ಒಲಿಂಪಿಕ್ಸ್‌ನಲ್ಲಿ ಮುರಿಯಲಾಗದ 10 ದಾಖಲೆಗಳು; 56 ವರ್ಷಗಳಿಂದ ಈ ರೆಕಾರ್ಡ್ ಮುರಿಯೋಕೆ ಯಾರಿಂದಲೂ ಸಾಧ್ಯವಾಗಿಲ್ಲ!
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ಸ್‌ನಲ್ಲಿ ಮುರಿಯಲಾಗದ 10 ದಾಖಲೆಗಳು; 56 ವರ್ಷಗಳಿಂದ ಈ ರೆಕಾರ್ಡ್ ಮುರಿಯೋಕೆ ಯಾರಿಂದಲೂ ಸಾಧ್ಯವಾಗಿಲ್ಲ!

ಒಲಿಂಪಿಕ್ಸ್‌ನಲ್ಲಿ ಮುರಿಯಲಾಗದ 10 ದಾಖಲೆಗಳು; 56 ವರ್ಷಗಳಿಂದ ಈ ರೆಕಾರ್ಡ್ ಮುರಿಯೋಕೆ ಯಾರಿಂದಲೂ ಸಾಧ್ಯವಾಗಿಲ್ಲ!

10 Olympic Records: ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ಮುರಿಯಲು ಕಷ್ಟವಾಗುವ 10 ದಾಖಲೆಗಳು ಯಾವುವು ಎಂಬುದರ ಕುರಿತು ಈ ಮುಂದೆ ನೋಡೋಣ.

ಒಲಿಂಪಿಕ್ಸ್‌ನಲ್ಲಿ ಮುರಿಯಲಾಗದ 10 ದಾಖಲೆಗಳು; 56 ವರ್ಷಗಳಿಂದ ಈ ರೆಕಾರ್ಡ್ ಮುರಿಯೋಕೆ ಯಾರಿಂದಲೂ ಸಾಧ್ಯವಾಗಿಲ್ಲ
ಒಲಿಂಪಿಕ್ಸ್‌ನಲ್ಲಿ ಮುರಿಯಲಾಗದ 10 ದಾಖಲೆಗಳು; 56 ವರ್ಷಗಳಿಂದ ಈ ರೆಕಾರ್ಡ್ ಮುರಿಯೋಕೆ ಯಾರಿಂದಲೂ ಸಾಧ್ಯವಾಗಿಲ್ಲ

ಪದಕ ಬೇಟೆಗೆ ಹಾಗೂ ದಾಖಲೆಗಳ ಪೈಪೋಟಿಗೆ ಯುರೋಪ್​ ಖಂಡದ ಪಾರಂಪರಿಕ ದೇಶ ಫ್ರಾನ್ಸ್ ಸಜ್ಜಾಗಿದೆ. ಸಿಟಿ ಆಫ್ ಲವ್​ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್ ನಗರ​​, 33ನೇ ಆವೃತ್ತಿಯ ಒಲಿಂಪಿಕ್ಸ್​ಗೆ ವೇದಿಕೆ ಒದಗಿಸುತ್ತಿದೆ.​ ಜಾಗತಿಕ ಶ್ರೀಮಂತ ಕ್ರೀಡೆಯಲ್ಲಿ ಕ್ರೀಡಾಪಟುಗಳು ಐತಿಹಾಸಿಕ ದಾಖಲೆಗಳೊಂದಿಗೆ ದಾಖಲೆಗಳ ಪುಸ್ತಕದಲ್ಲಿ ತಮ್ಮದೇ ಆದ ಪುಟ ತೆರೆಯಲು ಸನ್ನದ್ಧರಾಗಿದ್ದಾರೆ.

ಪ್ರತಿ 4 ವರ್ಷಕ್ಕೊಮ್ಮೆ ಜರುಗುವ ಈ ಕ್ರೀಡಾಕೂಟದಲ್ಲಿ ಒಂದಾದರೂ ಅಸಾಧಾರಣ ಪ್ರದರ್ಶನವೊಂದು ದಾಖಲಾಗಲಿದೆ. ಅಂತಹ ಪ್ರದರ್ಶನ ದಾಖಲಾಗುವುದು ತುಂಬಾ ಅಪರೂಪ. ಈಗಾಗಲೇ ಅತ್ಯುತ್ತಮ ಪ್ರದರ್ಶನದೊಂದಿಗೆ ಅನೇಕ ವಿಶ್ವದಾಖಲೆಗಳು ಇತಿಹಾಸ ಪುಟಗಳಲ್ಲಿ ದಾಖಲಾಗಿವೆ. ಈ ಪೈಕಿ 10 ದಾಖಲೆಗಳನ್ನು ಮುರಿಯೋದು ಅಷ್ಟು ಸುಲಭವೇ ಅಲ್ಲ. ಅವುಗಳ ಪಟ್ಟಿ ಇಲ್ಲಿದೆ.

1. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ವೆನೆಜುವೆಲಾದ ಮಹಿಳೆ ಉಲಿಮರ್ ರೋಹಾಸ್. ರಿಯೊ ಮತ್ತು ಟೊಕಿಯೊ ಒಲಿಂಪಿಕ್ಸ್​​​ನಲ್ಲಿ ಬೆಳ್ಳಿ ಪದಕವನ್ನು ಚಿನ್ನದ ಪದಕವಾಗಿ ಪರಿವರ್ತಿಸುವ ಮೂಲಕ ರೋಹಾಸ್ ಇತಿಹಾಸ ನಿರ್ಮಿಸಿದರು. ಟೊಕಿಯೊದಲ್ಲಿ ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ 15.67 ಮೀಟರ್‌ಗಳಷ್ಟು ದಾಖಲೆ ಜಿಗಿತದೊಂದಿಗೆ ರೋಹಾಸ್ ಚಿನ್ನಕ್ಕೆ ಮುತ್ತಿಕ್ಕಿದ್ದರು.

2. ಟೊಕಿಯೊ ಒಲಿಂಪಿಕ್ಸ್​​ನಲ್ಲಿ ನಾರ್ವೆಯ 29 ವರ್ಷದ ಕಾರ್ಸ್ಟನ್ ವಾರ್ಹೋಮ್ ಅವರು ವಿಶ್ವದಾಖಲೆ ಸೃಷ್ಟಿಸಿದರು. 400 ಮೀಟರ್ ಹರ್ಡಲ್ಸ್​​ನಲ್ಲಿ 45.94 ಸೆಕೆಂಡ್​​ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನಕ್ಕೆ ಕೊರೊಳೊಡ್ಡಿದ್ದರು. ಈ ಸ್ಪರ್ಧೆಯಲ್ಲಿ ಅತಿ ಕಡಿಮೆ ಸೆಕೆಂಡ್​ಗಳಲ್ಲಿ ಗುರಿ ಮುಟ್ಟಿದ ಮೊದಲ ಆಟಗಾರ.

3. ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಅಮೆರಿಕದ 24 ವರ್ಷದ ಹರ್ಡಲ್ಸ್​ ಆಟಗಾರ್ತಿ ಸಿಡ್ನಿ ಲೆವ್ರೋನ್ ಅವರು ಐತಿಹಾಸಿಕ ದಾಖಲೆ ನಿರ್ಮಿಸಿದರು. ಮಹಿಳೆಯರ 400 ಮೀ ಹರ್ಡಲ್ಸ್​ನಲ್ಲಿ 51.46 ಸೆಕೆಂಡ್​ಗಳಲ್ಲಿ ತಲುಪಿ ಹೊಸ ಇತಿಹಾಸ ನಿರ್ಮಿಸಿದರು.

4. ಲಂಡನ್ ಒಲಿಂಪಿಕ್ಸ್‌ನ 800 ಮೀಟರ್ ಓಟದಲ್ಲಿ ಕೀನ್ಯಾದ ಅಥ್ಲೀಟ್ ಡೇವಿಡ್ ರುಡಿಶಾ ಚಿನ್ನದ ಪದಕ ಗೆದ್ದರು. ಓಟವನ್ನು 1 ನಿಮಿಷ 41 ಸೆಕೆಂಡ್​​ಗಳಲ್ಲಿ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದರು. ಕೀನ್ಯಾದ ರುಡಿಶಾ 800 ಮೀಟರ್ ಓಟ 1:41 ನಿಮಿಷಗಳಲ್ಲಿ ಪೂರ್ಣಗೊಳಿಸಿದ ಮೊದಲ ಮತ್ತು ಏಕೈಕ ಕ್ರೀಡಾಪಟು.

5. ಲಂಡನ್ ಒಲಿಂಪಿಕ್ಸ್‌ನಲ್ಲಿ 4*400 ಮೀಟರ್ ರಿಲೆ ಓಟದಲ್ಲಿ ಜಮೈಕಾ ತಂಡವು 36.84 ಸೆಕೆಂಡ್​ಗಳಲ್ಲಿ ಪೋರ್ಣಗೊಳಿಸಿ ಚಿನ್ನ ಗೆದ್ದಿತ್ತು. ಚಿನ್ನ ಗೆದ್ದ ಜಮೈಕಾ ತಂಡದ ಸದಸ್ಯರ ಪೈಕಿ ಉಸೇನ್ ಬೋಲ್ಟ್ ಕೂಡ ಇದ್ದರು.

6. ಅಮೆರಿಕನ್ ಸ್ಪ್ರಿಂಟರ್ ಫ್ಲಾರೆನ್ಸ್ ಗ್ರಿಫಿತ್ ಜೋಯ್ನರ್ 1988ರ ಸಿಯೋಲ್ ಒಲಿಂಪಿಕ್ಸ್​​​ನಲ್ಲಿ ಇತಿಹಾಸ ನಿರ್ಮಿಸಿದರು. 200 ಮೀಟರ್ ಓಟವನ್ನು 21.34 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಚಿನ್ನ ಗೆದ್ದು ದಾಖಲೆ ಬರೆದರು. ಅದೇ ಒಲಿಂಪಿಕ್ಸ್‌ನಲ್ಲಿ 100 ಮೀಟರ್​ ಓಟದ ದಾಖಲೆಯೂ ಅವರ ಹೆಸರಿನಲ್ಲಿತ್ತು. 10:49 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು.

7. ಈಜು ಪಟು ಮೈಕೆಲ್ ಫೆಲ್ಪ್ಸ್ ಅವರನ್ನು ಸಾರ್ವಕಾಲಿಕ ಒಲಿಂಪಿಕ್ ದಂತಕಥೆ ಎಂದು ಕರೆಯುತ್ತಾರೆ. ಬೀಜಿಂಗ್ ಒಲಿಂಪಿಕ್ಸ್‌ನ ಪುರುಷರ 400 ಮೀಟರ್ ಈಜು ಸ್ಪರ್ಧೆಯಲ್ಲಿ ಫೆಲ್ಪ್ಸ್ ಕೇವಲ 4:03 ನಿಮಿಷದಲ್ಲಿ ತಲುಪುವ ಮೂಲಕ ಚಿನ್ನದ ಪದಕ ಗೆದ್ದರು.

8. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬೋಲ್ಟ್ 9.69 ಸೆಕೆಂಡುಗಳಲ್ಲಿ 100 ಮೀಟರ್ ಓಟವನ್ನು ಪೂರೈಸುವ ಮೂಲಕ ಓಲಂಪಿಕ್ಸ್ ಇತಿಹಾಸದಲ್ಲಿ ಅತ್ಯಂತ ವೇಗದ ವ್ಯಕ್ತಿಯಾದರು. 2009ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಬೋಲ್ಟ್ 9.58 ಸೆಕೆಂಡುಗಳಲ್ಲಿ 100 ಮೀಟರ್ ಓಡಿ ತಮ್ಮದೇ ವಿಶ್ವ ದಾಖಲೆಯನ್ನು ಮುರಿದರು.

9. ಅಮೆರಿಕದ ಅಥ್ಲೀಟ್ ಬಾಬ್ ಬೀಮನ್ 1968ರ ಮೆಕ್ಸಿಕೊ ಒಲಿಂಪಿಕ್ಸ್‌ನಲ್ಲಿ 8.9 ಮೀಟರ್‌ ಜಿಗಿತದೊಂದಿಗೆ ಚಿನ್ನ ಗೆದ್ದಿದ್ದರು. ಅಂದಿನಿಂದ ಇಲ್ಲಿಯವರೆಗೂ ಬೀಮನ್ ಅವರ ಒಲಿಂಪಿಕ್ ದಾಖಲೆಯ ಹತ್ತಿರ ಯಾರೂ ಸಮೀಪಿಸಿಲ್ಲ.

10. ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಅಮೆರಿಕನ್ ಈಜುಗಾರ ಕ್ಯಾಲೆಬ್ ಡ್ರೆಸೆಲ್ ಅವರು ಬಟರ್​ಫ್ಲೈ ಸ್ಪರ್ಧೆಯಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿ, ಚಿನ್ನ ಗೆದ್ದರು. 7 ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಡ್ರೆಸೆಲ್, 100 ಮೀಟರ್​ ಬಟರ್​ಫ್ಲೈ ಸ್ಪರ್ಧೆಯಲ್ಲಿ 49.45 ಸೆಕೆಂಡ್​​ಗಳಲ್ಲಿ ಪೂರ್ಣಗೊಳಿಸಿ ಇತಿಹಾಸ ನಿರ್ಮಿಸಿದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.