ನಿನಗೆ ಹಿಟ್ಟರ್ ಬೇಕಿದ್ದರೆ ಯೂಸುಫ್ ಪಠಾಣ್ ಇದ್ದಾರೆ, ಆದರೆ..; ಸಾನಿಯಾ ಮಿರ್ಜಾ ಕುರಿತು ಕವಿ ನೀಡಿದ್ದ ವಿವಾದಾತ್ಮಕ ಹೇಳಿಕೆ ವೈರಲ್ -VIDEO
ಕನ್ನಡ ಸುದ್ದಿ  /  ಕ್ರೀಡೆ  /  ನಿನಗೆ ಹಿಟ್ಟರ್ ಬೇಕಿದ್ದರೆ ಯೂಸುಫ್ ಪಠಾಣ್ ಇದ್ದಾರೆ, ಆದರೆ..; ಸಾನಿಯಾ ಮಿರ್ಜಾ ಕುರಿತು ಕವಿ ನೀಡಿದ್ದ ವಿವಾದಾತ್ಮಕ ಹೇಳಿಕೆ ವೈರಲ್ -Video

ನಿನಗೆ ಹಿಟ್ಟರ್ ಬೇಕಿದ್ದರೆ ಯೂಸುಫ್ ಪಠಾಣ್ ಇದ್ದಾರೆ, ಆದರೆ..; ಸಾನಿಯಾ ಮಿರ್ಜಾ ಕುರಿತು ಕವಿ ನೀಡಿದ್ದ ವಿವಾದಾತ್ಮಕ ಹೇಳಿಕೆ ವೈರಲ್ -VIDEO

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕುರಿತು ಹಿಂದಿ ಕವಿ ಕುಮಾರ್ ವಿಶ್ವಾಸ್ ಅವರು 2011ರಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಇದೀಗ ವೈರಲ್ ಆಗುತ್ತಿದೆ. ಅದರ ವಿಡಿಯೋ ಇಲ್ಲಿದೆ.

ನಿನಗೆ ಹಿಟ್ಟರ್ ಬೇಕಿದ್ದರೆ ಯೂಸುಫ್ ಪಠಾಣ್ ಇದ್ದಾರೆ, ಆದರೆ..; ಸಾನಿಯಾ ಮಿರ್ಜಾ ಕುರಿತು ಕವಿ ನೀಡಿದ್ದ ವಿವಾದಾತ್ಮಕ ಹೇಳಿಕೆ ವೈರಲ್, VIDEO
ನಿನಗೆ ಹಿಟ್ಟರ್ ಬೇಕಿದ್ದರೆ ಯೂಸುಫ್ ಪಠಾಣ್ ಇದ್ದಾರೆ, ಆದರೆ..; ಸಾನಿಯಾ ಮಿರ್ಜಾ ಕುರಿತು ಕವಿ ನೀಡಿದ್ದ ವಿವಾದಾತ್ಮಕ ಹೇಳಿಕೆ ವೈರಲ್, VIDEO

ಕುಮಾರ್ ವಿಶ್ವಾಸ್ ಅವರನ್ನು ಹಿಂದಿಯ ಪ್ರಸಿದ್ಧ ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಕವಿ ಮಾತ್ರವಲ್ಲ, ಹಿಂದಿ ಚಲನಚಿತ್ರೋದ್ಯಮದ ಗೀತರಚನೆಕಾರರೂ ಹೌದು. ಆಮ್ ಆದ್ಮಿ ಪಕ್ಷದ (AAP) ನಾಯಕರೂ ಆಗಿದ್ದಾರೆ. ಮಾತನಾಡುವ ಶೈಲಿ ಮತ್ತು ಪದ ಬಳಕೆಯಿಂದ ಅವರು ತುಂಬಾ ಚರ್ಚೆಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಬಾಲಿವುಡ್ ತಾರೆಗಳಾದ ಸೈಫ್ ಅಲಿ ಖಾನ್ ಮತ್ತು ಕರೀನ್ ಕಪೂರ್ ಅವರ ಮಗ ತೈಮೂರ್ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯು ಬಿರುಗಾಳಿ ಸೃಷ್ಟಿಸಿತ್ತು. ಇದೀಗ ಸಾನಿಯಾ ಮಿರ್ಜಾ ಕುರಿತು ಅವರು ಮಾತನಾಡಿದ್ದ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ.

ಸೈಫ್ ಮತ್ತು ಕರೀನಾ ಹೆಸರೇಳದೆ ಅವರ ಮಗ ತೈಮೂನ್ ಅಲಿ ಖಾನ್ ಹೆಸರನ್ನು ಗುರಿಯಾಗಿಟ್ಟುಕೊಂಡು ಮೊಘಲ್ ದೊರೆಯನ್ನು ಉಲ್ಲೇಖಿಸಿ ಟೀಕಿಸಿದ್ದರು. ‘ನೀವು ಆಯ್ಕೆ ಮಾಡಲು ಹಲವು ಹೆಸರುಗಳಿವೆ. ಆದರೆ, ನೀವು ನಿಮ್ಮ ಮಗುವಿಗೆ ಆ ಅತ್ಯಾಚಾರಿಯ ಹೆಸರನ್ನು ಇಟ್ಟಿದ್ದೀರಿ. ಈಗ ನೀವು ಅವನನ್ನು ಹೀರೋ ಮಾಡಲು ಬಯಸಿದ್ದರೆ, ನಾವು ಅವನನ್ನು ವಿಲನ್ ಆಗೋಕು ಬಿಡುವುದಿಲ್ಲ. 75 ವರ್ಷಗಳ ನಂತರ ಭಾರತ ಜಾಗೃತಗೊಂಡಿದೆ’ ಎಂದು ವಿಶ್ವಾಸ್ ಹೇಳಿರುವುದು ವಿಡಿಯೋ ವೈರಲ್ ಆಗಿತ್ತು. ಆ ಮೂಲಕ ವಿವಾದ ಸೃಷ್ಟಿಸಿದ್ದರು.

ಸಾನಿಯಾ ಮಿರ್ಜಾ ಬಗ್ಗೆ ವಿವಾದಾತ್ಮಕ ಹೇಳಿಕೆ

ಎಎಪಿ ನಾಯಕ ಮತ್ತು ಕವಿ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ, ಕುಮಾರ್ ವಿಶ್ವಾಸ್ ಅವರು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಮದುವೆಯಾದ ನಂತರ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದರು. 2011 ರಲ್ಲಿ ಮಾತನಾಡಿದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ. ಅವರು ಹೇಳಿದ್ದು ಹೀಗಿತ್ತು, 'ಕಳೆದ ವರ್ಷ ನಮ್ಮ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿವಾಹವಾದರು. ಸಾನಿಯಾ ಅವರ ಮದುವೆಗೆ ನನ್ನ ಅಭ್ಯಂತರವಿಲ್ಲ. ಆದರೆ ಭಾರತದಿಂದ ಹೆಸರು ಮತ್ತು ಖ್ಯಾತಿ ಪಡೆದ ಸಾನಿಯಾ, ಪಾಕಿಸ್ತಾನದ ತನ್ನ ಗಂಡನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನನ್ನ ವಿರೋಧ ಇದೆ ಎಂದು ಹೇಳಿದ್ದರು.

ಮದುವೆಯಾದ ನಂತರ ಸಾನಿಯಾಗೆ ನಾನು ಎಸ್​ಎಂಎಸ್ ಕೂಡ ಕಳುಹಿಸಿದ್ದೆ. ನಿನಗೆ ಹಿಟ್ಟರ್ ಬೇಕಾದರೆ ಭಾರತದಲ್ಲಿ ಕ್ರಿಕೆಟಿಗ ಯೂಸುಫ್ ಪಠಾಣ್ ಇದ್ದಾರೆ. ನೀನು ಯಾಕೆ ಇಷ್ಟು ದೂರ ಹೋಗುತ್ತೀಯಾ ಎಂದು ಮೆಸೇಜ್​ನಲ್ಲಿ ಹೇಳಿದ್ದೆ ಎಂದು ಹೇಳಿರುವ ಮಾತುಗಳನ್ನು ವಿಡಿಯೋದಲ್ಲಿ ಕೇಳಬಹುದು.

ವಿಡಿಯೋ ಇಲ್ಲಿದೆ…

2010ರಲ್ಲಿ ಮದುವೆ, 2024ರಲ್ಲಿ ವಿಚ್ಛೇದನ

2010ರ ಏಪ್ರಿಲ್ 12ರಂದು ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರು ಹೈದರಾಬಾದ್​ನಲ್ಲಿ ವಿವಾಹವಾಗಿದ್ದರು. ಪಂಜಾಬ್‌ನ ಸಿಯಾಲ್‌ಕೋಟ್‌ನಲ್ಲಿ ಅವರ 'ವಲೀಮಾ' ನಡೆದಿತ್ತು. ಸಾನಿಯಾ 2018ರ ಏಪ್ರಿಲ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. 2024ರ ಜನವರಿಯಲ್ಲಿ ಸಾನಿಯಾ ಮತ್ತು ಮಲಿಕ್ ವಿಚ್ಛೇದನ ಪಡೆದರು. ತದನಂತರ ಶೋಯೆಬ್ ಅವರು ಪಾಕಿಸ್ತಾನದ ಟಿವಿ ನಟಿ ಸನಾ ಜಾವೇದ್ ಅವರೊಂದಿಗೆ 3ನೇ ವಿವಾಹವಾದರು. 2023ರಲ್ಲಿ ಅಂತಾರಾಷ್ಟ್ರೀಯ ಟೆನಿಸ್‌ನಿಂದ ನಿವೃತ್ತರಾದ ಸಾನಿಯಾ, ತಮ್ಮ ಮಗ ಇಜಾನ್‌ನೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.