Punjab Kings: ಪಂಜಾಬ್​ಗೆ ಮತ್ತೊಂದು ಹೊಡೆತ, 2 ಕೋಟಿಗೆ ಖರೀದಿಸಿದ ಯುವ​​​ ಆಲ್​ರೌಂಡರ್​​ IPLನಿಂದ ಔಟ್; ಬದಲಿ ಆಟಗಾರನ ಆಯ್ಕೆ
ಕನ್ನಡ ಸುದ್ದಿ  /  ಕ್ರೀಡೆ  /  Punjab Kings: ಪಂಜಾಬ್​ಗೆ ಮತ್ತೊಂದು ಹೊಡೆತ, 2 ಕೋಟಿಗೆ ಖರೀದಿಸಿದ ಯುವ​​​ ಆಲ್​ರೌಂಡರ್​​ Iplನಿಂದ ಔಟ್; ಬದಲಿ ಆಟಗಾರನ ಆಯ್ಕೆ

Punjab Kings: ಪಂಜಾಬ್​ಗೆ ಮತ್ತೊಂದು ಹೊಡೆತ, 2 ಕೋಟಿಗೆ ಖರೀದಿಸಿದ ಯುವ​​​ ಆಲ್​ರೌಂಡರ್​​ IPLನಿಂದ ಔಟ್; ಬದಲಿ ಆಟಗಾರನ ಆಯ್ಕೆ

Punjab Kings: ಪಂಜಾಬ್​ ಕಿಂಗ್ಸ್​​ ತಂಡಕ್ಕೆ ಮತ್ತೊಂದು ಆಘಾತವಾಗಿದೆ. 2 ಕೋಟಿಗೆ ಪ್ರೀತಿ ಝಿಂಟಾ ಮಾಲೀಕತ್ವದ​ PBKS ತಂಡಕ್ಕೆ ಖರೀದಿಯಾಗಿದ್ದ ಅಂಡರ್​-19 ವಿಶ್ವಕಪ್​ ವಿಜೇತ ರಾಜ್​ ಅಂಗದ್​ ಬಾವಾ, ಐಪಿಎಲ್​​ನಿಂದ (IPL) ಹೊರ ಬಿದ್ದಿದ್ದಾರೆ.

ರಾಜ್​ ಅಂಗದ್​ ಬಾವಾ
ರಾಜ್​ ಅಂಗದ್​ ಬಾವಾ

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​​​ ಲೀಗ್​​​​​​ (Indian Premier League) ಆರಂಭಕ್ಕೂ ಮುನ್ನ ಮತ್ತು ಆರಂಭವಾದ ಬಳಿಕವೂ ಗಾಯಗೊಂಡ ಆಟಗಾರರ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಪ್ರಮುಖ ಆಟಗಾರರೇ ಶ್ರೀಮಂತ ಕ್ರಿಕೆಟ್​​​ ಲೀಗ್​​ ಸೇವೆ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಪಂಜಾಬ್​ ಕಿಂಗ್ಸ್ (Punjab Kings)​ ತಂಡದ ಯುವ ಆಲ್​ರೌಂಡರ್​​​​​ ರಾಜ್​ ಬಾವಾ (Raj Angad Bawa) ಕೂಡ ಸೇರಿದ್ದಾರೆ.

ಆ ಮೂಲಕ ಪಂಜಾಬ್​ ತಂಡಕ್ಕೆ ಮತ್ತೊಂದು ಆಘಾತವಾಗಿದೆ. 2 ಕೋಟಿಗೆ ಪ್ರೀತಿ ಝಿಂಟಾ ಮಾಲೀಕತ್ವದ PBKS ತಂಡಕ್ಕೆ ಖರೀದಿಯಾಗಿದ್ದ ಅಂಡರ್​-19 ವಿಶ್ವಕಪ್​ ವಿಜೇತ ರಾಜ್​ ಅಂಗದ್​ ಬಾವಾ, ಐಪಿಎಲ್​​ನಿಂದ (IPL) ಹೊರ ಬಿದ್ದಿದ್ದಾರೆ. ಎಡ ಭುಜದ ಗಾಯದ ಸಮಸ್ಯೆಗೆ ತುತ್ತಾಗಿರುವ ರಾಜ್​ ಬಾವಾ, ಮಿಲಿಯನ್​ ಡಾಲರ್ ಟೂರ್ನಿಯ ಸೇವೆಯನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಫ್ರಾಂಚೈಸಿ ಖಚಿತಪಡಿಸಿದೆ.

ಗುರ್ನೂರ್​ ಸಿಂಗ್​​​​ ಆಯ್ಕೆ

ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದ ಬಾವಾ ಅವರ ಸ್ಥಾನಕ್ಕೆ ಗುರ್ನೂರ್​ ಸಿಂಗ್​ ಬ್ರಾರ್ (Gurnoor Singh Brar)​ ಅವರನ್ನು ಆಯ್ಕೆ ಮಾಡಲಾಗಿದೆ. ಹರಾಜಿನಲ್ಲಿ ಮೂಲ ಬೆಲೆ 20 ಲಕ್ಷಕ್ಕೆ ಗುರ್ನೂರ್ ಅವರೊಂದಿಗೆ ಪಂಜಾಬ್ (PBKS) ಸಹಿ ಮಾಡಿಸಿಕೊಂಡಿದೆ. ಅಂಡರ್​​​-19 ವಿಶ್ವಕಪ್​ ವಿಜೇತ ರಾಜ್ ಬಾವಾ ಅವರನ್ನು 2 ಕೋಟಿಗೆ PBKS ಖರೀದಿಸಿತ್ತು. ವರ್ಲ್ಡ್​​​ಕಪ್​​​ನಲ್ಲಿ​​ ಭರ್ಜರಿ ಪ್ರದರ್ಶನ ನೀಡಿದ್ದರ ಪರಿಣಾಮ, ಭಾರಿ ಮೊತ್ತಕ್ಕೆ ಸೇಲ್​ ಆಗಿದ್ದರು.

ಎಡಗೈ ಆಲ್‌ರೌಂಡ್ ಬ್ಯಾಟ್ಸ್‌ಮನ್ ಗುರ್ನೂರ್ ಅವರು 2022ರ ಡಿಸೆಂಬರ್​​​ನಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ್ದರು. ಅವರು 5 ಫಸ್ಟ್​​​ ಕ್ಲಾಸ್​​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 120.22 ಸ್ಟ್ರೈಕ್ ರೇಟ್‌ನೊಂದಿಗೆ 107 ರನ್ ಗಳಿಸಿದ್ದಾರೆ. 3.80 ಎಕಾನಮಿಯೊಂದಿಗೆ 7 ವಿಕೆಟ್ ಪಡೆದಿದ್ದಾರೆ. ಇನ್ನು ರಾಜ್​ ಬಾವಾ ಕಳೆದ ಆವೃತ್ತಿಯಲ್ಲಿ ಎರಡು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದ್ದರು.

ಬೈರ್​ಸ್ಟೋ-ಲಿವಿಂಗ್​​ಸ್ಟೋನ್​ ಸಿಕ್ಕಿಲ್ಲ ಎನ್​ಒಸಿ

ತಂಡದ ಪ್ರಮುಖ ಆಟಗಾರರಾದ ಜಾನಿ ಬೈರ್‌ಸ್ಟೋ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್‌ ಅವರಿಗೆ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ಯಾವುದೇ NOC ನೀಡಿಲ್ಲ. ಐಪಿಎಲ್​​ ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧ ಆ್ಯಷಸ್​ ಸರಣಿ ನಡೆಯಲಿರುವ ಕಾರಣ, ಇಂಗ್ಲೆಂಡ್​​​ ಪ್ರಮುಖ ಆಟಗಾರರಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ. ಪ್ರಸ್ತುತ ರಾಜ್​ ಬಾವಾ ಗಾಯ ಧವನ್​​​ ಪಡೆಗೆ ದೊಡ್ಡ ಹಿನ್ನಡೆ ಸೃಷ್ಟಿಸಿದೆ. ಜಾನಿ ಬೈರ್​​ಸ್ಟೋ ಸ್ಥಾನಕ್ಕೆ ಮ್ಯೂಥ್ಯೂ ಶಾರ್ಟ್​ ಅವರನ್ನು ಆಯ್ಕೆ ಮಾಡಲಾಗಿದೆ.

ಪಂಜಾಬ್​ ಕಿಂಗ್ಸ್​ ಪೂರ್ಣ ತಂಡ

ಮ್ಯಾಥ್ಯೂ ಶಾರ್ಟ್, ಪ್ರಭ್‌ಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಶಿಖರ್ ಧವನ್ (ನಾಯಕ), ಭಾನುಕಾ ರಾಜಪಕ್ಸೆ, ಶಾರುಖ್ ಖಾನ್, ಅಥರ್ವ ಟೈಡೆ, ಹರ್‌ಪ್ರೀತ್ ಭಾಟಿಯಾ, ಗುರ್ನೂರ್ ಸಿಂಗ್ ಬ್ರಾರ್, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್​, ಸಿಕಂದರ್ ರಾಝಾ, ಶಿವಂ ಸಿಂಗ್, ಮೋಹಿತ್ ರಾಥೀ, ಅರ್ಶ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ರಾಹುಲ್ ಚಹರ್, ನಥನ್ ಎಲ್ಲಿಸ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ವಿದ್ವತ್ ಕಾವೇರಪ್ಪ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.