ಪ್ಲೀಸ್ ಸ್ಯಾಲರಿ ಕೊಡಿ; ಐಎಸ್ಎಲ್ ಪಂದ್ಯದ ಮಧ್ಯೆಯೇ ವೇತನ ನೀಡುವಂತೆ ಬ್ಯಾನರ್ ಹಿಡಿದ ಹೈದರಾಬಾದ್ ಎಫ್​ಸಿ ಸಿಬ್ಬಂದಿ
ಕನ್ನಡ ಸುದ್ದಿ  /  ಕ್ರೀಡೆ  /  ಪ್ಲೀಸ್ ಸ್ಯಾಲರಿ ಕೊಡಿ; ಐಎಸ್ಎಲ್ ಪಂದ್ಯದ ಮಧ್ಯೆಯೇ ವೇತನ ನೀಡುವಂತೆ ಬ್ಯಾನರ್ ಹಿಡಿದ ಹೈದರಾಬಾದ್ ಎಫ್​ಸಿ ಸಿಬ್ಬಂದಿ

ಪ್ಲೀಸ್ ಸ್ಯಾಲರಿ ಕೊಡಿ; ಐಎಸ್ಎಲ್ ಪಂದ್ಯದ ಮಧ್ಯೆಯೇ ವೇತನ ನೀಡುವಂತೆ ಬ್ಯಾನರ್ ಹಿಡಿದ ಹೈದರಾಬಾದ್ ಎಫ್​ಸಿ ಸಿಬ್ಬಂದಿ

Hyderabad FC management : ಆರ್ಥಿಕ ಸಂಕಷ್ಟ ತಲೆತೋರಿದ ಕಾರಣ ವೇತನ ಕಾರಣ ಗೋವಾ ವಿರುದ್ಧದ ಐಎಸ್​ಎಲ್ ಪಂದ್ಯದ ವೇಳೆ ಹೈದಾರಾಬಾದ್ ಎಫ್​ಸಿ ಸಿಬ್ಬಂದಿ, ಪ್ಲೀಸ್​ ಸ್ಯಾಲರಿ ಎಂಬ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು.

ಐಎಸ್ಎಲ್ ಪಂದ್ಯದ ಮಧ್ಯೆಯೇ ವೇತನ ನೀಡುವಂತೆ ಬ್ಯಾನರ್ ಹಿಡಿದ ಹೈದರಾಬಾದ್ ಎಫ್​ಸಿ ಸಿಬ್ಬಂದಿ
ಐಎಸ್ಎಲ್ ಪಂದ್ಯದ ಮಧ್ಯೆಯೇ ವೇತನ ನೀಡುವಂತೆ ಬ್ಯಾನರ್ ಹಿಡಿದ ಹೈದರಾಬಾದ್ ಎಫ್​ಸಿ ಸಿಬ್ಬಂದಿ

ಹೈದರಾಬಾದ್: ಗಚ್ಚಿಬೌಲಿ ಸ್ಟೇಡಿಯಂ ಎಂದು ಕರೆಯಲ್ಪಡುವ ಜಿಎಂಸಿ ಬಾಲಯೋಗಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಇಂಡಿಯನ್ ಸೂಪರ್ ಲೀಗ್ (Indian Super League) ಪಂದ್ಯದ ವೇಳೆ ಹೈದರಾಬಾದ್ ಎಫ್‌ಸಿ (Hyderabad FC) ತಂಡದ ಸದಸ್ಯರು ದಯವಿಟ್ಟು ಸಂಬಳ ನೀಡಿ ಎಂದು ಬ್ಯಾನರ್​ ಹಿಡಿದ ಕಾರಣ ಟೀಮ್ ಮ್ಯಾನೇಜ್ಮೆಂಟ್​ ಅನ್ನು ಮುಜುಗರಕ್ಕೀಡು ಮಾಡಿದೆ. ಪಂದ್ಯದ ವೇಳೆ ಸ್ಯಾಲರಿ ಪ್ಲೀಸ್​ ಎಂದ ದೊಡ್ಡ ಬ್ಯಾನರ್​ ಹಿಡಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರನ್ನು ಮೈದಾನದ ಹೊರಗೆ ಕರದೊಯ್ದರು.

ಹೈದರಾಬಾದ್ ಎಫ್‌ಸಿಯಲ್ಲಿ ಹಣಕಾಸಿನ ಮುಗ್ಗಟ್ಟು ತಲೆತೋರಿದ ಕಾರಣ ಆಟಗಾರರು, ತರಬೇತುದಾರರು, ಸಿಬ್ಬಂದಿ ಸಂಬಳ ಪಡೆದಿಲ್ಲ. ಹಾಗಾಗಿ ಗೋವಾ ಎದುರಿನ ಪಂದ್ಯದ ವೇಳೆ ಹೈದರಾಬಾದ್ ಎಫ್‌ಸಿ ಸಿಬ್ಬಂದಿ ಬಾಕಿ ವೇತನವನ್ನು ಪಾವತಿಸುವಂತೆ ಒತ್ತಾಯಿಸಿ 'ಪ್ಲೀಸ್​ ಸ್ಯಾಲರಿ' ಎಂಬ ಬ್ಯಾನರ್ ಹಿಡಿದರು. ತಂಡದ ನೌಕರರು ಆಟದುದ್ದಕ್ಕೂ ವೇತನ ಪಾವತಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ತಮ್ಮ ಬಾಕಿ ಹಣವನ್ನು ತಕ್ಷಣವೇ ಪಾವತಿಸಬೇಕೆಂದು ಒತ್ತಾಯಿಸಿದರು.

ನಿಷೇಧದ ಭೀತಿಯಲ್ಲಿ ಹೈದರಾಬಾದ್ ಎಫ್​​ಸಿ

ಇದು ಕ್ಲಬ್‌ನ ಭಾವೋದ್ರಿಕ್ತ ಸಿಬ್ಬಂದಿಗಳಿಂದ ಹಿಡಿದಿರುವ ಬ್ಯಾನರ್, ಮೈದಾನ ಮತ್ತು ಹೊರಗೆ ಹೈದರಾಬಾದ್ ಎಫ್‌ಸಿ ಎದುರಿಸುತ್ತಿರುವ ಸವಾಲುಗಳನ್ನು ನಿಸ್ಸಂದಿಗ್ಧವಾಗಿ ನೆನಪಿಸುತ್ತದೆ. ತಂಡ ಮೈದಾನದಲ್ಲಿ ಹೋರಾಡುತ್ತಿದ್ದರೆ, ಸಿಬ್ಬಂದಿ ತಮ್ಮ ಧ್ವನಿಯನ್ನು ವಿಭಿನ್ನವಾಗಿ ಕೇಳಿದರು. ಪಾವತಿ ಸಂಬಂಧಿತ ಸಮಸ್ಯೆಗಳ ನಂತರ ಬಹಳಷ್ಟು ಪ್ರಮುಖ ಆಟಗಾರರು ಹೈದರಾಬಾದ್ ಎಫ್‌ಸಿ ತಂಡವನ್ನು ತೊರೆದಿದ್ದೂ ಇದೆ. ಪ್ರಸ್ತುತ ನಿಷೇಧದ ಭೀತಿಗೆ ಹೈದರಾಬಾದ್ ಎಫ್‌ಸಿ, ಜನವರಿ ಟ್ರಾನ್ಸ್​ಫರ್​ ವಿಂಡೋದಲ್ಲಿ ಯಾವುದೇ ಆಟಗಾರರೊಂದಿಗೆ ಸಹಿ ಮಾಡಿಕೊಂಡಿಲ್ಲ.

ಮುಖವಾಡ ಹಾಕಿಕೊಂಡಿದ್ದ ಸಿಬ್ಬಂದಿ

ವೇತನ ನೀಡುವಂತೆ ನಡೆಸಿದ ಪ್ರತಿಭಟನೆಯನ್ನು ತೆರವುಗೊಳಿಸಿದ ಭದ್ರತಾ ಸಿಬ್ಬಂದಿಯ ಕ್ರಮವು ಪ್ರೇಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿತು. ತೆರೆಮರೆಯಲ್ಲಿ ಹೈದರಾಬಾದ್ ಎಫ್‌ಸಿ ಹಣಕಾಸಿನ ಅಸ್ಥಿರತೆಯಿಂದ ಉಂಟಾದ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ವಿಳಂಬವಾದ ಅಥವಾ ಪಾವತಿಸದ ವೇತನದ ವರದಿಗಳು ಕ್ಲಬ್‌ನ ಮೇಲೆ ನೆರಳು ಬೀರಿದೆ. ಪ್ರತಿಭಟನೆ ನಡೆಸಿದ ಸಿಬ್ಬಂದಿ ಮುಖವಾಡ ಹಾಕಿಕೊಂಡಿದ್ದರು.

ಮಾಜಿ ಕೋಚ್ ಹೇಳಿದ್ದೇನು?

2021–22ರ ಆವೃತ್ತಿತಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹೈದರಾಬಾದ್ ಫುಟ್ಬಾಲ್ ತಂಡವು ಕಳೆದ ಕೆಲವು ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದೆ. 2020 ರಿಂದ 2023 ರವರೆಗೆ ತಂಡದ ಮುಖ್ಯ ಕೋಚ್​ ಆಗಿದ್ದ ಮನೋಲೋ ಮಾರ್ಕ್ವೆಜ್, ಕ್ಲಬ್‌ನ ಆಡಳಿತವನ್ನು ಟೀಕಿಸಿದರು. ಕ್ಲಬ್ ಅನ್ನು ನಿರ್ವಹಿಸುವ ಸರಿಯಾದ ಸಿಬ್ಬಂದಿಯನ್ನೇ ಹೊಂದಿಲ್ಲ ಎಂಬುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಮಾರ್ಕ್ವೆಜ್, ಸ್ಪೋರ್ಟ್ಸ್​ ಸ್ಟಾರ್​ಗೆ ತಿಳಿಸಿದರು.

ಸಮಸ್ಯೆ ಬರೆಹರಿಸಲು ಯತ್ನ ಎನ್ನುತ್ತಿವೆ ಮೂಲಗಳು

ಸಿಬ್ಬಂದಿ ತಮ್ಮ ವೇತನವನ್ನು ಸಮಯಕ್ಕೆ ಸರಿಯಾಗಿ ಸ್ವೀಕರಿಸದ ಅಥವಾ ಅದನ್ನು ಸ್ವೀಕರಿಸದಿರುವ ಬಗ್ಗೆ ವರದಿಗಳಿವೆ. ಕ್ಲಬ್ ಮೂಲವು ಸಮಸ್ಯೆಯನ್ನು ಒಪ್ಪಿಕೊಂಡಿದ್ದು, ಸಮಸ್ಯೆಗಳನ್ನು ಸರಿಪಡಿಸಲು ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪರಿಸ್ಥಿತಿ ಸ್ವಲ್ಪ ಕೆಟ್ಟದಾಗಿದೆ. ಸಂಬಳದ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಆಶಾದಾಯಕವಾಗಿ, ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂಬ ಮೂಲಗಳು ಬಂದಿವೆ.

ಗೋವಾ ವಿರುದ್ಧ ಸೋಲು, ಅಂಕಪಟ್ಟಿಯಲ್ಲಿ ಕೊನೆ ಸ್ಥಾನ

ಎಫ್‌ಸಿ ಗೋವಾ ವಿರುದ್ಧ ಹೈದರಾಬಾದ್ ಎಫ್​ಸಿ 2-0 ಗೋಲುಗಳಿಂದ ಸೋಲು ಕಂಡಿತು. ಈವರೆಗೂ 12 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಹೈದರಾಬಾದ್ ಎಫ್​ಸಿ, ಗೆಲುವಿನ ಖಾತೆ ತೆರೆಯದೆ 4 ಡ್ರಾ, 8 ಸೋಲು ಕಂಡಿದೆ. ಹೈದರಾಬಾದ್ ಪ್ರಸ್ತುತ ಇಂಡಿಯನ್ ಸೂಪರ್ ಲೀಗ್​ನಲ್ಲಿ ಬ್ಯಾಕ್-ಟು-ಬ್ಯಾಕ್ ಸೋಲುಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.