2025ರ ಕ್ರೀಡಾ ಕ್ಯಾಲೆಂಡರ್: ಚಾಂಪಿಯನ್ಸ್ ಟ್ರೋಫಿ-ಮಹಿಳೆಯರ ವಿಶ್ವಕಪ್‌ನಿಂದ ಕ್ಲಬ್ ವಲ್ಡ್‌ಕಪ್‌ವರೆಗೆ; ವರ್ಷದ ಎಲ್ಲಾ ಕ್ರೀಡಾಕೂಟಗಳ ವಿವರ
Sports calendar 2025: ಕ್ರೀಡಾಪ್ರೇಮಿಗಳಿಗೆ 2025ರ ವರ್ಷ ಭರಪೂರ ಮನರಂಜನೆ ನೀಡಲಿದೆ. ಈ ವರ್ಷ ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳ ಪ್ರಮುಖ ಟೂರ್ನಿಗಳು ನಡೆಯಲಿವೆ. ಪ್ರತಿ ತಿಂಗಳು ಪ್ರಮುಖ ಈವೆಂಟ್‌ಗಳು ನಡೆಯುತ್ತಿದ್ದು, ಅವುಗಳ ದಿನಾಂಕ ಹಾಗೂ ಕ್ರೀಡಾಕೂಟದ ವಿವರವನ್ನು ನೀಡಲಾಗಿದೆ.
ಹಲವು ಪ್ರಮುಖ ಕ್ರೀಡಾಕೂಟಗಳು ನಡೆದ 2024 ವರ್ಷ ಮುಕ್ತಾಯವಾಗಿದ್ದು, ಇದೀಗ 2025ನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. 2025ರ ಕ್ರೀಡಾ ಕ್ಯಾಲೆಂಡರ್‌ನಲ್ಲಿಯೂ ಹಲವು ಪ್ರಮುಖ ಟೂರ್ನಿಗಳು ನಡೆಯಲಿವೆ. ಕ್ರಿಕೆಟ್‌ನಲ್ಲಿ ಎರಡು ಪ್ರಮುಖ ಈವೆಂಟ್‌ಗಳು ಹೆಚ್ಚು ಗಮನ ಸೆಳೆಯಲಿವೆ. ಇದರೊಂದಿಗೆ ವಿವಿಧ ಪ್ರಕಾರಗಳ ಕ್ರೀಡೆಗಳ ಜನಪ್ರಿಯ ಈವೆಂಟ್‌ಗಳು ಕ್ರೀಡಾಭಿಮಾನಿಗಳಿಗೆ ವರ್ಷವಿಡೀ ಮನರಂಜನೆ ನೀಡಲಿದೆ. ಕ್ರಿಕೆಟ್‌ನಲ್ಲಿ ಪುರುಷರ ಚಾಂಪಿಯನ್ಸ್ ಟ್ರೋಫಿ ಮತ್ತು ಭಾರತದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ ಮಹತ್ವದ್ದು. ಫುಟ್ಬಾಲ್‌ನಲ್ಲಿ ಫಿಫಾ ಕ್ಲಬ್ ವಿಶ್ವಕಪ್ ನಡೆಯಲಿದೆ. ಇದೇ ಮೊದಲ ಬಾರಿಗೆ ನಡೆಯಲಿರುವ ಖೋ ಖೋ ವಿಶ್ವಕಪ್ ಗಮನ ಸೆಳೆಯಲಿದೆ.
2025ರಲ್ಲಿ ನಡೆಯಲಿರುವ ಪ್ರಮುಖ ಈವೆಂಟ್‌ಗಳ ಪಟ್ಟಿ
ಜನವರಿ
- ಡಿಸೆಂಬರ್ 28(2024) - ಫೆಬ್ರುವರಿ 1, 2025 - ಪುರುಷರ ಹಾಕಿ ಇಂಡಿಯಾ ಲೀಗ್ 2024-25 (ಹಾಕಿ)
- 12-26 ಜನವರಿ: ಮಹಿಳಾ ಹಾಕಿ ಇಂಡಿಯಾ ಲೀಗ್ 2024-25
- 12-26 ಜನವರಿ : 2025 ಆಸ್ಟ್ರೇಲಿಯನ್ ಓಪನ್ (ಟೆನಿಸ್)
- 13-19 ಜನವರಿ : 2025 ಖೋ ಖೋ ವಿಶ್ವಕಪ್
- 14-19 ಜನವರಿ : ಇಂಡಿಯಾ ಓಪನ್ 2025, ನವದೆಹಲಿ (ಬ್ಯಾಡ್ಮಿಂಟನ್)
- 18 ಜನವರಿಯಿಂದ 2 ಫೆಬ್ರುವರಿ : ಅಂಡರ್ 19 ವನಿತೆಯರ ಟಿ20 ವಿಶ್ವಕಪ್
ಫೆಬ್ರುವರಿ
- 7-14 ಫೆಬ್ರುವರಿ : ಏಷ್ಯನ್ ವಿಂಟರ್ ಗೇಮ್ಸ್ (ಕ್ರೀಡೆ)
- 15 ಫೆಬ್ರುವರಿ - 29 ಜೂನ್ : ಮಹಿಳೆಯರ FIH ಹಾಕಿ ಪ್ರೊ ಲೀಗ್ 2024-25
- 15 ಫೆಬ್ರುವರಿ - 22 ಜೂನ್ : ಪುರುಷರು FIH ಹಾಕಿ ಪ್ರೊ ಲೀಗ್ 2024-25
- 19 ಫೆಬ್ರುವರಿ - 9 ಮಾರ್ಚ್ : ಐಸಿಸಿ ಚಾಂಪಿಯನ್ಸ್ ಟ್ರೋಫಿ (ಕ್ರಿಕೆಟ್)
ಮಾರ್ಚ್
- 1-12 ಮಾರ್ಚ್ : 15ನೇ ಹಾಕಿ ಇಂಡಿಯಾ ಸೀನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಶಿಪ್ 2025
- 10-11 ಮೇ : ವಿಶ್ವ ಅಥ್ಲೆಟಿಕ್ಸ್ ರಿಲೇ, ಚೀನಾ
- 11-16 ಮಾರ್ಚ್ : ಆಲ್ ಇಂಗ್ಲೆಂಡ್ ಓಪನ್ (ಬ್ಯಾಡ್ಮಿಂಟನ್)
- 14 ಮಾರ್ಚ್ : 25 ಮೇ - 2025 ಇಂಡಿಯನ್ ಪ್ರೀಮಿಯರ್ ಲೀಗ್
- 16 ಮಾರ್ಚ್ : ಇಂಗ್ಲೀಷ್ ಲೀಗ್ ಕಪ್ ಫೈನಲ್, ಲಂಡನ್ (ಫುಟ್ಬಾಲ್)
ಏಪ್ರಿಲ್
- 4-15 ಏಪ್ರಿಲ್ : 15ನೇ ಹಾಕಿ ಇಂಡಿಯಾ ಸೀನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಶಿಪ್ 2025
- 7-13 ಏಪ್ರಿಲ್ : 2025 ಮಾಸ್ಟರ್ಸ್ ಟೂರ್ನಮೆಂಟ್ (ಗಾಲ್ಫ್)
- 19 ಏಪ್ರಿಲ್ - 5 ಮೇ : ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್ (ಸ್ನೂಕರ್)
- 27 ಏಪ್ರಿಲ್ : ಲಂಡನ್ ಮ್ಯಾರಥಾನ್ (ಅಥ್ಲೆಟಿಕ್ಸ್)
ಮೇ
- 17-25 ಮೇ : ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್
- 21 ಮೇ : ಯುರೋಪಾ ಲೀಗ್ ಫೈನಲ್, ಬಿಲ್ಬಾವೊ, ಸ್ಪೇನ್ (ಫುಟ್ಬಾಲ್)
- 24 ಮೇ : ಜರ್ಮನ್ ಕಪ್ ಫೈನಲ್, ಬರ್ಲಿನ್ (ಫುಟ್ಬಾಲ್)
- 24 ಮೇ : ಫ್ರೆಂಚ್ ಕಪ್ ಫೈನಲ್, ಪ್ಯಾರಿಸ್ (ಫುಟ್ಬಾಲ್)
- 24 ಮೇ : ಮಹಿಳಾ ಚಾಂಪಿಯನ್ಸ್ ಲೀಗ್ ಫೈನಲ್, ಲಿಸ್ಬನ್ (ಫುಟ್ಬಾಲ್)
- 25 ಮೇ - 7 ಜೂನ್ : ಫ್ರೆಂಚ್ ಓಪನ್ (ಟೆನಿಸ್)
- 27-31 ಮೇ: ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ (ಅಥ್ಲೆಟಿಕ್ಸ್)
- 28 ಮೇ : ಯುರೋಪಾ ಕಾನ್ಫರೆನ್ಸ್ ಲೀಗ್ ಫೈನಲ್, ವ್ರೊಕ್ಲಾ (ಫುಟ್ಬಾಲ್)
- 31 ಮೇ : ಚಾಂಪಿಯನ್ಸ್ ಲೀಗ್ ಫೈನಲ್, ಮ್ಯೂನಿಚ್ (ಫುಟ್ಬಾಲ್)
ಜೂನ್
- 4-8 ಜೂನ್ : UEFA ನೇಷನ್ಸ್ ಲೀಗ್ ಫೈನಲ್ಸ್ (ಫುಟ್ಬಾಲ್)
- 5-22 ಜೂನ್ : NBA ಫೈನಲ್ಸ್, ಯುನೈಟೆಡ್ ಸ್ಟೇಟ್ಸ್ (ಬಾಸ್ಕೆಟ್‌ಬಾಲ್)
- 11 ಜೂನ್ : ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್
- 12-15 ಜೂನ್ : ಯುಎಸ್ ಓಪನ್, ಓಕ್ಮಾಂಟ್, ಪೆನ್ಸಿಲ್ವೇನಿಯಾ (ಗಾಲ್ಫ್)
- 14 ಜೂನ್ - 13 ಜುಲೈ : ಫಿಫಾ ಕ್ಲಬ್ ವಿಶ್ವಕಪ್ 2025 (ಫುಟ್‌ಬಾಲ್)
- 14 ಜೂನ್ - 6 ಜುಲೈ : ಕಾನ್ಕಾಕಾಫ್ ಗೋಲ್ಡ್ ಕಪ್ (ಫುಟ್‌ಬಾಲ್)
- 30 ಜೂನ್ - 13 ಜುಲೈ : 2025 ವಿಂಬಲ್ಡನ್ ಚಾಂಪಿಯನ್‌ಶಿಪ್ಸ್ (ಟೆನಿಸ್)
ಜುಲೈ
- 2-27 ಜುಲೈ - UEFA ಮಹಿಳಾ ಯುರೋ (ಫುಟ್‌ಬಾಲ್)
- 5-29 ಜುಲೈ - FIDE ಮಹಿಳಾ ವಿಶ್ವಕಪ್ 2025 (ಚೆಸ್)
- 11 ಜುಲೈ - 3 ಆಗಸ್ಟ್ : 2025 ವಿಶ್ವ ಅಕ್ವಾಟಿಕ್ಸ್ ಚಾಂಪಿಯನ್‌ಶಿಪ್ಸ್ (ಅಕ್ವಾಟಿಕ್ಸ್)
- 17-20 ಜುಲೈ : ಓಪನ್ ಚಾಂಪಿಯನ್‌ಶಿಪ್, ಪೋರ್ಟ್‌ರಶ್ (ಗಾಲ್ಫ್)
ಆಗಸ್ಟ್
- 7-17 ಆಗಸ್ಟ್ : 2025 ವಿಶ್ವ ಗೇಮ್ಸ್ (ಕ್ರೀಡೆ)
- 15 ಆಗಸ್ಟ್ - 15 ಸೆಪ್ಟೆಂಬರ್ : ಮಹಿಳಾ ಏಕದಿನ ವಿಶ್ವಕಪ್, ಭಾರತ (ಕ್ರಿಕೆಟ್)
- 25 ಆಗಸ್ಟ್ - 7 ಸೆಪ್ಟೆಂಬರ್ : ಯುಎಸ್ ಓಪನ್ (ಟೆನಿಸ್)
- 25-31 ಆಗಸ್ಟ್ : ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್, ಪ್ಯಾರಿಸ್ (ಬ್ಯಾಡ್ಮಿಂಟನ್)
- 27-28 ಆಗಸ್ಟ್ : ಡೈಮಂಡ್ ಲೀಗ್ ಫೈನಲ್, ವೆಲ್ಟ್‌ಕ್ಲಾಸ್ಸೆ (ಅಥ್ಲೆಟಿಕ್ಸ್)
ಸೆಪ್ಟೆಂಬರ್
- 5-12 ಸೆಪ್ಟೆಂಬರ್ : 2025 ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್ಸ್ (ಆರ್ಚರಿ)
- 13-21 ಸೆಪ್ಟೆಂಬರ್ : 2025 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ (ಅಥ್ಲೆಟಿಕ್ಸ್)
- 13-21 ಸೆಪ್ಟೆಂಬರ್ : 2025 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ (ಕುಸ್ತಿ)
- ಸೆಪ್ಟೆಂಬರ್ 25-28 : ರೈಡರ್ ಕಪ್, ನ್ಯೂಯಾರ್ಕ್, USA (ಗಾಲ್ಫ್)
- 27 ಸೆಪ್ಟೆಂಬರ್ - 19 ಅಕ್ಟೋಬರ್ : 2025 FIFA U-20 ವಿಶ್ವಕಪ್ (ಫುಟ್‌ಬಾಲ್)
ಅಕ್ಟೋಬರ್
- 1-10 ಅಕ್ಟೋಬರ್ : ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್, ಫೋರ್ಡ್, ನಾರ್ವೆ
- 13-19 ಅಕ್ಟೋಬರ್ : 2025 BWF ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ (ಬ್ಯಾಡ್ಮಿಂಟನ್)
- 19-25 ಅಕ್ಟೋಬರ್ : 2025 ವಲ್ಡ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್ )
ನವೆಂಬರ್
- (ದಿನಾಂಕ ನಿಗದಿಯಾಗಿಲ್ಲ) : ವಿಶ್ವ ಬಾಕ್ಸಿಂಗ್ ಕಪ್ ಫೈನಲ್, ನವದೆಹಲಿ
- 6-16 ನವೆಂಬರ್ : ವಿಶ್ವ ರೈಫಲ್ ಮತ್ತು ಪಿಸ್ತೂಲ್ ಚಾಂಪಿಯನ್‌ಶಿಪ್, ಕೈರೋ (ಶೂಟಿಂಗ್)
- 15-26 ನವೆಂಬರ್ - 2025 ಬೇಸಿಗೆ ಡೆಫ್ಲಿಂಪಿಕ್ಸ್ (ಬಹು-ಕ್ರೀಡೆ)
- 25-30 ನವೆಂಬರ್ - ಸೈಯದ್ ಮೋದಿ ಇಂಟರ್ನ್ಯಾಷನಲ್ 2025, ಲಕ್ನೋ (ಬ್ಯಾಡ್ಮಿಂಟನ್)
ಡಿಸೆಂಬರ್
- ದಿನಾಂಕ ನಿಗದಿಯಾಗಿಲ್ಲ - ಪುರುಷರ FIH ಹಾಕಿ ಜೂನಿಯರ್ ವಿಶ್ವಕಪ್, ಭಾರತ
- 10-14 ಡಿಸೆಂಬರ್ : BWF ವರ್ಲ್ಡ್ ಟೂರ್ ಫೈನಲ್ಸ್, ಚೀನಾ (ಬ್ಯಾಡ್ಮಿಂಟನ್)
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope
ವಿಭಾಗ