PKL 2024 Final: 11 ಆವೃತ್ತಿಗಳ ವಿಜೇತರು-ರನ್ನರ್ಅಪ್ ಪಟ್ಟಿ; ಪ್ರಶಸ್ತಿ, ಬಹುಮಾನ ಮೊತ್ತ, ಅಂಕಿ-ಅಂಶದ ವಿವರ ಹೀಗಿದೆ
PKL 11 Prize Money: ಪ್ರೊ ಕಬಡ್ಡಿ ಲೀಗ್ 11 ಮುಕ್ತಾಯಗೊಂಡಿದೆ. ಹರಿಯಾಣ ಸ್ಟೀಲರ್ಸ್ ಚಾಂಪಿಯನ್ ಆಗಿದೆ. ಹಾಗಾದರೆ ವಿಜೇತರಿಗೆ ಸಿಕ್ಕ ಬಹುಮಾನದ ಹಣವೆಷ್ಟು? ರನ್ನರ್ಅಪ್ ತಂಡಕ್ಕೆ ಸಿಕ್ಕಿದ್ದೆಷ್ಟು? ಒಟ್ಟು 11 ಆವೃತ್ತಿಗಳ ಪ್ರಶಸ್ತಿ ವಿಜೇತರು ಯಾರು? ಇಲ್ಲಿದೆ ವಿವರ.
ಹರಿಯಾಣ ಸ್ಟೀಲರ್ಸ್ ಚೊಚ್ಚಲ ಪ್ರಶಸ್ತಿ ಗೆಲ್ಲುವುದರೊಂದಿಗೆ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ಗೆ ತೆರೆ ಬಿದ್ದಿತು. ಪಿಕೆಎಲ್ ಫೈನಲ್ನಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು 32-23 ಅಂಕಗಳಿಂದ ಮಣಿಸಿದ ಹರಿಯಾಣ ಮೊದಲ ಟ್ರೋಫಿಗೆ ಮುತ್ತಿಕ್ಕಿತು. ಆದರೆ 4ನೇ ಟ್ರೋಫಿ ಗೆಲ್ಲುವ ಕನಸಿನಲ್ಲಿದ್ದ ಪಾಟ್ನಾಗೆ ನಿರಾಸೆಯಾಗಿದ್ದು, 2ನೇ ಬಾರಿಗೆ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪುಣೆಯ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಳೆದ ಬಾರಿ ರನ್ನರ್ಅಪ್ ಆಗಿದ್ದ ಹರಿಯಾಣ ಚೊಚ್ಚಲ ಟ್ರೋಫಿಯೊಂದಿಗೆ ಸಂಭ್ರಮಿಸಿತು. ಹಾಗಾದರೆ ಚಾಂಪಿಯನ್, ರನ್ನರ್ಅಪ್ ಸೇರಿ ಯಾವ ತಂಡಕ್ಕೆ ಎಷ್ಟು ಬಹುಮಾನ ಸಿಕ್ಕಿದೆ ಎಂಬುದನ್ನು ಈ ಮುಂದೆ ನೋಡೋಣ.
ಪಿಕೆಎಲ್ ಒಟ್ಟಾರೆ ಬಹುಮಾನ ಮೊತ್ತ 8 ಕೋಟಿ ರೂಪಾಯಿ. ಇದರಲ್ಲಿ ವಿಜೇತರು, ರನ್ನರ್ ಸೇರಿ ಅಂಕಪಟ್ಟಿಯಲ್ಲಿ ಅಗ್ರ 6 ತಂಡಗಳ ಜೊತೆಗೆ ತೀರ್ಪುಗಾರರಿಗೂ ಬಹುಮಾನದ ಹಣ ವಿತರಣೆ ಮಾಡಲಾಗುತ್ತದೆ.
ಬಹುಮಾನ ಮೊತ್ತ ಯಾರಿಗೆಷ್ಟು?
ವಿಜೇತರು - 3 ಕೋಟಿ ರೂ (ಹರಿಯಾಣ ಸ್ಟೀಲರ್ಸ್)
ರನ್ನರ್ ಅಪ್ - 1.80 ಕೋಟಿ (ಪಾಟ್ನಾ ಪೈರೇಟ್ಸ್)
3-4ನೇ ಸ್ಥಾನ ಪಡೆದ ತಂಡಗಳು - ತಲಾ 90 ಲಕ್ಷ ರೂಪಾಯಿ
5-6ನೇ ಸ್ಥಾನ ಪಡೆದ ತಂಡಗಳು - ತಲಾ 45 ಲಕ್ಷ ರೂಪಾಯಿ
ಆವೃತ್ತಿಯ ಅತ್ಯಂತ ಮೌಲ್ಯಯುತ ಆಟಗಾರ: 20 ಲಕ್ಷ ರೂಪಾಯಿ
ರೈಡರ್ ಆಫ್ ದಿ ಸೀಸನ್: 15 ಲಕ್ಷ ರೂಪಾಯಿ.
ಈ ಆವೃತ್ತಿಯ ಅತ್ಯುತ್ತಮ ಡಿಫೆಂಡರ್: - 15 ಲಕ್ಷ ರೂಪಾಯಿ.
ಆವೃತ್ತಿಯ ಉದಯೋನ್ಮುಖ ಆಟಗಾರ: 8 ಲಕ್ಷ ರೂ.
ಪಿಕೆಎಲ್ 11ರ ಅಂಕಿ-ಅಂಶಗಳು
ಅತಿ ಹೆಚ್ಚು ಅಂಕ ಪಡೆದ ರೇಡರ್: ದೇವಾಂಕ್ (ಪಾಟ್ನಾ ಪೈರೇಟ್ಸ್) - 301 ಅಂಕ
ಅತ್ಯಧಿಕ ಅಂಕ ಪಡೆದ ತಂಡ: ಪಾಟ್ನಾ ಪೈರೇಟ್ಸ್ -970 ಅಂಕ.
ಹೆಚ್ಚಿನ ರೇಡ್ ಪಾಯಿಂಟ್‌ಗಳು (ತಂಡ): ಪಾಟ್ನಾ ಪೈರೇಟ್ಸ್ - 568 ಅಂಕ
ಹೆಚ್ಚಿನ ಸೂಪರ್ 10ಗಳು: ಆಶು ಮಲಿಕ್ (ದಬಾಂಗ್ ಡೆಲ್ಲಿ) - 18
ಅತಿ ಹೆಚ್ಚು ಸೂಪರ್ ರೈಡ್‌ಗಳು (ತಂಡ): ಗುಜರಾತ್ ಜೈಂಟ್ಸ್ - 23 ಪಂದ್ಯಗಳಲ್ಲಿ 18 ಸೂಪರ್ ರೈಡ್
ಹೆಚ್ಚಿನ ಟ್ಯಾಕಲ್ ಪಾಯಿಂಟ್: ಮೊಹಮ್ಮದ್ರೇಜಾ ಚಿಯಾನೆ (ಹರಿಯಾಣ ಸ್ಟೀಲರ್ಸ್) 82 ಅಂಕ.
ಪಿಕೆಎಲ್ ವಿಜೇತರು (ರನ್ನರ್ಅಪ್) ಪಟ್ಟಿ
- ಪಿಕೆಎಲ್ 1 - ಜೈಪುರ ಪಿಂಕ್ ಪ್ಯಾಂಥರ್ಸ್ (ಯು ಮುಂಬಾ)
- ಪಿಕೆಎಲ್ 2 - ಯು ಮುಂಬಾ (ಬೆಂಗಳೂರು ಬುಲ್ಸ್)
- ಪಿಕೆಎಲ್ 3 - ಪಾಟ್ನಾ ಪೈರೇಟ್ಸ್ (ಯು ಮುಂಬಾ)
- ಪಿಕೆಎಲ್ 4 - ಪಾಟ್ನಾ ಪೈರೇಟ್ಸ್ (ಜೈಪುರ ಪಿಂಕ್ ಪ್ಯಾಂಥರ್ಸ್)
- ಪಿಕೆಎಲ್ 5 - ಪಾಟ್ನಾ ಪೈರೇಟ್ಸ್ (ಗುಜರಾತ್ ಜೈಂಟ್ಸ್)
- ಪಿಕೆಎಲ್ 6 - ಬೆಂಗಳೂರು ಬುಲ್ಸ್ (ಗುಜರಾತ್ ಜೈಂಟ್ಸ್)
- ಪಿಕೆಎಲ್ 7 - ಬೆಂಗಾಲ್ ವಾರಿಯರ್ಸ್ (ದಬಾಂಗ್ ಡೆಲ್ಲಿ)
- ಪಿಕೆಎಲ್ 8 - ದಬಾಂಗ್ ಡೆಲ್ಲಿ (ಪಾಟ್ನಾ ಪೈರೇಟ್ಸ್)
- ಪಿಕೆಎಲ್ 9 - ಜೈಪುರ ಪಿಂಕ್ ಪ್ಯಾಂಥರ್ಸ್ (ಪುಣೇರಿ ಪಲ್ಟನ್)
- ಪಿಕೆಎಲ್ 10 - ಪುಣೇರಿ ಪಲ್ಟನ್ (ಹರಿಯಾಣ ಸ್ಟೀಲರ್ಸ್)
- ಪಿಕೆಎಲ್ 11 - ಹರಿಯಾಣ ಸ್ಟೀಲರ್ಸ್ (ಪಾಟ್ನಾ ಪೈರೇಟ್ಸ್)
ಇದನ್ನೂ ಓದಿ: ಭಾರತ ತಂಡ ಮಾಡಿದ್ದು ಒಂದೆರಡಲ್ಲ ಬರೋಬ್ಬರಿ ಐದು ತಪ್ಪುಗಳು; ದುಬಾರಿಯಾದ್ವು ನೋ ಬಾಲ್, ಕ್ಯಾಚ್ ಡ್ರಾಪ್‌ಗಳು
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope