ಕನ್ನಡ ಸುದ್ದಿ  /  ಕ್ರೀಡೆ  /  ಶೋಯೆಬ್ ಮಲಿಕ್ ಜೊತೆಗೆ ಬೇರ್ಪಟ್ಟ ನಂತರ ಮನೆಗೆ ಹೊಸ ನಾಮಫಲಕ ಅಳವಡಿಸಿದ ಸಾನಿಯಾ ಮಿರ್ಜಾ, ಫೋಟೋಸ್

ಶೋಯೆಬ್ ಮಲಿಕ್ ಜೊತೆಗೆ ಬೇರ್ಪಟ್ಟ ನಂತರ ಮನೆಗೆ ಹೊಸ ನಾಮಫಲಕ ಅಳವಡಿಸಿದ ಸಾನಿಯಾ ಮಿರ್ಜಾ, ಫೋಟೋಸ್

Sania Mirza: ಸಾನಿಯಾ ಮಿರ್ಜಾ ಮತ್ತು ಅವರ ಮಗ ಇಜಾನ್ ಹೆಸರಿನ ಹೊಸ ನಾಮಫಲಕವನ್ನು ತಮ್ಮ ಮನೆಗೆ ಅಳವಡಿಸಿದ್ದಾರೆ. ಈ ಚಿತ್ರಗಳನ್ನು ಸಾನಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಶೋಯೆಬ್ ಮಲಿಕ್ ಜೊತೆಗೆ ವಿಚ್ಛೇದನ ಪಡೆದ ನಂತರ ಮನೆಗೆ ಹೊಸ ನಾಮಫಲಕ ಅಳವಡಿಸಿದ ಸಾನಿಯಾ ಮಿರ್ಜಾ
ಶೋಯೆಬ್ ಮಲಿಕ್ ಜೊತೆಗೆ ವಿಚ್ಛೇದನ ಪಡೆದ ನಂತರ ಮನೆಗೆ ಹೊಸ ನಾಮಫಲಕ ಅಳವಡಿಸಿದ ಸಾನಿಯಾ ಮಿರ್ಜಾ

ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಆಟಗಾರ ಶೋಯೆಬ್ ಮಲಿಕ್ ಅವರೊಂದಿಗೆ ವಿಚ್ಚೇದನ ಪಡೆದ ನಂತರ ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಮನೆಯ ನಾಮಫಲಕದ ಹೆಸರನ್ನು ಬದಲಿಸಿದ್ದಾರೆ. ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸರಣಿ ಫೋಟೋಗಳನ್ನು ಹಂಚಿಕೊಂಡರುವ ಮೂಗುತಿ ಸುಂದರಿ, ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ಚಿತ್ರಗಳಲ್ಲಿ ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಹ ಇದ್ದಾರೆ. ಅದರಲ್ಲಿ ಒಂದು ತಮ್ಮ ಮನೆಯ ಹೊಸ ನಾಮಫಲಕವೂ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಸಾನಿಯಾ ಮತ್ತು ಇಜಾನ್

ತಮ್ಮ ಮನೆಯ ನೂತನ ನಾಮಫಲಕದಲ್ಲಿ ‘ಸಾನಿಯಾ ಮತ್ತು ಇಜಾನ್’ ಎಂದು ಬರೆಯಲಾಗಿದೆ. "ಇದು ಮತ್ತು ಅದು" ಎಂದು ಮಾಜಿ ಟೆನಿಸ್ ಆಟಗಾರ್ತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ಚಿಕ್ಕ ಶೀರ್ಷಿಕೆಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ನಾಮಫಲಕದ ಜೊತೆಗೆ ಅವರು ಸ್ನೇಹಿತರೊಂದಿಗೆ ತಮ್ಮ ಸಂತೋಷಕರ ಕ್ಷಣಗಳು, ಮಗ ಇಜಾನ್ ಅವರೊಂದಿಗೆ ಕಳೆದ ಅಮೂಲ್ಯ ಸಮಯ ಮತ್ತು ಕೆಲವು ವಿನೋದ ತುಂಬಿದ ಸೆಲ್ಫಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್​ಗೆ ಹೃದಯ ಸ್ಪರ್ಶಿ ಕಾಮೆಂಟ್​ಗಳು ಹರಿದುಬಂದಿವೆ. ಅನೇಕರು ಲವ್ ಎಮೋಜಿ ಹಾಕಿದ್ದಾರೆ. ಪ್ರೇರಣಾತ್ಮಕವಾಗಿಯೂ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಹೆಚ್ಚಿನವು ಪಾಕಿಸ್ತಾನದ ಅಭಿಮಾನಿಗಳದ್ದೂ ಆಗಿದೆ. ಜಹೀರ್ ಖಾನ್ ಪತ್ನಿ ಸಾಗರಿಕಾ ಘಾಟ್ಗೆ ಸಹ ಪ್ರತಿಕ್ರಿಯಿಸಿದ್ದು, ಎರಡು ಲವ್ ಎಮೋಜಿ ಹಾಕಿದ್ದಾರೆ. ತನ್ನ ಜೀವನದಲ್ಲಿ ಎದುರಿಸಿದ ಸಮಸ್ಯೆಗಳನ್ನು ಸಾನಿಯಾ ನಿಭಾಯಿಸಿದ ರೀತಿಗೆ ಶ್ಲಾಘಿಸಿದ್ದಾರೆ.

‘ವಿಷಕಾರಿ ಜನರು ಮತ್ತು ಸಂಬಂಧಗಳನ್ನು ತೊರೆದಾಗ ಮಹಿಳೆಯರು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ನೀವು ಅದ್ಭುತವಾಗಿ ಕಾಣುತ್ತೀರಿ’ ಎಂದು ಇನ್​ಸ್ಟಾಗ್ರಾಂ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

‘ಬಲಶಾಲಿ ಮಹಿಳೆ. ಸ್ವತಂತ್ರ ಮಹಿಳೆ. ಹೆಮ್ಮೆಯ ಮಹಿಳೆ’ ಎಂದು ಇನ್ನೊಬ್ಬರು ಹೇಳಿದ್ದಾರೆ.

‘ನೀವು ಎಲ್ಲಾ ಸಮಸ್ಯೆಗಳನ್ನು ನೀವೇ ನಿಭಾಯಿಸುವಷ್ಟು ಬಲಶಾಲಿಯಾಗಿದ್ದೀರಿ’ ಎಂದು ಮತ್ತೊಂದು ಪ್ರತಿಕ್ರಿಯಿಸಿದ್ದದಾರೆ.

‘ನೀವು ಅತ್ಯುತ್ತಮ ಮಹಿಳೆ ಮತ್ತು ಅತ್ಯುತ್ತಮ ತಾಯಿ. ನಿಮಗೆ ನಮಸ್ಕರಿಸುತ್ತೇನೆ. ನಿಮ್ಮ ಬಗ್ಗೆ ಹೆಚ್ಚು ಅಭಿಮಾನ ಇದೆ’ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಹೀಗೆ ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಸಾನಿಯಾ ಮಿರ್ಜಾ ಅವರಿಂದ ವಿಚ್ಛೇದನ ಪಡೆದ ಮಾಜಿ ಪತಿ ಶೋಯೆಬ್ ಮಲಿಕ್ ಪಾಕ್​ ನಟಿ ಸನಾ ಜಾವೇದ್ ಅವರೊಂದಿಗೆ 3ನೇ ಮದುವೆಯನ್ನು ಘೋಷಿಸಿದ್ದರು. ಅದಕ್ಕೂ, ಮೊದಲು ಭಾರತೀಯ ಟೆನಿಸ್ ತಾರೆಯಿಂದ ಜೊತೆ ಬೇರ್ಪಡುವ ಬಗ್ಗೆ ಊಹಾಪೋಹಗಳು ಇದ್ದವು. ಈ ಊಹಾಪೋಹಾ ಸುದ್ದಿಗಳ ನಡುವೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿ ಪಾಕಿಸ್ತಾನದ ಹಿರಿಯ ಕ್ರಿಕೆಟಿಗನಿಂದ ವಿಚ್ಛೇದನವನ್ನು ದೃಢಪಡಿಸಿದರು.

"ಸಾನಿಯಾ ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕರ ದೃಷ್ಟಿಯಿಂದ ದೂರವಿಟ್ಟಿದ್ದಾರೆ. ಆದಾಗ್ಯೂ, ಶೋಯೆಬ್ ಮತ್ತು ಸಾನಿಯಾ ಕೆಲವು ತಿಂಗಳಿಂದ ವಿಚ್ಛೇದನ ಪಡೆದಿದ್ದಾರೆ ಎಂದು ಹಂಚಿಕೊಳ್ಳುವ ಅವಶ್ಯಕತೆ ಇಂದು ಉದ್ಭವಿಸಿದೆ. ಶೋಯೆಬ್ ಅವರ ಹೊಸ ಪ್ರಯಾಣಕ್ಕೆ ಸಾನಿಯಾ ಶುಭ ಹಾರೈಸಿದ್ದಾರೆ. ಆಕೆಯ ಕುರಿತು ಯಾವುದೇ ಊಹಾಪೋಹ ಸುದ್ದಿಗಳನ್ನು ಹರಡದಂತೆ ಮತ್ತು ಅವರ ಗೌಪ್ಯತೆ ಗೌರವಿಸುವಂತೆ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳನ್ನು ವಿನಂತಿಸಲು ಬಯಸುತ್ತೇವೆ ಎಂದು ಸಾನಿಯಾ ಅವರ ತಂದೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)