ರವೀಂದ್ರ ಜಡೇಜಾ ಔಟ್; ಸೂಪರ್​-8 ಕದನದಲ್ಲಿ ಅಫ್ಘಾನಿಸ್ತಾನ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ XI
ಕನ್ನಡ ಸುದ್ದಿ  /  ಕ್ರೀಡೆ  /  ರವೀಂದ್ರ ಜಡೇಜಾ ಔಟ್; ಸೂಪರ್​-8 ಕದನದಲ್ಲಿ ಅಫ್ಘಾನಿಸ್ತಾನ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ Xi

ರವೀಂದ್ರ ಜಡೇಜಾ ಔಟ್; ಸೂಪರ್​-8 ಕದನದಲ್ಲಿ ಅಫ್ಘಾನಿಸ್ತಾನ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ XI

IND vs AFG Playing 11: ಟಿ20 ವಿಶ್ವಕಪ್​ 2024 ಸೂಪರ್​​-8 ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಣಸಾಟ ನಡೆಸುತ್ತಿವೆ. ಉಭಯ ತಂಡಗಳ ಪ್ಲೇಯಿಂಗ್ XI ಇಲ್ಲಿದೆ.

ರವೀಂದ್ರ ಜಡೇಜಾ ಔಟ್; ಸೂಪರ್​-8 ಕದನದಲ್ಲಿ ಅಫ್ಘಾನಿಸ್ತಾನ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ XI
ರವೀಂದ್ರ ಜಡೇಜಾ ಔಟ್; ಸೂಪರ್​-8 ಕದನದಲ್ಲಿ ಅಫ್ಘಾನಿಸ್ತಾನ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ XI

IND vs AFG Playing 11: ಐಸಿಸಿ ಟಿ20 ವಿಶ್ವಕಪ್ 2024 ಸೂಪರ್​​-8 ಪಂದ್ಯಗಳು ಆರಂಭಗೊಂಡಿವೆ. ಇಂದು (ಜೂನ್ 20ರಂದು) ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಲೀಗ್​ನ ಎ ಗುಂಪಿನಲ್ಲಿ ಭಾರತ 7 (3 ಗೆಲುವು, 1 ಪಂದ್ಯ ರದ್ದು) ಅಂಕ ಪಡೆದು ಅಗ್ರಸ್ಥಾನಗೊಂದಿಗೆ ಸೂಪರ್​​-8 ಪ್ರವೇಶಿಸಿತು. ಮತ್ತೊಂದೆಡೆ ಆಫ್ಘನ್ ಸಿ ಗುಂಪಿನಲ್ಲಿ 6 (3 ಗೆಲುವು, 1 ಸೋಲು) 2ನೇ ಸ್ಥಾನ ಪಡೆದಿತ್ತು. ಉಭಯ ತಂಡಗಳು ಈಗ ಸೂಪರ್​​-8ರ ಗ್ರೂಪ್​-1ರ ಸ್ಥಾನ ಪಡೆದಿವೆ.

ಬಾರ್ಬಡೋಸ್​​ನಲ್ಲಿರುವ ಬ್ರಿಡ್ಜ್​​ಡೌನ್​ನ ಕೆನ್ಸಿಂಗ್​ಟೌನ್​ ಕ್ರಿಕೆಟ್ ಮೈದಾನವು ಈ ಮಹತ್ವದ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. ಉಭಯ ತಂಡಗಳು ಟಿ20ಐನಲ್ಲಿ 8 ಬಾರಿ ಮುಖಾಮುಖಿಯಾಗಿದ್ದು, 7ರಲ್ಲಿ ಭಾರತ ತಂಡವೇ ಗೆದ್ದು ಬೀಗಿದೆ. ಒಂದು ಪಂದ್ಯ ರದ್ದಾಗಿದೆ. ಟಿ20ಐ ಕ್ರಿಕೆಟ್​ನಲ್ಲಿ ಭಾರತದ ವಿರುದ್ಧ ಖಾತೆ ತೆರೆಯದ ಆಫ್ಘನ್, ಚೊಚ್ಚಲ ಗೆಲುವಿನ ಕನಸಿನಲ್ಲಿದೆ.

ಲೀಗ್​ ಪಂದ್ಯದಲ್ಲಿ ಮಾಡಿದ ಕೆಲ ತಪ್ಪುಗಳನ್ನು ಮಹತ್ವದ ಪಂದ್ಯದಲ್ಲಿ ಮಾಡಬಾರದೆಂದು ನಿರ್ಧರಿಸಿರುವ ಟೀಮ್ ಮ್ಯಾನೇಜ್ಮೆಂಟ್ ಪರ್ಫೆಕ್ಟ್​ ಪ್ಲೇಯಿಂಗ್ XI ಕಟ್ಟಲು ಮುಂದಾಗಿದೆ. ಏಕೆಂದರೆ, ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ತಂಡವನ್ನೇ ಸೋಲಿಸಿ ಮನೆಗೆ ಕಳುಹಿಸಿರುವ ಆಫ್ಘನ್​ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ರಶೀದ್ ಖಾನ್ ಪಡೆ, ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಅದ್ಭುತ ಫಾರ್ಮ್​​ನಲ್ಲಿದೆ.

ಹಾಗಾಗಿ ಅಫ್ಘಾನಿಸ್ತಾನ ತಂಡವನ್ನು ಕಡಿಮೆ ಅಂದಾಜು ಮಾಡುವ ತಪ್ಪನ್ನು ಭಾರತ ತಂಡ ಮಾಡಬಾರದು. ಪ್ರಸ್ತುತ ವಿರಾಟ್ ಕೊಹ್ಲಿ ಅವರ ಫಾರ್ಮ್ ಭಾರತ ತಂಡಕ್ಕೆ ಚಿಂತೆಯ ವಿಷಯವಾಗಿದೆ. ಕ್ರಿಕೆಟ್ ತಜ್ಞರು ವಿರಾಟ್ ಬೆಂಬಲಿಸಿದರೂ ಟೀಮ್ ಮ್ಯಾನೇಜ್​ಮೆಂಟ್ ಬದಲಾವಣೆಗೆ ಮುಂದಾಗಿದೆ. ಆರಂಭಿಕ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಅವರನ್ನು ಕರೆತರಲು ಚಿಂತಿಸಿದೆ. ಇದರೊಂದಿಗೆ ಕೊಹ್ಲಿ ತಮ್ಮ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಸಾಧ್ಯತೆಯೂ ಇದೆ.

ರೋಹಿತ್ ಶರ್ಮಾ ಕೂಡ 2 ಪಂದ್ಯಗಳಲ್ಲಿ ಆಡಿಲ್ಲ. ಭಾರತ ತಂಡಕ್ಕೆ ಸಮಾಧಾನದ ಸುದ್ದಿ ಎಂದರೆ ರಿಷಭ್ ಪಂತ್-ಸೂರ್ಯಕುಮಾರ್ ಯಾದವ್ ಫಾರ್ಮ್‌ನಲ್ಲಿರುವುದು. ಆದರೆ, ಅಫ್ಘಾನಿಸ್ತಾನ ತಂಡವು ತಮ್ಮ ಪ್ರಬಲ ಬೌಲಿಂಗ್​ ದಾಳಿ ಹೊಂದಿರುವ ಕಾರಣ ಸೂರ್ಯ ಅವರು ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ವೆಸ್ಟ್ ಇಂಡೀಸ್ ಪಿಚ್​ಗಳಲ್ಲೂ ಚೆಂಡು ಟರ್ನ್​ ಆಗುವ ಕಾರಣ ವಿಶ್ವಶ್ರೇಷ್ಠ ಸ್ಪಿನ್ನರ್​​ಗಳ ಎದುರು ಕೊಂಚ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ.

ಇನ್ನು ರಿಷಭ್ ಪಂತ್ ಕೂಡ ಫಾರ್ಮ್​ನಲ್ಲಿದ್ದು, ಶಿವಂ ದುಬೆ ಕೂಡ ಅಮೆರಿಕ ಎದುರು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಇವರಿಗೆ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಸಾಥ್ ನೀಡಬೇಕಿದೆ. ಆದರೆ, ಜಡೇಜಾ ಅವರನ್ನು ಕೈ ಬಿಡುವ ನಿರೀಕ್ಷೆ ಇದೆ. ಕುಲ್ದೀಪ್ ಯಾದವ್ ಅವಕಾಶ ಪಡೆಯುವ ಸಾಧ್ಯತೆ ಇದೆ. ಅಕ್ಷರ್​ ಪಟೇಲ್ ಜೊತೆಗೆ ಎರಡನೇ ಸ್ಫಿನ್ನರ್​ ಆಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಭಾರತ ತಂಡದ ಸಂಭಾವ್ಯ XI

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್​ ಸಿಂಗ್, ಮೊಹಮ್ಮದ್ ಸಿರಾಜ್.

ಅಫ್ಘಾನಿಸ್ತಾನ ತಂಡದ ಸಂಭಾವ್ಯ XI

ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ಗುಲ್ಬದಿನ್ ನೈಬ್, ನಜಿಬುಲ್ಲಾ ಝದ್ರಾನ್, ಕರೀಮ್ ಜನತ್, ರಶೀದ್ ಖಾನ್, ಮೊಹಮ್ಮದ್ ನಬಿ, ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫರೂಕಿ.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner