ಕೊಡಗಿನ ಕಾಫಿತೋಟದಲ್ಲಿ ಪಿವಿ ಸಿಂಧು; ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಬ್ಯಾಡ್ಮಿಂಟನ್‌ ತಾರೆ, ಎಸ್ಟೇಟ್‌ ಖರೀದಿಸುವ ಇಂಗಿತ
ಕನ್ನಡ ಸುದ್ದಿ  /  ಕ್ರೀಡೆ  /  ಕೊಡಗಿನ ಕಾಫಿತೋಟದಲ್ಲಿ ಪಿವಿ ಸಿಂಧು; ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಬ್ಯಾಡ್ಮಿಂಟನ್‌ ತಾರೆ, ಎಸ್ಟೇಟ್‌ ಖರೀದಿಸುವ ಇಂಗಿತ

ಕೊಡಗಿನ ಕಾಫಿತೋಟದಲ್ಲಿ ಪಿವಿ ಸಿಂಧು; ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಬ್ಯಾಡ್ಮಿಂಟನ್‌ ತಾರೆ, ಎಸ್ಟೇಟ್‌ ಖರೀದಿಸುವ ಇಂಗಿತ

ತೆಲಂಗಾಣದವರಾದ ಪಿವಿ ಸಿಂಧು, ಕರ್ನಾಟಕದ ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿದ್ದಾರೆ. ಕೊಡಗಿನ ಕಾಫಿತೋಟದಲ್ಲಿ ಸುತ್ತಾಡಿ ಕೆಲದಿನಗಳನ್ನು ಕಳೆದ ಬ್ಯಾಡ್ಮಿಂಟನ್‌ ಆಟಗಾರ್ತಿ, ಇದೀಗ ಇಲ್ಲಿ ಎಸ್ಟೇಟ್‌ ಖರೀದಿಸುವ ಇಂಗಿತದ ಬಗ್ಗೆ ಹೇಳಿಕೊಂಡಿದ್ದಾರೆ.

ಕೊಡಗಿನ ಕಾಫಿತೋಟದಲ್ಲಿ ಪಿವಿ ಸಿಂಧು; ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಬ್ಯಾಡ್ಮಿಂಟನ್‌ ತಾರೆ
ಕೊಡಗಿನ ಕಾಫಿತೋಟದಲ್ಲಿ ಪಿವಿ ಸಿಂಧು; ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಬ್ಯಾಡ್ಮಿಂಟನ್‌ ತಾರೆ

ಬೇಸಿಗೆ ಬಿರುಬಿಸಿಲಿಗೆ ತಂಪಾದ ಸ್ಥಳದ ಹುಡುಕಾಟದಲ್ಲಿರುವವರಿಗೆ ಕರ್ನಾಟಕದಲ್ಲಿ ಮಡಿಕೇರಿ ಅತ್ಯುತ್ತಮ ಸ್ಥಳ. ಇದು ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧು ಅವರಿಗೂ ಗೊತ್ತಾದಂತಿದೆ. ಮಡಿಕೇರಿಯಲ್ಲಿರುವ ಸುಂದರ ಪರಿಸರದಲ್ಲಿರುವ ಕಾಫಿ ಎಸ್ಟೇಟ್‌ಗೆ ಒಲಿಂಪಿಕ್ಸ್‌ ಪದಕ ವಿಜೇತ ಷಟ್ಲರ್‌ ಭೇಟಿ ನೀಡಿದ್ದಾರೆ. ಕೆಲವು ದಿನಗಳ ಕಾಲ ಅಲ್ಲಿಯೇ ಉಳಿದುಕೊಂಡಿದ್ದ ಸಿಂಧು, ತಂಪಾದ ಸ್ಥಳದಲ್ಲಿ ಬೇಸಿಗೆ ಕಳೆದಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ವಿಸ್ತೃತ ಪೋಸ್ಟ್‌ ಹಂಚಿಕೊಂಡಿದ್ದಾರೆ.

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ವಾಸವಿರುವ ಸಿಂಧು, ತಮ್ಮವರೊಂದಿಗೆ ಕೊಡಗಿಗೆ ಬಂದು ಕೆಲವು ದಿನಗಳ ಕಾಲ ಅಲ್ಲಿಯೇ ಉಳಿದಿದ್ದರು. ಇಲ್ಲಿನ ಕಾಫಿ ಎಸ್ಟೇಟ್‌ನಲ್ಲಿ ಸುತ್ತಾಡಿದ ಸಿಂಧು, ಕೊಡಗಿನ ಪರಿಸರದಲ್ಲಿ ಕಾಫಿ ರುಚಿ ಸವಿದಿದ್ದಾರೆ. ಅಷ್ಟೇ ಅಲ್ಲ ಬಗೆಬಗೆಯ ಪಕ್ಷಿಸಂಕುಲವನ್ನು ಕಂಡು ಖುಷಿಪಟ್ಟಿದ್ದಾರೆ. ಹೈದರಾಬಾದ್‌ನಲ್ಲಿ ಬೆಚ್ಚಗಿನ ಪರಿಸರಲ್ಲಿ ಓಡಾಡುತ್ತಿದ್ದ ಆಟಗಾರ್ತಿ ಕೂರ್ಗ್‌ನ ತಂಪಾದ ಪರಿಸರದಲ್ಲಿ ಎಂಜಾಯ್‌ ಮಾಡಿದ್ದಾರೆ. ಆದರೆ ಕೊಡಗಿನಲ್ಲಿ ಎಲ್ಲಿ ದಿನ ಕಳೆದಿದ್ದಾರೆ ಎಂಬ ಬಗ್ಗೆ ನಿಖರವಾಗಿ ಬಹಿರಂಗಪಡಿಸಲಿಲ್ಲ.

ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿರುವ ಸಿಂಧು, ಇಲ್ಲಿ ಒಂದು ಎಸ್ಟೇಟ್ ಖರೀದಿಸುವ ಆಶಯವನ್ನು ಕೂಡಾ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಸಿಂಧು, “300 ಕಿ.ಮೀ. ದೂರ ಬಂದು, ನಾವು ಮನೆ ಎಂದು ಕರೆಯುವ ಕೊಡಗಿ‌ನಲ್ಲಿ ಕನಸಿನ ಎಸ್ಟೇಟ್‌ನ ಮಧ್ಯದಲ್ಲಿ ಕಾಫಿ ಹೀರುತ್ತಿದ್ದೇನೆ. ಸುತ್ತಲೂ ಮರಗಳು, ಪಕ್ಷಿಗಳು ಸುತ್ತುವರೆದಿವೆ. ಇಲ್ಲಿ 600ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು, 14 ಬಗೆಯ ಕಾಡು ಪ್ರಾಣಿಗಳು ಮತ್ತು ಲೆಕ್ಕವಿಲ್ಲದಷ್ಟು ಹೆಚ್ಚಿನ ಸಸ್ಯ ಮತ್ತು ಪ್ರಾಣಿಗಳಿವೆ” ಎಂದು ಸಿಂಧು ಕೊಡಗಿನ ನೈಸರ್ಗಿಕ ಸೌಂದರ್ಯವನ್ನು ಬಣ್ಣಿಸಿ ಬರೆದುಕೊಂಡಿದ್ದಾರೆ.

ಪಿವಿ ಸಿಂಧು ಪೋಸ್ಟ್‌

ಎಸ್ಟೇಟ್‌ ಖರೀದಿಸುವ ಇಂಗಿತ

ಇದೇ ವೇಳೆ ಸಿಂಧು ಮತ್ತೊಂದು ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸಿಂಧು ಮಡಿಕೇರಿ ಪ್ರವಾಸ ಸಮಯದಲ್ಲಿ ಅವರ ಜೊತೆಗಿದ್ದ ವ್ಯಕ್ತಿಯೊಬ್ಬರು, ಸಿಂಧು ಪತಿಗೆ ಮಡಿಕೇರಿಯಲ್ಲಿ ಕಾಫಿ ಎಸ್ಟೇಟ್ ಖರೀದಿಸುವ ಬಗ್ಗೆ ಹೇಳಿದ್ದಾರಂತೆ. ಇದನ್ನು ಕೂಡಾ ತಮ್ಮ ಪೋಸ್ಟ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.