ಕನ್ನಡ ಸುದ್ದಿ  /  Sports  /  Sagar Rathee Named As Captain Of Tamil Thalaivas For Pro Kabaddi League Season 10 Pkl 2023 Ajinkya Pawar Sahil Gulia Jra

ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಗೆ ಹೊಸ ನಾಯಕನ ಘೋಷಿಸಿದ ತಮಿಳ್ ತಲೈವಾಸ್; ಸಾಗರ್ ರಥೀ ಕ್ಯಾಪ್ಟನ್

Tamil Thalaivas: ಹೊಸ ಋತುವಿನ ಪ್ರೊ ಕಬಡ್ಡಿಗಾಗಿ ತಮಿಳ್‌ ತಲೈವಾಸ್‌ ತಂಡವು ನೂತನ ನಾಯಕನನ್ನು ಘೋಷಿಸಿದೆ.

ತಮಿಳು ತಲೈವಾಸ್ ನೂತನ ನಾಯಕನಾಗಿ ಸಾಗರ್ ರಥೀ ಆಯ್ಕೆ
ತಮಿಳು ತಲೈವಾಸ್ ನೂತನ ನಾಯಕನಾಗಿ ಸಾಗರ್ ರಥೀ ಆಯ್ಕೆ

ಏಕದಿನ ವಿಶ್ವಕಪ್‌ ಮುಗಿಯುತ್ತಿದ್ದಂತೆಯೇ, ಕ್ರೀಡಾಭಿಮಾನಿಗಳಿಗೆ ಮನರಂಜನೆ ಉಣಬಡಿಸಲು ಪ್ರೊ ಕಬಡ್ಡಿ (Pro Kabaddi League 2023) ಹತ್ತಿರ ಬರುತ್ತಿದೆ. 10ನೇ ಆವೃತ್ತಿ ಪಿಕೆಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಡಿಸೆಂಬರ್​ 2ರಿಂದ ದೇಶಾದ್ಯಂತ ಕಬಡ್ಡಿ ಪಂಗಾ ಶುರುವಾಗುತ್ತಿದೆ. ದೇಶಾದ್ಯಂತ ಕಬಡ್ಡಿ ಕ್ರೇಜ್‌ ಹಬ್ಬಲು ಎಲ್ಲಾ 12 ತಂಡಗಳು ಸಜ್ಜಾಗಿವೆ. ಪಂದ್ಯಾವಳಿಯ ಆರಂಭಕ್ಕೆ ಕೆಲವೇ ದಿನಗಳು ಉಳದಿರುವಂತೆ, ತಮಿಳ್ ತಲೈವಾಸ್ (Tamil Thalaivas) ತಂಡವು ನೂತನ ನಾಯಕನನ್ನು ಘೋಷಿಸಿದೆ.

10ನೇ ಸೀಸನ್‌ನ ಪ್ರೊ ಕಬಡ್ಡಿ ಲೀಗ್‌ಗೆ ಸಾಗರ್ ರಥೀ (Sagar Rathee) ಅವರನ್ನು ತಮಿಳ್ ತಲೈವಾಸ್ ತಂಡವು ನಾಯಕನಾಗಿ ಘೋಷಣೆ ಮಾಡಿದೆ. ಅವರೊಂದಿಗೆ, ಅಜಿಂಕ್ಯ ಪವಾರ್ ಮತ್ತು ಸಾಹಿಲ್ ಗುಲಿಯಾ ಅವರನ್ನು ಉಪನಾಯಕರನ್ನಾಗಿ ಘೋಷಿಸಿದೆ.

ಇದನ್ನೂ ಓದಿ | PKL Season 10: ಪ್ರೊ ಕಬಡ್ಡಿ ಲೀಗ್ ಆರಂಭಕ್ಕೆ ದಿನಗಣನೆ; ಇಲ್ಲಿದೆ 12 ತಂಡಗಳ ನಾಯಕರು, ಮಾಲೀಕರ ಪಟ್ಟಿ​

ನೂತನ ನಾಯಕ ಸಾಗರ್ ರಥೀ ಮತ್ತು ಇಬ್ಬರು ಉಪನಾಯಕರ ಮಾರ್ಗದರ್ಶನದಲ್ಲಿ ತಂಡವು ವಿನೂತನ ಅಭಿಯಾನಕ್ಕೆ ಎದುರು ನೋಡುತ್ತಿದೆ. ಅಲ್ಲದೆ ಅಭಿಮಾನಿಗಳಿಂದ ವ್ಯಾಪಕ ಬೆಂಬಲವನ್ನು ನಿರೀಕ್ಷಿಸುತ್ತಿದೆ. ಕಳೆದ ಆವೃತ್ತಿಯಲ್ಲಿ ತಂಡವು ಪವನ್‌ ಸೆಹ್ರಾವತ್‌ ಅವರನ್ನು ದುಬಾರಿ ಮೊತ್ತ ಕೊಟ್ಟು ಖರೀದಿಸಿತ್ತು. ಆದರೆ, ಗಾಯಾಳುವಾಗಿ ಅವರು ಟೂರ್ನಿಯಿಂದ ಹೊರಬಿದ್ದ ಕಾರಣದಿಂದ ತಂಡದಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ.

ಪಿಕೆಎಲ್‌ 10ನೇ ಆವೃತ್ತಿಗೆ ತಮಿಳ್ ತಲೈವಾಸ್ ತಂಡ ಹೀಗಿದೆ

ರೈಡರ್ಸ್: ಅಜಿಂಕ್ಯ ಪವಾರ್ (ಎಡ ರೈಡರ್), ಹಿಮಾಂಶು ನರ್ವಾಲ್ (ಎಡ ರೈಡರ್), ನರೇಂದ್ರ ಕಾಂಡೋಲಾ (ಎಡ ರೈಡರ್), ಹಿಮಾಂಶು ತುಶೀರ್ (ರೈಟ್ ರೈಡರ್), ಕೆ ಸೆಲ್ವಮಣಿ (ರೈಟ್ ರೈಡರ್), ವಿಶಾಲ್ ಚಹಾಲ್ (ರೈಟ್ ರೈಡರ್), ನಿತಿನ್ ಸಿಂಗ್ (ರೈಟ್ ರೈಡರ್), ಜತಿನ್ ಫೋಗಟ್ (ರೈಟ್ ರೈಡರ್), ಎಂ ಲಕ್ಷ್ಮಣ್ (ರೈಟ್ ರೈಡರ್), ಸತೀಶ್ ಕಣ್ಣನ್ (ರೈಟ್ ರೈಡರ್).

ಡಿಫೆಂಡರ್‌ಗಳು: ಸಾಗರ್ ರತಿ (ಬಲ ಕಾರ್ನರ್), ಹಿಮಾಂಶು ಯಾದವ್ (ಎಡ ಕಾರ್ನರ್), ಎಂ‌ ಅಭಿಷೇಕ್ (ರೈಟ್ ಕವರ್), ಸಾಹಿಲ್ ಗುಲಿಯಾ (ಎಡ ಕಾರ್ನರ್), ಮೋಹಿತ್ ಜಖರ್ (ಎಡ ಕವರ್), ಆಶಿಶ್ ಮಲಿಕ್ (ಎಡ ಕವರ್), ಅಮೀರ್ಹೋಸೇನ್ ಬಸ್ತಾಮಿ (ಬಲ ಕಾರ್ನರ್), ನಿತೇಶ್ ಕುಮಾರ್ (ಎಡ ಕಾರ್ನರ್), ರೌನಕ್ ಖರ್ಬ್ (ಬಲ ಕವರ್), ಮೊಹಮ್ಮದ್ರೇಜಾ ಕಬೋದ್ರಹಂಗಿ (ಎಡ ಕಾರ್ನರ್).

ಆಲ್ ರೌಂಡರ್: ರಿತಿಕ್

10ನೇ ಆವೃತ್ತಿ ಪಿಕೆಎಲ್ ಉದ್ಘಾಟನಾ ಪಂದ್ಯವು ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನ ಅರೆನಾದಲ್ಲಿ ಪ್ರಾರಂಭವಾಗಲಿದೆ. ಅಹಮದಾಬಾದ್‌ ಹೊರತುಪಡಿಸಿ ಬೆಂಗಳೂರು, ಪುಣೆ, ಚೆನ್ನೈ, ನೋಯ್ಡಾ, ಮುಂಬೈ, ಜೈಪುರ, ಹೈದರಾಬಾದ್, ಪಾಟ್ನಾ, ದೆಹಲಿ, ಕೋಲ್ಕತ್ತಾ ಮತ್ತು ಪಂಚಕುಲದಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ. ಟ್ರೋಫಿಗಾಗಿ ಒಟ್ಟು 12 ತಂಡಗಳು ಬರೋಬ್ಬರಿ ಮೂರು ತಿಂಗಳ ಕಾದಾಟ ನಡೆಸಲಿವೆ.