Kannada News  /  Sports  /  Predicted Xi Of India For 2nd Odi Vs New Zealand
ರಾಹುಲ್ ದ್ರಾವಿಡ್, ವಿಕ್ರಮ್ ರಾಥೋರ್, ರೋಹಿತ್ ಶರ್ಮಾ
ರಾಹುಲ್ ದ್ರಾವಿಡ್, ವಿಕ್ರಮ್ ರಾಥೋರ್, ರೋಹಿತ್ ಶರ್ಮಾ (AP)

India vs New Zealand 2nd ODI: ಎರಡನೇ ಏಕದಿನ ಪಂದ್ಯದಲ್ಲಿ ಯಾರಿಗೆ ಮಣೆ? ಒಂದು ಸ್ಥಾನಕ್ಕೆ ಶಮಿ-ಉಮ್ರಾನ್ ನಡುವೆ ಪೈಪೋಟಿ!

21 January 2023, 10:14 ISTHT Kannada Desk
21 January 2023, 10:14 IST

ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಡೆತ್ ಓವರ್‌ಗಳಲ್ಲಿ ಉಮ್ರಾನ್‌ನಂತಹ ವೇಗಿಗಳನ್ನು ಭಾರತ ಕಳೆದುಕೊಂಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಶಮಿಗಿಂತ ಮಲಿಕ್‌ಗೆ ಆದ್ಯತೆ ನೀಡಬಹುದು.

ರಾಯಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು (ಶನಿವಾರ) ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಪ್ರಸ್ತುತ ಮೂರು ಪಂದ್ಯಗಳ ಸರಣಿಯಲ್ಲಿ ಭಾರತವು 1-0 ಅಂತರದಿಂದ ಮುನ್ನಡೆ ಸಾಧಿಸಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿನ ಕೈವಶ ಮಾಡಲು ರೋಹಿತ್ ಶರ್ಮಾ ಬಳಗ ಎದುರು ನೋಡುತ್ತಿದೆ. ಕಳೆದ ಪಂದ್ಯದಲ್ಲಿ ರನ್‌ ಮಳೆಯೇ ಹರಿದಿದ್ದು, 650ಕ್ಕೂ ಅಧಿಕ ರನ್‌ ಬಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಕಠಿಣ ಪೈಪೋಟಿ ನಡೆಯುವ ಸಾಧ್ಯತೆ ಇದೆ.

ಟ್ರೆಂಡಿಂಗ್​ ಸುದ್ದಿ

ಕಳೆದ ಪಂದ್ಯಗಳಲ್ಲಿ ದ್ವಿಶತಕ ಮತ್ತು ಅದಕ್ಕೂ ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ, ನಾಯಕ ರೋಹಿತ್ ಜೊತೆಗೆ ಆರಂಭಿಕ ಆಟಗಾರನಾಗಿ ಶುಬ್ಮನ್ ಗಿಲ್ ತಮ್ಮ ಸ್ಥಾನವನ್ನು ಬಹುತೇಕ ಖಚಿತಪಡಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡುವುದು ಕೂಡಾ ಖಚಿತ. ಮತ್ತೊಂದೆಡೆ ಇಶಾನ್ ಕಿಶನ್ ಮೊದಲ ಪಂದ್ಯದಲ್ಲಿ ವಿಫಲರಾದರೂ, ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ನಾಲ್ಕನೇ ಕ್ರಮಾಂಕದಲ್ಲಿ ಇಂದು ಮತ್ತೆ ಬ್ಯಾಟ್‌ ಬೀಸುವ ಅವಕಾಶ ಪಡೆಯುವ ಸಾಧ್ಯತೆಯಿದೆ. ಐದನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡುವುದು ಕೂಡಾ ಬಹುತೇಕ ಖಚಿತ.

ಮತ್ತೊಂದೆಡೆ ಉಪನಾಯಕ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮೆನ್ ಇನ್ ಬ್ಲೂಗೆ ನಂ.6 ಮತ್ತು ಫಿನಿಶರ್ ಆಗಿ ಆಡುವ ನಿರೀಕ್ಷೆಯಿದೆ. ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಆದ್ಯತೆಯ ಮೇಲೆ ಸ್ಥಾನ ಪಡೆಯಲಿದ್ದಾರೆ. ಮತ್ತೊಬ್ಬ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಹಿಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ 8ನೇ ಕ್ರಮಾಂಕದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಕುಲದೀಪ್ ಯಾದವ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ರಮುಖ ಸ್ಪಿನ್ನರ್‌ ಆಗಿ ಆಡುವ ಸಾಧ್ಯತೆಯಿದೆ. ಹೀಗಾಗಿ ಯುಜುವೇಂದ್ರ ಚಹಾಲ್‌ಗೆ ಮತ್ತೊಮ್ಮೆ ಆಡುವ ಅವಕಾಶ ಸಿಗದಿರಬಹುದು. ವೇಗಿ ಮೊಹಮ್ಮದ್‌ ಸಿರಾಜ್‌ಗೆ ಸ್ಥಾನ ಸಿಗುವುದು ಖಚಿತ. ಮೊಹಮ್ಮದ್ ಸಿರಾಜ್ ಇತ್ತೀಚಿನ ಎಲ್ಲಾ ಪಂದ್ಯಗಲ್ಲೂ ಪ್ರಮುಖ ವಿಕೆಟ್‌ ಟೇಕರ್‌ ಆಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಇವರ ಸ್ಥಾನದ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಅಂತಿಮ ಸ್ಥಾನವನ್ನು ತುಂಬಲು ಮೊಹಮ್ಮದ್ ಶಮಿ ಮತ್ತು ಉಮ್ರಾನ್ ಮಲಿಕ್ ನಡುವೆ ಪೈಪೋಟಿ ನಡೆಯುವ ನಿರೀಕ್ಷೆಯಿದೆ. ಶಮಿ ಹೆಚ್ಚು ಅನುಭವಿಯಾದರೂ, ಹಿಂದಿನ ಪಂದ್ಯಗಳಲ್ಲಿ ಸ್ವಲ್ಪ ದುಬಾರಿಯಾಗಿದ್ದರು. ಅಲ್ಲದೆ ಅವರು ಉಮ್ರಾನ್‌ರಂತೆ ವಿಕೆಟ್‌ಗಳನ್ನು ಪಡೆದಿಲ್ಲ.

ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಡೆತ್ ಓವರ್‌ಗಳಲ್ಲಿ ಉಮ್ರಾನ್‌ನಂತಹ ವೇಗಿಗಳನ್ನು ಭಾರತ ಕಳೆದುಕೊಂಡಿತ್ತು. ಹೀಗಾಗಿ ಶಮಿಗಿಂತ ಮಲಿಕ್‌ಗೆ ಆದ್ಯತೆ ನೀಡಬಹುದು.

ಭಾರತದ ಸಂಭಾವ್ಯ ಆಡುವ ಬಳಗ

ಆರಂಭಿಕರು: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್

ಮಧ್ಯಮ ಕ್ರಮಾಂಕ: ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್‌ ಕೀಪರ್)

ಆಲ್ ರೌಂಡರ್‌ಗಳು: ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್

ಸ್ಪಿನ್ನರ್‌ಗಳು: ಕುಲದೀಪ್ ಯಾದವ್

ವೇಗಿಗಳು: ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್/ ಮೊಹಮ್ಮದ್ ಶಮಿ.

ನೇರಪ್ರಸಾರದ ವಿವರ

ಭಾರತ ಮತ್ತು ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಇದಲ್ಲದೆ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 12 ರನ್‌ಗಳ ಅಂತರದಿಂದ ಗೆದ್ದಿತ್ತು.