Kannada News  /  Sports  /  Shikhar Dhawan Enjoys His All Times Favorite Songs And Video Viral
ಕ್ರಿಕೆಟರ್ ಶಿಖರ್ ಧವನ್
ಕ್ರಿಕೆಟರ್ ಶಿಖರ್ ಧವನ್

Shikhar Dhawan Favorite Songs: ಬಾಲಿವುಡ್ ಸಾಂಗ್ಸ್ ಕೇಳುತ್ತಾ ಗಬ್ಬರ್ ಸಖತ್ ಎಂಜಾಯ್...ವಿಡಿಯೋ ವೈರಲ್

22 September 2022, 21:17 ISTHT Kannada Desk
  • Share on Twitter
  • Share on FaceBook
22 September 2022, 21:17 IST

ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ತಮ್ಮ ನೆಚ್ಚಿನ ಬಾಲಿವುಡ್ ಹಾಡುಗಳನ್ನು ಕೇಳುತ್ತಾ ಸಖತ್ ಎಂಜಾಯ್‌ ಮಾಡ್ತಿದ್ದಾರೆ. 90ರ ದಶಕದ ಹಾಡುಗಳನ್ನು ಕೇಳೋದು ಅಂದ್ರೆ ಧವನ್ ಗೆ ಸಖತ್ ಇಷ್ಟ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Shikhar Dhawan Enjoys with his Favorite Songs: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸಕ್ರಿಯ ಆಟಗಾರರಲ್ಲಿ ಒಬ್ಬರು.

ಟ್ರೆಂಡಿಂಗ್​ ಸುದ್ದಿ

ತನ್ನ ಬಗ್ಗೆ ಸಣ್ಣ ವಿಷಯ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಾಕಷ್ಟು ಹತ್ತಿರವಾಗಿದ್ದಾರೆ. ಸದ್ಯ ಏಕದಿನ ತಂಡದಲ್ಲಿ ಪ್ರಮುಖ ಆಟಗಾರರಾಗಿರುವ ಧವನ್ ಟೆಸ್ಟ್ ಹಾಗೂ ಟಿ20 ತಂಡಗಳಿಂದ ದೂರ ಉಳಿದಿದ್ದಾರೆ.

ಇತ್ತೀಚೆಗೆ ಗಬ್ಬರ್ ಸಖತ್ ಕೂಲ್ ಆಗಿದ್ದರು. ಧವನ್ 90ರ ದಶಕದ ಬಾಲಿವುಡ್‌ನ ಸೂಪರ್ ಹಿಟ್ ಹಾಡುಗಳನ್ನು ಕೇಳಿ ಆನಂದಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ನೋಡಿದರೆ 1998ರ ಫೇಮಸ್ ಬಾಲಿವುಡ್ ಹಾಡುಗಳು ಸತತವಾಗಿ ಪ್ಲೇ ಆಗುತ್ತಿವೆ. ಹಾಡುಗಳಿಗೆ ತಕ್ಕಂತೆ ಶಿಖರ್ ಧವನ್ ಹೆಜ್ಜೆ ಹಾಕಿದ್ದಾರೆ. ಮೊದಲು ಮುಜ್ಕೋ ಕ್ಯಾ ಹುವಾ ಹೈ, ಚೈಯಾ ಚೈಯಾ, ಆಂಖೋನ್ ಸೆ ಗೋಲಿ ಮಾರೆ, ಅತಿಕ್ಯಾ ಖಂಡಾಲಾ, ಓ ಓ ಜಾನೇ ಜಾನಾ ಹಾಡುಗಳು ಸತತವಾಗಿ ಪ್ಲೇ ಆಗುತ್ತಿದ್ದವು. ಗಬ್ಬರ್ ಸೂಕ್ತ ಸ್ಟೆಪ್ಸ್‌ನೊಂದಿಗೆ ರಂಜಿಸಿದ್ದಾರೆ.

ಬಾಲಿವುಡ್ ಮೆಚ್ಚಿನವುಗಳು ಎಂಬ ಶೀರ್ಷಿಕೆಯಡಿಯಲ್ಲಿ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಧವನ್, 2023ರ ವಿಶ್ವಕಪ್‌ಗೆ ಉತ್ತಮ ಸ್ಥಿತಿಯಲ್ಲಿರಲು ಫಿಟ್‌ನೆಸ್ ಕಾಪಾಡಿಕೊಳ್ಳಲು ಯಾವಾಗಲೂ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.

ನನ್ನ ಕಠಿಣ ಪರಿಶ್ರಮ ಮತ್ತು ಪರಿಶ್ರಮದಿಂದ ಇಲ್ಲಿಯವರೆಗೆ ಬಂದಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ನಾನು 2023 ರ ವಿಶ್ವಕಪ್‌ಗಾಗಿ ಎದುರು ನೋಡುತ್ತಿದ್ದೇನೆ. ಆಟದ ಮೇಲಿನ ನನ್ನ ಪ್ರೀತಿ ಮತ್ತು ಸಮರ್ಪಣೆ ನನ್ನನ್ನು ಯಾವಾಗಲೂ ಫಿಟ್ ಆಗಿ ಇರಿಸಿದೆ ಎಂಬುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ. ಯಾವಾಗಲೂ ಉನ್ನತ ಮಟ್ಟದಲ್ಲಿ ಕೆಲಸ ಮಾಡಿ. ಸ್ಕಿಲ್ ವರ್ಕ್ ಆಗಿರಲಿ ಅಥವಾ ಫಿಟ್ ನೆಸ್ ಆಗಿರಲಿ ನಾನು ಕಠಿಣ ಪರಿಶ್ರಮ ಪಡುತ್ತೇನೆ ಎಂದು ಶಿಖರ್ ಧವನ್ ಸ್ಪಷ್ಟಪಡಿಸಿದ್ದಾರೆ.

ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಶಿಖರ್ ಧವನ್ ಸ್ಥಾನ ಪಡೆದಿಲ್ಲ. ಗಬ್ಬರ್ ಕೊನೆಯ ಬಾರಿಗೆ ಜುಲೈ 2021 ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಆಡಿದ್ದರು. ನಂತರ ದೂರಸರಿದರು. ಪ್ರಸ್ತುತ ಶಿಖರ್ ಧವನ್ ಟೀಂ ಇಂಡಿಯಾದ ಏಕದಿನ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

  • Share on Twitter
  • Share on FaceBook

ವಿಭಾಗ