PKL Season 11: ಹೈದರಾಬಾದ್ ಹಂತದ ಪಂದ್ಯಗಳಿಗೆ ಟಿಕೆಟ್ ಬುಕ್ಕಿಂಗ್ ಆರಂಭ; ಮನೆಯಿಂದಲೇ ಬುಕ್ ಮಾಡುವುದು ಹೇಗೆ?
ಕನ್ನಡ ಸುದ್ದಿ  /  ಕ್ರೀಡೆ  /  Pkl Season 11: ಹೈದರಾಬಾದ್ ಹಂತದ ಪಂದ್ಯಗಳಿಗೆ ಟಿಕೆಟ್ ಬುಕ್ಕಿಂಗ್ ಆರಂಭ; ಮನೆಯಿಂದಲೇ ಬುಕ್ ಮಾಡುವುದು ಹೇಗೆ?

PKL Season 11: ಹೈದರಾಬಾದ್ ಹಂತದ ಪಂದ್ಯಗಳಿಗೆ ಟಿಕೆಟ್ ಬುಕ್ಕಿಂಗ್ ಆರಂಭ; ಮನೆಯಿಂದಲೇ ಬುಕ್ ಮಾಡುವುದು ಹೇಗೆ?

Pro Kabaddi League 11: ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಪ್ರೊ ಕಬಡ್ಡಿ ಲೀಗ್​ 11ನೇ ಆವೃತ್ತಿಯ ಹೈದರಾಬಾದ್​ ಹಂತದಲ್ಲಿ. ನಡೆಯುವ ಪಂದ್ಯಗಳಿಗೆ ಟಿಕೆಟ್​​ ಮಾರಾಟ ಆರಂಭವಾಗಿದೆ.

ಪ್ರೊ ಕಬಡ್ಡಿ ಲೀಗ್‌-11ನೇ ಆವೃತ್ತಿಗೆ ಟಿಕೆಟ್ ಮಾರಾಟ ಪ್ರಾರಂಭ
ಪ್ರೊ ಕಬಡ್ಡಿ ಲೀಗ್‌-11ನೇ ಆವೃತ್ತಿಗೆ ಟಿಕೆಟ್ ಮಾರಾಟ ಪ್ರಾರಂಭ

PKL 11 Ticket Booking: ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್ ಅಕ್ಟೋಬರ್​ 18ರಿಂದ ಪ್ರಾರಂಭವಾಗಲಿದೆ. ಈ ಬಾರಿ ಮೂರು ನಗರಗಳಲ್ಲಿ ಮಾತ್ರ ಪಂದ್ಯಗಳು ನಡೆಯಲಿವೆ. ಮೊದಲ ಹಂತವು ಹೈದರಾಬಾದ್​ನಲ್ಲಿ ನಡೆಯಲಿದ್ದು, ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 9 ರವರೆಗೆ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ನಡುವೆ ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಹೈದರಾಬಾದ್​ ಲೆಗ್​​ನಲ್ಲಿ ನಡೆಯುವ ಪಂದ್ಯಗಳಿಗೆ ಟಿಕೆಟ್​​ ಮಾರಾಟ ಆರಂಭವಾಗಿದೆ.

ಹೈದರಾಬಾದ್​ ನಂತರ ನವೆಂಬರ್ 10 ರಿಂದ ಡಿಸೆಂಬರ್ 1 ರವರೆಗೆ ಎರಡನೇ ಹಂತವು ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತವೆ. 3ನೇ ಹಂತವು ಡಿಸೆಂಬರ್ 3 ರಿಂದ ಡಿಸೆಂಬರ್ 24 ರವರೆಗೆ ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ರೊ ಕಬಡ್ಡಿ ಲೀಗ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅಕ್ಟೋಬರ್ 18 ರಿಂದ ಹೈದರಾಬಾದ್‌ನಲ್ಲಿ (ಮೊದಲ ಲೆಗ್) ನಡೆಯಲಿರುವ ಪಂದ್ಯಗಳ ಟಿಕೆಟ್‌ಗಳ ಮಾರಾಟವನ್ನು ಪ್ರಾರಂಭಿಸಲಾಗಿದೆ. ಫ್ಯಾನ್ಸ್​ ಬುಕ್ ಮೈ ಶೋನಲ್ಲಿ (https://in.bookmyshow.com/explore/kabaddi) ಟಿಕೆಟ್ ಖರೀದಿಸಬಹುದು. ಪಿಕೆಎಲ್​ ಸೀಸನ್ 11ರ ಟಿಕೆಟ್ ದರ ಸುಮಾರು ರೂ 350 ರಿಂದ 6000 ತನಕ ಇದೆ.

ಬುಲ್ಸ್ vs ಟೈಟಾನ್ಸ್ ಮುಖಾಮುಖಿ ದಾಖಲೆ

ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆದರೆ ಪಿಕೆಎಲ್ ಇತಿಹಾಸದಲ್ಲೇ ಟೈಟಾನ್ಸ್ ವಿರುದ್ಧ ಬುಲ್ಸ್ ತಂಡವೇ ಅಧಿಕ ಪಂದ್ಯಗಳನ್ನು ಗೆದ್ದಿದೆ. ಉಭಯ ತಂಡಗಳು 23 ಬಾರಿ ಮುಖಾಮುಖಿ ಆಗಿದ್ದು, 16 ಬಾರಿ ಬೆಂಗಳೂರು ತಂಡವೇ ಗೆಲುವು ಸಾಧಿಸಿದೆ. ಇನ್ನು 3 ಪಂದ್ಯಗಳಲ್ಲಿ ತೆಲುಗು ಟೈಟಾನ್ಸ್ ಗೆದ್ದಿದೆ. ಆದರೆ ನಾಲ್ಕು ಪಂದ್ಯಗಳು ಟೈ ಆಗಿವೆ.

ನೇರ ಪ್ರಸಾರ, ಲೈವ್‌ ಸ್ಟ್ರೀಮಿಂಗ್‌ ವೀಕ್ಷಣೆ ಹೇಗೆ?

ಪಿಕೆಎಲ್‌ 11ನೇ ಆವೃತ್ತಿಯ ಮೊದಲ ಪಂದ್ಯ ಸೇರಿದಂತೆ ಸೀಸನ್‌ನ ಎಲ್ಲಾ ಪಂದ್ಯಗಳನ್ನು ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಇದೇ ವೇಳೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಪಿಕೆಎಲ್‌ನ ಸೀಸನ್-ಓಪನರ್ ಹಾಗೂ ಎಲ್ಲಾ ಪಂದ್ಯಗಳನ್ನು ಮೊಬೈಲ್‌ ಮೂಲಕ ವೀಕ್ಷಿಸಬಹುದು.

ಪಿಕೆಎಲ್ ಸೀಸನ್
ವಿಜೇತರು
ರನ್ನರ್​ಅಪ್
MVP ಪ್ರತಿ ಸೀಸನ್
1
ಜೈಪುರ ಪಿಂಕ್ ಪ್ಯಾಂಥರ್ಸ್
ಯು ಮುಂಬಾ
ಅನುಪ್ ಕುಮಾರ್
2
ಯು ಮುಂಬಾ
ಬೆಂಗಳೂರು ಬುಲ್ಸ್
ಕಾಶಿಲಿಂಗ್ ಅಡಕೆ
3
ಪಾಟ್ನಾ ಪೈರೇಟ್ಸ್
ಯು ಮುಂಬಾ
ಮಂಜೀತ್ ಚಿಲ್ಲರ್
4
ಪಾಟ್ನಾ ಪೈರೇಟ್ಸ್
ಜೈಪುರ ಪಿಂಕ್ ಪ್ಯಾಂಥರ್ಸ್
ರಾಹುಲ್ ಚೌಧರಿ
5
ಪಾಟ್ನಾ ಪೈರೇಟ್ಸ್
ಗುಜರಾತ್ ಫಾರ್ಚೂನ್ ಜೈಂಟ್ಸ್
ಪರ್ದೀಪ್ ನರ್ವಾಲ್
6
ಬೆಂಗಳೂರು ಬುಲ್ಸ್
ಗುಜರಾತ್ ಫಾರ್ಚೂನ್ ಜೈಂಟ್ಸ್
ಪವನ್ ಸೆಹ್ರಾವತ್
7
ಬೆಂಗಾಲ್ ವಾರಿಯರ್ಸ್
ದಬಾಂಗ್ ಡೆಲ್ಲಿ
ನವೀನ್ ಕುಮಾರ್
8
ದಬಾಂಗ್ ಡೆಲ್ಲಿ
ಪಾಟ್ನಾ ಪೈರೇಟ್ಸ್
ನವೀನ್ ಕುಮಾರ್
9
ಜೈಪುರ ಪಿಂಕ್ ಪ್ಯಾಂಥರ್ಸ್
ಪುಣೇರಿ ಪಲ್ಟನ್
ಅರ್ಜುನ್ ದೇಶ್ವಾಲ್
10
ಪುಣೇರಿ ಪಲ್ಟನ್
ಹರಿಯಾಣ ಸ್ಟೀಲರ್ಸ್
ಅಸ್ಲಂ ಮುಸ್ತಫಾ ಇನಾಮದಾರ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.