ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ಗೆ ಧಾರವಾಡದ ಸಮರ್ಥ್ ಕುರ್ಡಿಕೇರಿ ಭಾರತ ತಂಡಕ್ಕೆ ಆಯ್ಕೆ
International Table Tennis: ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ ಟೂರ್ನಿಗೆ ಧಾರವಾಡದ ಸಮರ್ಥ್ ಕುರ್ಡಿಕೇರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಹುಬ್ಬಳ್ಳಿ: ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬರುವ ’ಡಬ್ಲುಟಿಟಿ’ ಸ್ಟಾರ್ ಕಂಟೆಂಡರ್ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಧಾರವಾಡದ ಸಮರ್ಥ್ ಕುರ್ಡಿಕೇರಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಈ ಮಹತ್ವದ ಟೂರ್ನಿ ಚೆನ್ನೈನಲ್ಲಿ ಮೊದಲ ಬಾರಿಗೆ ಮಾರ್ಚ್ 25 ರಿಂದ 29ರ ರವರೆಗೆ ನಡೆಯಲಿದೆ. ಪ್ರಸ್ತುತ ಭಾರತದ 35ನೇ ಸ್ಥಾನದಲ್ಲಿರುವ ಸಮರ್ಥ್, ಕಾಸ್ಮೋಸ್ ಕ್ಲಬ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಬೆಂಗಳೂರಿಗೆ ಸ್ಥಳಾಂತರಗೊಂಡರು. ಪ್ರಸ್ತುತ ಭಾರತದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಟೂರ್ನಿಯಲ್ಲಿ ಜಪಾನ್‌ನ ಟಿ ಹರಿಮೊಟೊ, ಬ್ರೆಜಿಲ್‌ನ ಎಚ್ ಕ್ಯಾಲ್ಡೆರಾನೊ, ಡೆನ್ಮಾರ್ಕ್‌ನ ಜೆ ಗ್ರೋತ್, ನೈಜೇರಿಯಾದ ಕ್ವಾದ್ರಿ ಅರಿನಾ, ಶರತ್ ಕಮಲ್, ಸುತಿತ್ರಾ ಮುಖರ್ಜಿ, ಸ್ವಸ್ತಿಕ್ ಘೋಷ್, ಮಾನವ್ ಥಕ್ಕರ್, ಭಾರತದ ಮಾನವ್ ಥಕ್ಕರ್ ಆಟವಾಡಲಿದ್ದಾರೆ. ಸಮರ್ಥಗೆ ಧಾರವಾಡ ಕಾಸ್ಮೋಸ್ ಕ್ಲಬ್ ಅಧ್ಯಕ್ಷ ನಿತೀನ್ ಟಗರಪುರ ಸೇರಿದಂತೆ ಕ್ಲಬ್‌ನ ಸದಸ್ಯರು ಶುಭ ಹಾರೈಸಿದ್ದಾರೆ.
ಭಾರತದ ಪುರುಷ-ಮಹಿಳೆಯರ ಕಬಡ್ಡಿ ತಂಡಕ್ಕೆ ಗೆಲುವು
ಇಂಗ್ಲೆಂಡ್‌ನಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ಎರಡೂ ತಂಡಗಳು ಗೆದ್ದು ಟ್ರೋಫಿಗೆ ಮುತ್ತಿಕ್ಕಿವೆ. ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವುದರೊಂದಿಗೆ ಪ್ರಶಸ್ತಿಗೆ ಗೆಲ್ಲುವಲ್ಲಿ ಯಶಸ್ವಿಯಾದವು. ಈ ಭಾಗವಹಿಸಿದ್ದ ಎರಡೂ ತಂಡಗಳು ಟ್ರೋಫಿ ಗೆಲ್ಲುವ ಮೂಲಕ ಗಮನ ಸೆಳೆದಿವೆ.
ವಿಶೇಷ ಎಂದರೆ ಫೈನಲ್‌ನಲ್ಲಿ ಎರಡೂ ತಂಡಗಳು ಜಯಿಸಿದ್ದು ಇಂಗ್ಲೆಂಡ್ ವಿರುದ್ಧ. ಭಾರತೀಯ ಮಹಿಳಾ ಕಬಡ್ಡಿ ತಂಡವು ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಅನ್ನು 57-34 ಅಂತರದಿಂದ ಸೋಲಿಸಿತು. ಭಾರತೀಯ ಪುರುಷರ ತಂಡವು ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧವೇ 44-41 ಅಂತರದಿಂದ ಗೆದ್ದು ಬೀಗಿತು.
2025ರ ಕಬಡ್ಡಿ ವಿಶ್ವಕಪ್‌ನಲ್ಲಿ ಭಾರತ ಪುರುಷರ ತಂಡವು ಅಜೇಯವಾಗಿ ಟೂರ್ನಿ ಮುಗಿಸಿದೆ. ಗುಂಪು ಪಂದ್ಯಗಳಲ್ಲಿ ಇಟಲಿ, ಹಾಂಗ್ ಕಾಂಗ್ ಮತ್ತು ವೇಲ್ಸ್ ತಂಡಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಸ್ಕಾಟ್ಲೆಂಡ್ ವಿರುದ್ಧ ಡ್ರಾ ಮಾಡಿಕೊಳ್ಳುವ ಮೂಲಕ ಕ್ವಾರ್ಟರ್-ಫೈನಲ್ ಸ್ಥಾನ ಭದ್ರಪಡಿಸಿಕೊಂಡ ಭಾರತ,0ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡವು ಹಂಗೇರಿಯನ್ ತಂಡವನ್ನು ಸೋಲಿಸಿತ್ತು.
ಆ ತಂಡವನ್ನು 69-24 ಅಂತರದಿಂದ ಸೋಲಿಸಿ, ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ವೇಲ್ಸ್ ತಂಡವನ್ನು 93-37 ಅಂತರದಿಂದ ಸೋಲಿಸಿ ಪ್ರಶಸ್ತಿ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿತು. ಇದೀಗ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದೆ.
ಮಹಿಳಾ ತಂಡಕ್ಕೆ ಏಕಪಕ್ಷೀಯ ಗೆಲುವು
ಈ ವಿಶ್ವಕಪ್‌ನ ಪ್ರತಿಯೊಂದು ಪಂದ್ಯದಲ್ಲೂ ಭಾರತೀಯ ಮಹಿಳಾ ತಂಡ ಪ್ರಾಬಲ್ಯ ಸಾಧಿಸಿತು. ಇದರಲ್ಲಿ ಅವರು ಗುಂಪು ಹಂತದಲ್ಲಿ ವೇಲ್ಸ್ ತಂಡವನ್ನು 89-18 ಅಂತರದಿಂದ ಸೋಲಿಸಿದರು. ನಂತರ ಪೋಲೆಂಡ್ ತಂಡವನ್ನು 104-15 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾದರು. ಸೆಮಿಫೈನಲ್‌ನಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡವು ಹಾಂಗ್ ಕಾಂಗ್ ಚೀನಾವನ್ನು ಎದುರಿಸಿತು.
ಆ ತಂಡವನ್ನು 53-15 ಅಂತರದಿಂದ ಗೆದ್ದು ಫೈನಲ್‌ಗೆ ಪ್ರವೇಶಿಸಿತು. ಪ್ರಶಸ್ತಿ ಪಂದ್ಯದಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡ ಇಂಗ್ಲೆಂಡ್ ತಂಡವನ್ನು 57-34 ಅಂತರದಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತು.
