ಕನ್ನಡ ಸುದ್ದಿ  /  Sports  /  Shikhar Dhawan When I Fell In Love Shikhar Dhawan Breaks Silence On Separation With Wife

Shikhar Dhawan: ವಿಚ್ಛೇದನ ಕುರಿತು ಕೊನೆಗೂ ಮೌನ ಮುರಿದ ಧವನ್​.. ಪ್ರೀತಿ ಮಾಯೆ ಹುಷಾರು ಎಂದು ಯುವಕರಿಗೆ ಸಲಹೆ ಕೊಟ್ಟ ಗಬ್ಬರ್​​

ವಿಚ್ಛೇದನದ ಬಗ್ಗೆ ಮಾತನಾಡಿದ ಶಿಖರ್​ ಧವನ್​, ವಿಚ್ಛೇದನ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ವಿಚ್ಛೇದನ ಪ್ರಕರಣ ನಡೆಯುತ್ತಿದೆ ಎಂದು ಬಹಿರಂಪಡಿಸಿದ್ದಾರೆ. ಜೊತೆಗೆ ಮತ್ತೆ ಮದುವೆಯಾಗುವ ವಿಚಾರವನ್ನೂ ತಳ್ಳಿ ಹಾಕಿರುವ ಧವನ್​, ಅದರ ಬಗ್ಗೆ ಸದ್ಯಕ್ಕೆ ಯಾವುದೇ ಯೋಚನೆ ಮಾಡುತ್ತಿಲ್ಲ ಎಂದಿದ್ದಾರೆ.

ಶಿಖರ್​​​ ಧವನ್‌ ಮತ್ತು ಆಯೆಷಾ ಮುಖರ್ಜಿ
ಶಿಖರ್​​​ ಧವನ್‌ ಮತ್ತು ಆಯೆಷಾ ಮುಖರ್ಜಿ

ಶಿಖರ್​​​ ಧವನ್‌ ಮತ್ತು ಆಯೆಷಾ ಮುಖರ್ಜಿ (Shikhar Dhawan and Ayesha Mukherjee) ಅವರು 2021ರ ಸೆಪ್ಟೆಂಬರ್​ನಲ್ಲಿ ವಿಚ್ಛೇದನ ಪಡೆದಿದ್ದರು. ತಮ್ಮ ವಿಚ್ಛೇದನದ ವಿಷಯವನ್ನು ಆಯೇಷಾ ಅವರು ಸೋಷಿಯಲ್​​ ಮೀಡಿಯಾದ ಮೂಲಕ ಬಹಿರಂಗಪಡಿಸಿದ್ದರು. ಆ ಮೂಲಕ ಈ ಜೋಡಿಯ 8 ವರ್ಷಗಳ ದಾಂಪತ್ಯ ಜೀವನ ಮುರಿದುಬಿದ್ದಿತ್ತು. ಈ ಘಟನೆ ನಡೆದು ಒಂದೂವರೆ ವರ್ಷದ ಬಳಿಕ ಪತ್ನಿಯಿಂದ ಬೇರ್ಪಟ್ಟ ಕುರಿತು ಶಿಖರ್​ ಧವನ್​​ ಮೌನ ಮುರಿದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಶಿಖರ್​ ಧವನ್, ವಿಚ್ಛೇದನದ ಕುರಿತು ಕೊನೆಗೂ ತುಟಿ ಬಿಚ್ಚಿದ್ದಾರೆ. ಅವರು ಮತ್ತು ಅವರ ಪತ್ನಿ ಹೇಗೆ ಪ್ರತ್ಯೇಕ ಮಾರ್ಗದಲ್ಲಿ ಹೋಗಲು ನಿರ್ಧರಿಸಿದರು ಎಂಬುದನ್ನು ವಿವರಿಸಿದ್ದಾರೆ. ಕ್ರಿಕೆಟಿಗರಿಂದ ಮರು ಮದುವೆಗೆ ಬಂದ ಸಲಹೆಗಳ ಬಗ್ಗೆ ಮಾತನಾಡಿದ ಗಬ್ಬರ್​, ಲವ್​ ಮ್ಯಾರೇಜ್​, ರಿಲೇಷನ್​​​ಶಿಪ್​​ನಲ್ಲಿ ​​​ ತೊಡಗಿಸಿಕೊಳ್ಳುವ ಯುವಕರಿಗೆ ಪ್ರಮುಖ ಸಲಹೆಯನ್ನೂ ನೀಡಿದ್ದಾರೆ.

ಸ್ಪೋರ್ಟ್ಸ್​ತಕ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಧವನ್, ಮದುವೆ ವಿಚಾರದಲ್ಲಿ ನನ್ನದೇ ತಪ್ಪಿದೆ. ನಾನೇ ನಿರ್ಧಾರ ತೆಗೆದುಕೊಂಡ ಕಾರಣ, ಬೇರೆಯವರತ್ತ ಬೆರಳು ತೋರಿಸಲು ಬಯಸುವುದಿಲ್ಲ. ನಿಜ ವಿಫಲನಾದೆ. ಯಾಕಂದರೆ ಆ ಕ್ಷೇತ್ರದ ಬಗ್ಗೆ ಅರಿಯದೆ ತಪ್ಪು ಹೆಜ್ಜೆ ಹಾಕಿದೆ. ಹಾಗಾಗಿ ಇನ್ನೊಬ್ಬರ ಮೇಲೆ ಬೊಟ್ಟು ಮಾಡಿ ತೋರಿಸುವುದು ತಪ್ಪು ಎಂದು ತನ್ನಿಂದಾದ ತಪ್ಪಿನ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ಬಳಿಕ ವಿಚ್ಛೇದನದ ಬಗ್ಗೆ ಮಾತನಾಡಿದ ಕ್ರಿಕೆಟಿಗ, ವಿಚ್ಛೇದನ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ವಿಚ್ಛೇದನ ಪ್ರಕರಣ ನಡೆಯುತ್ತಿದೆ ಎಂದು ಬಹಿರಂಪಡಿಸಿದ್ದಾರೆ. ಜೊತೆಗೆ ಮತ್ತೆ ಮದುವೆಯಾಗುವ ವಿಚಾರವನ್ನೂ ತಳ್ಳಿ ಹಾಕಿರುವ ಧವನ್​, ಅದರ ಬಗ್ಗೆ ಸದ್ಯಕ್ಕೆ ಯಾವುದೇ ಯೋಚನೆ ಮಾಡುತ್ತಿಲ್ಲ ಎಂದಿದ್ದಾರೆ. ಆದರೆ ಮದುವೆ ಕುರಿತು ಇನ್ನಷ್ಟು ತಿಳಿಯಲು ಪ್ರಯತ್ನಿಸುತ್ತಾರಂತೆ.

ಮುಂದಿನ ದಿನಗಳಲ್ಲಿ ನಾನು ಮತ್ತೆ ಮದುವೆಯಾಗಲು ಬಯಿಸಿದರೆ, ಆ ವಿಚಾರದಲ್ಲಿ ಹೆಚ್ಚೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ನನಗೆ ಯಾವ ರೀತಿಯ ಹುಡುಗಿ ಬೇಕು ಎಂದು ತಿಳಿಯುತ್ತೇನೆ. ನನ್ನ ಜೀವನವನ್ನು ನಾನು ಯಾರೊಂದಿಗೆ ಕಳೆಯಬಹುದು. ಹೇಗೆ ಇರಬೇಕು ಎಂಬುದನ್ನು ಮನವರಿಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನಾನು 26 - 26ನೇ ವಯಸ್ಸಿನಲ್ಲಿದ್ದಾಗ ನಿರಂತರ ಕ್ರಿಕೆಟ್​ನಲ್ಲಿ ತೊಡಗಿದ್ದೆ. ಯಾರ ಜೊತೆಯಲ್ಲೂ ರಿಲೇಷನ್​​ಶಿಪ್​​​​ನಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ಸಖತ್​ ಎಂಜಾಯ್​ ಮಾಡುತ್ತಿದ್ದೆ. ಮೋಜು ಮಾಡುತ್ತಿದ್ದೆ. ತುಂಬಾ ಖುಷಿಯ ದಿನಗಳನ್ನು ಕಳೆದೆ ಎಂದು ಪ್ರೀತಿಯಲ್ಲಿ ಬೀಳುವುದಕ್ಕೂ ಮುನ್ನಾ ದಿನಗಳನ್ನು ನೆನೆಸಿಕೊಂಡಿದ್ದಾರೆ.

ಪ್ರೀತಿಯಲ್ಲಿ ಬೀಳುವುದುಕ್ಕೂ ಮುನ್ನ ಯಾವುದೇ ನನಗೆ ಯಾವುದೇ ರೆಡ್​ ಸಿಗ್ನಲ್​ ಬಿದ್ದಿರಲಿಲ್ಲ. ಆದರೆ ಪ್ರೀತಿಯಲ್ಲಿ ಬಿದ್ದ ನಂತರ ಪ್ರತಿ ಕ್ಷಣವೂ ರೆಡ್​ ಸಿಗ್ನಲ್​ ಬೀಳುತ್ತಿತ್ತು. ಯುವಕರು ತಮ್ಮ ಪಾಲುದಾರರ ಜೊತೆಗೆ ಒಡನಾಟ ಆನಂದಿಸುವ ಮತ್ತು ಅರ್ಥಮಾಡಿಕೊಂಡ ಬಳಿಕವೇ ಆ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಯುವಕರಿಗೆ ಸಲಹೆ ನೀಡಿದ್ದಾರೆ.

ಯುವಕರೇ ರಿಲೇಷನ್​​ಶಿಪ್​ನಲ್ಲಿದ್ದರೆ, ಅದನ್ನು ಸಂಪೂರ್ಣವಾಗಿ ಅನುಭವಿಸಬೇಕು. ಮುಂದಿನ ಹಂತಕ್ಕೆ ಹೋಗುವ ಮುನ್ನ ಅದು ಮುಖ್ಯವಾದದ್ದು. ಭಾವನಾತ್ಮಕ ನಿರ್ಧಾರಗಳಿಗೆ ತರಾತುರಿಯಲ್ಲಿ ತೆಗೆದುಕೊಳ್ಳಬಾರದು ಮತ್ತು ಮದುವೆಯಾಗಬಾರದು. ಪಾಲುದಾರರೊಂದಿಗೆ ಒಂದೆರಡು ವರ್ಷಗಳನ್ನು ಕಳೆಯಿರಿ. ಸುಖ-ದುಃಖ ಎಲ್ಲವನ್ನೂ ಅರಿಯಿರಿ. ಅವರ ಕಂಪನಿಯಿಂದ ನಿಮಗೆ ಖುಷಿ ತಂದಿದ್ದರಷ್ಟೇ ಮದುವೆಯಾಗಿ ಎಂದು ಎಚ್ಚರಿಕೆಯ ಸಲಹೆ ಕೊಟ್ಟಿದ್ದಾರೆ.

ಆದರೆ ಹೊಂದಾಣಿಕೆ ಕಷ್ಟ ಎನಿಸಿದರೆ ದೂರವಾಗಿ. ಇನ್ನು ಕೆಲವರಿಗೆ 4 ರಿಂದ 5 ಮಂದಿ ಜೊತೆಗೆ ಸಂಬಂಧ ಬೆಳೆಸಿದರೂ, ಹೊಂದಾಣಿಕೆ ಸರಿ ಎನಿಸದು. ಕೆಲವರಿಗೆ 8 ಮಂದಿ 9 ಮಂದಿಯೂ ಬೇಕಾಗಬಹುದು. ಇದು ಕೆಟ್ಟದ್ದೇನೂ ಇಲ್ಲ. ಯಾಕಂದರೆ ಇದು ಜೀವನ. ಕೊನೆಗೆ ಪಶ್ಚಾತ್ತಾಪ ಪಡುವುದು ನೀವು. ಬೇರೆಯವಲ್ಲ. ಯೋಚಿಸಿ ತೀರ್ಮಾನ ತೆಗೆದುಕೊಂಡರೆ ಉತ್ತಮ ಎಂದು ತಮ್ಮ ಅನುಭವಗಳಿಂದ ಪಾಠ ಕಲಿತು ಸಲಹೆ ನೀಡಿದ್ದಾರೆ.