Ind vs Aus: 2ನೇ ಏಕದಿನ ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆಗಳ ಪಟ್ಟಿ ಇಲ್ಲಿದೆ!
Ind vs Aus: 2ನೇ ಪಂದ್ಯವನ್ನು ಬಿಟ್ಟು ಕೊಟ್ಟ ಟೀಮ್ ಇಂಡಿಯಾ ಹಲವು ಕೆಟ್ಟ ದಾಖಲೆಗಳಿಗೆ ಪಾತ್ರವಾಗಿದೆ. ಇದರೊಂದಿಗೆ ಆಸ್ಟ್ರೇಲಿಯಾ ವಿಶೇಷ ದಾಖಲೆಗಳನ್ನೂ ತಮ್ಮದಾಗಿಸಿಕೊಂಡಿದೆ. ಕಡಿಮೆ ಸ್ಕೋರ್, ಫಾಸ್ಟ್ ಚೇಸಿಂಗ್, 4 ಡಕೌಟ್ಗಳು.. ಹೀಗೆ ಪ್ರಮುಖ ದಾಖಲೆಗಳು ಇತಿಹಾಸ ಪುಟ ಸೇರಿವೆ. ಅವುಗಳನ್ನು ಒಂದೊಂದಾಗೇ ನೋಡೋಣ.!
ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ, ಹೀನಾಯ ಸೋಲು ಅನುಭವಿಸಿತು. ಆಸಿಸ್ ಆಲ್ರೌಂಡ್ ಆಟದ ಮುಂದೆ ರೋಹಿತ್ ಪಡೆ ಉಸಿರೆತ್ತಲಿಲ್ಲ. ಸರಣಿ ಮೇಲೆ ಹಿಡಿತ ಸಾಧಿಸುವ ಛಲದಲ್ಲಿದ್ದ ಭಾರತ ತಂಡ, ಕಳಾಹೀನವಾಗಿ ಶರಣಾಗಿದೆ. 39 ಓವರ್ಗಳಿರುವಾಗಲೇ ಪಂದ್ಯವನ್ನು ಬಿಟ್ಟುಕೊಟ್ಟಿದೆ.
ಟ್ರೆಂಡಿಂಗ್ ಸುದ್ದಿ
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ, 26 ಓವರ್ಗಳಲ್ಲಿ ಕೇವಲ 117 ರನ್ಗಳಿಗೆ ಆಲೌಟ್ ಆಯಿತು. ಮಿಚೆಲ್ ಸ್ಟಾರ್ಕ್ 5 ವಿಕೆಟ್ ಉರುಳಿಸಿ ಮೆನ್ ಇನ್ ಬ್ಲೂ ಪಾಲಿಗೆ ಅಕ್ಷರಶಃ ವಿಲನ್ ಆದರು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಬರೀ 11 ಓವರ್ಗಳಲ್ಲಿ ಗೆಲುವಿನ ದಡ ಸೇರಿತು. ಆ ಮೂಲಕ ಸರಣಿ ಸಮಗೊಳಿಸುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯವನ್ನು ಬಿಟ್ಟು ಕೊಟ್ಟ ಟೀಮ್ ಇಂಡಿಯಾ ಹಲವು ಕೆಟ್ಟ ದಾಖಲೆಗಳಿಗೆ ಪಾತ್ರವಾಗಿದೆ. ಇದರೊಂದಿಗೆ ಆಸ್ಟ್ರೇಲಿಯಾ ವಿಶೇಷ ದಾಖಲೆಗಳನ್ನೂ ತಮ್ಮದಾಗಿಸಿಕೊಂಡಿದೆ. ಕಡಿಮೆ ಸ್ಕೋರ್, ಫಾಸ್ಟ್ ಚೇಸಿಂಗ್, 4 ಡಕೌಟ್ಗಳು.. ಹೀಗೆ ಪ್ರಮುಖ ದಾಖಲೆಗಳು ಇತಿಹಾಸ ಪುಟ ಸೇರಿವೆ. ಅವುಗಳನ್ನು ಒಂದೊಂದಾಗೇ ನೋಡೋಣ.!
1. 117 ರನ್ಗಳಿಗೆ ಆಲೌಟ್ ಆದ ಟೀಮ್ ಇಂಡಿಯಾ, ಆಸಿಸ್ ವಿರುದ್ಧ ದಾಖಲಿಸಿದ ಮೂರನೇ ಕನಿಷ್ಠ ಮೊತ್ತ ಇದಾಗಿದೆ. ಈ ಹಿಂದೆಯೂ ಒಡಿಐ ಕ್ರಿಕೆಟ್ನಲ್ಲಿ ಎರಡು ಬಾರಿ ಲೋ ಸ್ಕೋರ್ಗೆ ಆಲ್ಔಟ್ ಆಗಿದ್ದ ದಾಖಲೆ ಬರೆದಿತ್ತು. 1981ರಲ್ಲಿ 63 ಮತ್ತು 2000ರಲ್ಲಿ 100 ರನ್ಗಳಿಗೆ ಮೆನ್ ಇನ್ ಬ್ಲೂ ಸರ್ವಪತನ ಕಂಡಿತ್ತು.
2. ಕಡಿಮೆ ಮೊತ್ತಕ್ಕೆ ಕುಸಿತ ಕಂಡ ಭಾರತ, ತವರಿನಲ್ಲಿ ನಾಲ್ಕನೇ ಬಾರಿಗೆ ಈ ರೀತಿ ಸಾಧನೆ ಮಾಡಿದೆ. 1986ರಲ್ಲಿ ಶ್ರೀಲಂಕಾ ಎದುರು 78 ರನ್ಗಳಿಗೆ, 1993ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 100 ರನ್ಗಳಿಗೆ, 2017ರಲ್ಲಿ ಆಸಿಸ್ ವಿರುದ್ಧವೇ 112 ರನ್ಗಳಿಗೆ ಭಾರತದ ನೆಲದಲ್ಲಿ ಅಲ್ಪಮೊತ್ತಕ್ಕೆ ಕುಸಿತ ಕಂಡ ದಾಖಲೆ ಬರೆದಿದೆ.
3. ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್ ವಿಶೇಷ ಸಾಧನೆ ಮಾಡಿದ್ದು, ದಿಗ್ಗಜರ ಎಲೈಟ್ ಲೀಸ್ಟ್ ಪ್ರವೇಶ ನೀಡಿದ್ದಾರೆ. ಏಕದಿನ ಕ್ರಿಕೆಟ್ನ ಇನ್ನಿಂಗ್ಸ್ವೊಂದರಲ್ಲಿ 5 ವಿಕೆಟ್ಗಳ ಗೊಂಚಲು ಪಡೆದವರ ಪಟ್ಟಿಯಲ್ಲಿವಿಶ್ವದ 3ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಮಿಚೆಲ್ ಸ್ಟಾರ್ಕ್ 9 ಬಾರಿ ಈ ಸಾಧನೆ ಮಾಡಿದ್ದರೆ, ಅಗ್ರಸ್ಥಾನದಲ್ಲಿರುವ ವಕಾರ್ ಯೂನಿಸ್ 13 ಬಾರಿ, ಮುತ್ತಯ್ಯ ಮುರಳೀಧರನ್ 10 ಬಾರಿ, ಶಾಹೀದ್ ಅಫ್ರಿದಿ, ಬ್ರೆಟ್ಲೀ ಕೂಡ 9 ಬಾರಿ ಐದು ವಿಕೆಟ್ ಉರುಳಿಸಿದ್ದಾರೆ.
4. ಎಸೆತಗಳನನ್ನು ಉಳಿಸಿರುವ ಲೆಕ್ಕಾಚಾರದಲ್ಲೂ ಟೀಮ್ ಇಂಡಿಯಾ, ಕಳಪೆ ಸಾಧನೆ ಮಾಡಿದೆ. 11 ಓವರ್ಗಳಲ್ಲಿ ಚೇಸ್ ಮಾಡಿದ ಆಸಿಸ್, ಇನ್ನೂ 39 ಓವರ್ಗಳನ್ನು ಅಂದರೆ 234 ಎಸೆತಗಳು ಬಾಕಿ ಇರುವಂತೆಯೇ 118 ರನ್ಗಳ ಸವಾಲನ್ನು ದಾಟಿತ್ತು.
5. ಭಾರತ ನೀಡಿದ್ದ ಸುಲಭ ಗುರಿಯನ್ನು 11 ಓವರ್ಗಳಲ್ಲೇ ಚೇಸ್ ಮಾಡುವ ಮೂಲಕ, ಅತಿ ವೇಗದ ಚೇಸ್ ಎಂಬ ದಾಖಲೆಯನ್ನು ಆಸಿಸ್ ತನ್ನ ಹೆಸರಿಗೆ ಬರೆದುಕೊಂಡಿತು. 2004ರಲ್ಲಿ ಯುಎಸ್ಎಸ್ ತಂಡ 7.5 (66 ರನ್) ಓವರ್ಗಳಲ್ಲೇ ಗುರಿ ತಲುಪಿತ್ತು. ಇನ್ನು ಆಸ್ಟ್ರೇಲಿಯಾ, ವಿಂಡೀಸ್ ಎದುರು 9.2 ಓವರ್ಗಳಲ್ಲಿ 71 ರನ್ಗಳ ಗುರಿ ಮುಟ್ಟಿತ್ತು.
6. 2020ರ ಬಳಿಕ ಟೀಮ್ ಇಂಡಿಯಾ 4ನೇ ಬಾರಿಗೆ 10 ವಿಕೆಟ್ಗಳ ಸೋಲು ಕಂಡಿದೆ. ಟಿ20ಯಲ್ಲಿ ಎರಡು ಬಾರಿ ಎಂಬುದು ವಿಶೇಷ. 2020ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ, 2021ರ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಎದುರು, 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು, ಇದೀಗ ಈ ಪಂದ್ಯದಲ್ಲಿ 10 ವಿಕೆಟ್ಗಳ ಹೀನಾಯ ಸೋಲು ಕಂಡಿದೆ.