PKL 2024 Final: ಪಿಕೆಎಲ್ ಪ್ರಶಸ್ತಿಗೆ ಹರಿಯಾಣ-ಪಾಟ್ನಾ ಫೈಟ್; ಕಬಡ್ಡಿ ಫೈನಲ್ ಸಮಯ, ನೇರಪ್ರಸಾರ, ತಂಡಗಳ ವಿವರ ಇಂತಿದೆ
Haryana Steelers vs Patna Pirates: ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಫೈನಲ್ ಪಂದ್ಯವು ಹರಿಯಾಣ ಸ್ಟೀಲರ್ಸ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳ ನಡುವೆ ನಡೆಯಲಿದೆ. ಯಾವಾಗ, ಎಲ್ಲಿ, ಎಷ್ಟೊತ್ತಿಗೆ ಈ ಪಂದ್ಯ ನಡೆಯಲಿದೆ ಎನ್ನುವುದರ ವಿವರ ಇಂತಿದೆ.
11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಮುಕ್ತಾಯಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. 132 ಲೀಗ್ ಪಂದ್ಯಗಳು, ನಾಲ್ಕು ಪ್ಲೇಆಫ್ ಪಂದ್ಯಗಳ ನಂತರ ಇದೀಗ ಫೈನಲ್ ಕದನಕ್ಕೆ ಪಿಕೆಎಲ್ ಸಜ್ಜಾಗಿದೆ. ಡಿಸೆಂಬರ್ 29ರ ಭಾನುವಾರ ಪುಣೆಯ ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದ್ದು, ಹರಿಯಾಣ ಸ್ಟೀಲರ್ಸ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳ ನಡುವೆ ಕಾದಾಟ ನಡೆಯಲಿದೆ. ಹರಿಯಾಣ ತಂಡ ಚೊಚ್ಚಲ ಪ್ರಶಸ್ತಿ ಕನಸಿನಲ್ಲಿದ್ದರೆ, ಪಾಟ್ನಾ ತನ್ನ ಖಾತೆಗೆ ಮತ್ತೊಂದು ಟ್ರೋಫಿ ಸೇರಿಸಿಕೊಳ್ಳಲು ಎದುರು ನೋಡುತ್ತಿದೆ. ಫೈನಲ್ನಲ್ಲಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದು.
ಪಿಕೆಎಲ್ ಫೈನಲ್: ಹರಿಯಾಣ vs ಪಾಟ್ನಾ ಮುಖಾಮುಖಿ ದಾಖಲೆ
ಹೆಡ್-ಟು-ಹೆಡ್ ದಾಖಲೆಯಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 7-5 ಅಂತರದಿಂದ ಮುನ್ನಡೆ ಸಾಧಿಸಿದೆ.
ಒಟ್ಟು ಪಂದ್ಯಗಳು - 13
ಹರಿಯಾಣ ಸ್ಟೀಲರ್ಸ್ ಗೆಲುವು - 07
ಪಾಟ್ನಾ ಪೈರೇಟ್ಸ್ ಗೆಲುವು - 05
ಟೈ - 01
ಹರಿಯಾಣ ಸ್ಟೀಲರ್ಸ್ ತಂಡ
ವಿನಯ್, ಶಿವಂ ಪತಾರೆ, ವಿಶಾಲ್ ತಾಟೆ, ಜಯಸೂರ್ಯ ಎನ್‌ಎಸ್, ಘನಶ್ಯಾಮ್ ಮಗರ್, ಜ್ಞಾನ ಅಭಿಷೇಕ್ ಎಸ್, ವಿಕಾಸ್ ಜಾಧವ್, ಮಣಿಕಂದನ್ ಎನ್, ಹರ್ದೀಪ್, ಜೈದೀಪ್ ದಹಿಯಾ, ರಾಹುಲ್ ಸೇಠಪಾಲ್, ಮೋಹಿತ್ ನಂದಲ್, ಸಂಜಯ್, ಆಶಿಶ್ ಗಿಲ್, ಮಣಿಕಂದನ್ ಎಸ್, ಸಾಹಿಲ್, ಮೊಹಮ್ಮದ್ರೇಜಾ ಶಾದ್ಲೌಯಿ ಚಿಯಾನೆ, ನವೀನ್, ಸಂಸ್ಕರ್ ಮಿಶ್ರಾ.
ಪಾಟ್ನಾ ಪೈರೇಟ್ಸ್ ತಂಡ
ಕುನಾಲ್ ಮೆಹ್ತಾ, ಸುಧಾಕರ್ ಎಂ, ಸಂದೀಪ್ ಕುಮಾರ್, ಸಾಹಿಲ್ ಪಾಟೀಲ್, ದೀಪಕ್, ಅಯಾನ್, ಜಂಗ್-ಕುನ್ ಲೀ, ಮೀಟು, ಪ್ರವೀಂದರ್, ದೇವಾಂಕ್, ಮನೀಶ್, ಅಬಿನಂದ್ ಸುಭಾಷ್, ನವದೀಪ್, ಶುಭಂ ಶಿಂಧೆ, ಹಮೀದ್ ನಾದರ್, ತ್ಯಾಗರಾಜನ್ ಯುವರಾಜ್, ದೀಪಕ್ ರಾಜೇಂದ್ರ ಸಿಂಗ್, ಪ್ರಶಾಂತ್ ಕುಮಾರ್ ರಾಠಿ, ಸಾಗರ್, ಅಮನ್, ಬಾಬು ಮುರುಗಸನ್, ಅಂಕಿತ್, ಗುರುದೀಪ್.
ಪಿಕೆಎಲ್-2024 ಫೈನಲ್ ಯಾವಾಗ?
ಪಿಕೆಎಲ್ 2024ರ ಫೈನಲ್ ಪಂದ್ಯವು ಡಿಸೆಂಬರ್ 29ರ ಭಾನುವಾರ ನಡೆಯಲಿದೆ.
ಪಿಕೆಎಲ್-2024 ಫೈನಲ್ ಎಲ್ಲಿ ನಡೆಯಲಿದೆ?
ಪಿಕೆಎಲ್ 2024ರ ಫೈನಲ್ ಪಂದ್ಯ ಪುಣೆಯ ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಪಿಕೆಎಲ್-2024 ಫೈನಲ್ ಎಷ್ಟು ಗಂಟೆಗೆ ಆರಂಭ?
ಹರಿಯಾಣ ಸ್ಟೀಲರ್ಸ್ ಮತ್ತು ಪಾಟ್ನಾ ಪೈರೇಟ್ಸ್ ನಡುವಿನ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಪಿಕೆಎಲ್-2024 ಫೈನಲ್ ನೇರ ಪ್ರಸಾರ ಎಲ್ಲಿ ವೀಕ್ಷಿಸಬೇಕು?
ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ 1 SD/HD ಮತ್ತು ಸ್ಟಾರ್ ಸ್ಪೋರ್ಟ್ಸ್ 2 HD/SD ಚಾನೆಲ್ನಲ್ಲಿ ಪಿಕೆಎಲ್ 2024 ಫೈನಲ್ ಅನ್ನು ವೀಕ್ಷಿಸಬಹುದು.
ಪಿಕೆಎಲ್-2024 ಫೈನಲ್ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬೇಕು?
ಪಿಕೆಎಲ್ ಫೈನಲ್‌ನ ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.