PKL-10 2023: ಪ್ರೊ ಕಬಡ್ಡಿ ಲೀಗ್ ನೇರ ಪ್ರಸಾರ ಎಲ್ಲಿ; ಉಚಿತವಾಗಿ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಕ್ರೀಡೆ  /  Pkl-10 2023: ಪ್ರೊ ಕಬಡ್ಡಿ ಲೀಗ್ ನೇರ ಪ್ರಸಾರ ಎಲ್ಲಿ; ಉಚಿತವಾಗಿ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ

PKL-10 2023: ಪ್ರೊ ಕಬಡ್ಡಿ ಲೀಗ್ ನೇರ ಪ್ರಸಾರ ಎಲ್ಲಿ; ಉಚಿತವಾಗಿ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ

Pro Kabaddi League 2023 Live Streaming: ಅಭಿಮಾನಿಗಳು ಪ್ರೊ ಕಬಡ್ಡಿ ಲೀಗ್​​ನ ಪಂದ್ಯಗಳನ್ನು ಆನ್‌ಲೈನ್‌ನಲ್ಲಿ, ಮೊಬೈಲ್ ಮತ್ತು ಟಿವಿಯಲ್ಲಿ ಹೇಗೆ ವೀಕ್ಷಿಸಬಹುದು ಎಂಬುದರ ಮಾಹಿತಿ ಇಲ್ಲಿದೆ.

ಪ್ರೊ ಕಬಡ್ಡಿ ಲೀಗ್ 2023.
ಪ್ರೊ ಕಬಡ್ಡಿ ಲೀಗ್ 2023.

Pro Kabaddi League 2023: ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 2ರಿಂದ ಫೆಬ್ರವರಿ 21ರವರೆಗೂ3 ತಿಂಗಳ ಕಾಲ ನಾನ್ ಸ್ಟಾಫ್ ಮನೆರಂಜನೆ ನೀಡಲು ಸಜ್ಜಾಗುತ್ತಿದೆ. ಈಗಾಗಲೇ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಉದ್ಘಾಟನಾ ಪಂದ್ಯ ಡಿಸೆಂಬರ್ 2ರಂದು ಅಹ್ಮದಾಬಾದ್​ನ ಅರೆನಾ ಬೈ ಟ್ರಾನ್ಸ್‌ಸ್ಟಾಡಿಯಾ ಸ್ಟೇಡಿಯಂನಲ್ಲಿ ನಡೆಯಲಿದೆ.

ಆರಂಭಿಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್​ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಲೀಗ್​ ಹಂತದ ಎಲ್ಲಾ ಪಂದ್ಯಗಳನ್ನು ಪ್ರಕಟಿಸಲಾಗಿದೆ. ಇನ್ನು ಫ್ಲೇ ಆಫ್​ ಮತ್ತು ಫೈನಲ್​ ಪಂದ್ಯದ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ಹಾಗಾದರೆ ಈ ಕಬಡ್ಡಿ ಲೀಗ್​ ಅನ್ನು ಎಲ್ಲಿ, ಹೇಗೆ ವೀಕ್ಷಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

ಮೊಬೈಲ್ ಅಪ್ಲಿಕೇಶನ್, ಟಿವಿ ಮತ್ತು ಲ್ಯಾಪ್‌ಟಾಪ್‌ನಲ್ಲಿ ಪ್ರೊ ಕಬಡ್ಡಿ ಲೀಗ್ ಉಚಿತವಾಗಿ ವೀಕ್ಷಿಸುವುದು ಹೇಗೆ?

ಪ್ರೊ ಕಬಡ್ಡಿ ಲೀಗ್ 2023 ಪಂದ್ಯಗಳ ನೇರ ಪ್ರಸಾರವು ಎಲ್ಲಾ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಲಭ್ಯವಿರುತ್ತದೆ. ಸ್ಟಾರ್​ ಸ್ಪೋರ್ಟ್ಸ್​ 1, (HD+HD), ಸ್ಟಾರ್ ಸ್ಪೋರ್ಟ್ಸ್​ 1 ಹಿಂದಿ (SD+HD), ಸ್ಟಾರ್ ಸ್ಪೋರ್ಟ್ಸ್​ತಮಿಳು, ಸ್ಟಾರ್ ಸ್ಪೋರ್ಟ್ಸ್​ ತೆಲುಗು, ಸ್ಟಾರ್ ಸ್ಪೋರ್ಟ್ಸ್​ ಕನ್ನಡ (HD+SD) ಚಾನೆಲ್​ನಲ್ಲಿ ನೇರಪ್ರಸಾರ ಬರಲಿದೆ. ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತವಾಗಿ ನೋಡಬಹುದು.

ಪಂದ್ಯಗಳು ಎಲ್ಲೆಲ್ಲಿ ನಡೆಯುತ್ತವೆ?

ಪಂದ್ಯಗಳು 12 ನಗರಗಳಲ್ಲಿ ನಡೆಯಲಿವೆ. ಅಹಮದಾಬಾದ್ (ಡಿಸೆಂಬರ್ 2 ರಿಂದ 7ರವರೆಗೆ), ಬೆಂಗಳೂರು (ಡಿಸೆಂಬರ್ 8-13), ಪುಣೆ (ಡಿಸೆಂಬರ್ 15-20), ಚೆನ್ನೈ (ಡಿಸೆಂಬರ್ 22-27), ನೋಯ್ಡಾ (ಡಿಸೆಂಬರ್ 29, 2023 - ಜನವರಿ 3, 2024), ಮುಂಬೈ (ಜನವರಿ 5-10), ಜೈಪುರ (ಜನವರಿ 12-17), ಹೈದರಾಬಾದ್ (ಜನವರಿ 19-24), ಪಾಟ್ನಾ (ಜನವರಿ 26-31), ದೆಹಲಿ (ಫೆಬ್ರವರಿ 2-7), ಕೋಲ್ಕತ್ತಾ (ಫೆಬ್ರವರಿ 9-14) ಮತ್ತು ಪಂಚಕುಲ (ಫೆಬ್ರವರಿ 16-21).

ಲೀಗ್​ನಲ್ಲಿ ನಡೆಯುವ ಪಂದ್ಯಗಳೆಷ್ಟು?

ಈ ಆವೃತ್ತಿಯಲ್ಲಿ ಒಟ್ಟು 137 ಪಂದ್ಯಗಳಲ್ಲಿ ಚಾಂಪಿಯನ್‌ಶಿಪ್ ಗೆಲ್ಲಲು 12 ತಂಡಗಳು ಪರಸ್ಪರ ಸ್ಪರ್ಧಿಸಲಿವೆ.

ಪಾಲ್ಗೊಳ್ಳುವ ತಂಡಗಳು

  • ಬೆಂಗಾಲ್ ವಾರಿಯರ್ಸ್
  • ಬೆಂಗಳೂರು ಬುಲ್ಸ್
  • ದಬಾಂಗ್ ಡೆಲ್ಲಿ
  • ಗುಜರಾತ್ ಜೈಂಟ್ಸ್
  • ಹರಿಯಾಣ ಸ್ಟೀಲರ್ಸ್
  • ಜೈಪುರ ಪಿಂಕ್ ಪ್ಯಾಂಥರ್ಸ್
  • ಪಾಟ್ನಾ ಪೈರೇಟ್ಸ್
  • ಪುಣೇರಿ ಪಲ್ಟನ್
  • ತಮಿಳು ತಲೈವಾಸ್
  • ತೆಲುಗು ಟೈಟಾನ್ಸ್
  • ಯು ಮುಂಬಾ
  • ಯುಪಿ ಯೋಧಾ

ಅಂಕ ನಿರ್ಧರಿಸುವುದೇಗೆ?

ಗೆದ್ದ ತಂಡಕ್ಕೆ 5 ಅಂಕ, ಸೋತ ತಂಡಕ್ಕೆ 0 ಅಂಕ ನೀಡಲಾಗುತ್ತದೆ. ಪಂದ್ಯ ಟೈನಲ್ಲಿ ಅಂತ್ಯಗೊಂಡರೆ ಎರಡೂ ತಂಡಗಳಿಗೆ 3 ಅಂಕ ಸಿಗುತ್ತದೆ.

ಈವರೆಗೂ ಚಾಂಪಿಯನ್ ಆದ ತಂಡಗಳ ಪಟ್ಟಿ

ವರ್ಷಸೀಸನ್ಚಾಂಪಿಯನ್ರನ್ನರ್​​ಅಪ್ಅಂತರದ ಗೆಲುವು
2014ಸೀಸನ್-1ಜೈಪುರ ಪಿಂಕ್ ಪ್ಯಾಂಥರ್ಸ್ಯು ಮುಂಬಾ11 ಅಂಕಗಳು
2015ಸೀಸನ್-2ಯು ಮುಂಬಾಬೆಂಗಳೂರು ಬುಲ್ಸ್6 ಅಂಕಗಳು
2016ಸೀಸನ್-3ಪಾಟ್ನಾ ಪೈರೆಟ್ಸ್​ಯು ಮುಂಬಾ 3 ಅಂಕಗಳು
2016ಸೀಸನ್-4ಪಾಟ್ನಾ ಪೈರೆಟ್ಸ್​ಜೈಪುರ ಪಿಂಕ್ ಪ್ಯಾಂಥರ್ಸ್8 ಅಂಕಗಳು
2017ಸೀಸನ್-5ಪಾಟ್ನಾ ಪೈರೆಟ್ಸ್​ಗುಜರಾತ್ ಜೈಂಟ್ಸ್17 ಅಂಕಗಳು
2018ಸೀಸನ್-6ಬೆಂಗಳೂರು ಬುಲ್ಸ್ಗುಜರಾತ್ ಜೈಂಟ್ಸ್5 ಅಂಕಗಳು
2019ಸೀಸನ್-7ಬೆಂಗಾಲ್ ವಾರಿಯರ್ಸ್ದಬಾಂಗ್ ಡೆಲ್ಲಿ5 ಅಂಕಗಳು
2021ಸೀಸನ್-8ದಬಾಂಗ್ ಡೆಲ್ಲಿಪಾಟ್ನಾ ಪೈರೆಟ್ಸ್​1 ಅಂಕ
2022ಸೀಸನ್-9ಜೈಪುರ ಪಿಂಕ್ ಪ್ಯಾಂಥರ್ಸ್ಪುಣೇರಿ ಪಲ್ಟನ್ಸ್4 ಅಂಕಗಳು

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.