ಕನ್ನಡ ಸುದ್ದಿ  /  ಕ್ರೀಡೆ  /  ಬೊರುಸ್ಸಿಯಾ ಡಾರ್ಟ್ಮಂಡ್ ವಿರುದ್ಧ ರೋಚಕ ಜಯ; 15ನೇ ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿಗೆ ಮುತ್ತಿಟ್ಟ ರಿಯಲ್ ಮ್ಯಾಡ್ರಿಡ್

ಬೊರುಸ್ಸಿಯಾ ಡಾರ್ಟ್ಮಂಡ್ ವಿರುದ್ಧ ರೋಚಕ ಜಯ; 15ನೇ ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿಗೆ ಮುತ್ತಿಟ್ಟ ರಿಯಲ್ ಮ್ಯಾಡ್ರಿಡ್

UEFA Champions League final: ಬೊರುಸ್ಸಿಯಾ ಡಾರ್ಟ್ಮಂಡ್ ತಂಡವನ್ನು ಮಣಿಸಿದ ರಿಯಲ್ ಮ್ಯಾಡ್ರಿಡ್ ತಂಡವು ದಾಖಲೆಯ 15ನೇ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

15ನೇ ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿಗೆ ಮುತ್ತಿಟ್ಟ ರಿಯಲ್ ಮ್ಯಾಡ್ರಿಡ್
15ನೇ ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿಗೆ ಮುತ್ತಿಟ್ಟ ರಿಯಲ್ ಮ್ಯಾಡ್ರಿಡ್

ಯುಇಎಫ್ಎ ಚಾಂಪಿಯನ್ಸ್ ಲೀಗ್ 2023-24 (UEFA Champions League 2023-24) ಫೈನಲ್‌ ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್ (Real Madrid) ರೋಚಕ ಜಯ ಸಾಧಿಸಿದೆ. ಲಂಡನ್‌ನ ವೆಂಬ್ಲೆ ಕ್ರೀಡಾಂಗಣದಲ್ಲಿ ಜೂನ್‌ 2ರ ಭಾನುವಾರ ನಡೆದ ಪಂದ್ಯದಲ್ಲಿ ಬೊರುಸ್ಸಿಯಾ ಡಾರ್ಟ್ಮಂಡ್ ವಿರುದ್ಧ 2-0 ಗೋಲುಗಳ ಅಂತರದಿಂದ ಮ್ಯಾಡ್ರಿಡ್‌ ಜಯ ಸಾಧಿಸಿದೆ. ಇದರೊಂದಿಗೆ ದಾಖಲೆಯ 15ನೇ ಬಾರಿಗೆ ಚಾಂಪಿಯನ್ಸ್ ಲೀಗ್ ಟ್ರೋಫಿ ಮುಡಿಗೇರಿಸಿಕೊಂಡ ದಾಖಲೆಗೆ ರಿಯಲ್‌ ಮ್ಯಾಡ್ರಿಡ್ಸ್‌ ತಂಡ ಪಾತ್ರವಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ಗೆಲುವಿನೊಂದಿಗೆ ದಿಗ್ಗಜ ಆಟಗಾರ ಟೋನಿ ಕ್ರೂಸ್ ಅವರಿಗೆ ಅರ್ಥಪೂರ್ಣ ಬೀಳ್ಕೊಡುಗೆ ಸಿಕ್ಕಿದೆ. ಅವರು ಈ ಬಾರಿಯ ಯೂರೋ 2024 ಟೂರ್ನಿಯ ನಂತರ ವಿದಾಯ ಹೇಳಲಿದ್ದಾರೆ.

ಪಂದ್ಯದ ಮೊದಲಾರ್ಧದಲ್ಲಿ ರಿಯಲ್ ಮ್ಯಾಡ್ರಿಡ್ ನಿಧಾನಗತಿಯ ಆಟವಾಡಿತು. ಡಾರ್ಟ್ಮಂಡ್ ತಂಡ ಕೆಲವೊಂದು ಅವಕಾಶಗಳನ್ನು ಪಡೆದರೂ, ಗೋಲು ಬರಲಿಲ್ಲ. ಕರೀಮ್ ಅಡೆಯೆಮಿ ಮತ್ತು ಫುಲ್ಕ್ರುಗ್, ಡಾರ್ಟ್ಮಂಡ್ ತಂಡಕ್ಕೆ ಮುನ್ನಡೆ ತಂದುಕೊಡುವ ಅವಕಾಶ ಪಡೆದರು. ಆದರೆ, ಗೋಲು ಬರಲಿಲ್ಲ.

ದ್ವಿತೀಯಾರ್ಧದಲ್ಲಿ ವೇಗದ ಹಾಗೂ ಆಕ್ರಮಣಕಾರಿ ಆಟವಾಡಿದ ಮ್ಯಾಡ್ರಿಡ್, ಡಾರ್ಟ್ಮಂಡ್ ವೇಗಕ್ಕೆ ಸರಿಸಾಟಿಯಾಯಿತು. ಪಂದ್ಯದ 74ನೇ ನಿಮಿಷದಲ್ಲಿ ಮ್ಯಾಡ್ರಿಡ್‌ ಮೊದಲ ಗೋಲು ಗಳಿಸಿತು. ಡಾರ್ಟ್ಮಂಡ್ ಗೋಲ್ ಕೀಪರ್ ಗ್ರೆಗರ್ ಕೋಬೆಲ್ ಅವರ ತಡೆಗೋಡೆ ಭೇದಿಸಿದ ಡ್ಯಾನಿ ಕಾರ್ವಾಜಲ್ ಪಂದ್ಯದ ಮೊದಲ ಗೋಲು ಗಳಿಸಿದರು. ಆ ನಂತರ 83ನೇ ನಿಮಿಷದಲ್ಲಿ ಜೂಡ್ ಬೆಲ್ಲಿಂಗ್ಹ್ಯಾಮ್ ಕಳುಹಿಸಿದ ಚೆಂಡನ್ನು ಗೋಲಿನತ್ತ ಗುರಿಯಿಟ್ಟ ವಿನೀಸಿಯಸ್ ಜೂನಿಯರ್‌ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು.

ಭರ್ಜರಿ ಗೆಲುವಿನೊಂದಿಗೆ ಕಾರ್ಲೊ ಆಂಜೆಲೊಟಿ ದಾಖಲೆಯ ಐದನೇ ಯುಸಿಎಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ರಿಯಲ್‌ ಮ್ಯಾಡ್ರಿಡ್ ತಂಡದೊಂದಿಗೆ ಇದು ಅವರ ಮೂರನೇ ಪ್ರಶಸ್ತಿಯಾಗಿದೆ. ಇದೇ ವೇಳೆ, ಕಾರ್ವಾಜಲ್, ಲುಕಾ ಮೊಡ್ರಿಕ್, ಕ್ರೂಸ್ ಮತ್ತು ನಾಚೊ ಆರನೇ ಯುಸಿಎಲ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದರು.

ಟ್ರೋಫಿ ಗೆಲುವಿನ ನಂತರ ಮಾತನಾಡಿದ ಕಾರ್ವಾಜಲ್, “ನನಗೆ ಮಾತುಗಳೇ ಹೊರಳುತ್ತಿಲ್ಲ. ಅತೀವ ಸಂತೋಷವಾಗುತ್ತಿದೆ. ಇದು ಕಠಿಣ ಪಂದ್ಯ ಎಂದು ನಮಗೆ ತಿಳಿದಿತ್ತು. ಮೊದಲಾರ್ಧದಲ್ಲಿ ಅವರು ತುಂಬಾ ಉತ್ತಮವಾಗಿ ಆಡಿದರು. ಆದರೆ ನಾವು ಸೂಕ್ತ ಸಮಯದಲ್ಲಿ ಕಂಬ್ಯಾಕ್‌ ಮಾಡಿದೆವು. ನಮ್ಮ ಸಮಯ ಬರುತ್ತದೆ ಎಂದು ನಮಗೆ ತಿಳಿದಿತ್ತು. ನಾವು ಈಗ 15ನೇ ಪ್ರಶಸ್ತಿ ಗೆದ್ದಿದ್ದೇವೆ” ಎಂದು ಹೇಳಿದರು.

ವಿಭಾಗ