PKL Season 10: ಪ್ರೊ ಕಬಡ್ಡಿ ಲೀಗ್ ಆರಂಭಕ್ಕೆ ದಿನಗಣನೆ; ಇಲ್ಲಿದೆ 12 ತಂಡಗಳ ನಾಯಕರು, ಮಾಲೀಕರ ಪಟ್ಟಿ
Pro Kabaddi League 2023: ಏಕದಿನ ವಿಶ್ವಕಪ್ ಮುಕ್ತಾಯವಾಗಿದೆ. ಈಗ ಕ್ರೀಡಾ ಪ್ರೇಮಿಗಳನ್ನು ಮನರಂಜಿಸಲು ಪ್ರೊ ಕಬಡ್ಡಿ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹಾಗಾದರೆ ಟೂರ್ನಿಯಲ್ಲಿ 12 ತಂಡಗಳ ನಾಯಕರು, ಕೋಚ್ಗಳು, ಮಾಲೀಕರು ಯಾರು? ಇಲ್ಲಿದೆ ಪಟ್ಟಿ.
ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲು ಬರುತ್ತಿರುವ ಪ್ರೊ ಕಬಡ್ಡಿ ಲೀಗ್ (Pro Kabaddi League 2023) ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದೆ. ಡಿಸೆಂಬರ್ 2ರಿಂದ ಫೆಬ್ರವರಿ 21ರವರೆಗೂ ಕಬಡ್ಡಿಯ ರಸದೌತಣ ಕ್ರೀಡಾ ಪ್ರೇಮಿಗಳಿಗೆ ಸಿಗಲಿದೆ. 10ನೇ ಆವೃತ್ತಿ ಪಿಕೆಎಲ್ ಉದ್ಘಾಟನಾ ಪಂದ್ಯವು ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನ ಅರೆನಾದಲ್ಲಿ ಪ್ರಾರಂಭವಾಗಲಿದೆ.
ಅಹಮದಾಬಾದ್, ಬೆಂಗಳೂರು, ಪುಣೆ, ಚೆನ್ನೈ, ನೋಯ್ಡಾ, ಮುಂಬೈ, ಜೈಪುರ, ಹೈದರಾಬಾದ್, ಪಾಟ್ನಾ, ದೆಹಲಿ, ಕೋಲ್ಕತ್ತಾ ಮತ್ತು ಪಂಚಕುಲದಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ. ನಾಕೌಟ್ ಪಂದ್ಯಗಳ ವೇಳಾಪಟ್ಟಿ ಟೂರ್ನಿಯ ಮಧ್ಯದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಘಟಾನುಘಟಿ ಆಟಗಾರರು ಅಖಾಡದಲ್ಲಿ ತಮ್ಮ ಪವರ್ ತೋರಿಸಲು ಸಜ್ಜಾಗಿ ನಿಂತಿದ್ದಾರೆ. ಅದರಲ್ಲೂ ಎಲ್ಲರ ಕಣ್ಣು ದುಬಾರಿ ಆಟಗಾರ ಪವನ್ ಕುಮಾರ್ ಸೆಹ್ರಾವತ್ ಮೇಲಿದೆ.
ಒಂದು ಟ್ರೋಫಿಗಾಗಿ 12 ತಂಡಗಳು ಮೂರು ತಿಂಗಳ ಕಾದಾಟ ನಡೆಸಲಿವೆ. ಆದರೆ ಪ್ರಶಸ್ತಿ ಗೆಲ್ಲಬೇಕೆಂದರೆ ಕೇವಲ ಆಟಗಾರರು ಇದ್ದರೆ ಸಾಲು ಅದಕ್ಕೆ ಮಾರ್ಗದರ್ಶಕರು ಅಗತ್ಯ. ನಾಯಕರ ಪ್ರೋತ್ಸಾಹವು ಅತ್ಯಗತ್ಯ. ಆಟಗಾರರ ಖರ್ಚು ವೆಚ್ಚವನ್ನು ನೋಡಿಕೊಳ್ಳುವ ಮಾಲೀಕರು ಸಹ ಪ್ರಮುಖ. ಹಾಗಾದರೆ ತಮ್ಮ ತಂಡಗಳನ್ನು ಮುನ್ನಡೆಸುವ ನಾಯಕರು ಯಾರು? ತರಬೇತಿ ನೀಡುವ ಕೋಚ್ಗಳು ಯಾರು? ಪ್ರತಿ ಪಿಕೆಎಲ್ ಫ್ರಾಂಚೈಸ್‌ನ ಮಾಲೀಕರು ಯಾರು? ಇಲ್ಲಿದೆ ಉತ್ತರ.
ತಂಡದ ಹೆಸರು | ಕ್ಯಾಪ್ಟನ್ಸ್ | ತಂಡದ ಮಾಲೀಕರು | ತಂಡದ ಮುಖ್ಯ ಕೋಚ್ |
---|---|---|---|
ಬೆಂಗಾಲ್ ವಾರಿಯರ್ಸ್ | ಮಣಿಂದರ್ ಸಿಂಗ್ | ಕ್ಯಾಪ್ರಿ ಸ್ಪೋರ್ಟ್ಸ್ | ಕಾಸಿನಾಥನ್ ಬಾಸ್ಕರನ್ |
ಬೆಂಗಳೂರು ಬುಲ್ಸ್ | ವಿಕಾಶ್ ಕಂಡೋಲ (ಸಂಭವ ಕ್ಯಾಪ್ಟನ್) | ಡಬ್ಲ್ಯುಎಲ್ ಲೀಗ್ ಪ್ರೈವೇಟ್ ಲಿಮಿಟೆಡ್ | ರಣಧೀರ್ ಸಿಂಗ್ ಸೆಹ್ರಾವತ್ |
ದಬಾಂಗ್ ದೆಹಲಿ ಕೆಸಿ | ನವೀನ್ ಕುಮಾರ್ | ರಾಧಾ ಕಪೂರ್ ಖನ್ನಾ | ರಂಬೀರ್ ಸಿಂಗ್ ಖೋಖರ್ |
ಗುಜರಾತ್ ಜೈಂಟ್ಸ್ | ಫಝಲ್ ಅತ್ರಾಚಲಿ | ಗೌತಮ್ ಅದಾನಿ | ರಾಮ್ ಮೆಹರ್ ಸಿಂಗ್ |
ಹರಿಯಾಣ ಸ್ಟೀಲರ್ಸ್ | ಜೈದೀಪ್ (ಸಂಭವ) | ಜೆಎಸ್ಡಬ್ಲ್ಯು ಗ್ರೂಪ್ | ಮನಪ್ರೀತ್ ಸಿಂಗ್ |
ಜೈಪುರ ಪಿಂಕ್ ಪ್ಯಾಂಥರ್ಸ್ | ಸುನಿಲ್ ಮಲಿಕ್ | ಅಭಿಷೇಕ್ ಬಚ್ಚನ್ | ಸಂಜೀವ್ ಬಲಿಯಾನ್ |
ಪಾಟ್ನಾ ಪೈರೇಟ್ಸ್ | ನೀರಜ್ ಕುಮಾರ್ (ಸಂಭವ) | ರಾಜೇಶ್ ಶಾ | ನರೇಂದ್ರ ಕುಮಾರ್ ರೆಧು |
ಪುಣೇರಿ ಪಲ್ಟನ್ | ಅಸ್ಲಂ ಇನಾಮದಾರ | ಇನ್ಸುರೆಕೋಟ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ | ಬಿ ಸಿ ರಮೇಶ್ |
ತಮಿಳು ತಲೈವಾಸ್ | ಸಾಗರ್ ರಥಿ (ಸಂಭವ) | ಮ್ಯಾಗ್ನಮ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ | ಅಶನ್ ಕುಮಾರ್ ಸಾಂಗ್ವಾನ್ |
ತೆಲುಗು ಟೈಟಾನ್ಸ್ | ಪವನ್ ಕುಮಾರ್ ಸೆಹ್ರಾವತ್ | ವೀರಾ ಸ್ಪೋರ್ಟ್ಸ್ ಯೂನಿಲೇಜರ್ ವೆಂಚರ್ಸ್ | ಶ್ರೀನಿವಾಸ ರೆಡ್ಡಿ |
ಯು ಮುಂಬಾ | ಸುರೀಂದರ್ ಸಿಂಗ್ ಅಥವಾ ರಿಂಕು (ಸಂಭವ) | ಯುನಿಲೇಜರ್ ವೆಂಚರ್ಸ್ ರೋನಿ ಸ್ಕ್ರೂವಾಲಾ | ಘೋಲಮ್ರೇಜಾ ಮಜಂದರಾಣಿ |
ಯುಪಿ ಯೋಧಾ | ನಿತೇಶ್ ಕುಮಾರ್ (ಸಂಭವ) | ಜಿಎಂಆರ್ ಲೀಗ್ ಗೇಮ್ಸ್ ಪ್ರೈವೇಟ್ ಲಿಮಿಟೆಡ್ | ಜಸ್ವೀರ್ ಸಿಂಗ್ |