ಕನ್ನಡ ಸುದ್ದಿ  /  Sports  /  Samson Trends After Suryakumars 2nd Golden Duck In A Row Calls Grow For Rr Skippers Inclusion In Odi Team

Team India: ಸೂರ್ಯ ಸತತ ಗೋಲ್ಡನ್​​ ಡಕ್​.. ಸಂಜು ವಿಚಾರದಲ್ಲಿ ಬಿಸಿಸಿಐ ಅನ್ಯಾಯ.. ಟ್ರೆಂಡ್​ ಆಗ್ತಿದ್ದಾರೆ ಸ್ಯಾಮ್ಸನ್​​!

ಸೂರ್ಯಕುಮಾರ್​ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ಟ್ವಿಟರ್​​ನಲ್ಲಿ ಸಂಜು ಸ್ಯಾಮ್ಸನ್​ ಹೆಸರು ಫುಲ್​ ಟ್ರೆಂಡಿಂಗ್​​ನಲ್ಲಿದೆ. ಪ್ರತಿಭಾವಂತ ಕ್ರಿಕೆಟಿಗನನ್ನು ಪದೆ ಪದೇ ಕಡೆಗಣನೆ ಮಾಡುತ್ತಿರುವುದಕ್ಕೆ ಕ್ರಿಕೆಟ್​ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಸೂರ್ಯಕುಮಾರ್​​ ಮತ್ತು ಸಂಜು ಸ್ಯಾಮ್ಸನ್​​
ಸೂರ್ಯಕುಮಾರ್​​ ಮತ್ತು ಸಂಜು ಸ್ಯಾಮ್ಸನ್​​ (Twitter)

ಕಳೆದೊಂದು ವರ್ಷದಿಂದ ವಿಶ್ವ ಕ್ರಿಕೆಟ್​​ನಲ್ಲಿ ಸೂರ್ಯಕುಮಾರ್​ ಯಾದವ್​ ಮೇನಿಯಾ ನಡೀತಿದೆ. ಕ್ರಿಕೆಟ್​​ ಲೋಕದ ನಯಾ ಸೆನ್ಸೇಷನ್​.! ತನ್ನ ಡಿಸ್ಟ್ರಕ್ಟಿವ್​ ಬ್ಯಾಟಿಂಗ್​ನಿಂದಲೇ ರೆಕಾರ್ಡ್ಸ್​​ಗಳನ್ನ ಧೂಳಿಪಟ ಮಾಡಿದ ಬ್ಯಾಟ್ಸ್​​ಮನ್​.! ಮಿಸ್ಟರ್​​ 360 ಆಟಕ್ಕೆ ದಿಗ್ಗಜರೇ ಕ್ಲೀನ್​ಬೋಲ್ಡ್​ ಆಗಿದ್ದಾರೆ. ಫ್ಯಾನ್ಸ್​ ಅಂತೂ ಫಿದಾ ಆಗಿದ್ದಾರೆ. ಹಾಗಿದ್ದರೂ ಸ್ಕೈ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಏಕದಿನ ಕ್ರಿಕೆಟ್​​ನಲ್ಲಿ ಅಟ್ಟರ್​​ ಫ್ಲಾಪ್.​​!

2022ರ ವರ್ಷ.. ಸೂರ್ಯಕುಮಾರ್​​ ಪಾಲಿನ ಗೋಲ್ಡನ್​ ಇಯರ್​. ಟಿ20 ಕ್ರಿಕೆಟ್​ನಲ್ಲಿ ಒಂದೇ ವರ್ಷದಲ್ಲಿ 2 ಸೆಂಚುರಿ ಸಿಡಿಸಿದ ಸೂರ್ಯ, ಕಳೆದ ವರ್ಷ ಬರೋಬ್ಬರಿ 1164 ರನ್​ ಗಳಿಸಿದ್ದರು. ಹೈಯೆಸ್ಟ್​​ ರನ್​ ಗೆಟ್ಟರ್​​ ಆಗಿ 2022ಕ್ಕೆ ಗುಡ್​ ಬೈ ಹೇಳಿದ ಸೂರ್ಯ, 2023ಕ್ಕೆ ಹಾಯ್​ ಹೇಳಿದ್ದು ಸೆಂಚುರಿ ಸಿಡಿಸಿ.! ಈ ಅಮೋಘ ಪರ್ಫಾಮೆನ್ಸ್​​ನಿಂದಲೇ ಈಗ ಏಕದಿನ ಟೀಮ್​ಗೂ ಎಂಟ್ರಿಕೊಟ್ಟಿದ್ದಾರೆ.

ಆಸಿಸ್​ ವಿರುದ್ಧ ಡಬಲ್​ ಗೋಲ್ಡನ್​ ಡಕ್​.!

ಶ್ರೇಯಸ್​ ಅಯ್ಯರ್​​ ಅಲಭ್ಯತೆಯಲ್ಲಿ ಸೂರ್ಯಕುಮಾರ್ ಏಕದಿನ ಕ್ರಿಕೆಟ್​ನಲ್ಲೂ ಅವಕಾಶ ಸಿಕ್ಕಿದೆ. ಪ್ರಸ್ತುತ ನಡೆಯುತ್ತಿರುವ ಆಸಿಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಚಾನ್ಸ್​ ಗಿಟ್ಟಿಸಿಕೊಂಡ ಸೂರ್ಯ, ಆಡಿದ ಎರಡೂ ಪಂದ್ಯಗಳಲ್ಲೂ ಅಟ್ಟರ್​ ಫ್ಲಾಪ್​ ಶೋ ನೀಡಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಗೋಲ್ಡನ್​ ಡಕ್​ ಆಗಿದ್ದಾರೆ. ಎರಡು ಪಂದ್ಯಗಳಲ್ಲೂ ಮೊದಲ ಎಸೆತದಲ್ಲೇ ವಿಕೆಟ್​ ಒಪ್ಪಿಸಿದ್ದಾರೆ. ಇದರ ಬೆನ್ನಲ್ಲೇ ವಿಕೆಟ್​ ಕೀಪರ್​ ಸಂಜು ಸ್ಯಾಮ್ಸನ್​ ಟ್ರೆಂಡ್​ ಆಗುತ್ತಿದ್ದಾರೆ.

ಟ್ರೆಂಡ್​ ಆಗುತ್ತಿದ್ದಾರೆ ಸಂಜು ಸ್ಯಾಮ್ಸನ್​!

ಸೂರ್ಯ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ಟ್ವಿಟರ್​​ನಲ್ಲಿ ಸಂಜು ಸ್ಯಾಮ್ಸನ್​ ಹೆಸರು ಫುಲ್​ ಟ್ರೆಂಡಿಂಗ್​​ನಲ್ಲಿದೆ. ಪ್ರತಿಭಾವಂತ ಕ್ರಿಕೆಟಿಗನನ್ನು ಪದೆಪದೇ ಕಡೆಗಣನೆ ಮಾಡುತ್ತಿರುವುದಕ್ಕೆ ಕ್ರಿಕೆಟ್​ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಶ್ರೇಯಸ್​ ಅಯ್ಯರ್​, ಬದಲೀ ಸ್ಥಾನಕ್ಕೆ ಸಂಜು ಆಯ್ಕೆಯಾಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಯಾರನ್ನೂ ಬಿಸಿಸಿಐ ಸೆಲೆಕ್ಟ್​ ಮಾಡಲಿಲ್ಲ. ಸೂರ್ಯ ಟಿ20 ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ ನಿಜ, ಆದರ ಏಕದಿನದಲ್ಲಿ ಸಂಜು ಉತ್ತಮ ಅಂಕಿ-ಅಂಶ ಹೊಂದಿದ್ದಾರೆ ಎಂದು ಸೆಲೆಕ್ಟರ್ಸ್​ ಬಿಸಿಸಿಐ ವಿರುದ್ಧ ಫ್ಯಾನ್ಸ್​, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಕದಿನ-ಟೆಸ್ಟ್​ ಆಡೋ ತಾಳ್ಮೆ ಸೂರ್ಯಗಿಲ್ವಾ?

ಸೂರ್ಯ ಟ್ಯಾಲೆಂಟೆಡ್​ ಬ್ಯಾಟ್ಸ್​ಮನ್ ಎಂಬುದರಲ್ಲಿ ಅನುಮಾನವೇ ಬೇಡ. ಟಿ20 ಕ್ರಿಕೆಟ್​​ಗೆ ಮಾಡಿರುವ ಸಾಧನೆಯೇ ಇದಕ್ಕೆ ಉತ್ತಮ ಉದಾಹರಣೆ! ಆದರೆ ಲಾಂಗೆಸ್ಟ್​ ಫಾರ್ಮೆಟ್​​ಗೆ ಸೂರ್ಯ ಸೂಟ್​​ ಆಗ್ತಾರಾ ಅನ್ನೋದು ಈಗ ಹುಟ್ಟಿರುವ ಪ್ರಶ್ನೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ 2 ಏಕದಿನ ಪಂದ್ಯಗಳಲ್ಲೂ ಔಟಾದ ರೀತಿ ಈ ಪ್ರಶ್ನೆಯನ್ನ ಹುಟ್ಟಿಸಿದೆ.

ಏಕದಿನಕ್ಕೆ ಸ್ಕೈ​​ ಸೂಟ್​ ಆಗಲ್ವಾ.?

ಚುಟುಕು ಕ್ರಿಕೆಟ್​​ನಲ್ಲಿ ಇನ್ನೊವೇಟಿವ್​ ಶಾಟ್ಸ್​​ಗಳನ್ನ ಪ್ಲೇ ಮಾಡುವ ಸೂರ್ಯ, 360 ಡಿಗ್ರಿ ಆಟದಿಂದಲೇ ರನ್​ ಕೊಳ್ಳೆ ಹೋಡಿತಾರೆ. ಆದರೆ, ಏಕದಿನದಲ್ಲೂ ಅದೇ ಅಪ್ರೋಚ್​​ನಲ್ಲಿ ಆಡಲು ಮುಂದಾಗುತ್ತಿರುವುದು ಮುಂಬೈಕರ್ ಸುಲಭಕ್ಕೆ ವಿಕೆಟ್​​ ಕೈ ಚೆಲ್ಲಲು ಕಾರಣವಾಗುತ್ತಿದೆ. ಆಸಿಸ್​ ವಿರುದ್ಧದ ಎರಡೂ ಪಂದ್ಯಗಳಲ್ಲಿ ಸೂರ್ಯ ಕಣಕ್ಕಿಳಿದಾಗ, 40+ ಓವರ್​​​ಗಳು ಬಾಕಿ ಉಳಿದಿದ್ದವು. ಆದರೆ ಇದರ ಲಾಭ ಪಡೆಯಲೇ ಇಲ್ಲ.

ಸಂಜು ವಿಚಾರದಲ್ಲಿ ಅನ್ಯಾಯ ಎಸಗಿತಾ ಬಿಸಿಸಿಐ?

ಪ್ರತಿ ಸರಣಿಗೂ ಟ್ವಿಟರ್​ನಲ್ಲಿ ಸಂಜು ಹೆಸರು ಟ್ರೆಂಡ್​ ಆಗುತ್ತದೆ. ಚಾನ್ಸ್​ ಸಿಕ್ಕೇ ಸಿಗುತ್ತದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಆದರೆ ಕೊನೇ ಕ್ಷಣದಲ್ಲಿ ಸಂಜು ಹೆಸರು, ತಪ್ಪಿಸಿಕೊಂಡಿರುತ್ತದೆ. ಸಿಕ್ಕ ಅವಕಾಶಗಳಲ್ಲಿ ತಮ್ಮ ಸಾಮರ್ಥ್ಯವನ್ನೂ ಸಾಬೀತು ಮಾಡಿದ್ದಾರೆ. ಆದರೂ ಸಂಜು ವಿಚಾರದಲ್ಲಿ ಬಿಸಿಸಿಐ ಪದೇ ಪದೇ ಅನ್ಯಾಯ ಮಾಡುತ್ತಾ ಬಂದಿದೆ. ಇನ್ಮುಂದೆಯಾದರೂ ಸಂಜುಗೆ ಅವಕಾಶ ನೀಡಿ ಅಂತ ಫ್ಯಾನ್ಸ್​ ಕೇಳಿದ್ದಾರೆ.