ಅಪರೂಪದ ಕಾಯಿಲೆ ಮಧ್ಯೆಯೂ ಪ್ಯಾರಿಸ್​ನಲ್ಲಿ ಪ್ರೇಕ್ಷಕರನ್ನು ರಂಜಿಸಿ ಕಣ್ಣೀರು ಹಾಕಿದ ಖ್ಯಾತ ಗಾಯಕಿ ಸೆಲೀನ್ ಡಿಯೋನ್, VIDEO
ಕನ್ನಡ ಸುದ್ದಿ  /  ಕ್ರೀಡೆ  /  ಅಪರೂಪದ ಕಾಯಿಲೆ ಮಧ್ಯೆಯೂ ಪ್ಯಾರಿಸ್​ನಲ್ಲಿ ಪ್ರೇಕ್ಷಕರನ್ನು ರಂಜಿಸಿ ಕಣ್ಣೀರು ಹಾಕಿದ ಖ್ಯಾತ ಗಾಯಕಿ ಸೆಲೀನ್ ಡಿಯೋನ್, Video

ಅಪರೂಪದ ಕಾಯಿಲೆ ಮಧ್ಯೆಯೂ ಪ್ಯಾರಿಸ್​ನಲ್ಲಿ ಪ್ರೇಕ್ಷಕರನ್ನು ರಂಜಿಸಿ ಕಣ್ಣೀರು ಹಾಕಿದ ಖ್ಯಾತ ಗಾಯಕಿ ಸೆಲೀನ್ ಡಿಯೋನ್, VIDEO

Celine Dion: ಸ್ಟಿಫ್ ಪರ್ಸನ್ ಸಿಂಡ್ರೋಮ್ ಕಾಯಿಲೆಯ ಮಧ್ಯೆಯೂ ಪ್ಯಾರಿಸ್ ಒಲಿಂಪಿಕ್ಸ್​ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಗಾಯಕಿ ಸೆಲೀನ್ ಡಿಯೋನ್ ಅವರು ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಅಪರೂಪದ ಕಾಯಿಲೆ ಮಧ್ಯೆಯೂ ಪ್ಯಾರಿಸ್​ನಲ್ಲಿ ಪ್ರೇಕ್ಷಕರನ್ನು ರಂಜಿಸಿ ಕಣ್ಣೀರು ಹಾಕಿದ ಖ್ಯಾತ ಗಾಯಕಿ ಸೆಲೀನ್ ಡಿಯೋನ್
ಅಪರೂಪದ ಕಾಯಿಲೆ ಮಧ್ಯೆಯೂ ಪ್ಯಾರಿಸ್​ನಲ್ಲಿ ಪ್ರೇಕ್ಷಕರನ್ನು ರಂಜಿಸಿ ಕಣ್ಣೀರು ಹಾಕಿದ ಖ್ಯಾತ ಗಾಯಕಿ ಸೆಲೀನ್ ಡಿಯೋನ್

Celine Dion performs at Olympics Opening Ceremony: ಪ್ರಮುಖ ಆರೋಗ್ಯ ಸಮಸ್ಯೆಗಳಿಂದ 3 ವರ್ಷಗಳ ವಿರಾಮದ ಬಳಿಕ ವೇದಿಕೆಗೆ ಮರಳಿದ ಕೆನಡಾದ ಖ್ಯಾತ ಗಾಯಕಿ ಸೆಲೀನ್ ಡಿಯೋನ್ ಅವರು ಪ್ಯಾರಿಸ್ ಒಲಿಂಪಿಕ್ಸ್‌-2024 ಉದ್ಘಾಟನಾ ಸಮಾರಂಭದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಪ್ರೇಕ್ಷಕರನ್ನು ರಂಜಿಸಿದರು. ಸೊಗಸಾದ ಹೈ-ನೆಕ್ ಗೌನ್ ಧರಿಸಿದ್ದ ಸೆಲೀನ್ ಡಿಯೋನ್​ಗೆ 2021ರ ನಂತರ ಇದು ಮೊದಲ ಪ್ರದರ್ಶನವಾಗಿದ್ದು, ವೇದಿಕೆಯಲ್ಲಿ ಗಾಯಕಿ ಕಣ್ಣೀರು ಹಾಕಿದರು.

ಸೆಲೀನ್ ಡಿಯೋನ್ ಅವರು ಸ್ಟಿಫ್ ಪರ್ಸನ್ ಸಿಂಡ್ರೋಮ್ ಅಂದರೆ ಅಪರೂಪದ ಸ್ವಯಂ ನಿರೋಧಕ ನರವೈಜ್ಞಾನಿಕ ಅಸ್ವಸ್ಥೆತೆಯ ಕಾಯಿಲೆ ಮತ್ತು ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. 2021ರಲ್ಲಿ ಈ ರೋಗ ಇರುವುದು ಪತ್ತೆಯಾಗಿತ್ತು. ತದನಂತರ ಅವರು ವೇದಿಕೆ ಕಾರ್ಯಕ್ರಮಗಳಿಂದ ದೂರ ಉಳಿದರು. ಕಾಯಿಲೆಯ ಹೋರಾಟದ ಮಧ್ಯೆಯೂ ವೇದಿಕೆಗೆ ಅದ್ಭುತವಾಗಿ ಕಂಬ್ಯಾಕ್ ಮಾಡಿದ ಡಿಯೋನ್ ಅವರ ಉತ್ತಮ ಪ್ರದರ್ಶನಕ್ಕೆ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದರು.

ಪ್ಯಾರಿಸ್‌ನ ಐಫೆಲ್ ಟವರ್​ ಮುಂಭಾಗ ನಡೆದ ಸಮಾರಂಭದಲ್ಲಿ ಅವರು ಎಡಿತ್ ಪಿಯಾಫ್ ಅವರ ಹಿಮ್ನೆ ಎ ಎಲ್ ಅಮೌರ್ ಹಾಡನ್ನು ಹಾಡಿದರು. ಪೇಜ್ ಸಿಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದಂತೆ, ಗಾಯಕಿ ಹರಳುಗಳಿಂದ ಆವೃತವಾದ ಮತ್ತು ಅದರ ಉದ್ದನೆಯ ತೋಳುಗಳ ಕೇಪ್ ಮತ್ತು ಮಣಿಗಳಿಂದ ಹೊಲಿಯಲಾದ ಸೊಗಸಾದ ಹೈ-ನೆಕ್ ಗೌನ್ ಧರಿಸಿದ್ದರು. ತನ್ನ ಆರೋಗ್ಯದ ಮೇಲೆ ಕೇಂದ್ರೀಕಸುವ ಸಲುವಾಗಿ 2021ರಲ್ಲಿ ತನ್ನ ಲಾಸ್ ವೇಗಾಸ್ ರೆಸಿಡೆನ್ಸಿ ತೊರೆದ ನಂತರ ಇದು ಮೊದಲ ಪ್ರದರ್ಶನವಾಗಿದೆ.

ಗಾಯಕಿ ಕಣ್ಣೀರು

ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದ ಸಮಯದಲ್ಲಿ ಗಾಯಕಿ ಕಣ್ಣೀರು ಹಾಕಿದರು. ಹಾಡು ಹಾಡುತ್ತಲ್ಲೇ ಕಣ್ಣುಗಳಿಂದ ಜಿನುಗುತ್ತಿದ್ದ ನೀರನ್ನು ಒರೆಸಿಕೊಂಡರು. ಉದ್ಘಟನಾ ಸಮಾರಂಭದಲ್ಲಿ ಆಕೆ ಪ್ರದರ್ಶನ ನೀಡಲು 16 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಕಾರ್ಯಕ್ರಮದ ನಿರೂಪಕರಾಗಿದ್ದ ಕೆಲ್ಲಿ ಕ್ಲಾರ್ಕ್ಸನ್ ಅವರು ಮೈ ಹಾರ್ಟ್ ವಿಲ್ ಗೋ ಆನ್ ಗಾಯಕನ ಪ್ರದರ್ಶನದಿಂದ ಕಣ್ಣೀರು ಹಾಕಿದರು.

ಕೆಲ್ಲಿ ಕ್ಲಾರ್ಕ್ಸನ್ ಮಾತನಾಡಿ, ನನಗೆ ನಿಜವಾಗಿಯೂ ಮಾತನಾಡಲು ಕಷ್ಟವಾಗುತ್ತಿದೆ. ಅವರ ಪ್ರದರ್ಶನ ನಿಜವಾಗಿಯೂ ಸುಂದರವಾಗಿತ್ತು. ಯಾರಿಗೆ ಆಕೆಯ ಕಥೆ ಮತ್ತು ದೈಹಿಕವಾಗಿ ಅನುಭವಿಸುತ್ತಿರುವ ನೋವು, ನರಕಯಾತನೆ ತಿಳಿದಿಲ್ಲವೋ ಅದು ತಿಳಿದರೆ ಅಚ್ಚರಿಯಾಗುತ್ತೀರಿ. ಆಕೆಯ ತನ್ನ ಮಾರಕ ರೋಗದಿಂದ ಗೆದ್ದಿರುವುದು ನಂಬಲಸಾಧ್ಯ. ಆಕೆ ಗಾಯನದ ಕ್ರೀಡಾಪಟು ಎಂದು ಹೇಳಿದ್ದಾರೆ.

ಶುಲ್ಕ ಪಡೆದಿಲ್ಲ ಎಂದ ಒಲಿಂಪಿಕ್ಸ್ ಪ್ರತಿನಿಧಿ

ಕೆಲವು ವರದಿಗಳು ಗಾಯಕಿ ತನ್ನ ಪ್ರದರ್ಶನಕ್ಕಾಗಿ 2 ಮಿಲಿಯನ್ ಡಾಲರ್ ಅಂದರೆ16 ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎಂದು ಹೇಳಿವೆ. ಆದಾಗ್ಯೂ, ಒಲಿಂಪಿಕ್ಸ್‌ನ ಪ್ರತಿನಿಧಿಯೊಬ್ಬರು ಹೀಗೆ ಹೇಳಿದರು, 'ಈ ಬಗ್ಗೆ ವರದಿ ಮಾಡಿದ ಮಾಧ್ಯಮಗಳ ಚಳಿ ಬಿಡಿಸಿದರು. ಪ್ಯಾರಿಸ್ ಕ್ರೀಡಾಕೂಟದ ಸಮಾರಂಭಕ್ಕೆ ಪ್ರದರ್ಶಕರು ಶುಲ್ಕವನ್ನು ಪಡೆಯುವುದಿಲ್ಲ. ಕಷ್ಟದ ಸಂದರ್ಭದಲ್ಲೂ ಅವರ ಪ್ರದರ್ಶನ ನೀಡಲು ನಿರ್ಧರಿಸಿದ ಅವರ ನಿರ್ಧಾರವು ಫ್ರಾನ್ಸ್ ಮತ್ತು ಕ್ರೀಡಾ ಜಗತ್ತಿಗೆ ಐತಿಹಾಸಿಕ ಘಟನೆ ಎಂದಿದ್ದಾರೆ.

ಸ್ಟಿಫ್ ಪರ್ಸನ್ ಸಿಂಡ್ರೋಮ್ ಅಪರೂಪದ ಸ್ವಯಂ ನಿರೋಧಕ ನರವೈಜ್ಞಾನಿಕ ಕಾಯಿಲೆಯಾಗಿದ್ದು, ಇದು ಸಾಮಾನ್ಯವಾಗಿ ಸ್ನಾಯುಗಳ ಬಿಗಿತ ಮತ್ತು ನೋವಿನ ಸೆಳೆತವನ್ನು ಉಂಟುಮಾಡುತ್ತದೆ. ಆರಂಭದಲ್ಲಿ ಈ ರೋಗ ಬಂದು ಹೋಗುತ್ತದೆ. ಕಾಲಾನಂತರದಲ್ಲಿ ಆರೋಗ್ಯದಲ್ಲಿ ತೀವ್ರ ಹದಗೆಡವಂತೆ ಮಾಡುತ್ತದೆ. ಮೊದಲ ಬಾರಿಗೆ ಸ್ನಾಯು ಸೆಳೆತ ಅನುಭವಿಸಿದಾಗ ವೇದಿಕೆಯ ಪ್ರದರ್ಶನದಿಂದ ನಿರ್ಗಮಿಸಿದ ಒಂದು ವರ್ಷದ ನಂತರ 2022ರಲ್ಲಿ ಸಾರ್ವಜನಿಕರಿಗೆ ಸುದ್ದಿಯನ್ನು ಬಹಿರಂಗಪಡಿಸಿದರು.

ಇನ್ನಷ್ಟು ಕ್ರಿಕೆಟ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ಯಾರಿಸ್ ಒಲಿಂಪಿಕ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.