ಪ್ರೊ ಕಬಡ್ಡಿಯಲ್ಲಿ ಇತಿಹಾಸ ಸೃಷ್ಟಿಸಿದ ನಾಯಕ ಲೀಗ್ನಿಂದಲೇ ಔಟ್; ಹಾಲಿ ಚಾಂಪಿಯನ್‌ಗೆ ದೊಡ್ಡ ಹೊಡೆತ
ಪುಣೇರಿ ಪಲ್ಟಾನ್ ಅಭಿಮಾನಿಗಳು ಅಸ್ಲಾಂ ಇನಾಮದಾರ್ ಶೀಘ್ರದಲ್ಲೇ ಮ್ಯಾಚ್ಗೆ ಮರಳುತ್ತಾರೆ ಎಂದು ಆಶಿಸುತ್ತಿದ್ದರು. ಆದರೆ, ಗಾಯದ ಸಮಸ್ಯೆಯಿಂದ ಇನಾಮದಾರ್ ಪ್ರೊ ಕಬಡ್ಡಿ ಲೀಗ್ 11ನೇ ಋತುವಿನಿಂದ ಹೊರಗುಳಿದಿದ್ದಾರೆ. ಈ ಬಾರಿ ಆಡಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಪುಣೇರಿ ಪಲ್ಟನ್ ಇದೀಗ ಮಾಹಿತಿ ನೀಡಿದೆ.
ಪ್ರೊ ಕಬಡ್ಡಿ ಲೀಗ್ 11ನೇ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಪುಣೇರಿ ಪಲ್ಟಾನ್ ತಂಡವು ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ನಾಯಕ ಅಸ್ಲಾಂ ಇನಾಮದಾರ್ ಇಡೀ ಋತುವಿನಿಂದ ಹೊರಗುಳಿದಿದ್ದಾರೆ. ಅಸ್ಲಾಂ ಇನಾಮದಾರ್ ಗಾಯಕ್ಕೆ ತುತ್ತಾಗಿದ್ದು, ಈ ಕಾರಣದಿಂದ ಕೊನೆಯ ಪಂದ್ಯವನ್ನು ಕೂಡ ಆಡಲಾಗಲಿಲ್ಲ. ಅವರು ಮತ್ತೆ ಮರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಅಸ್ಲಾಂ ಇನಾಮದಾರ್ ಇಂಜುರಿ ಸಮಸ್ಯೆಯಿಂದಾಗಿ ಮುಂದಿನ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂಬ ಸುದ್ದಿ ಬಂದಿದೆ. ಈ ಸುದ್ದಿ ಪುಣೇರಿ ಪಲ್ಟಾನ್‌ಗೆ ದೊಡ್ಡ ಆಘಾತ ನೀಡಿದೆ.
ಪ್ರೊ ಕಬಡ್ಡಿ ಲೀಗ್‌ನ 11ನೇ ಋತುವಿನಲ್ಲಿ ಅಸ್ಲಾಂ ಇನಾಮದಾರ್ 7 ಪಂದ್ಯಗಳನ್ನು ಆಡಿದ್ದಾರೆ ಮತ್ತು ಈ ಅವಧಿಯಲ್ಲಿ 38 ಅಂಕಗಳನ್ನು ಗಳಿಸಿದ್ದಾರೆ. ಅವರು ತೆಲುಗು ಟೈಟಾನ್ಸ್ ವಿರುದ್ಧ ಕೊನೆಯ ಪಂದ್ಯವನ್ನು ಆಡಲಿಲ್ಲ. ಮೊಣಕಾಲಿನ ಗಾಯದಿಂದ ಬಳಲುತ್ತಿದ್ದ ಕಾರಣದಿಂದ ತಂಡದಿಂದ ಹೊರಗುಳಿಯಬೇಕಾಯಿತು. ಆ ಪಂದ್ಯದಲ್ಲಿ ಪುಣೇರಿ ಪಲ್ಟನ್ ಕೇವಲ ಒಂದು ಅಂಕದಿಂದ ಸೋತಿತು.
ಮೊಣಕಾಲಿನ ಗಾಯದಿಂದಾಗಿ ಅಸ್ಲಾಂ ಇನಾಮದಾರ್ ಔಟ್
ಪುಣೇರಿ ಪಲ್ಟಾನ್ ಅಭಿಮಾನಿಗಳು ಅಸ್ಲಾಂ ಇನಾಮದಾರ್ ಶೀಘ್ರದಲ್ಲೇ ಮ್ಯಾಚ್ಗೆ ಮರಳುತ್ತಾರೆ ಎಂದು ಆಶಿಸುತ್ತಿದ್ದರು. ಆದರೆ, ಗಾಯದ ಸಮಸ್ಯೆಯಿಂದ ಅಸ್ಲಾಂ ಇನಾಮದಾರ್ ಇಡೀ ಋತುವಿನಿಂದ ಹೊರಗುಳಿದಿದ್ದು, ಮುಂದೆ ಆಡಲು ಸಾಧ್ಯವಾಗುವುದಿಲ್ಲ ಎಂದು ಪುಣೇರಿ ಪಲ್ಟನ್ ಮಾಹಿತಿ ನೀಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಹಂಚಿಕೊಂಡಿದೆ.
“ಮೊಣಕಾಲಿನ ಗಾಯದಿಂದಾಗಿ ನಮ್ಮ ನಾಯಕ ಅಸ್ಲಾಂ ಇನಾಮದಾರ್ ಪಿಕೆಎಲ್ 11 ನೇ ಸೀಸನ್‌ನಿಂದ ಹೊರಗುಳಿದಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ. ನಮ್ಮ ತಂಡವನ್ನು ಮುನ್ನಡೆಸಲು ಅವರು ಇನ್ನಷ್ಟು ಶಕ್ತಿಶಾಲಿಯಾಗಿ ಮರಳುತ್ತಾರೆ ಎಂದು ಭಾವಿಸುತ್ತೇವೆ”.
ಕಳೆದ ಋತುವಿನಲ್ಲಿ ಅಸ್ಲಾಂ ಇನಾಮದಾರ್ ನಾಯಕತ್ವದಲ್ಲಿ ಪುಣೇರಿ ಪಲ್ಟನ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ತಂಡವು ಪ್ರಚಂಡ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿಯನ್ನು ಎತ್ತಿಹಿಡಿದಿತ್ತು. ಈ ಋತುವಿನಲ್ಲಿ ಕೂಡ ಪಲ್ಟಾನ್ ತಂಡವು ಉತ್ತಮ ಫಾರ್ಮ್ನಲ್ಲಿದೆ. ಪುಣೇರಿ ಪಲ್ಟನ್ PKL 2024 ರಲ್ಲಿ ಇದುವರೆಗೆ 8 ಪಂದ್ಯಗಳನ್ನು ಆಡಿದೆ> ಅದರಲ್ಲಿ ಅವರು 5 ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು 2 ಪಂದ್ಯಗಳಲ್ಲಿ ಸೋತಿದ್ದಾರೆ. ತಂಡದ ಒಂದು ಪಂದ್ಯ ಟೈ ಆಗಿದೆ.
ಪ್ರೊ ಕಬಡ್ಡಿ ಲೀಗ್ 2024 ಪಾಯಿಂಟ್ಸ್ ಟೇಬಲ್:
1) ಹರಿಯಾಣ ಸ್ಟೀಲರ್ಸ್ - 8 ಪಂದ್ಯಗಳ ನಂತರ 31 ಅಂಕಗಳು
2) ಪುಣೇರಿ ಪಲ್ಟನ್ - 8 ಪಂದ್ಯಗಳ ನಂತರ 30 ಅಂಕಗಳು
3) ಯು ಮುಂಬಾ - 9 ಪಂದ್ಯಗಳ ನಂತರ 29 ಅಂಕಗಳು
4) ಪಾಟ್ನಾ ಪೈರೇಟ್ಸ್ - 8 ಪಂದ್ಯಗಳ ನಂತರ 27 ಅಂಕಗಳು
5) ತೆಲುಗು ಟೈಟಾನ್ಸ್ - 8 ಪಂದ್ಯಗಳ ನಂತರ 26 ಅಂಕಗಳು
6) ದಬಾಂಗ್ ದೆಹಲಿ KC - 9 ಪಂದ್ಯಗಳ ನಂತರ 24 ಅಂಕಗಳು
7) ಬೆಂಗಾಲ್ ವಾರಿಯರ್ಸ್ - 7 ಪಂದ್ಯಗಳ ನಂತರ 23 ಅಂಕಗಳು
8) ತಮಿಳ್ ತಲೈವಾಸ್ - 8 ಪಂದ್ಯಗಳ ನಂತರ 21 ಅಂಕಗಳು
9) ಜೈಪುರ ಪಿಂಕ್ ಪ್ಯಾಂಥರ್ಸ್ - 7 ಪಂದ್ಯಗಳ ನಂತರ 20 ಅಂಕಗಳು
10) ಯುಪಿ ಯೋಧಾಸ್ - 8 ಪಂದ್ಯಗಳ ನಂತರ 20 ಅಂಕಗಳು
11) ಬೆಂಗಳೂರು ಬುಲ್ಸ್ - 8 ಪಂದ್ಯಗಳ ನಂತರ 12 ಅಂಕಗಳು
12) ಗುಜರಾತ್ ಜೈಂಟ್ಸ್ - 8 ಪಂದ್ಯಗಳ ನಂತರ 7 ಅಂಕಗಳು