ವಿನೇಶ್ ಫೋಗಾಟ್ ಅನರ್ಹತೆ ವಿವಾದ: ಮೋದಿ ಮಧ್ಯಪ್ರವೇಶ, ಪ್ರತಿಭಟನೆ ದಾಖಲಿಸಲು ಪಿಟಿ ಉಷಾಗೆ ಸೂಚನೆ-pm narendra modi discusses vinesh phogats options after disqualification with pt usha urges her to file protest ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ವಿನೇಶ್ ಫೋಗಾಟ್ ಅನರ್ಹತೆ ವಿವಾದ: ಮೋದಿ ಮಧ್ಯಪ್ರವೇಶ, ಪ್ರತಿಭಟನೆ ದಾಖಲಿಸಲು ಪಿಟಿ ಉಷಾಗೆ ಸೂಚನೆ

ವಿನೇಶ್ ಫೋಗಾಟ್ ಅನರ್ಹತೆ ವಿವಾದ: ಮೋದಿ ಮಧ್ಯಪ್ರವೇಶ, ಪ್ರತಿಭಟನೆ ದಾಖಲಿಸಲು ಪಿಟಿ ಉಷಾಗೆ ಸೂಚನೆ

Vinesh Phogat: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣಕ್ಕಾಗಿ ಮಹಿಳೆಯರ 50 ಕೆಜಿ ಕುಸ್ತಿಯಿಂದ ಅನರ್ಹಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿದ್ದಾರೆ.

ವಿನೇಶ್ ಫೋಗಾಟ್ ಅನರ್ಹತೆ ವಿವಾದ: ಮೋದಿ ಮಧ್ಯಪ್ರವೇಶ, ಪ್ರತಿಭಟನೆ ದಾಖಲಿಸಲು ಪಿಟಿ ಉಷಾಗೆ ಸೂಚನೆ
ವಿನೇಶ್ ಫೋಗಾಟ್ ಅನರ್ಹತೆ ವಿವಾದ: ಮೋದಿ ಮಧ್ಯಪ್ರವೇಶ, ಪ್ರತಿಭಟನೆ ದಾಖಲಿಸಲು ಪಿಟಿ ಉಷಾಗೆ ಸೂಚನೆ

ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಚಿನ್ನದ ಕನಸೊಂದು ನುಚ್ಚು ನೂರಾಗಿದೆ. ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್​ ಪ್ರವೇಶಿಸಿದ್ದ ಭಾರತದ​ ಕುಸ್ತಿಪಟು ವಿನೇಶ್ ಫೋಗಾಟ್​ ಅವರು ಫೈನಲ್​ ಸ್ಪರ್ಧೆಗೂ ಮುನ್ನ ಅನರ್ಹಗೊಂಡಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಒಲಿಂಪಿಕ್ಸ್​​ ಒಕ್ಕೂಟದ ಅಧ್ಯಕ್ಷೆ ಪಿಟಿ ಉಷಾ ಅವರಿಗೆ ಕರೆ ಮಾತನಾಡಿದ್ದು ಮಾಹಿತಿ ಪಡೆದಿದ್ದಾರೆ.

ವಿನೇಶ್​ ಸ್ಪರ್ಧಿಸಿದ್ದ ತೂಕದ ವಿಭಾಗದಲ್ಲಿ 50 ಕೆಜಿಗಿಂತ 100 ಗ್ರಾಂ ಹೆಚ್ಚಿರುವ ಕಾರಣಕ್ಕೆ ಒಲಿಂಪಿಕ್ಸ್​ನ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ಸ್ಪರ್ಧೆಯ ಫೈನಲ್​ನಿಂದ ಅನರ್ಹ ಮಾಡಲಾಗಿದೆ. ವಿವಾದದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಉಷಾ ಅವರೊಂದಿಗೆ ಮಾತನಾಡಿದ್ದಾರೆ. ಈ ಹಿನ್ನಡೆಗೆ ಕಾರಣವೇನು? ಸಮಸ್ಯೆಗಳು ಆಗಿದ್ದೆಲ್ಲಿ? ನಮ್ಮ ಮುಂದಿರುವ ಆಯ್ಕೆಗಳ ಕುರಿತು ಪಿಟಿ ಉಷಾ ಅವರಿಂದ ಮಾಹಿತಿ ಕೇಳಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿ ಸಹಾಯ ಮಾಡಲು ಏನೆಲ್ಲಾ ಆಯ್ಕೆಗಳಿವೆ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿದ್ದಾರೆ. ಇದೇ ವೇಳೆ ವಿನೇಶ್‌ಗೆ ನೆರವಾಗಲು ತೀವ್ರ ಪ್ರತಿಭಟನೆ ದಾಖಲಿಸುವಂತೆ ಪಿಟಿ ಉಷಾ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ.

ವಿನೇಶ್​ಗೆ ಮೋದಿ ಸಾಂತ್ವನ

ಅನರ್ಹಗೊಂಡ ವಿನೇಶ್​ಗೆ ಪ್ರಧಾನಿ ಸಾಂತ್ವಾನ ಹೇಳಿದ್ದಾರೆ. ವಿನೇಶ್ ಚಾಂಪಿಯನ್​ಗಳಲ್ಲಿ ಚಾಂಪಿಯನ್. ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ.. ಇಂದಿನ ಹಿನ್ನಡೆ ನೋವು ತಂದಿದೆ. ಈ ಪದಗಳು ನಾನು ಅನುಭವಿಸುತ್ತಿರುವ ಹತಾಶೆಯ ಅರ್ಥವನ್ನು ವ್ಯಕ್ತಪಡಿಸಬಹುದು ಎಂದು ಬಯಸುತ್ತೇನೆ. ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಬಲವಾಗಿ ಹಿಂತಿರುಗಿ! ನಾವೆಲ್ಲರೂ ನಿಮಗಾಗಿ ನಿಮ್ಮೊಂದಿಗಿದ್ದೇವೆ ಎಂದು ಮೋದಿ ಎಕ್ಸ್​ ಖಾತೆಯಲ್ಲಿ ಬರೆದಿದ್ದಾರೆ.

ಇವತ್ತು ರಾತ್ರಿ ಇತ್ತು ಫೈನಲ್ ಪಂದ್ಯ

ವಿನೇಶ್ ಅವರು ಇಂದು ರಾತ್ರಿ (ಆಗಸ್ಟ್ 7ರ ಬುಧವಾರ) 11.30ರ ಸುಮಾರಿಗೆ ಫೈನಲ್​​ನಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಅವರನ್ನು ಎದುರಿಸಬೇಕಿತ್ತು. ಇದೀಗ ಅನರ್ಹ ಬೆನ್ನಲ್ಲೇ ಭಾರತದ ನಿಯೋಗದಿಂದ ದೂರ ದಾಖಲಿಸಲಾಗಿದೆ. ವಿನೇಶ್ ಅವರು ಈ ಹಿಂದೆ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ, ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ತನ್ನ ತೂಕವನ್ನು 50 ಕೆಜಿಗೆ ಇಳಿಸಿದ್ದರು. ಆದಾಗ್ಯೂ, ಆಕೆಯ ತೂಕ ವಿಭಾಗದ 2ನೇ ದಿನದಂದು ವಿನೇಶ್ ಅವರು ಮಿತಿಗಿಂತ ಹೆಚ್ಚು ತೂಕ ಹೊಂದಿದ್ದರು.

ಫೈನಲ್​ನಲ್ಲಿ ಚಿನ್ನದ ಪದಕ ಯಾರಿಗೆ?

ಸ್ಪರ್ಧೆಯ ನಿಯಮಗಳ ಪ್ರಕಾರ, ವಿನೇಶ್ ಅವರು ಅನರ್ಹಗೊಂಡ ಬೆನ್ನಲ್ಲೇ 50 ಕೆಜಿ ವಿಭಾಗದಲ್ಲಿ ಚಿನ್ನ ಮತ್ತು ಕಂಚಿನ ವಿಜೇತರಿಗೆ ಪದಕಗಳನ್ನು ವಿತರಿಸಲಾಗುತ್ತದೆ. ಫೈನಲ್​ನಲ್ಲಿ ವಿನೇಶ್ ಆಡಲು ಸಾಧ್ಯವಾಗದ ಕಾರಣ ಎದುರಾಳಿ ಕುಸ್ತಿಪಟು ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಅವರನ್ನು ಚಿನ್ನದ ಪದಕ ವಿಜೇತರೆಂದು ನಿರ್ಧರಿಸಲಾಗುತ್ತದೆ. ಹೀಗಾಗಿ ಬೆಳ್ಳಿ ಪದಕಕ್ಕೆ ಯಾರೂ ಅರ್ಹರಾಗಿರುವುದಿಲ್ಲ. ಆದರೆ ಒಲಿಂಪಿಕ್ಸ್​ ಈ ನಿರ್ಧಾರಕ್ಕೆ ಭಾರತದ ಕ್ರೀಡಾ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿನೇಶ್ ಸೆಮಿಫೈನಲ್ ತಲುಪಲು ಸತತ 2 ಅಸಾಧ್ಯವಾದ ಗೆಲುವುಗಳನ್ನು ದಾಖಲಿಸಿದ್ದರು. 16ನೇ ಸುತ್ತಿನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿಯನ್ನು ಸೋಲಿಸಿದರು. ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಉಕ್ರೇನ್‌ನ 8ನೇ ಶ್ರೇಯಾಂಕದ ಒಕ್ಸಾನಾ ಲಿವಾಚ್ ಅವರನ್ನು ಸೋಲಿಸಿದರು. ಸೆಮಿಫೈನಲ್​ನಲ್ಲಿ ಕೂಬಾದ ಯುಸ್ನಿಲಿಸ್ ಗುಜ್ಮಾನ್ ಅವರನ್ನು 5-0 ಅಂತರದಿಂದ ಸೋಲಿಸಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದರು. ಇದೀಗ ಅವರ ಪದಕದ ಕನಸು ನುಚ್ಚು ನೂರಾಗಿದೆ.

ವಿನೇಶ್ ಅವರು ರಿಯೊ-2016 ಮತ್ತು ಟೊಕಿಯೊ-2020 ಒಲಿಂಪಿಕ್ಸ್​​ಗಳಲ್ಲಿ ಕ್ವಾರ್ಟರ್-ಫೈನಲ್​ನಲ್ಲಿ ನಿರ್ಗಮಿಸಿದ್ದರು. ವಿನೇಶ್ ಕಾಮನ್​ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.