಾನ್ಸ್ | 13 | 8 | 5 | 0 | 43 |
ಪಾಟ್ನಾ ಪೈರೇಟ್ಸ್ | 13 | 7 | 5 | 1 | 42 |
ಪುಣೇರಿ ಪಲ್ಟನ್ | 14 | 6 | 5 | 3 | 42 |
ಜೈಪುರ ಪಿಂಕ್ ಪ್ಯಾಂಥರ್ಸ್ | 13 | 7 | 5 | 1 | 40 |
ಯುಪಿ ಯೋಧಾಸ್ | 13 | 6 | 6 | 1 | 38 |
ತಮಿಳು ತಲೈವಾಸ್ | 13 | 5 | 7 | 1 | 33 |
ಬೆಂಗಾಲ್ ವಾರಿಯರ್ಜ್ | 13 | 3 | 8 | 2 | 25 |
ಗುಜರಾತ್ ಜೈಂಟ್ಸ್ | 13 | 4 | 8 | 1 | 25 |
ಬೆಂಗಳೂರು ಬುಲ್ಸ್ | 14 | 2 | 12 | 0 | 16 |